ಬೆನಕ ಆಸ್ಪತ್ರೆಯ ಸೇವೆ ಅನುಕರಣೀಯ ಯು.ಟಿ.ಖಾದರ್

ಬೆನಕ ಆಸ್ಪತ್ರೆಯ ಸೇವೆ ಅನುಕರಣೀಯ ಯು.ಟಿ.ಖಾದರ್
Facebook
Twitter
LinkedIn
WhatsApp

ಬೆಳ್ತಂಗಡಿ: ಇಬ್ಬರು ವೈದ್ಯರಿಂದ ಆರಂಭವಾದ ಆಸ್ಪತ್ರೆ ಇಂದು ವಿವಿಧ ಆರೋಗ್ಯ ಕ್ಷೇತ್ರಗಳಲ್ಲಿ ಪರಿಣತಿ ಪಡೆದ 40 ಕ್ಕಿಂತಲೂ ಅಧಿಕ ತಜ್ಞ ವೈದ್ಯರ ಸೇವೆಯನ್ನು ಬೆನಕ ಉಜಿರೆಯಂತಹ ಗ್ರಾಮೀಣ ಪರಿಸರದಲ್ಲಿ ಒದಗಿಸುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಬದ್ಧತೆಯೊಂದಿಗೆ ಆರಂಭವಾದ ಉಜಿರೆಯ ಬೆನಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಸಮಾಜದ ಅಗತ್ಯತೆಗಳಿಗೆ ಸದಾ ಸ್ಪಂದಿಸುತ್ತಾ ಬಂದಿರುವುದು ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ. ಬೆನಕ ಆಸ್ಪತ್ರೆ ಈ ಪ್ರದೇಶದ ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಎಂದು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಭಿಪ್ರಾಯಿಸಿದರು.ಕರ್ನಾಟಕ ವಿಧಾನ ಸಭೆಯ ಸಭಾಪತಿ ಯು.ಟಿ. ಖಾದರ್ ಅವರು ಇತ್ತೀಚೆಗೆ ರಜತ ಸಂಭ್ರಮದಲ್ಲಿರುವ ಉಜಿರೆಯ ಬೆನಕ ಆಸ್ಪತ್ರೆಗೆ ಬೇಟಿ ನೀಡಿ ಅಲ್ಲಿನ ವೈದ್ಯಕೀಯ ಸೌಲಭ್ಯಗಳನ್ನು ವೀಕ್ಷಿಸಿ ಮಾತನಾಡುತ್ತಿದ್ದರುನಮ್ಮ ಬೆನಕ ಸಂಸ್ಥೆ ಮತ್ತು ಸನ್ಮಾನ್ಯ ಯು.ಟಿ.ಖಾದರ್ ಅವರಿಗೆ ಅವಿನಾಭಾವ ಸಂಬಂಧ. ಕರ್ನಾಟಕ ಸರಕಾರದ ಆರೋಗ್ಯ ಸಚಿವರಾಗಿದ್ದಾಗ ಮಾನ್ಯ ಯು.ಟಿ. ಖಾದರ್ ಅವರು ಬೆನಕ ಆಸ್ಪತ್ರೆಗೆ ಬಂದು ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಕೊಠಡಿಯನ್ನು ಉದ್ಘಾಟನೆ ಮಾಡಿದ್ದು; ಪಟ್ಟಣಗಳ ದೊಡ್ಡ ಆಸ್ಪತ್ರೆಗಳಿಗೆ ಸೀಮಿತವಾದ ಮೈಕ್ರೊಸರ್ಜರಿ, ಕೀಹೋಲ್ ಸರ್ಜರಿ, ಕಣ್ಣಿನ ಸರ್ಜರಿ ಮೊದಲಾದ ಸಂಕೀರ್ಣ ಶಸ್ತ್ರಚಿಕಿತ್ಸೆಗಳಿಗೆ ನಮ್ಮ ಬೆನಕ ಆಸ್ಪತ್ರೆ ಗುರುತಿಸಲ್ಪಟ್ಟು ದೂರದೂರಿನಿಂದ ರೋಗಿಗಳು ಚಿಕಿತ್ಸೆಗಾಗಿ ಬರುತ್ತಿರುವುದು ಹೆಮ್ಮೆಯ ಸಂಗತಿ. ಬೆನಕ ಆಸ್ಪತ್ರೆಯ ಹೆಮ್ಮೆಯ ರಜತ ಸಂಭ್ರಮದ ಸಂದರ್ಭದಲ್ಲಿ ಕರ್ನಾಟಕ ವಿಧಾನ ಸಭೆಯ ಮಾನ್ಯ ಸಭಾಪತಿಗಳಾದ ಸನ್ಮಾನ್ಯ ಯು.ಟಿ. ಖಾದರ್ ಅವರು ಬೆನಕ ಆಸ್ಪತ್ರೆಗೆ ಆಗಮಿಸಿದ್ದು ನಮಗೆಲ್ಲಾ ಸಂತೋಷ ಹಾಗೂ ಸಾರ್ಥಕ್ಯದ ಕ್ಷಣ ಎಂದು ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಗೋಪಾಲಕೃಷ್ಣ ತಿಳಿಸಿ ಎಲ್ಲರನ್ನು ಸ್ವಾಗತಿಸಿದರು.ಆಸ್ಪತ್ರೆಯ ಪರವಾಗಿ ಯು.ಟಿ. ಖಾದರ್ ಅವರಿಗೆ ಡಾ| ಗೋಪಾಲಕೃಷ್ಣ, ಡಾ| ಆದಿತ್ಯ ರಾವ್ ಹಾಗೂ ಡಾ| ಅಂಕಿತಾ ಅವರು ಗೌರವಾರ್ಪಣೆ ಸಲ್ಲಿಸಿದರು. ಬೆಳ್ತಂಗಡಿಯ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಉಪಸ್ಥಿತರಿದ್ದರು. ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದ ಈ ಕಾರ್ಯಕ್ರಮನ್ನು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಜಿ. ಭಟ್ ನಿರೂಪಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೇವಸ್ಯ ವಂದಿಸಿದರು.

Latest 5

Related Posts