Deviprasad - Jai Kannadamma

ನೇಣು ಬಿಗಿದುಕೊಂಡು ಸಾವಿಗೆ ಶರಣು
ಬೆಳ್ತಂಗಡಿ: ಯುವಕನೊಬ್ಬ ನೇಣು ಬಿಗಿದುಕೊಂಡು ಸಾವಿಗೆ ಶರಣಾದ   ಘಟನೆ ಬೆಳ್ತಂಗಡಿ ತಾಲೂಕಿನ ಲಾಯ್ಲದಿಂದ ವರದಿಯಾಗಿದೆ.ಬೆಳ್ತಂಗಡಿ ತಾಲೂಕಿನ ಲಾಯ್ಲ ಗ್ರಾಮದ ಪ್ರಗತಿನಗರ ಕಾಶಿಬೆಟ್ಟು ನಿವಾಸಿ ಲಿಂಗಪ್ಪ ಎಂಬವರ ಪುತ್ರ ಎಲೆಕ್ಟ್ರಿಷಿಯನ್ ವೃತ್ತಿ ಮಾಡುತ್ತಿದ್ದ ಕೇಶವ (34) ಎಂಬಾತ ಎಪ್ರಿಲ್ 26ರಂದು ರಾತ್ರಿ ಮನೆಯಲ್ಲಿ ನೇಣುಬಿಗಿದಕೊಂಡು ಸಾವಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಸಾವಿಗೆ ಶರಣಾಗಲು ಕಾರಣ ತಿಳಿದುಬಂದಿಲ್ಲ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

The post ನೇಣು ಬಿಗಿದುಕೊಂಡು ಸಾವಿಗೆ ಶರಣು first appeared on Jai Kannadamma.

ಧರ್ಮಸ್ಥಳದಲ್ಲಿ 54ನೇ ಉಚಿತ ಸಾಮೂಹಿಕ ವಿವಾಹ ವೈಭವ ನಾಳೆ
ಬೆಳ್ತಂಗಡಿ: ನಾಡಿನ ಪವಿತ್ರ ಕ್ಷೇತ್ರ ಹಾಗೂ ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದಲ್ಲಿ ನಾಳೆ ಬುಧವಾರ ಸಂಜೆ ಗಂಟೆ 6-40ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಐವತ್ತನಾಲ್ಕನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದೆ.ಈಗಾಗಲೆ 105 ಜೊತೆ ವಧು-ವರರು ವಿವಾಹಕ್ಕಾಗಿ ಹೆಸರು ನೋಂದಾಯಿಸಿದ್ದು, ಅವರು ಕೊಟ್ಟ ದಾಖಲೆಗಳ ಮೂಲ ಪ್ರತಿಗಳನ್ನು ಪರಿಶೀಲಿಸಿದ ಬಳಿಕ ಅವರಿಗೆ ಸಾಮೂಹಿಕ ವಿವಾಹದಲ್ಲಿ ಅವಕಾಶ ನೀಡಲಾಗುವುದು.ವರನಿಗೆ ಧೋತಿ, ಶಾಲು ಮತ್ತು ವಧುವಿಗೆ ಸೀರೆ, ರವಿಕೆ ಕಣ ಹಾಗೂ ಮಂಗಳಸೂತ್ರ ಮತ್ತು ಹೂವಿನಹಾರ ನೀಡಲಾಗುವುದು. ಮದುವೆಯ ಎಲ್ಲಾ ವೆಚ್ಚವನ್ನು ಧರ್ಮಾಧಿಕಾಗಳಾದ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷರಾಗಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಭರಿಸಲಾಗುವುದು ಎಂದು ಟ್ರಸ್ಟ್‌ನ ಕಾರ್ಯದರ್ಶಿ ಎ.ವಿ. ಶೆಟ್ಟಿ  ತಿಳಿಸಿದ್ದಾರೆ.ವರದಕ್ಷಿಣೆ ಹಾಗೂ ಮದುವೆಗಾಗುವ ದುಂದುವೆಚ್ಚವನ್ನು ತಡೆಯುವ ಉದ್ದೇಶದಿಂದ ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ 1972 ರಲ್ಲಿ ಆರಂಭಿಸಿದ ಉಚಿತ ಸಾಮೂಹಿಕ ವಿವಾಹವನ್ನು ಪ್ರತಿವರ್ಷ ನಡೆಸುತ್ತಿದ್ದು, ಕಳೆದ ವರ್ಷದ ವರೆಗೆ ಹದಿಮೂರು ಸಾವಿರ ಜೊತೆ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿದ್ದು, ಸುಖ-ಶಾಂತಿ, ನೆಮ್ಮದಿಯ ದಾಂಪತ್ಯಜೀವನ ನಡೆಸುತ್ತಿದ್ದಾರೆ.ಬುಧವಾರ ಸಂಜೆ ಗಂಟೆ 6-40ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಧರ್ಮಾಧಿಕಾರಿಗಳಾದ ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಡಿ. ಹರ್ಷೇಂದ್ರ ಕುಮಾರ್ ನೇತೃತ್ವದಲ್ಲಿ ನಡೆಯುವ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಶಾಸಕ ಹರೀಶ್ ಪೂಂಜ ಮತ್ತು ಮೆಸ್ಕಾಂ ಅಧ್ಯಕ್ಷ ಹರೀಶ್‌ಕುಮಾರ್ ನೂತನ ದಂಪತಿಗಳಿಗೆ ಶುಭಾಶಂಸನೆ ಮಾಡುವರು.

The post ಧರ್ಮಸ್ಥಳದಲ್ಲಿ 54ನೇ ಉಚಿತ ಸಾಮೂಹಿಕ ವಿವಾಹ ವೈಭವ ನಾಳೆ first appeared on Jai Kannadamma.

ಉಜಿರೆ ದೇಗುಲದಲ್ಲಿ ದೃಢಕಲಶ
ಬೆಳ್ತಂಗಡಿ: ಉಜಿರೆ ಶ್ರೀ  ಜನಾರ್ದನ ದೇವಸ್ಥಾನದಲ್ಲಿ ಕಳೆದ ಮಾರ್ಚ್ 3ರಿಂದ 11ನೇ ತಾರೀಕಿನ ತನಕ ನಡೆದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ ಹಾಗೂ ನೂತನ ಬ್ರಹ್ಮರಥ-ಪುಷ್ಪರಥ ಸಮರ್ಪಣಾ ಸಮಾರಂಭದ ಬಳಿಕ  ಮುಂದುವರಿದ  ಧಾರ್ಮಿಕ ವಿಧಿಯಂತೆ ದೃಢ ಕಲಶಾಭಿಷೇಕ ಮಹೋತ್ಸವವು  ಎಪ್ರಿಲ್ 24ರಂದು  ಬ್ರಹ್ಮಶ್ರೀ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿ ಮತ್ತು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ಣಾಯರ ನೇತೃತ್ವದಲ್ಲಿ ಜರಗಿತು.ಬೆಳಿಗ್ಗೆ  ವಾಸ್ತು ಹೋಮ, ವಾಸ್ತು ಬಲಿ, ಗಣಹೋಮ, ಶ್ರೀ ಜನಾರ್ದನ ಸ್ವಾಮಿ, ಮಂಜುಳೇಶ, ಮಹಾಗಣಪತಿ ಹಾಗೂ ಅಮ್ಮನವರಿಗೆ  ಕಲಶಾಭಿಷೇಕ ನಡೆದು ಮದ್ಯಾಹ್ನ ಮಹಾಪೂಜೆ ನಡೆಯಿತು. ಅರ್ಚಕ ವೇದಮೂರ್ತಿ ರಾಮಚಂದ್ರ ಹೊಳ್ಳರಿಂದ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಪಲ್ಲಪೂಜೆ ನಡೆದು  ಸಹಸ್ರಾರು ಭಕ್ತಾದಿಗಳು ಸಾರ್ವಜನಿಕ   ಅನ್ನಸಂತರ್ಪಣೆಯಲ್ಲಿ ಪ್ರಸಾದ ಸ್ವೀಕರಿಸಿದರು.                                                                                    ನೀಲೇಶ್ವರ ಆಲಂಬಾಡಿ ವಾಸುದೇವ ತಂತ್ರಿ, ದೇವಸ್ಥಾನದ ಪವಿತ್ರಪಾಣಿ ಶಿವರಾಮ ಪಡುವೆಟ್ಣಾಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರತಾಪ್‌ಸಿಂಹ ನಾಯಕ್, ಮೋಹನ ಶೆಟ್ಟಿಗಾರ್, ಕೆ. ಮೋಹನ್ ಕುಮಾರ್,  ಅರುಣಕುಮಾರ್, ರವೀಂದ್ರ ಶೆಟ್ಟಿ, ಭರತ್ ಕುಮಾರ್,  ಡಾ. ಶ್ರೀಧರ ಭಟ್, ಪ್ರಭಾತ್ ಭಟ್, ಲಕ್ಷ್ಮಣ ಸಫಲ್ಯ, ರಾಘವೇಂದ್ರ ಬೈಪಾಡಿತ್ತಾಯ, ರಾಜಪ್ರಸಾದ್ ಪೋಳ್ನಾಯ, ಗಿರಿರಾಜ ಬಾರಿತ್ತಾಯ, ಜಯಾ ಅನಂತಕೃಷ್ಣ ಆರ್ಮುಡತ್ತಾಯ, ಪುಷ್ಪಾವತಿ ಆರ್. ಶೆಟ್ಟಿ, ನಿರಂಜನ ಶೆಟ್ಟಿ, ಶರತ್ ಕುಮಾರ್, ರಾಜೇಶ್ ಪೈ    ಹಾಗೂ ಊರ ಪರಊರ ಭಕ್ತಾದಿಗಳು ಭಾಗವಹಿಸಿದ್ದರು.  ಮುಂಜಾನೆ  ಮಂಜುನಾಥ ಶೆಟ್ಟಿ ನಿಡಿಗಲ್ ಹಾಗೂ ಸೌಮ್ಯಾ ರಾವ್ ನೇತೃತ್ವದಲ್ಲಿ ವಾಸುದೇವ ರಾವ್ ಕಕ್ಕೇನೇಜಿ ಸಹಕಾರದಲ್ಲಿ ಕೊಲ್ಲಿ ಶ್ರೀ ದುರ್ಗಾದೇವಿ ಭಜನಾ ಮಂದಿರ, ಪುತ್ತೂರಿನ ಭಜನಾ ಮಂದಿರ ಹಾಗೂ ಹಳೇಕೋಟೆ ಶ್ರೀ  ಸತ್ಯ ಸಾಯಿ ಭಜನಾ ಮಂದಿರದ  ಸದಸ್ಯರಿಂದ ಭಜನಾ ಸೇವೆ ನಡೆಯಿತು.  ಸಂಜೆ ಕೊಯ್ಯುರು ಶ್ರೀ ಪಂಚದುರ್ಗಾ ಪರಮೇಶ್ವರಿ ಯಕ್ಷಗಾನ ಕಲಾಸಂಘ ಮತ್ತು ಅತಿಥಿ ಕಲಾವಿದರ ಸಹಕಾರದೊಂದಿಗೆ  ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ   ರಾಮಕೃಷ್ಣ ಭಟ್ ಉಜಿರೆ ಸಂಯೋಜನೆಯಲ್ಲಿ “ಪಾರ್ಥಸಾರಥ್ಯ’ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು.

The post ಉಜಿರೆ ದೇಗುಲದಲ್ಲಿ ದೃಢಕಲಶ first appeared on Jai Kannadamma.

ರಿಕ್ಷಾ ಬಾಡಿಗೆ ದರ ಪರಿಷ್ಕರಣೆಗೆ ಮನವಿ
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ರಿಕ್ಷಾ ಚಾಲಕರು ಹಾಗೂ ಮಾಲಕರು ಎದುರಿಸುತ್ತಿರುವ ಗಂಭೀರ ಆರ್ಥಿಕ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ಮೋಟಾರ್ ಮತ್ತು ಜನರಲ್ ಮಜ್ದೂರು ಸಂಘ (ಬಿಎಂಎಸ್) ಜಿಲ್ಲಾ ಸಮಿತಿಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಮನವಿ ಸಲ್ಲಿಕೆಯಯ ನೇತೃತ್ವವನ್ನು ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಯು. ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮನಿಹಳ್ಳ ವಹಿಸಿದ್ದರು.ಇತ್ತೀಚಿನ ಜಾಗತಿಕ ಪರಿಸ್ಥಿತಿ ಹಿನ್ನೆಲೆ ಇಂಧನದ ಬೆಲೆ ಏರಿಕೆ ಹಾಗೂ LPG/CNG ಗ್ಯಾಸ್ ಅಭಾವವು ರಿಕ್ಷಾ ಕಾರ್ಮಿಕರ ಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ. ಇಂಧನ ವೆಚ್ಚ, ವಾಹನ ನಿರ್ವಹಣಾ ಖರ್ಚು, ಇನ್ಸುರನ್ಸ್ ಹಾಗೂ ಸ್ಪೇರ್ ಪಾರ್ಟ್ಸ್ ವೆಚ್ಚಗಳ ಹೆಚ್ಚಳದಿಂದ, ಪ್ರಸ್ತುತ ಇರುವ ಬಾಡಿಗೆ ದರಗಳಲ್ಲಿ ಜೀವನ ಸಾಗಿಸುವುದು ಕಷ್ಟಕರವಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.ಈ ಹಿನ್ನೆಲೆ ರಿಕ್ಷಾ ಬಾಡಿಗೆ ದರವನ್ನು ತಕ್ಷಣ ಪರಿಷ್ಕರಿಸುವುದು, LPG/CNG ಗ್ಯಾಸ್ ಸರಬರಾಜನ್ನು ಸುಧಾರಿಸುವುದು ಹಾಗೂ ಕಾರ್ಮಿಕರಿಗೆ ಆರ್ಥಿಕ ನೆರವು ಒದಗಿಸುವಂತೆ ಮನವಿ ಮಾಡಲಾಗಿದೆ.ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಯು. ಅವರು ಎಲ್ಲಾ ರಿಕ್ಷಾ ಬಂಧುಗಳ ಪರವಾಗಿ ಸಮಸ್ಯೆಗಳ ಗಂಭೀರತೆಯನ್ನು ಜಿಲ್ಲಾಧಿಕಾರಿಯವರಿಗೆ ವಿವರವಾಗಿ ಹೇಳಿದರು. ರಿಕ್ಷಾ ಚಾಲಕರು ಎದುರಿಸುತ್ತಿರುವ ದಿನನಿತ್ಯದ ಸಂಕಷ್ಟಗಳು, ಆದಾಯ-ಖರ್ಚಿನ ಅಸಮತೋಲನ, ಗ್ಯಾಸ್ ಅಭಾವದಿಂದ ಉಂಟಾಗಿರುವ ಸಮಸ್ಯೆಗಳು ಹಾಗೂ ಬಾಡಿಗೆ ದರ ಪರಿಷ್ಕರಣೆಯ ಅಗತ್ಯತೆಯನ್ನು ಸ್ಪಷ್ಟವಾಗಿ ಮನವರಿಕೆ ಮಾಡಿಕೊಡಲಾಯಿತು. ಜಿಲ್ಲಾಧಿಕಾರಿಯವರಾದ ದರ್ಶನ್ ಎಚ್.ವಿ. ಅವರು ಮನವಿಗೆ ಸ್ಪಂದಿಸಿ, ಒಂದು ವಾರದ ಒಳಗಾಗಿ ಬಾಡಿಗೆ ದರ ಪರಿಷ್ಕರಣೆ ಸೇರಿದಂತೆ ಸಂಘದ ಪ್ರಮುಖ ಬೇಡಿಕೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಬಿಎಂಎಸ್ ಸಮಿತಿಯ ಪದಾಧಿಕಾರಿಗಳಾದ ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಯು., ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ, ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮನಿಹಳ್ಳ, ಉಪಾಧ್ಯಕ್ಷರಾದ ರೋಹಿತಾಶ್ವ, ನಾರಾಯಣ ಪೂಜಾರಿ ಮತ್ತಿತ್ತರರು ಉಪಸ್ಥಿತರಿದ್ದರು.

The post ರಿಕ್ಷಾ ಬಾಡಿಗೆ ದರ ಪರಿಷ್ಕರಣೆಗೆ ಮನವಿ first appeared on Jai Kannadamma.

ವಿವಾಹ ಸಂದರ್ಭದಲ್ಲಿ ನವಜೋಡಿಗಳಿಂದ ದೇಣಿಗೆ ಹಸ್ತಾಂತರ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಹೇರ ನಿವಾಸಿ ಹಾಗೂ ಕನ್ಯಾಡಿ ಸೇವಾಭಾರತಿ ಸಂಸ್ಥೆಯ ಸಿಬ್ಬಂದಿಯಾದ ಕುಸುಮಾಧರ ಹಾಗೂ ಪೂರ್ಣಿಮಾರವರ ಶುಭವಿವಾಹವು  ಕೊರಿಂಜ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ  ಎಪ್ರಿಲ್ 20ರಂದು ನೆರವೇರಿತು. ಈ ಸಂದರ್ಭದಲ್ಲಿ ಕನ್ಯಾಡಿಯಲ್ಲಿ ಬೆನ್ನುಹುರಿ  ಅಪಘಾತಕ್ಕೊಳಗಾದ ದಿವ್ಯಾoಗರಿಗೆ ನಿರ್ಮಾಣವಾಗುವ ನೂತನ ಪುನಶ್ಚೇತನ ಕೇಂದ್ರದ ಕಟ್ಟಡಕ್ಕೆ ರೂಪಾಯಿ 15,000/-  ಹಾಗೂ ಮೊಗ್ರು ಗ್ರಾಮ ಮುಗೇರಡ್ಕ ಅಲೆಕ್ಕಿ ಜೈ ಶ್ರೀರಾಮ್ ಸೇವಾ ಟ್ರಸ್ಟ್ (ರಿ.)  ಶ್ರೀ ರಾಮ ಶಿಶುಮಂದಿರದ ಮಕ್ಕಳ ಶಿಕ್ಷಣ ಮತ್ತು ಅನ್ನಯಜ್ಞ ಯೋಜನೆಗೆ ರೂಪಾಯಿ 5,000/- ದೇಣಿಗೆಯನ್ನು ನೀಡಿ ಸಹಕರಿಸಿದ್ದಾರೆ. ಕನ್ಯಾಡಿ ಸೇವಾಭಾರತಿ ಕೇಂದ್ರದ ಅಧ್ಯಕ್ಷರು ಹಾಗೂ ಸೇವಾಧಾಮದ ಸಂಸ್ಥಾಪಕರಾದ ಕೆ. ವಿನಾಯಕ ರಾವ್, ಖಜಾoಚಿ ಎ. ಜೈರಾಜ್ ಸಾಲ್ಯಾನ್ ಹಾಗೂ  ಸಿಬ್ಬಂದಿ ವರ್ಗ; ಮೊಗ್ರು ಗ್ರಾಮ ಅಲೆಕ್ಕಿ ಶಿಶುಮಂದಿರ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು ಸಂಸ್ಥೆಯ ಪರವಾಗಿ ದೇಣಿಗೆಯನ್ನು ಸ್ವೀಕರಿಸಿ ನವ ಜೋಡಿಗಳಿಗೆ ಶುಭ ಹಾರೈಸಿ, ಕೃತಜ್ಞತೆ ಸಲ್ಲಿಸಿದರು.

The post ವಿವಾಹ  ಸಂದರ್ಭದಲ್ಲಿ ನವಜೋಡಿಗಳಿಂದ ದೇಣಿಗೆ ಹಸ್ತಾಂತರ first appeared on Jai Kannadamma.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಂಭ್ರಮದ ವಿಷು ಜಾತ್ರೆ
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ  ವಾರ್ಷಿಕ ವಿಷು ಜಾತ್ರಾ ಮಹೋತ್ಸವವು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರ ನೇತೃತ್ವದಲ್ಲಿ ಎಪ್ರಿಲ್ 14ರಿಂದ ಮೊದಲ್ಗೊಂಡು ಎಪ್ರಿಲ್ 21ರಂದು   ಮಂಗಳವಾರ  ಬ್ರಹ್ಮರಥೋತ್ಸವ  ಸಂಭ್ರಮದಿಂದ ವಿದ್ಯುಕ್ತವಾಗಿ ನಡೆಯಿತು. ರಾತ್ರಿ  ಒಳಾಂಗಣದಲ್ಲಿ ಶ್ರೀ ದೇವರ ಉತ್ಸವ ಮೂರ್ತಿಯ ಸುತ್ತುಬಲಿ ನಡೆದು  ದೇವಸ್ಥಾನ ಹಾಗೂ ರಥಕ್ಕೆ ಪ್ರದಕ್ಷಿಣೆ ಬಂದು   ರಥಾರೋಹಣ ನಡೆಯಿತು.  ಕ್ಷೇತ್ರದ ಸಕಲ ಬಿರುದುಬಾವಲಿಗಳೊಂದಿಗೆ  ಆನೆಗಳು, ಬಸವ, ಚೆಂಡೆ ಬಳಗ, ಸ್ಯಾಕ್ಸೋಫೋನ್  ವಾದ್ಯಮೇಳ ವಾದನ ಸಹಿತ ಸಹಸ್ರಾರು ಭಕ್ತಾದಿಗಳು  ಗೋವಿಂದಾ ನಾಮಸ್ಮರಣೆಯೊಂದಿಗೆ ಬ್ರಹ್ಮರಥವನ್ನು   ಅಣ್ಣಪ್ಪಗುಡಿಯ ಮುಂಭಾಗದವರೆಗೆ ಎಳೆದು ಮತ್ತೆ ಮರಳಿ ಸ್ವಸ್ಥಾನಕ್ಕೆ  ಎಳೆದುತಂದರು.  ಭಕ್ತರು ರಥಕ್ಕೆ  ಬಾಳೆಹಣ್ಣು ಎಸೆದು  ಸ್ವಾಮಿಗೆ ಭಕ್ತಿಯಿಂದ  ಸಮರ್ಪಿಸಿದರು. ನಂತರ  ವಸಂತಮಂಟಪದಲ್ಲಿ ಶ್ರೀ ದೇವರಿಗೆ  ವಸಂತಪೂಜೆ, ಅಷ್ಟಾವಧಾನ ಸೇವೆ  ನಡೆದು  ಬ್ರಹ್ಮರಥೋತ್ಸವ ಸಂಪನ್ನಗೊಂಡಿತು. ಎಪ್ರಿಲ್ 22ರಂದು ಬುಧವಾರ ಸಂಜೆ ಶ್ರೀ ದೇವರು ನೇತ್ರಾವತಿ ನದಿಗೆ ಅವಭೃತ ಸ್ನಾನಕ್ಕೆ ತೆರಳಿ  ಮರಳಿ ಬಂದು ದರ್ಶನ ಬಲಿ ನಡೆದು  ಧ್ವಜಾವರೋಹಣದೊಂದಿಗೆ  ವರ್ಷಾವಧಿ ವಿಷು ಜಾತ್ರಾ ಮಹೋತ್ಸವ ಸಂಭ್ರಮದಿಂದ ಸಂಪನ್ನಗೊಂಡಿತು.  ಡಾ. ಹೇಮಾವತಿ ಹೆಗ್ಗಡೆ, ಡಿ. ಸುರೇಂದ್ರ ಕುಮಾರ್,ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಹೆಗ್ಗಡೆ ಕುಟುಂಬಸ್ಥರು  ಮತ್ತು ಊರ ಪರವೂರ ಸಹಸ್ರಾರು  ಭಕ್ತಾದಿಗಳು ಹಾಗೂ ಕ್ಷೇತ್ರದ ಸಿಬಂದಿವರ್ಗ ಮಹೋತ್ಸವದಲ್ಲಿ   ಭಾಗವಹಿಸಿದ್ದರು.

The post ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಂಭ್ರಮದ ವಿಷು ಜಾತ್ರೆ first appeared on Jai Kannadamma.

ಸಿ.ಎ. ಪರೀಕ್ಷೆ ಉತ್ತೀರ್ಣ
ಬೆಳ್ತಂಗಡಿ: ಉಜಿರೆ ಗ್ರಾಮ ಪಂಚಾಯತ್ ಸದಸ್ಯ ಓಡಲ ಯು.  ಮಹಮ್ಮದ್ ಶರೀಫ್ ಹಾಗೂ ಹಸೀನಾ ಬಾನು ದಂಪತಿಗಳ ಪುತ್ರ ಶೇಕ್ ಮಹಮ್ಮದ್ ಆರಿಫ್ ರವರು ಜನವರಿ 2026ರಲ್ಲಿ ಜರಗಿದ ಚಾರ್ಟರ್ಡ್ ಅಕೌಂಟೆಂಟ್ (ಸಿ.ಎ.) ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬಿ.ಕಾಂ. ಪದವಿಯನ್ನು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರು. ತಮ್ಮ ಸಿ.ಎ. ಆರ್ಟಿಕಲ್ ಶಿಪ್ ತರಬೇತಿಯನ್ನು ಬೆಂಗಳೂರಿನ ಆರ್. ನಟರಾಜನ್ ಅಂಡ್ ಕೋ ಸಂಸ್ಥೆಯಲ್ಲಿ ಪೂರೈಸಿ ಸಿ.ಎ. ಪದವಿಯನ್ನು ಪ್ರಥಮ ಪರೀಕ್ಷೆಯಲ್ಲೇ ಪೂರೈಸಿರುತ್ತಾರೆ. ಪ್ರಸ್ತುತ ಇವರು ಬೆಂಗಳೂರಿನ ಖ್ಯಾತ ಬಿಗ್ ಫೋರ್ ಕಂಪನಿಯ ಒಂದು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

The post ಸಿ.ಎ. ಪರೀಕ್ಷೆ ಉತ್ತೀರ್ಣ first appeared on Jai Kannadamma.

ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಉಡುಪಿ ಇದರ ಉಪಾಧ್ಯಕ್ಷರಾಗಿ ಧರಣೇಂದ್ರ ಕೆ.
ಬೆಳ್ತಂಗಡಿ: ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಉಡುಪಿ ಇದು 112 ವರ್ಷಗಳ ಇತಿಹಾಸವುಳ್ಳ ಪ್ರತಿಷ್ಠಿತ ಬ್ಯಾಂಕ್ ಆಗಿದ್ದು; ರಾಜ್ಯದ 18 ಜಿಲ್ಲೆಗಳಲ್ಲಿ ಪ್ರಸ್ತುತ  16 ಶಾಖೆಗಳನ್ನು,  25,000ಕ್ಕಿಂತಲೂ ಹೆಚ್ಚು ಸದಸ್ಯರನ್ನು ಹೊಂದಿರುವ ಪ್ರತಿಷ್ಠಿತ ಬ್ಯಾಂಕ್ ಆಗಿದ್ದು; ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಬ್ಯಾಂಕ್ ಆಗಿರುತ್ತದೆ. ಈ ಬ್ಯಾಂಕಿನ ಉಪಾಧ್ಯಕ್ಷರಾಗಿ ಬೆಳ್ತಂಗಡಿ ತಾಲೂಕಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಪೂಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದ ಸಮಾಜ ವಿಜ್ಞಾನ ಶಿಕ್ಷಕರಾದ ಧರಣೇಂದ್ರ ಕೆ. ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಬ್ಯಾಂಕಿನ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.ಧರಣೇಂದ್ರ ಕೆ.ಯವರು ಒಬ್ಬ ಅತ್ಯುತ್ತಮ ಕಾರ್ಯಕ್ರಮ ನಿರೂಪಕನಾಗಿ, ಅಸಾಮಾನ್ಯ ಸಂಘಟನಾಗಿ, ಜಿಲ್ಲೆ ಹಾಗೂ  ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡವರು. ಸಾಮಾಜಿಕ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸೈ ಎನಿಸಿಕೊಂಡವರು. ಮಡಂತ್ಯಾರು ಜೆಸಿಐನ ಅಧ್ಯಕ್ಷರಾಗಿ, ಅಂತರಾಷ್ಟ್ರೀಯ ಲಯನ್ ಸೇವಾ ಸಂಸ್ಥೆಯ ಬೆಳ್ತಂಗಡಿಯ ಅಧ್ಯಕ್ಷರಾಗಿ, ವಲಯಾಧ್ಯಕ್ಷ, ಪ್ರಾಂತ್ಯಾಧ್ಯಕ್ಷರಾಗಿ ಲಯನ್ಸ್ ಜಿಲ್ಲಾ ಸಂಪುಟದಲ್ಲಿ ವಿವಿಧ ಹುದ್ದೆಗಳಲ್ಲಿ ತೊಡಗಿಸಿಕೊಂಡು ಸಾಧಕರಾದವರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಮಡಂತ್ಯಾರು ಸಂಸ್ಥೆಯ ಜೊತೆ ಕಾರ್ಯದರ್ಶಿಯಾಗಿ, ಬೆಳ್ತಂಗಡಿ ತಾಲೂಕು ಸರಕಾರಿ ನೌಕರ ಸಂಘದ ಪದಾಧಿಕಾರಿಯಾಗಿ, ರಾಜ್ಯ ಪರಿಷತ್ತು ಸದಸ್ಯರಾಗಿ, ಬೆಳ್ತಂಗಡಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಹೀಗೆ ಹಲವಾರು ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಆ ಹುದ್ದೆಗೆ ನ್ಯಾಯವನ್ನು ಒದಗಿಸಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾದವರು.

The post ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಉಡುಪಿ ಇದರ ಉಪಾಧ್ಯಕ್ಷರಾಗಿ ಧರಣೇಂದ್ರ ಕೆ. first appeared on Jai Kannadamma.

ಬಾಲಕಿಯ ಮೇಲೆ ಕಾಮುಕರಿಂದ ಅತ್ಯಾಚಾರ
ಬೆಳ್ತಂಗಡಿ: ಅಪ್ರಾಪ್ತ ಬಾಲಕಿ ಮೇಲೆ ಇಬ್ಬರು ಯುವಕರು ಅತ್ಯಾಚಾರ ಮಾಡಿದ ಅತ್ಯಂತ ಹೇಯಕೃತ್ಯವನ್ನು ಭೇದಿಸಿದ ಧರ್ಮಸ್ಥಳ ಪೊಲೀಸರು ಇಬ್ಬರು ಅತ್ಯಾಚಾರಿಗಳನ್ನು   ಬಂಧಿಸಿದ್ದಾರೆ.ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಇಬ್ಬರು ಯುವಕರು ಪುಸಲಾಯಿಸಿ ಆಮಿಷ ಒಡ್ಡಿ ಎರ್ಮಾಯಿ ಫಾಲ್ಸ್ ಬಳಿಯ ಕಾಡಿಗೆ ಎಪ್ರಿಲ್ 16ರಂದು ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿರುವ ವಿಚಾರವನ್ನು ಭಯದಿಂದಲೇ ಬಾಲಕಿ ಹೆತ್ತವರಿಗೆ ತಿಳಿಸಿದ್ದು; ವಿಚಾರ ತಿಳಿದ ಪೋಷಕರು ತಡಮಾಡದೇ ಧರ್ಮಸ್ಥಳ ಪೊಲೀಸ್ ಠಾಣೆಗೆ ಎಪ್ರಿಲ್ 17ರಂದು ದೂರು ನೀಡಿದ್ದು; ದೂರು ಸ್ವೀಕರಿಸಿದ  ಪೊಲೀಸರು ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿಣಿ ಸಿ.ಕೆ. ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಮರ್ಥ ಆರ್. ಗಾಣಿಗೇರ ತಂಡ ಪ್ರಕರಣದಲ್ಲಿ ಭಾಗಿಯಾದ ಬೆಳ್ತಂಗಡಿ ತಾಲೂಕಿನ ಕಡುರುದ್ಯಾವರ ಗ್ರಾಮದ ಸುಮಂತ್ (28) ಮತ್ತು ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನವನೀತ್ (26)ನನ್ನು ಎಪ್ರಿಲ್ 18 ರಂದು ಸಂಜೆ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.ಈ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾದ ಓರ್ವ ಆರೋಪಿ ಕಡುರುದ್ಯಾವರ ಗ್ರಾಮದ ಸುಮಂತ್‌ಗೆ ಮೇ 10ರಂದು  ಮದುವೆ ದಿನಾಂಕ  ನಿಶ್ಚಯವಾಗಿತ್ತು.

The post ಬಾಲಕಿಯ ಮೇಲೆ ಕಾಮುಕರಿಂದ ಅತ್ಯಾಚಾರ first appeared on Jai Kannadamma.

ಶ್ರೀ ಧ.ಮಂ. ಬಿ.ಎಡ್. ಹಾಗೂ ಡಿ.ಎಡ್. ಕಾಲೇಜಿನಲ್ಲಿಅಂಬೇಡ್ಕರ್ ಜಯಂತಿ ಆಚರಣೆ
ಬೆಳ್ತಂಗಡಿ: ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಬಿ.ಎಡ್. ಹಾಗೂ ಡಿ.ಎಡ್. ಸಂಸ್ಥೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಬಿ.ವೋಕ್ ಇನ್ ರೀಟೇಲ್ ಮತ್ತು                            ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರಾದ  ಆಶ್ವಿತ್ ಎಚ್.ಆರ್. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು ‘ಭಾರತದ ಸಂವಿಧಾನದ ಶಿಲ್ಪಿ ಕಾನೂನುತಜ್ಞ              ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜಗತ್ತು ಕಂಡ ಅದ್ಭುತ ವ್ಯಕ್ತಿ. ತಮ್ಮ ಹೋರಾಟದ ಜೊತೆಗೆ ಕಷ್ಟದ ಸಂದರ್ಭದಲ್ಲೂ ಬದುಕು ಕಟ್ಟಿಕೊಂಡವರು. ಭಾರತದಲ್ಲಿ ಜನಿಸಿದ ಪ್ರತಿಯೊಂದು ಮಗುವು ಕೂಡ ಶಿಕ್ಷಣ ಪಡೆದು ಸಂಘಟನೆಯ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂಬುದು ಅವರ ಆಶಯವಾಗಿತ್ತು.  ಪ್ರತಿಯೊಬ್ಬ ಪ್ರಜೆಯು ಹೆಚ್ಚು ಹೆಚ್ಚು ಪುಸ್ತಕವನ್ನು ಓದಿದಷ್ಟು ಅವರಲ್ಲಿ ಚಿಂತನೆ ಬೆಳೆಯುತ್ತದೆ. ಹಾಗಾಗಿ ಭವಿಷ್ಯದ ಶಿಕ್ಷಕರಾದ ತಾವುಗಳು ಪುಸ್ತಕ ಓದುವುದನ್ನು ರೂಢಿಸಿಕೊಳ್ಳಿ ಎಂದರು.ಅಧ್ಯಕ್ಷತೆ ವಹಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಡಿ.ಎಡ್./ಬಿ.ಎಡ್. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮಂಜು ಆರ್. ಮಾತನಾಡಿ; ಡಾ. ಬಿ.ಆರ್. ಅಂಬೇಡ್ಕರ್ ಅವರು ಲೋಕಜ್ಞಾನಿ, ಅಪಾರ ಪಾಂಡಿತ್ಯವುಳ್ಳ ಶಿಕ್ಷಣತಜ್ಞ – ಆರ್ಥಿಕತಜ್ಞ ಹಾಗೂ ನ್ಯಾಯಶಾಸ್ತ್ರಜ್ಞ. ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಸಮಾನತೆಯಿಂದ ಸ್ವಾತಂತ್ರವಾಗಿ ಬದುಕಬೇಕಾದರೆ ಆತನಿಗೆ ಶಿಕ್ಷಣ ಮುಖ್ಯ. ಅಲ್ಲದೇ ಸಮಾಜದಲ್ಲಿ ಅಸಮಾನತೆ, ಶೋಷಣೆಯ ವಿರುದ್ಧ ದನಿ ಎತ್ತಿದ                   ಮಹಾನ್‌ಪುರುಷ ಡಾ. ಬಿ.ಆರ್. ಅಂಬೇಡ್ಕರ್‌ರವರು. ಇವರ ಆದರ್ಶಗಳನ್ನು ನಾವೆಲ್ಲರೂ ರೂಢಿಸಿಕೊಳ್ಳೋಣ ಎಂದು ಹೇಳಿದರು.ವೇದಿಕೆಯಲ್ಲಿ ಬಿ.ಎಡ್. ಹಾಗೂ ಡಿ.ಎಡ್. ಕಾಲೇಜಿನ ವಿದ್ಯಾರ್ಥಿ ನಾಯಕಿಯರಾದ                                   ಶ್ರವಣ ಮಹಾಪುರುಷ ಮತ್ತು ರಂಝಿಯಾ ಬಾನು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಸಹ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರು ಮತ್ತು ಬಿ.ಎಡ್. ಮತ್ತು ಡಿ.ಎಡ್. ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.ಪ್ರಥಮ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಾದ ದೀಪ್ತಿ  ಸ್ವಾಗತಿಸಿ, ಕವಿತಾ ಬಿ. ಅತಿಥಿ ಪರಿಚಯಿಸಿ, ಸುಷ್ಮಾ ವಂದಿಸಿ, ವರ್ಷಿತಾ ಕಾರ್ಯಕ್ರಮವನ್ನು ನಿರೂಪಿಸಿದರು.

The post ಶ್ರೀ ಧ.ಮಂ. ಬಿ.ಎಡ್. ಹಾಗೂ ಡಿ.ಎಡ್. ಕಾಲೇಜಿನಲ್ಲಿಅಂಬೇಡ್ಕರ್ ಜಯಂತಿ ಆಚರಣೆ first appeared on Jai Kannadamma.