ಬೆಳ್ತಂಗಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ಎನ್. ಸುಧಾಕರ್ ಭಂಡಾರಿಯವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 14ರಂದು ಸಂಘದ ಸಭಾಭವನದಲ್ಲಿ ನಡೆಯಿತು.ಸಂಘದ ಅಧ್ಯಕ್ಷ ಸುಧಾಕರ್ ಭಂಡಾರಿ ಮಾತನಾಡಿ; ಸಂಘವು ವರದಿ ವರ್ಷದ ಅಂತ್ಯಕ್ಕೆ ರೂಪಾಯಿ 28.76 ಕೋಟಿ ಠೇವಣಿ ಹೊಂದಿರುತ್ತದೆ. ವರದಿ ಸಾಲಿನಲ್ಲಿ ರೂಪಾಯಿ 50.81 ಕೋಟಿ ಸಾಲವನ್ನು ವಿವಿಧ ಉದ್ದೇಶಗಳಿಗೆ ವಿತರಿಸಿದ್ದು; ಸದಸ್ಯರ ಸಾಲದ ಹೊರಬಾಕಿ ರೂಪಾಯಿ 43.89 ಕೋಟಿ ಇದ್ದು; ವಿತರಿಸಿದ ಸಾಲದ ಪೈಕಿ 100% ಸಾಲ ಮರುಪಾವತಿ ಯಾಗಿರುತ್ತದೆ. ಸಂಘವು ವರದಿ ವರ್ಷದಲ್ಲಿ 272 ಕೋಟಿ ರೂಪಾಯಿ ವ್ಯವಹಾರ ನಡೆಸಿ, 88 ಲಕ್ಷ ರೂಪಾಯಿ ಲಾಭ ಗಳಿಸಿರುತ್ತದೆ ಎಂದು ವಿವರಿಸಿದರು.ಸಂಘದ ಉಪಾಧ್ಯಕ್ಷ ಜಗದೀಶ್ ಹೆಗ್ಡೆ, ನಿರ್ದೇಶಕರಾದ ವಿಠಲ ಪೂಜಾರಿ, ರಾಜೇಂದ್ರ ಕುಮಾರ್, ಕೃಷ್ಣಪ್ಪ ಪೂಜಾರಿ, ಉಮೇಶ್ ಎಂ.ಕೆ., ಶೇಖರ್, ಯಶೋಧ, ಸುಜಲತಾ, ಪದ್ಮಶ್ರೀ, ಸುಪ್ರಿಯಾ, ವಲಯ ಮೇಲ್ವಿಚಾರಕ ಸಿರಾಜುದ್ದೀನ್ ಉಪಸ್ಥಿತರಿದ್ದರು.ನಿರ್ದೇಶಕ ಕೃಷ್ಣಪ್ಪ ಪೂಜಾರಿ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಶಿಕಾಂತ್ ಜೈನ್ ವರದಿ ಮಂಡಿಸಿದರು. ನಿರ್ದೇಶಕಿ ಪದ್ಮಶ್ರೀವಂದಿಸಿದರು.







