ಬೆಳ್ತಂಗಡಿ: ‘ಕಳೆದ ಆರ್ಥಿಕ ವರ್ಷದಲ್ಲಿ ಸಂಘವು 1,104 ಕೋಟಿ ರೂಪಾಯಿಗಳಿಗಿಂತ ಅಧಿಕ ವ್ಯವಹಾರ ನಡೆಸಿದ್ದು, 3 ಕೋಟಿ ರೂಪಾಯಿಗಳಿಗಿಂತ ಅಧಿಕ ಲಾಭವನ್ನು ಗಳಿಸಿದೆ. ಸದಸ್ಯರಿಗೆ 18% ಡಿವಿಡೆಂಡ್ ನೀಡಲು ನಿರ್ಣಯಿಸಲಾಗಿದೆ ಎಂದು ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಅಜಿತ್ ಜಿ. ಶೆಟ್ಟಿ ಹೇಳಿದರು. ಅವರು ಸಂಘದ ಗುರುವಾಯನಕೆರೆಯ ಕೇಂದ್ರ ಕಚೇರಿಯ ಸಮೀಪದ ಬಂಟರ ಭವನದಲ್ಲಿ ಸೆಪ್ಟೆಂಬರ್ 5ರಂದು ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು 33,245 ಸದಸ್ಯರನ್ನು ಹೊಂದಿರುವ ಸಂಘವು 4 ಕೋಟಿ ರೂಪಾಯಿಗಳಿಗಿಂತ ಅಧಿಕ ಪಾಲು ಭಂಡವಾಳ ಸಂಗ್ರಹಿಸಿದ್ದು, 247 ಕೋಟಿ ರೂಪಾಯಿ ಠೇವಣಿ ಹೊಂದಿದೆ. 216 ಕೋಟಿ ರೂಪಾಯಿಗಳಿಗಿಂತ ಅಧಿಕ ಸಾಲವನ್ನು ನೀಡಲಾಗಿದೆ. ಸಾಲ ವಿತರಣೆಯಲ್ಲಿ ಕಳೆದ ವರ್ಷಕ್ಕಿಂತ 39.71%, ಠೇವಣಿ ಸಂಗ್ರಹದಲ್ಲಿ 36.04% ಪ್ರಗತಿ ಸಾಧಿಸಲಾಗಿದೆ ಎಂದು ವಿವರಿಸಿರು.ನಮ್ಮ ಠೇವಣಿಯು 36.04% ಹಾಗೂ ಹೊರಬಾಕಿ ಸಾಲವು 39.71% ವೃದ್ಧಿಯಾಗಿರುವುದು ಮಾತ್ರವಲ್ಲದೇ; 96.70% ಸಾಲ ವಸೂಲಾತಿ ಮಾಡಿದ್ದು ಈ ಸಾಧನೆಗೆ 2024 ನೇ ಸಾಲಿನ 71 ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಪತ್ತಿನ ಸಹಕಾರಿ ಸಂಘ ಪ್ರಶಸ್ತಿಯನ್ನು ಪಡೆದಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕೂಡಾ ತನ್ನ ಮಹಾಸಭೆಯಲ್ಲಿ ನಮ್ನ ಸಂಘಕ್ಕೆ ಸಾಧನ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದೆ.ಈಗಾಗಲೇ 19 ಶಾಖೆಗಳನ್ನು ಹೊಂದಿರುವ ಸಂಘವು ಧರ್ಮಸ್ಥಳ, ಕಾಪು ಹಾಗೂ ಮಂಗಳೂರಿನಲ್ಲಿ ಮೂರು ಶಾಖೆಗಳ ಸಹಿತ ನಾಲ್ಕು ಶಾಖೆಗಳನ್ನು ತೆರೆಯಲು ಅನುಮತಿ ಪಡೆದುಕೊಂಡಿದೆ. ಬೆಳ್ತಂಗಡಿಯಲ್ಲಿ ಹೊಸ ಸ್ಥಿರಾಸ್ತಿ ಖರೀದಿ ಇತ್ಯಾದಿ ಯೋಜನೆಗಳನ್ನು ಹಮ್ಮಿಕೊಂಡಿದೆ.ಉಪಾಧ್ಯಕ್ಷ ಜಯಂತ ಶೆಟ್ಟಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಜಯ್ ಶೆಟ್ಟಿ, ನಿರ್ದೇಶಕರಾದ ಎಸ್. ಜಯರಾಮ ಶೆಟ್ಟಿ, ಎಂ.ಜಿ. ಶೆಟ್ಟಿ, ಬಿ. ಸೀತಾರಾಮ ಶೆಟ್ಟಿ, ಬಾಲಕೃಷ್ಣ ಪೂಂಜ, ಪುಷ್ಪರಾಜ ಶೆಟ್ಟಿ, ರಘುರಾಮ ಶೆಟ್ಟಿ ಎ., ಕೃಷ್ಣ ರೈ ಟಿ., ಜಯರಾಮ ಭಂಡಾರಿ, ಪುರಂದರ ಶೆಟ್ಟಿ, ಮಂಜುನಾಥ ರೈ, ರಾಜು ಶೆಟ್ಟಿ, ಜಯರಾಮ ಶೆಟ್ಟಿ, ಸಾರಿಕಾ ಶೆಟ್ಟಿ, ವಿಜಯಾ ಬಿ. ಶೆಟ್ಟಿ ವಿಶೇಷ ಆಹ್ವಾನಿತರಾದ ರಾಜೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಮಾರ್ಗದರ್ಶಕ ಶಶಿಧರ ಶೆಟ್ಟಿ ನವಶಕ್ತಿ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಪ್ರಕಾಶ್ ಶೆಟ್ಟಿ ನೊಚ್ಚ ನಿರೂಪಿಸಿ; ನಿರ್ದೇಶಕ ಸೀತಾರಾಮ ಶೆಟ್ಟಿ ಧನ್ಯವಾದವಿತ್ತರು.






