ಆರೋಗ್ಯ ಇಲಾಖೆಗೆ ಭೇಟಿ ಹಾಗೂ ಪರಿಸರ ದಿನಾಚರಣೆ

ಆರೋಗ್ಯ ಇಲಾಖೆಗೆ ಭೇಟಿ ಹಾಗೂ ಪರಿಸರ ದಿನಾಚರಣೆ
Facebook
Twitter
LinkedIn
WhatsApp

ಬೆಳ್ತಂಗಡಿ: ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟ ಬೆಳ್ತಂಗಡಿ ಇದರ ಆಡಳಿತ ಮಂಡಳಿಯ ಸಭೆ,‌ ಆರೋಗ್ಯ ಇಲಾಖೆ ಭೇಟಿ ಹಾಗೂ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಜೂನ್ 20ರಂದು ಬೆಳ್ತಂಗಡಿಯಲ್ಲಿ ಆಯೋಜಿಸಲಾಗಿತ್ತು. ತಾಲೂಕು ಒಕ್ಕೂಟದ ಅಧ್ಯಕ್ಷರಾದ ಮಂಜುಳಾ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ಡಿಕೆಆರ್‌ಡಿಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಬಿನೋಯಿ ಎ.ಜೆ. ಇಲಾಖಾ ಭೇಟಿ ಮೂಲಕ ಜಾಲಬಂಧ ಬೆಳೆಸುವ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಒಕ್ಕೂಟದ ಅಧ್ಯಕ್ಷರಾದ ಮಂಜುಳಾರವರು ಒಕ್ಕೂಟದ ವತಿಯಿಂದ ಮಾಡಬಹುದಾದ ಕೆಲಸಗಳ ಬಗ್ಗೆ ತಿಳಿಸಿದರು. ಬಳಿಕ ಸಮೂದಾಯ ಆರೋಗ್ಯ ಕೇಂದ್ರ ಬೆಳ್ತಂಗಡಿ ಇಲ್ಲಿಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ. ಸಂಜಾತ್‌ರವರು ಮಾಹಿತಿ ನೀಡಿದರು. ಆರೋಗ್ಯ ಕೇಂದ್ರ ವಠಾರದಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ, ಸಂಯೋಜಕರಾದ ಸಿಸಿಲ್ಯಾ ತಾವ್ರೊ, ಕಾರ್ಯಕರ್ತರಾದ ಮಾರ್ಕ್ ಡಿ’ಸೋಜಾ ತಾಲೂಕು ಒಕ್ಕೂಟದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಸಂಧ್ಯಾ ಎಲ್ಲರನ್ನು ಸ್ವಾಗತಿಸಿದರು. ಮಂಜುಳಾ ವಂದಿಸಿದರು. ಪ್ರಾರ್ಥನೆಯನ್ನು ತಾಲೂಕು ಒಕ್ಕೂಟದ ಉಪಾಧ್ಯಕ್ಷೆ ಜಿನ್ಸಿ ರಾಜೇಶ್ ಹಾಗೂ ಕಾರ್ಯದರ್ಶಿ ಉಷಾ ಇವರು ನೆರವೇರಿಸಿದರು.

Latest 5

Related Posts