ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘದ ಅಧ್ಯಕ್ಷೆಯಾಗಿ ದ್ವಿತೀಯ ವಾಣಿಜ್ಯಶಾಸ್ತ್ರದ ವಿದ್ಯಾರ್ಥಿನಿ ಹಂಸಿನಿ ಭಿಡೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷನಾಗಿ ದ್ವಿತೀಯ ವಿಜ್ಞಾನದ ಯಶಸ್ವಿ, ಪ್ರಧಾನ ಕಾರ್ಯದರ್ಶಿಯಾಗಿ ದ್ವಿತೀಯ ವಿಜ್ಞಾನದ ಪ್ರಸನ್ನಾ ಆಯ್ಕೆಯಾಗಿದ್ದಾರೆ.ತರಗತಿ ಕಾರ್ಯದರ್ಶಿಗಳಾಗಿ ದ್ವಿತೀಯ ವಿಜ್ಞಾನದ ರಾಮಕಿಶೋರ್, ಕಾರ್ತಿಕ್ ಡಿ.ಎಂ., ಅನ್ವಿತಾ ಹೆಬ್ಬಾರ್, ಫಾತಿಮಾ ಇಶಾನಾ ಅಬೂಬಕರ್;ದ್ವಿತೀಯ ವಾಣಿಜ್ಯಶಾಸ್ತ್ರದ ಸುದರ್ಶನ್,ದ್ವಿತೀಯ ಕಲಾವಿಭಾಗದ ಪ್ರಣವಕೃಷ್ಣ, ಧರೇಶ್, ನಿಜ ಕುಲಾಲ್;ಪ್ರಥಮ ವಿಜ್ಞಾನದ ವಿಷ್ಣುಪ್ರಸಾದ್, ಸೃಜನ್, ಅಹಲ್ಯಾ ಬೆಂಡೆ, ಸಹನಾ ಎಂ. ನಾವಡೆ;ಪ್ರಥಮ ವಾಣಿಜ್ಯಶಾಸ್ತ್ರದ ಟಿ. ಕಾರ್ತಿಕ್ ನಾಯಕ್, ಶಶಾಂಕ್; ಪ್ರಥಮ ಕಲಾವಿಭಾಗದ ಸ್ಫೂರ್ತಿ, ಕವನ ಇವರು ಆಯ್ಕೆಯಾಗಿದ್ದಾರೆ.