ಬೆಳ್ತಂಗಡಿ:: ದೊಡ್ಡ ಮಟ್ಟದಲ್ಲಿ ಇತರರಿಗೆ ಪ್ರೇರಣೆಯಾಗಬೇಕು ಎಂಬ ಉದ್ಧೇಶದಿಂದ ದಾನಿಗಳ ಮೂಲಕ ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದು ಅಭಿನಂದನೀಯ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು. ಅವರು ಸೆಪ್ಟೆಂಬರ್ 14ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಇದರ ಆಶ್ರಯದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು,ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು,ಶ್ರೀಮತಿ ಕಾಶಿ ಶೆಟ್ಟಿ ಮತ್ತು ಮಕ್ಕಳು ನವಶಕ್ತಿ ಗುರುವಾಯನಕೆರೆ, ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಗುರುವಾಯನಕೆರೆ, ಬಂಟರ ಸಂಘ ಬೆಂಗಳೂರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ ಇವರ ಸಹಭಾಗಿತ್ವದಲ್ಲಿ ನಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ, ಪ್ರತಿಭಾ ಪುರಸ್ಕಾರ,ಮತ್ತು ಸಾಧಕರಿಗೆ ಸಮ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು.ಜಾತಿ ಸಂಘಟನೆಗಳು ಸ್ವಜ್ವಾತಿಯ ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ಯೋಚನೆ ಮಾಡಿಕೊಂಡು ಸಮಾಜದಲ್ಲಿ ಇರುವ ಒಂದಷ್ಟು ಗಣ್ಯರ ಅರ್ಥಿಕ ಸಹಕಾರದಿಂದ ಮಾಡುತ್ತಿರುವ ಈ ಕಾರ್ಯಕ್ರಮವು ಬಹಳ ಅರ್ಥಪೂರ್ಣ; ಅದಲ್ಲದೇ ಡಾಕ್ಷರ್, ಎಂಜಿನಿಯರ್, ಸೇರಿದಂತೆ ಪ್ರೈವೇಟ್ ಇನ್ಸಿಟ್ಯೂಟ್‌ನಲ್ಲಿ ಉದ್ಯೋಗದ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿರುವ ಯುವ ಜನತೆಗೆ ಸರಕಾರಿ ಉದ್ಯೋಗದತ್ತ ಸಾಗಲು ಬೇಕಾದ ಮಾಹಿತಿ ನೀಡುವ ಕೆಲಸ ಮುಂದಿನ ದಿನಗಳಲ್ಲಿ ಆಯೋಜಿಸುವ ಸಂಘಟನೆಯ ಕಲ್ಪನೆಯೂ ಶ್ಲಾಘನೀಯ ಕೆಲಸ. ತಂದೆ ತಾಯಿ ಪೋಷಕರು ತನ್ನ ಮಕ್ಕಳು ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಬೇಕು; ಉನ್ನತ ಮಟ್ಟಕ್ಕೇರಬೇಕು ಎಂಬ ದೊಡ್ಡ ನಿರೀಕ್ಷೆಗಳನ್ನು ಇಟ್ಟು ಕಷ್ಟಪಟ್ಟು ವಿದ್ಯೆಯನ್ನು ಕಲಿಸುತ್ತಾರೆ. ಅವರ ನಿರೀಕ್ಷೆಗಳನ್ನು ಹುಸಿ ಮಾಡದೇ ಸಮಾಜದಲ್ಲಿ ಉನ್ನತ ಸ್ಥಾನ ಮಾನ ಪಡೆಯಬೇಕು. ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಎಸಿಎಫ್ ಹಸ್ತಾ ಶೆಟ್ಟಿ ಮಾತನಾಡಿ; ಶ್ರಮಪಟ್ಟು, ಶ್ರದ್ಧೆಯಿಂದ ವಿದ್ಯೆ ಕಲಿತರೆ ವಿಶೇಷ ಸಾಧನೆಗೈಯಲು ಸಾಧ್ಯ. ಈ ಮೂಲಕ ನಾವು ಯೋಚಿಸುವ ಗುರಿ ಮುಟ್ಟಬಹುದು ಎಂದರು. ಬೆಂಗಳೂರು ಬಂಟರ ಸಂಘದ ಗೌರವ ಕಾರ್ಯದರ್ಶಿ ವಿಜಯ ಜೆ. ಶೆಟ್ಟಿ ಹಾಲಾಡಿ, ಮಂಗಳೂರು ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯರಾಜ್ ಬಿ. ರೈ ಶುಭ ಹಾರೈಸಿದರು. ಬಂಟರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ,ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಜಯಂತ ಶೆಟ್ಟಿ ಕುಂಟಿನಿ, ಮಾತೃ ಸಂಘ ತಾಲೂಕು ಸಂಚಾಲಕ ಜಯರಾಮ ಭಂಡಾರಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ನಿರ್ದೇಶಕ ಜಯರಾಮ ಶೆಟ್ಟಿ ಮುಂಡಾಡಿಗುತ್ತು, ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯ್ಲ, ಉಪಾಧ್ಯಕ್ಷ ನವೀನ್ ಸಾಮಾನಿ ಕರಂಬಾರುಬೀಡು,ಯುವ ವಿಭಾಗದ ಅಧ್ಯಕ್ಷ ಪ್ರತೀಕ್ ಶೆಟ್ಟಿ ನೊಚ್ಚ, ಮಹಿಳಾ ವಿಭಾಗದ ಅಧ್ಯಕ್ಷೆ ಜಯಲಕ್ಷ್ಮೀ ಎನ್. ಸಾಮಾನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ನಿಧಿ ಸಂಚಾಲಕ ಅಜಿತ್ ಜಿ. ಶೆಟ್ಟಿ ಪ್ರಸ್ತಾವನೆಗೈದು ಸ್ವಾಗತಿಸಿದರು. ಪ್ರಕಾಶ್ ಶೆಟ್ಟಿ ನೊಚ್ಚ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಉಮೇಶ್ ಶೆಟ್ಟಿ ಧನ್ಯವಾದವಿತ್ತರು. ಕೋಶಾಧಿಕಾರಿ ವಸಂತ ಶೆಟ್ಟಿ, ಜೊತೆ ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ ಸಹಕರಿಸಿದರು.ಸಾಧನೆಯ ಛಲವಿದ್ದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ದೊಡ್ಡ ಮಟ್ಟದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಅರ್ಥಿಕ ಸಹಕಾರ ನೀಡುವ ಮೂಲಕ ಅವರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವುದು ಶ್ಲಾಘನೀಯ ಕೆಲಸ, ಅದೇ ರೀತಿ ವಿದ್ಯಾರ್ಥಿಗಳು ಕೂಡ ಉತ್ತಮ ಸಾಧನೆಗೈದು ಯಶಸ್ಸು ಗಳಿಸಿ ಉನ್ನತ ವ್ಯಕ್ತಿಗಳಾಗಿ ಬಾಳಬೇಕು ಎಂದು ಸಂಘದ ಮಾರ್ಗದರ್ಶಕಶಶಿಧರ್ ಶೆಟ್ಟಿ ನವಶಕ್ತಿ ಹೇಳಿದರು. ಬೆಳ್ತಂಗಡಿ ಬಂಟರ ಭವನ ಕಟ್ಟಡದ ಸಾಲ ಮರುಪಾವತಿಗಾಗಿ ಸಾಲಮಕ್ತ ಅಭಿಯಾನ ಕೆಲವು ಸಮಯಗಳ ಹಿಂದೆ ಪ್ರಾರಂಭಿಸಿದ್ದು, ತಾಲೂಕಿನ ಬಂಟ ಭಾಂಧವರು ಉತ್ತಮ ರೀತಿಯಲ್ಲಿ ಅರ್ಥಿಕ ಸಹಕಾರ ನೀಡಿದ್ದು, ಉಳಿದಂತೆ ಬಾಕಿ ಇರುವ ಸಾಲದ ಮೊತ್ತವನ್ನು ತಾನು ನೀಡುವುದಾಗಿ ತಿಳಿಸಿ ಬೆಳ್ತಂಗಡಿ ಬಂಟರ ಸಂಘ ಸಾಲಮುಕ್ತವಾಗಿದೆ ಎಂದು ಬಂಟರ ಸಂಘದ ಗೌರವ ಮಾರ್ಗದರ್ಶಕರು, ಉದ್ಯಮಿಗಳಾದ ಶಶಿಧರ್ ಶೆಟ್ಟಿ ಬರೋಡ ಘೋಷಿಸಿದರು.ಬಂಟರ ಸಂಘಕ್ಕೆ ದೊಡ್ಡ ರೀತಿಯಲ್ಲಿ ಅರ್ಥಿಕ ಸಹಕಾರ ನೀಡುತ್ತಿರುವ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ, ಎ.ಸಿ.ಎಫ್ ಕುಮಾರಿ ಹಸ್ತಾ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಅಡಿಕೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಮಡಂತ್ಯಾರ್, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಎಣಿಂಜೆ, ಬೆಳ್ತಂಗಡಿ ತಾಲೂಕು ಅಡಿಕೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಹೇಮಶಂಕರ್ ಶೆಟ್ಟಿ ಅವರುಗಳನ್ನು ಸಂಘದ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು.ಬಂಟರ ಭವನ ಕಟ್ಟಡದ ಸಾಲ ಮರುಪಾವತಿಗಾಗಿ ಸಾಲಮುಕ್ತ ಅಭಿಯಾನದಲ್ಲಿ ದೇಣಿಗೆ ನೀಡಿದ ದಾನಿಗಳನ್ನು ಸಂಘದ ವತಿಯಿಂದ ಶಶಿಧರ್ ಶೆಟ್ಟಿಯವರು ಗೌರವಿಸಿ ಅಭಿನಂದಿಸಿದರು.2024-25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್ಎಸ್ ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ 63 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. 296 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ವಿಶೇಷ ಸಾಧನೆಗೈದ 7 ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು.







