ಎಕ್ಸೆಲ್‌ನಲ್ಲಿ ದೃಷ್ಟಿ – 2025 ಓರಿಯಂಟೇಶನ್

ಎಕ್ಸೆಲ್‌ನಲ್ಲಿ ದೃಷ್ಟಿ – 2025 ಓರಿಯಂಟೇಶನ್
Facebook
Twitter
LinkedIn
WhatsApp

ಬೆಳ್ತಂಗಡಿ: ಹಣದ ಹಿಂದೆ ಹೋದವರು ಗೆದ್ದಿಲ್ಲ. ಗುರಿಯ ಹಿಂದೆ ಹೋದವರು ಗೆದ್ದಿದ್ದಾರೆ; ಹಾಗೂ ಹಣವನ್ನೂ ಗಳಿಸಿದ್ದಾರೆ. ಹೀಗಾಗಿ ಅಚಲವಾದ ಗುರಿ ನಿಮ್ಮಲ್ಲಿದ್ದರೆ ಗೆಲುವನ್ನು ಸಾಧಿಸಬಹುದು. ಆಗ ತಾನಾಗಿಯೇ ಹಣ ಸಂಪಾದನೆ ಯಾಗುತ್ತದೆ ಎಂದು ವಿಶ್ರಾಂತ ಪ್ರಾಂಶುಪಾಲ ಪ್ರೊ. ಬಿ.ವಿ. ಸೂರ್ಯನಾರಾಯಣ ಅವರು ಹೇಳಿದರು. ಅವರು ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾಸಾಗರ ಕ್ಯಾಂಪಸ್ ನಲ್ಲಿ ‘ದೃಷ್ಟಿ-2025’ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಓರಿಯಂಟೇಶನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ; ನಮ್ಮ ಕಾಲೇಜಿನ ಶೈಕ್ಷಣಿಕ ಸಾಧನೆಯ ಬಗ್ಗೆ ನಾವು ಹೇಳುವುದಕ್ಕಿಂತ ನಮ್ಮ ಫಲಿತಾಂಶವೇ ಹೇಳುತ್ತದೆ. ವಿಜ್ಞಾನ ವಿಭಾಗದ ಎಲ್ಲಾ ಕೋಚಿಂಗ್ ನಮ್ಮಲ್ಲಿದೆ . ಬಳಸಿಕೊಳ್ಳುವ ಬುದ್ಧಿವಂತಿಕೆ ವಿದ್ಯಾರ್ಥಿಗಳಲ್ಲಿ ಇರಬೇಕು ಎಂದರು. ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಎಂ ಅವರು ಪ್ರಾಸ್ತಾವಿಕವಾಗಿ ಮಾತನಾಡಿ; ಕನಸುಗಳು ನನಸಾಗ ಬೇಕಾದರೆ ಶ್ರಮ ಪಡುವುದನ್ನು ರೂಢಿಸಿಕೊಳ್ಳಬೇಕು. ನಿರಂತರವಾದ ಪರಿಶ್ರಮವೇ ನಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸುತ್ತದೆ ಎಂದು ಹೇಳಿ ಸರ್ವರನ್ನೂ ಸ್ವಾಗತಿಸಿದರು. ಉಪನ್ಯಾಸಕರಾದ, ಡಾ. ಸತ್ಯ ನಾರಾಯಣ ಭಟ್ – ಸಿಇಟಿ, ಪ್ರವೀಣ್ ಪಾಟೀಲ್ – ಜೆಇಇ,ಶ್ರೀನಿಧಿ ರಾಜ್ ಶೆಟ್ಟಿ -ನೀಟ್ಜೋಸ್ಟಮ್ ಎ.ಟಿ. – ಎನ್‌ಡಿಎ ವರುಣ್ ದೇವ್ – ನಾಟಾಹಾಗೂ ಪ್ರೊ. ರಾಜು ಬೆಳ್ಳುಂಡಗಿ – ಬಿಎಸ್ಸಿ ಅಗ್ರಿ ಬಗ್ಗೆ ಮಾಹಿತಿ ನೀಡಿದರು.ವಿದ್ಯಾರ್ಥಿನಿಯರಾದ ಗಾಯನ, ಅನುಷ್ಕಾ ಶೆಟ್ಟಿ, ಪ್ರೇಕ್ಷಾ ಜೈನ್, ಸುಭಿಕ್ಷಾ, ಗಾಯತ್ರಿ ಕೆ., ಚೈತ್ರ ಎಂ.ಜಿ. ಪ್ರಾರ್ಥಿಸಿದರು. ಉಪನ್ಯಾಸಕರಾದ ಮೊಹಮ್ಮದ್ ಮನೀರ್ ಕಾರ್ಯಕ್ರಮ ನಿರೂಪಿಸಿದರು. ದಿಶಾ ವಂದಿಸಿದರು.

Latest 5

Related Posts