ಬೆಳ್ತಂಗಡಿ: ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಪ್ರವೇಶ ಪರೀಕ್ಷೆ – ನೀಟ್ನಲ್ಲಿ ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ದಾಖಲಿಸಿ ಸಾಧನೆ ಮಾಡಿದ್ದಾರೆ.ಪ್ರವಣ್ ಪೊನ್ನಪ್ಪ 594,ಪ್ರೀಮಲ್ ಡಿಸೋಜ 558,ಅನುಷ್ ಬಿ 551,ಮೊಹಮ್ಮದ್ ಸಫ್ವಾನ್ 542,ಸಾನಿಕಾ – 542ಆರುಲ್ ಡಿಸೋಜ 540,ಸಂದೀಪ್ ದುಲಾಜ್ 533,ನಿಶ್ಚಲ್ ಆರ್ ಸೊನ್ನಾದ್ 532,ಶಾಂತವ್ವ 535,ಗೌತಮ್ ಎಸ್.ಜಿ 519,ಉಲ್ಲಾಸ್ ಎಂ.ಬಿ 502,ಪ್ರತೀಕ್ಷಾ ಎಸ್ – 506ವಿಜಯ್ ಕುಮಾರ್ 508,ಕೃಪಾ ಸಾಂಚಿ ಮೌರ್ಯ 508,ಪ್ರೇಕ್ಷಾ ಕುಂದರ್ 519,ವಿನೀತ್ ಎಸ್ ಅಣ್ಣ 511,ಏರಲ್ ಸಮಿಯಾ ಡಿಸೋಜ 518,ನಿಧಿ ನಾಯ್ಡು 519ಹರುಷ -496ಅಂಚನ ದಿನೇಶ್ 494ರಶ್ಮಿತಾ ಎನ್ 493ಪಿ ಎಸ್ ಯಶಸ್ 488ಆನಂದ ರೆಡ್ಡಿ 487ಧನ್ಯ ಎಸ್ 487ನಾಗನ ಗೌಡ 480ಗೌತಮ್ ಕೆ ಆರ್ 475ಕುಮಾರ ವೈಭವ 474ಅಂಕಗಳನ್ನು ಪಡೆದಿದ್ದಾರೆ.ಪ್ರತಿ ಬಾರಿಯೂ ಎಕ್ಸೆಲ್ನ ವಿದ್ಯಾರ್ಥಿಗಳು, ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ರ್ಯಾಂಕ್ ಪಡೆದು ವೈದ್ಯಕೀಯ ಸೀಟ್ ಪಡೆಯುತ್ತಿದ್ದಾರೆ. ಎಕ್ಸೆಲ್ನಲ್ಲಿ ವ್ಯಾಸಂಗ ಮಾಡಿದ ಹಲವು ವಿದ್ಯಾರ್ಥಿಗಳು ಭಾರತದ ಶ್ರೇಷ್ಠ ವೈದ್ಯಕೀಯ ಸಂಸ್ಥೆಗಳಾದ ಏಮ್ಸ್ ಸೇರಿ ವಿವಿಧ ಮೆಡಿಕಲ್ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ರಾಜ್ಯದ ಹಾಗೂ ನೆರೆ ರಾಜ್ಯಗಳ ವಿವಿಧ ಭಾಗಗಳಿಂದ ಸಾವಿರಾರು ವಿದ್ಯಾರ್ಥಿಗಳು ಎಕ್ಸೆಲ್ ಕಾಲೇಜಿಗೆ ಬಂದು ವಿದ್ಯಾಭ್ಯಾಸ ಪಡೆದು ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ಅತ್ಯುತ್ತಮ ಉಪನ್ಯಾಸಕರು ಇಂದು ಎಕ್ಸೆಲ್ನಲ್ಲಿ ಇರುವುದರಿಂದ ಪ್ರತಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಎಕ್ಸೆಲ್ ತನ್ನ ಛಾಪನ್ನು ಮೂಡಿಸುತ್ತಿದೆ.ನೀಟ್ ನಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.






