ಬೆಳ್ತಂಗಡಿ: ಮದ್ದಡ್ಕದಲ್ಲಿ ಕಾರಿನ ಡೋರ್ ಲಾಕ್ ಆಗಿ ಮಗು ಕಾರಿನೊಳಗೆ ಸಿಕ್ಕಿಹಾಕಿಕೊಂಡ ಘಟನೆ ಮೇ 25ರಂದು ವರದಿಯಾಗಿದೆ. ಕಾರಿನ ಡ್ರೈವರ್ ಕಾರು ನಿಲ್ಲಿಸಿ ಅಂಗಡಿಗೆ ತೆರಳಿದ ಸಂದರ್ಭದಲ್ಲಿ ಕಾರಿನ ಲಾಕ್ ಆಟೋಮೆಟಿಕ್ ಆಗಿ ಲಾಕ್ ಆಗಿ ಮಗು ಕಾರಿನೊಳಗೆ ಸಿಕ್ಕಿಕೊಂಡು ಅಳುತ್ತಿತ್ತು ಎನ್ನಲಾಗಿದೆ. ಕಾರಿನ ಡೋರು ತೆರೆಯಲು ಸಾರ್ವಜನಿಕರು ಪ್ರಯತ್ನ ಪಟ್ಟರೂ ಡೋರ್ ತೆರೆಯಲಾಗದೆ ಕೊನೆಗೂ ಕಾರಿನ ಗ್ಲಾಸನ್ನು ಒಡೆದು ಅಳುತ್ತಿದ್ದ ಮಗುವನ್ನು ರಕ್ಷಿಸಲಾಯಿತು ಎಂದು ತಿಳಿದುಬಂದಿದೆ.







