ಬೆಳ್ತಂಗಡಿ: ಬೆಳ್ತಂಗಡಿಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದುರ್ಗಾದಾಸ್ ಎಂ. ಹಾಗೂ ರೇವತಿ ದಂಪತಿಯ ಪುತ್ರಿ, ಪ್ರಸ್ತುತ ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸಂಜನ ಎಂ.ಡಿ. ಅವರು ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನ ಮಾಡಿದ್ದಾರೆ. ಕರಾಟೆ, ಯಕ್ಷಗಾನ, ಭರತನಾಟ್ಯದಲ್ಲಿ ತೊಡಗಿಸಿಕೊಂಡಿರುವ ಈಕೆಗೆ ಸಾಮಾಜಿಕ ಕಳಕಳಿಯಿಂದ ಸಮಾಜ ಸೇವೆ ಮಾಡಬೇಕೆಂಬ ಹಂಬಲದಿಂದ ತನ್ನ ಕೇಶವನ್ನು ಕ್ಯಾನ್ಸರ್ ಪೀಡಿತರಿಗೆ ಶೃಂಗಾರ್ ಮಾಸ್ಟರ್ ಕಟ್ ಅವರ ಮೂಲಕ ಯುವಶಕ್ತಿ ಸೇವಾಪಥ ಟ್ರಸ್ಟ್ ಅವರಿಗೆ ದಾನವಾಗಿ ನೀಡಿದ್ದಾರೆ. ಮೂಲತಃ ಸುಬ್ರಹ್ಮಣ್ಯದವರಾದ ಇವರು ಪ್ರಸ್ತುತ ಬೆಳ್ತಂಗಡಿ ಪೊಲೀಸ್ ವಸತಿಗೃಹದಲ್ಲಿ ವಾಸ್ತವ್ಯ ಇದ್ದಾರೆ.






