ಕೃಷಿ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃಧ್ಧಿ ಬಗ್ಗೆ ಹ್ಯಾಕಥಾನ್

ಕೃಷಿ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃಧ್ಧಿ ಬಗ್ಗೆ ಹ್ಯಾಕಥಾನ್
Facebook
Twitter
LinkedIn
WhatsApp

ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಧಳ ಮಂಜುನಾಥೇಶ್ವರ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಡಿಲೈತ್‌ ಬೆಂಗಳೂರು ಹಾಗೂ ಐಎಸ್‌ಟಿಇ ಸಹಭಾಗಿತ್ವದಲ್ಲಿ ಕೃಷಿ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃಧ್ಧಿ ಎಂಬ ವಿಷಯದ ಕುರಿತು ಸೆಪ್ಟೆಂಬರ್‌ 27 ಮತ್ತು 28 ರಂದು ‘ಇನೊವೇಟ್‌-ಥಾನ್’ ಎನ್ನುವ ಎರಡು ದಿನದ ಹ್ಯಾಕಥಾನ್ ಅಯೋಜಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಂಗಳೂರು ಇನ್‌ಫೋಸಿಸ್‌ನ ಹಿರಿಯ ತಾಂತ್ರಿಕ ಆರ್ಕಿಟೆಕ್ಟ್‌ ಕಾಟಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ; ವಿದ್ಯಾರ್ಥಿಗಳು ದೈನಂದಿನ ಸಮಸ್ಯೆಗಳಿಗೆ ತಾಂತ್ರಿಕ ಹಿನ್ನಲೆಯಲ್ಲಿ ಪರಿಣಾಮಕಾರಿಯಾದ ಪರಿಹಾರ ಕಂಡುಕೊಳ್ಳುವಂತೆ ಹಾಗೂ ನೂತನ ಉತ್ಪನ್ನಗಳ ಅಭಿವೃಧ್ಧಿಯೆಡೆಗೆ ಆಲೋಚಿಸಲು ಅಗತ್ಯವಿರುವ ಕೌಶಲ್ಯಗಳ ಬಗ್ಗೆ ಮಾತನಾಡಿದರು.ಡಿಲೈತ್‌ ಬೆಂಗಳೂರಿನ ಸಹ ಸಂಸ್ಥಾಪಕರಾದ ಅರುಣ್‌ರಾಜ್ ಪುರೋಹಿತ್ ಮಾತನಾಡಿ ಹ್ಯಾಕಥಾನ್‌ನ ಪ್ರಾಮುಖ್ಯತೆ ತಿಳಿಸಿದರು. ಸೆಪ್ಟೆಂಬರ್‌28 ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಹ್ಯಾಕಥಾನ್ ಸ್ಫರ್ಧೆಯಲ್ಲಿ ವಿಜೇತರಿಗೆ ಕಾಟಮಯ್ಯ ನಗದು ಬಹುಮಾನ ವಿತರಿಸಿದರು. ಮಂಗಳೂರ್ ಬೇಕ್‌ಎಂಡ್‌ನ ಡೆವಲೊಪ್ಮೆಂಟ್‌ ಇಂಜಿನಿಯರ್‌ ದೀಪಕ್, ಹಿರಿಯ ನೇಮಕಾತಿ ಅಧಿಕಾರಿ ಅರ್ಪಿತಾ ಸಹಕರಿಸಿದರು. ಕಾಲೇಜಿನ 23 ತಂಡಗಳು ಬಾಗವಹಿಸಿದ್ದವು. ಉಪಾನ್ಯಾಸಕಿ ಲಾರೈನ್‌ ಕಾರ್ಯಕ್ರಮ ನಿರೂಪಿಸಿದರು. ಮೆಕ್ಯಾನಿಕಲ್‌ ವಿಭಾಗದ ಮುಖ್ಯಸ್ಥ ಡಾ. ಗಿರೀಶ್‌ಕುಮಾರ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿವಿಲ್‌ ವಿಭಾಗದ ಸಹ ಪ್ರಾದ್ಯಾಪಕರಾದ ವಿನಯ್‌ ಮತ್ತು ರಾಮ್‌ಪ್ರಸಾದ್‌ ಕಾರ್ಯಕ್ರಮ ಸಂಯೋಜಿಸಿದ್ದರು.

Latest 5

Related Posts