ಬೆಳ್ತಂಗಡಿ: ಮದ್ದಡ್ಡ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಮದ್ದಡ್ಕ ಸುವರ್ಣ ಸೌಧ ಸಭಾ ಭವನದಲ್ಲಿ ಸೆಪ್ಟೆಂಬರ್ 19ರಂದು ಸಂಘದ ಅಧ್ಯಕ್ಷ ಕೋರ್ಯಾರು ಗೋಪಾಲ ಶೆಟ್ಟರ ಅಧ್ಯಕ್ಷತೆಯಲ್ಲಿ ನಡೆಯಿತು. ಮಹಾಸಭೆಯನ್ನು ಉದ್ಧೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕೋರ್ಯಾರು ಗೋಪಾಲ್ ಶೆಟ್ಟಿ; ವರದಿ ವರ್ಷದಲ್ಲಿ ಸಂಘವು 3.90 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದು, ರೂಪಾಯಿ 15.30ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ 65% ಬೋನಸ್ ಹಾಗೂ 25% ಡಿವಿಡೆಂಡ್ ನೀಡಲಾಗುವುದು ಎಂದು ಘೋಷಿಸಿದರು.ಸಭೆಯಲ್ಲಿ ನಿರ್ದೇಶಕರದ ಅಣ್ಣಿ ಶೆಟ್ಟಿ, ಕೆ.ಪಿ. ಚಿದಾನಂದ, ವಿನೋದ ಶೆಟ್ಟಿ, ಮೋಹನ್ ನಾಯ್ಕ, ಶಿವಪ್ಪಗೌಡ, ಶಶಿಕಲಾ, ಕಾಂತಪ್ಪ ಮೂಲ್ಯ, ರುದೇಶ್ ಕುಮಾರ್, ನಾರಾಯಣ ಮೂಲ್ಯ, ವಸಂತಿ ಉಪಸ್ಥಿರಿದ್ದರು.ಪ್ರಸಕ್ತ ಶೈಕ್ಷಣಿಕ ವರ್ಷ ನಡೆದ ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಉತ್ತೀರ್ಣರಾದ ಸಂಘದ ಸದಸ್ಯರ ಮಕ್ಕಳಾದ 8ಮಂದಿ ವಿದ್ಯಾರ್ಥಿಗಳಿಗೆ ಹಾಗೂ 11ಮಂದಿ ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.ಉಪಾಧ್ಯಕ್ಷ ವಿವೇಕಾನಂದ ಸಾಲಿಯನ್ ಸ್ವಾಗತಿಸಿದರು. ಕಾರ್ಯದರ್ಶಿ ಪವಿತ್ರ ವರದಿ ಹಾಗೂ ಲೆಕ್ಕಪತ್ರವನ್ನು ಮಹಾಸಭೆಯ ಮುಂದಿರಿಸಿ ಅನುಮೋದನೆ ಪಡೆದರು. ನಿರ್ದೇಶಕ ರಮೇಶ್ ಪೂಜಾರಿ ವಂದಿಸಿದರು.






