Warning: Constant WP_AUTO_UPDATE_CORE already defined in /home/u584898912/domains/jaikannadamma.in/public_html/wp-config.php on line 100
ರಬ್ಬರ್ ಸೊಸೈಟಿ ಪದ್ಮನಾಭ ಎನ್. ಮಾಣಿಂಜರಿಗೆ ನುಡಿನಮನ - Jai Kannadamma

ರಬ್ಬರ್ ಸೊಸೈಟಿ ಪದ್ಮನಾಭ ಎನ್. ಮಾಣಿಂಜರಿಗೆ ನುಡಿನಮನ

ರಬ್ಬರ್ ಸೊಸೈಟಿ ಪದ್ಮನಾಭ ಎನ್. ಮಾಣಿಂಜರಿಗೆ  ನುಡಿನಮನ
Facebook
Twitter
LinkedIn
WhatsApp

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘ ಉಜಿರೆ ಇದರ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಪದ್ಮನಾಭ ಎನ್. ಮಾಣಿಂಜ ಇತ್ತೀಚೆಗೆ ನಿಧನರಾಗಿದ್ದು; ಇವರು ಸಂಘಕ್ಕೆ ನೀಡಿದ ಮಾರ್ಗದರ್ಶಕ ಸೇವೆಯನ್ನು ಸ್ಮರಿಸಿ ನುಡಿನಮನ ಕಾರ್ಯಕ್ರಮ ಸಂಘದ ದಿ. ಜಿ.ಎನ್. ಭಿಡೆ ಸಭಾಭವನದಲ್ಲಿ ನಡೆಸಲಾಯಿತು.ಸಂಘದ ಅಧ್ಯಕ್ಷರಾದ ಶ್ರೀಧರ ಜಿ. ಭಿಡೆ ಯವರು ಮಾತನಾಡಿ; ಮಿತಭಾಷಿಯಾಗಿ, ಸರಕಾರಿ ಉನ್ನತ ಸೇವೆಯ ಅನುಭವವನ್ನು ಸಂಘಕ್ಕೆ ಅನೇಕ ಅವಧಿಗೆ ಉಪಾಧ್ಯಕ್ಷರಾಗಿ ಮತ್ತು ನಿರ್ದೇಶಕರಾಗಿ ನೀಡಿದ್ದರು. ಸಮಾಜದಲ್ಲಿ ಉನ್ನತ ಗೌರವಕ್ಕೆ ಪಾತ್ರರಾಗಿದ್ದರು ಎಂದು ನೆನಪಿಸಿಕೊಂಡರು.ಉಪಾಧ್ಯಕ್ಷ ಎಂ. ಅನಂತ ಭಟ್ ಮಾತನಾಡಿ; ಪದ್ಮನಾಭ ಮಾಣಿಂಜ ಅವರ ಕಾರ್ಯಸಾಧನೆಯಲ್ಲಿನ ಧೀಮಂತಿಕೆಯನ್ನು ಮತ್ತು ಒಡನಾಟ ನೆನಪಿಸಿಕೊಂಡು ಗೌರವ ಸಮರ್ಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ ಮಾತನಾಡಿ; ಸಂಘದಲ್ಲಿ ಆರಂಭ ದಿನಗಳಲ್ಲೇ ಸದಸ್ಯರಾಗಿದ್ದ ಪದ್ಮನಾಭ ಮಾಣಿಂಜರವರು ಸಂಘದಲ್ಲಿ 2005 ರಿಂದ 2020 ರ ಅವಧಿಗೆ ಉಪಾಧ್ಯಕ್ಷರಾಗಿ ಹಾಗು 1996ರಿಂದ ಈವರೆಗೂ ಆಡಳಿತ ಮಂಡಳಿಯಲ್ಲಿ ನಿರ್ದೇಶಕರಾಗಿ ಸಂಘದ ಬೆಳವಣಿಗೆಯಲ್ಲಿ ದೊಡ್ಡ ಪಾತ್ರವಹಿಸಿದವರು ಎಂದರು. ಸಂಘದ ನಿರ್ದೇಶಕರಾದ ಜಯಶ್ರೀ ಡಿ.ಎಂ., ಗ್ರೇಸಿಯನ್ ವೇಗಸ್, ಸೋಮನಾಥ ಬಂಗೇರ, ಕೆ.ಜೆ. ಅಗಸ್ಟಿನ್, ವಿ.ವಿ. ಅಬ್ರಾಹಂ, ಬಾಲಕೃಷ್ಣ ಗೌಡ ಕೆ., ಅಬ್ರಾಹಂ ಬಿ.ಎಸ್., ಶಶಿಧರ ಡೋಂಗ್ರೆ, ರಾಮ ನಾಯ್ಕ, ಬೈರಪ್ಪ, ಆರ್. ಸುಭಾಷಿಣಿ ಹಾಗೂ ಸಂಘದ ಸಿಬ್ಬಂದಿ ವರ್ಗದವರು ಭಾಗವಹಿಸಿ ನುಡಿ ನಮನ ಸಲ್ಲಿಸಿದರು.

Latest 5

Related Posts