ಎಕ್ಸೆಲ್‌ನ ವಿವೇಕ್ ಎನ್‌ಡಿಎ ಕ್ಲಿಯರ್

ಎಕ್ಸೆಲ್‌ನ ವಿವೇಕ್ ಎನ್‌ಡಿಎ ಕ್ಲಿಯರ್
Facebook
Twitter
LinkedIn
WhatsApp

ಬೆಳ್ತಂಗಡಿ: ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ವಿವೇಕ್ ಎಸ್.ಎಸ್. ನೇಷನಲ್ ಡಿಫೆನ್ಸ್ ಅಕಾಡೆಮಿ ನಡೆಸುವ ಎನ್‌ಡಿಎ ಲಿಖಿತ ಪರೀಕ್ಷೆಯಗೆ ಹಾಜರಾದ ಹತ್ತು ಲಕ್ಷ ವಿದ್ಯಾರ್ಥಿಗಳ ಪೈಕಿ ಅಂತಿಮ ಸುತ್ತಿಗೆ ಆಯ್ಕೆಯಾದ ದೇಶದ ಕೆಲವೇ ವಿದ್ಯಾರ್ಥಿಗಳ ಪೈಕಿ ವಿವೇಕ್ ಎಸ್.ಎಸ್. ಒಬ್ಬನಾಗಿದ್ದಾನೆ. ಎಕ್ಸೆಲ್‌ ಕಾಲೇಜಿನಲ್ಲಿ ರಾಷ್ಟ್ರಸೇವೆ ಮಾಡಲು ಮತ್ತು ರಾಷ್ಟ್ರ ಸೇವಾ ವಿಚಾರದಲ್ಲಿ ವಿಶೇಷ ಆಸಕ್ತಿ ಇರುವ ವಿದ್ಯಾರ್ಥಿಗಳನ್ನು ಈ ವರ್ಷದಿಂದ ಪ್ರತ್ಯೇಕ ಬ್ಯಾಚ್ ಮಾಡಿ ಅತ್ಯುತ್ತಮ ತರಬೇತಿ ನೀಡಲಾಗುತ್ತಿದೆ. ವಿಕ್ರಾಂತ್ ಎಂಬ ಹೆಸರಿನ ಎನ್‌ಡಿಎ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಾಗೂ ದೈಹಿಕ ತರಬೇತಿಯೊಂದಿಗೆ, ಎಸ್‌ಎಸ್‌ಬಿ ಸಂದರ್ಶನ ಎದುರಿಸುವ ಕುರಿತಾಗಿ ಕೂಡಾ ವಿಶೇಷ ತರಬೇತಿ ನೀಡಲಾಗುತ್ತಿದೆ. ಸಾಧಕರನ್ನು ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು, ಪ್ರಾಂಶುಪಾಲರು, ಪ್ರಾಧ್ಯಾಪಕರು ಹಾಗೂ ಸಂಯೋಜಕರಾದ ಜೋಸ್ಟಮ್ ಎ.ಟಿ. ಅವರು ಅಭಿನಂದಿಸಿದ್ದಾರೆ.

Latest 5

Related Posts