ಶ್ರೀ ಗುರು ಸಾಲಗಾರರ ಮರಣ ನಿಧಿ ವಿತರಣೆ

ಶ್ರೀ ಗುರು ಸಾಲಗಾರರ ಮರಣ ನಿಧಿ ವಿತರಣೆ
Facebook
Twitter
LinkedIn
WhatsApp

ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಬೆಳ್ತಂಗಡಿ ಇದರ ಹೊಸ್ಮಾರ್ ಶಾಖೆಯ ಸಾಲಗಾರರಾದ ಗುರುಮೂರ್ತಿ ಇವರು ಅಕಾಲಿಕ ಮರಣ ಹೊಂದಿದ್ದು; ಸಂಘದ ವಿಶೇಷ ಯೋಜನೆಯಾದ ಶ್ರೀ ಗುರು ಸಾಲಗಾರರ ಮರಣ ನಿಧಿಯಿಂದ ಮರಣ ಹೊಂದಿದ ಸಾಲಗಾರರ ಸಾಲಗಳನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸುವ ಉದ್ದೇಶದಿಂದ ಇವರಿಗೆ ನೀಡಲಾದ ಸಾಲವನ್ನು ಸಂಘದ ಆಡಳಿತ ಮಂಡಳಿಯ ಮಂಜೂರಾತಿ ಮೇರೆಗೆ ಸಂಪೂರ್ಣವಾಗಿ ಮುಕ್ತಾಯಗೊಳಿಸಿ. ಇವರ ಕುಟುಂಬದವರಿಗೆ ಸಾಲದಿಂದ ಋಣ ಮುಕ್ತಾಯಗೊಳಿಸಿದ ಖಾತ್ರಿ ಪತ್ರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಡಾ| ರಾಜಾರಾಮ ಕೆ.ಬಿ. ಮತ್ತು ಜಯವಿಕ್ರಮ್ ಪಿ. ಹಾಗೂ ಪುರುಷರಕಟ್ಟೆ ಪ್ರಭಾರ ಶಾಖಾ ವ್ಯವಸ್ಥಾಪಕರಾದ ಪವನ್ ಕೆ. ಉಪಸ್ಥಿತರಿದ್ದರು.ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಬೆಳ್ತಂಗಡಿ ಈಗಾಗಲೇ ಈ ಯೋಜನೆಯ ಅನ್ವಯ 83 ಕುಟುಂಬಗಳಿಗೆ ಒಟ್ಟು ರೂಪಾಯಿ 61,58,593/- ಮೊತ್ತದ ಸಾಲಗಾರರ ಮರಣ ನಿಧಿಯನ್ನು ನೀಡಿ ಅವಲಂಬಿತ ಕುಟುಂಬಗಳ ಕಷ್ಟಕ್ಕೆ ಸ್ಪಂದಿಸಿ ಸದ್ರಿ ಕುಟುಂಬಗಳನ್ನು ಋಣ ಮುಕ್ತಗೊಳಿಸಿ ಸಹಕಾರ ಕ್ಷೇತ್ರದಲ್ಲಿ ಅದ್ವೀತಿಯ ಸಾಧನೆಯನ್ನು ಮಾಡುತ್ತಿದೆ.

Latest 5

Related Posts