ಪರಪ್ಪು ಮದರಸದಲ್ಲಿ ಎಂಬ್ರೆಝ್ ಮದೀನಾ-2024

ಪರಪ್ಪು ಮದರಸದಲ್ಲಿ ಎಂಬ್ರೆಝ್ ಮದೀನಾ-2024
Facebook
Twitter
LinkedIn
WhatsApp

ಬೆಳ್ತಂಗಡಿ: ಕಳಿಯ ಗ್ರಾಮದ ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿ ಅಧೀನದಲ್ಲಿರುವ ಹಿದಾಯ ತುಸ್ಸಿಬಿಯಾನ್ ಮದರಸದಲ್ಲಿ ಈದ್ ಮಿಲಾದ್ ಪ್ರಯುಕ್ತ ಮದರಸ ಮಕ್ಕಳ ಕಲಾ ಕಲರವ ಕಾರ್ಯಕ್ರಮ ‘ಎಂಬ್ರೆಝ್ ಮದೀನಾ – 24’ ನಡೆಯಿತು.ಅಧ್ಯಕ್ಷತೆಯನ್ನು ಅಬೂಬಕ್ಕರ್ ಹಾಜಿ ವಹಿಸಿದ್ದರು.ಖತೀಬರಾದ ಮುಹಮ್ಮದ್ ಮಿಸ್ಬಾಹಿ ಅಲ್ ಫುರ್ಖಾನಿ ಪ್ರಾಸ್ತಾವಿಕವಾಗಿ ಮಾತನಾಡಿ ದುವಾ ನೆರವೇರಿಸಿದರು. ಸದರ್ ಉಸ್ತಾದರಾದ ಅಬೂಬಕ್ಕರ್ ಸಿದ್ದೀಕ್ ಮುಈನಿ, ಹಸೈನಾರ್ ಸಅದಿ, ಅಬ್ಬಾಸ್ ಹಿಶಮಿ, ಮುಹಮದ್ ಝಿಯಾದ್ ಮು ಈನಿ ಕಲಾ ಕಲರವ ಕಾರ್ಯಕ್ರಮ ನಡೆಸಿಕೊಟ್ಟರು. ಕಳೆದ 2023 ನೇ ಸಾಲಿನ ಮದರಸದ ಪಬ್ಲಿಕ್ ಪರೀಕ್ಷೆಯಲ್ಲಿ ಎ+ ಗ್ರೇಡ್ ನಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು.ಖತೀಬ್ ಉಸ್ತಾದ್, ಸದರ್ ಮತ್ತು ಮುಅಲ್ಲಿಮರನ್ನು ಆಡಳಿತ ಸಮಿತಿ, ಕೆ.ಎಮ್.ಜೆ, ಎಸ್.ವೈ.ಎಸ್, ಸ್ವಲಾತ್ ಎಸ್.ಎಸ್.ಎಫ್ ಸಮಿತಿ ವತಿಯಿಂದ ಗೌರವಿಸಲಾಯಿತು. ವೇದಿಕೆಯಲ್ಲಿ ಅಬ್ದುಲ್ಲ ಕುಂಞ ದಾರಿಮಿ, ಪಿ.ಎಸ್. ಮಹಮ್ಮದ್ ಮದನಿ, ಅಬೂಸ್ವಾಲಿಹ್, ಮಹಮ್ಮದ್ ಹನೀಫ್, ಅಬ್ದುಲ್ ಖಾದರ್ ಹಾಜಿ, ಜಿ. ಅಬ್ದುಲ್ ಖಾದರ್, ಬಿ.ಎಂ.ಆದಂ ಹಾಜಿ, ಎಸ್.ಎ. ಬಶೀರ್, ಮಹಮ್ಮದ್ ಎನ್.ಎನ್‌., ಹಾರಿಶ್ ಎನ್.ಎ., ಸಿದ್ದೀಕ್ ಜಿ.ಎಚ್., ಫಯಾಝ್, ಸೈಫುಲ್ಲ, ಎಚ್.ಎಸ್., ಬಶೀರ್ ಎಸ್.ಎಮ್. ಹಾಗೂ ಆಡಳಿತ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.ಪ್ರದಾನ ಕಾರ್ಯದರ್ಶಿ ಅಬ್ದುಲ್ ಕರೀಮ್ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Latest 5

Related Posts