ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಗಡಿಪಾರು ಆದೇಶ

ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಗಡಿಪಾರು ಆದೇಶ
Facebook
Twitter
LinkedIn
WhatsApp

ಬೆಳ್ತಂಗಡಿ: ರೌಡಿಶೀಟರ್ ಅಗಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಮೂರನೇ ಬಾರಿಗೆ ಗಡಿಪಾರು ಆದೇಶ ಹೊರಡಿಸಲಾಗಿದೆ. ರಾಜ್ಯ ಹೈಕೋರ್ಟ್ ಈ ಹಿಂದೆ ಎರಡೆರಡು ಬಾರಿ ತಾಂತ್ರಿಕ ಕಾರಣಗಳನ್ನು ನೀಡಿ ಪುತ್ತೂರು ಸಹಾಯಕ ಕಮಿಷನರ್ ಹೊರಡಿಸಿದ ಗಡೀಪಾರು ಆಜ್ಞೆಗೆ ತಡೆಯಾಜ್ಞೆ ನೀಡಿತ್ತು. ಬೆಳ್ತಂಗಡಿ ತಾಲೂಕಿನ ಉಜಿರೆಯ ರೌಡಿಶೀಟರ್ ಅಗಿರುವ ಮಹೇಶ್ ಶೆಟ್ಟಿ ತಿಮರೋಡಿಯನ್ನು ಹೈಕೋರ್ಟ್ ಆದೇಶದಂತೆ ಮಾರ್ಚ್ 16ರಂದು ಮತ್ತೆ ಮೂರನೇ ಬಾರಿಗೆ (16-03-2026 ರಿಂದ 16-09-2026 ರವರೆಗೆ) ಪುತ್ತೂರು ಸಹಾಯಕ ಕಮಿಷನರ್ ಸ್ಟೆಲ್ಲಾ ವರ್ಗಿಸ್ ಅವರು ಆರು ತಿಂಗಳು ಕಾಲ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.ಪುತ್ತೂರು ಸಹಾಯಕ ಕಮಿಷನರ್ ಗಡಿಪಾರು ಆದೇಶದಂತೆ ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ ಸಿ.ಕೆ. ಅವರ ನೇತೃತ್ವದಲ್ಲಿ ಪೊಲೀಸರು ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಮಾರ್ಚ್ 16 ರ ರಾತ್ರಿ ತೆರಳಿ, ಗಡಿಪಾರು ಆದೇಶ ಪ್ರತಿಯನ್ನು ಜಾರಿ ಮಾಡಲು ಹೋದಾಗ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿರದೆ ನಾಪತ್ತೆಯಾಗಿದ್ದರು. ಬಳಿಕ ಮನೆಯ ಗೋಡೆಗೆ ಗಡೀಪಾರು ಆದೇಶದ ನೋಟಿಸ್ ಅಂಟಿಸಿ ವಾಪಾಸಾಗಿದ್ದಾರೆ. ಪುತ್ತೂರು ಸಹಾಯಕ ಕಮಿಷನರ್ ಆದೇಶದಂತೆ ಗಡೀಪಾರು ಆದೇಶ ಜ್ಯಾರಿ ಮಾಡಲು ಹೊರಟ ಪೊಲೀಸರ ಕ್ರಮದ ವಿರುದ್ಧ ಈಗಾಗಲೇ ಗಡಿಪಾರು ಆದೇಶಕ್ಕೆ ಅಂಜಿ ತಲೆಮರೆಸಿಕೊಂಡಿರುವ ರೌಡಿ ಶೀಟರ್ ಮಹೇಶ್ ಶೆಟ್ಟಿ ತಿಮರೋಡಿ ಯಾವರೀತಿಯ ಕಾನೂನು ಹೋರಾಟ ಮಾಡಲಿದ್ದಾರೆ ಎಂಬುವುದು ಕುತೂಹಲಕರ ವಿಚಾರ.

Latest 5

Related Posts