ಬೆಳ್ತಂಗಡಿ: ಡೋಂಗ್ರೆ ಕುಟುಂಬಸ್ಥರು ಕೊಡಮಾಡುವ ಶೈಕ್ಷಣಿಕ ಪರಿಕರಗಳ 17ನೇ ವರ್ಷದ ಉಚಿತ ವಿತರಣಾ ಸಮಾರಂಭ ಜೂನ್ 23ರಂದು ನಾಲ್ಕೂರು ಗ್ರಾಮದ ಸೂಳಬೆಟ್ಟು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಬೆಳ್ತಂಗಡಿ ರೋಟರಿ ಕ್ಲಬ್ ಹಾಗೂ ಭಾರತೀಯ ದಂತ ವೈದ್ಯಕೀಯ ಸಂಘ (ಐಡಿಎ)ದ ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನು ರೋಟರಿ ನಿಯೋಜಿತ ಅಧ್ಯಕ್ಷ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಫ್ರೊ. ಪಿ. ಪ್ರಕಾಶ್ ಪ್ರಭು ಉದ್ಘಾಟಿಸಿದರು. ಭಾರತೀಯ ದಂತ ವೈದ್ಯಕೀಯ ಸಂಘದ ಪುತ್ತೂರು ಘಟಕದ ಅಧ್ಯಕ್ಷೆ ಡಾl ಆಶಾ ಪಿದಮಲೆ, ಬೆಳ್ತಂಗಡಿ ಸ್ವಾತಿ ದಂತ ಚಿಕಿತ್ಸಾಲಯದ ಡಾl ಶಶಿಧರ ಡೋಂಗ್ರೆ, ಬಳಂಜ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಿಶ್ವನಾಥ ಡೋಂಗ್ರೆ, ಡಾl ರಾಘವೇಂದ್ರ ಪಿದಮಲೆ, ಗೀತಾಪ್ರಭು, ಡಾl ಸುಷ್ಮಾ ಡೋಂಗ್ರೆ, ಮೋಹನದಾಸ್ ಅಳದಂಗಡಿ ಉಪಸ್ಥಿತರಿದ್ದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರವೀಣ ಅಧ್ಯಕ್ಷತೆ ವಹಿಸಿದ್ದರು.ಅತಿಥಿಗಳು ಮಕ್ಕಳಿಗೆ ಸಮವಸ್ರ್ತ, ಪುಸ್ತಕ, ಚೀಲ, ಕೊಡೆ ಮತ್ತಿತರ ಪರಿಕರಗಳನ್ನು ವಿತರಿಸಿದರು.ಈ ಬಾರಿಯ ಜೆಇಇ (ಅಡ್ವಾನ್ಸ್) ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯುನ್ನತ ಸ್ಥಾನ ಪಡೆದು ಐಐಟಿಗೆ ಆಯ್ಕೆಯಾದ ಅಳದಂಗಡಿಯ ಅಚಿಂತ್ಯ ದಾಸ್ ಅವರಿಗೆ ಮುಂದಿನ ವಿದ್ಯಾಭ್ಯಾಸದ ಸಲುವಾಗಿ ವಿದ್ಯಾನಿಧಿಯಾಗಿ ರೂಪಾಯಿ 25,000/- ನಗದನ್ನು ಡಾl ಶಶಿಧರ ಡೋಂಗ್ರೆ ಅವರು ಹಸ್ತಾಂತರಿಸಿದರು.ಅಂಗನವಾಡಿ ಕಾರ್ಯಕರ್ತೆ ಶಶಿಕಲಾ, ಅಕ್ಷರ ದಾಸೋಹದ ಲವೀನಾ ಸಹಕರಿಸಿದರು.ಶಾಲಾ ಮುಖ್ಯ ಶಿಕ್ಷಕಿ ಲೀನಾ ಮೋರಾಸ್ ಸ್ವಾಗತಿಸಿದರು. ಸಹ ಶಿಕ್ಷಕಿ ರೀಟಾ ರೋಡ್ರಿಗಸ್ ವಂದಿಸಿದರು. ಶಾಲಾ ಹಿರಿಯ ವಿದ್ಯಾರ್ಥಿ ದೀಪಕ ಆಠವಳೆ ಕಾರ್ಯಕ್ರಮ ನಿರೂಪಿಸಿದರು.