ಬೆಳ್ತಂಗಡಿ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಬೆಳ್ತಂಗಡಿ ಘಟಕ,ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್ ಹಾಗೂ ದಕ್ಷಿಣ ಕನ್ನಡ ಹಾಸ್ಪಿಟಲ್ ಸೊಸೈಟಿ ಇವರ ಸಂಯುಕ್ತ ಆಶ್ರಯದಲ್ಲಿ ಕೋರ್ಟ್ ರಸ್ತೆಯಲ್ಲಿರುವ ಕಛೇರಿ ‘ಅನನ್ಯ’ದಲ್ಲಿ ಸೆಪ್ಟೆಂಬರ್ 22ರಂದು ನಡೆದ ರಕ್ತ ಹಾಗೂ ಅರೋಗ್ಯ ಉಚಿತ ತಪಾಸಣಾ ಶಿಬಿರವನ್ನು ವಾಲ್ಟರ್ ಸಿಕ್ವೇರಾ ದೀಪ ಬೆಳಗಿಸಿ ಉದ್ಘಾಟಿಸಿದರು.ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಹರಿದಾಸ್ ಎಸ್.ಎಂ. ಪ್ರಸ್ತಾವಿಕ ಭಾಷಣದೊಂದಿಗೆ ಸ್ವಾಗತಿಸಿದರು. ಮಂಜುಶ್ರೀ ಸೀನಿಯರ್ ಛೇಂಬರ್ಕಾರ್ಯದರ್ಶಿ ಜಾನ್ ಅರ್ವಿನ್ ಡಿ’ಸೋಜ ಶುಭಕೋರಿದರು.ವೇದಿಕೆಯಲ್ಲಿ ವಕೀಲ ಶಿವಕುಮಾರ್, ವೆಂಕಟೇಶ್ ಮಯ್ಯ, ಡಾI ದೀಪ್ತಿ ಹಾಗೂ ಡಾI ಅನನ್ಯ ಉಪಸ್ಥಿತರಿದ್ದರು. ಮಂಜುಶ್ರೀ ಸೀನಿಯರ್ಛೇಂಬರಿನ ಪೂರ್ವಧ್ಯರಾದ ಪ್ರಥ್ವಿ ರಂಜನ್ ರಾವ್, ಲ್ಯಾನ್ಸಿ ಪಿರೇರಾ, ಸದಸ್ಯರಾದ ಹರೀಶ್ ಶೆಟ್ಟಿ, ವಿಲ್ಸನ್ ಗೊನ್ಸಾಲ್ವಿಸ್, ದಯಾನಂದ ಹಾಗೂ ಬಾನುಪ್ರಸನ್ನ ಭಾಗವಹಿಸಿದರು.ಶಿವಕುಮಾರ್ ಇವರು ಕಾರ್ಯಕ್ರಮವನ್ನು ನಿರ್ವಹಿಸಿ ಕೊನೆಗೆ ಧನ್ಯವಾದ ಸಮರ್ಪಿಸಿದರು.ಸುಮಾರು 200 ಜನರು ಈ ಶಿಬಿರದಲ್ಲಿ ಭಾಗವಹಿಸಿದರು.






