ಸಮಾಜ ಘಾತುಕರ ವಿರುದ್ಧ ಕಠಿಣ ಕ್ರಮ-ಸಚಿವ ಬೊಮ್ಮಾಯಿ

ಕೋವಿಡ್ 19 ಸೋಂಕಿನ ವಿರುದ್ಧದ ಹೋರಾಟದ ಭಾಗವಾಗಿ ರಾಜ್ಯದಲ್ಲಿ ಲಾಕ್ ಡೌನ್ ಇದ್ದರೂ ಸಮಾಜದ ಈ ಹೋರಾಟಕ್ಕೆ ವಿರೋಧಾಭಾಸ ಆಗುವಂತೆ ಕೆಲವರು ನಡೆದುಕೊಳ್ಳುತ್ತಿದ್ದಾರೆ. ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಹೊಸ ಕಾನೂನನ್ನು ಜಾರಿಗೊಳಿಸಿದೆ ಎಂದು ರಾಜ್ಯ ಗ್ರಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಎ.23ರಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ನೇತೃತ್ವದಲ್ಲಿ ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಹಕಾರದಲ್ಲಿ ನಡೆದ 30,000 ಆಹಾರ ಧಾನ್ಯದ ಕಿಟ್ […]
ಕೊರೋನಾ ಮಾರಿಯ ವಿರುದ್ಧ ಹೋರಾಟ ಪ್ರಧಾನಿ ಮೋದಿ ಕರೆಗೆ ಜನತೆಯ ಸ್ಪಂದನ-ಕಟೀಲ್

ದೇಶದಲ್ಲಿ ಕೋವಿಡ್ 19 ವೈರಸ್ ಹೆಚ್ಚಾದಾಗ ಇದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಕರೆಗೆ ಜನತೆ ಗೌರವ ನೀಡಿ ಸಹಕರಿಸಿದ್ದು ಕೊರೋನಾ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಇಡೀ ದೇಶವೇ ಭಾಗವಹಿಸಿದಂತಾಗಿದೆ.. ರಾಜ್ಯದ ಲ್ಲಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ಆರ್ಥಿಕವಾಗಿ ಹಿಂದುಳಿದ ಜನತೆಗೆ ವಿವಿಧ ಕಾರ್ಯಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯ ಪಟ್ಟರು.ಅವರು ಧರ್ಮಸ್ಥಳದಲ್ಲಿ ಎ.23 ರಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ […]
ಕೊರೋನಾ ಸೋಂಕು ತಡೆಗೆ ಕ್ರಮ ಪ್ರಧಾನಿ ಮನವಿಗೆ ಜನತೆಯಿಂದ ಒಳ್ಳೆಯ ಸ್ಪಂದನ- ಡಾl ಹೆಗ್ಗಡೆ

ಪ್ರಧಾನಿ ಮನವಿಗೆ ಜನತೆಯಿಂದ ಒಳ್ಳೆಯ ಸ್ಪಂದನ- ಡಾl ಹೆಗ್ಗಡೆಕೊರೊನ ಮುಕ್ತ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಗೆ ದೇಶದ ಜನತೆ ಉತ್ತಮವಾಗಿ ಸಹಕರಿಸಿದ್ದಾರೆ. ಜನರು ಶಿಸ್ತಿನಿಂದ ಆದೇಶವನ್ನು ಪಾಲನೆ ಮಾಡಿ ಜಿಲ್ಲೆಯಲ್ಲೂ ಸಾಕಷ್ಟು ಎಚ್ಚರಿಕೆ ವಹಿಸಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.ಅವರು ಧರ್ಮಸ್ಥಳದಲ್ಲಿ ಎ.23ರಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಉಜಿರೆ ಬದುಕು ಕಟ್ಟೋಣಬನ್ನಿ ತಂಡದ ಸಹಕಾರದಲ್ಲಿ ನಡೆದ 30,000 ಆಹಾರ ಕಿಟ್ ಗಳನ್ನು ಸಾಂಕೇತಿಕವಾಗಿ ವಿತರಿಸಿ, ಬಳಿಕ […]
ವೈಯಕ್ತಿಕ ಅಂತರಕ್ಕೆ ಸವಾಲಾದ ಮಾಧ್ಯಮ ಮೈಕ್ ಗಳು

ಈ ಸತ್ಯವನ್ನು ಹೇಳಿದರೆ ದೃಶ್ಯ ಮಾಧ್ಯಮದವರು ಹಾಗೂ ಆನ್ ಲೈನ್ ಮಾಧ್ಯಮದ ಕೆಲವರು ನನ್ನ ಮೇಲೆ ಹರಿಹಾಯ್ದಾರು. ಮುಂಬಯಿಯಲ್ಲಿ 53 ಮಂದಿ ನನ್ನ ಮಾಧ್ಯಮ ಸಹೋದರರು ಕೊರೋನಾ ಸೋಂಕು ತಗಲಿಸಿಕೊಂಡ ಮೇಲೆ ಓರ್ವ ಪತ್ರಿಕಾ ಸಂಪಾದಕನಾಗಿ ನಾನು ಈ ಸತ್ಯವನ್ನು ಹೇಳಲೇ ಬೇಕಾಗಿದೆ. ನಿಮಗೆ ಅಚ್ಚರಿಯಾಗಬಹುದು ನಾನ್ಯಾಕೆ ‘ಮುಂಬಯಿಯ ನನ್ನ ಮಾಧ್ಯಮ ಸಹೋದರರು ಕೊರೋನಾ ಸೋಂಕು ತಗಲಿಸಿಕೊಂಡರು’ ಎಂದು ಉಲ್ಲೇಖ ಮಾಡಿದೆ ಎಂಬ ಬಗ್ಗೆ. ಪ್ರಾಯಶಃ ಮುಂಬಯಿಯ ಈ ಮಾಧ್ಯಮ ಸಹೋದರರು ಲಾಕ್ ಡೌನ್ ಸಂದರ್ಭದಲ್ಲಿ ಈ […]
ಕಾಶಿಪಟ್ಣ ಪಂಚಾಯತ್ ವ್ಯಾಪ್ತಿಯಲ್ಲಿ ಆಹಾರ ಕಿಟ್ ವಿತರಣೆ, ವೈಯಕ್ತಿಕ ಅಂತರ ಇಲ್ಲೂ ಇಲ್ಲ.

ಕೊವಿಡ್ 19ಕೊರೊನ ಸೋಂಕು ಹರಡುವಿಕೆಯನ್ನು ತಡೆಯಲು ಸರಕಾರ ಲಾಕ್ ಡೌನ್ ವಿಧಿಸಿರುವ ಪರಿಣಾಮ ಗ್ರಾಮೀಣ ಭಾಗದ ಬಡವರಿಗೆ, ಕೃಷಿ-ಕೂಲಿ ಕಾರ್ಮಿಕರಿಗೆ ಜೀವನ ಸಾಗಿಸುವುದೇ ದುಸ್ತರವಾಗಿದ್ದ ಈ ಸಂಧರ್ಭದಲ್ಲಿ ಊರಿನ ದಾನಿಗಳು, ಸಾಮಾಜಿಕ ಸೇವಾ ಕಾರ್ಯಕರ್ತರ ನೆರವಿನಿಂದ ಕಾಶಿಪಟ್ಣ ಪಂಚಾಯತ್ ವತಿಯಿಂದ ಎಲ್ಲಾ ಅರ್ಹ ಬಡ ಕುಟುಂಬಿಕರಿಗೆ ಪ್ರತಿವಾರ್ಡ್ ಗಳಲ್ಲಿ ಮನೆ ಮನೆಗೆ ಹೋಗಿ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು. ಕಿಟ್ ವಿತರಣೆಗೆ ಸಾಂಕೇತಿಕವಾಗಿ ಚಾಲನೆ ನೀಡಿದ ಜಿಲ್ಲಾ ಪಂಚಾಯತ್ ಸದಸ್ಯ ಧರಣೇಂದ್ರ ಕುಮಾರ್; ಇಲ್ಲಿನ ಗ್ರಾಮ ಪಂಚಾಯತ್ […]
ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಸ್ವಾಬ್ ಸಂಗ್ರಹ ಕೇಂದ್ರಕ್ಕೆ ಪೂಂಜಾ ಚಾಲನೆ

ಬೆಳ್ತಂಗಡಿ : ಜಿಲ್ಲಾ ನಿರ್ಮಿತಿ ಕೇಂದ್ರದಿಂದ ಕೊಡಮಾಡಲ್ಪಟ್ಟ ಕೋವಿಡ್-19 ಗಂಟಲು ದ್ರವದ ಮಾದರಿ ಸಂಗ್ರಹಣ ಕೇಂದ್ರವನ್ನು ಶಾಸಕ ಹರೀಶ್ ಪೂಂಜಾ ಎಪ್ರಿಲ್ 22ರಂದು ಆಸ್ಪತ್ರೆಗೆ ಹಸ್ತಾಂತರಿಸಿ ಚಾಲನೆ ನೀಡಿದರು.ಸುಮಾರು 35 ಸಾವಿರ ರೂ. ವೆಚ್ಚದಿಂದ ನಿರ್ಮಾಣಗೊಂಡ ಈ ಕೇಂದ್ರ ಜಿಲ್ಲಾಡಳಿತದ ಆದೇಶದ ಮೇರೆಗೆ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಲಿದೆ. ಇದರಿಂದ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲೂ ಕೋವಿಡ್-19 ಸೋಂಕಿತ ವ್ಯಕ್ತಿಯ ಗಂಟಲು ದ್ರವ ಸಂಗ್ರಹ (ಕಿಯೋಸ್ಕ್) ನಾಳೆಯಿಂದಲೇ ಆರಂಭವಾಗಲಿದೆ. ಸೋಂಕಿತ ವ್ಯಕ್ತಿ ಮತ್ತು ವೈದ್ಯರ ನೇರ ಸಂಪರ್ಕ […]
ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ ಇದರ ವತಿಯಿಂದ ಕೋವಿಡ್-19 ಪರಿಹಾರ ನಿಧಿಗೆ 2 ಲಕ್ಷದ ಚೆಕ್ ಶಾಸಕರಿಗೆ ಹಸ್ತಾಂತರ.

ಕೊಕ್ಕಡ, ಎ.22: ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ ಇದರ ವತಿಯಿಂದ ಪ್ರಧಾನ ಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಹಾಗೂ ಮುಖ್ಯಮಂತ್ರಿಗಳ ಕೊವಿಡ್ ಪರಿಹಾರ ನಿಧಿಗೆ ತಲಾ 1 ಲಕ್ಷ ಮೊತ್ತದ ಚಕ್ ಅನ್ನು ಟ್ರಸ್ಟ್ ಅಧ್ಯಕ್ಷ ಕೆ. ಕೃಷ್ಣ ಭಟ್ ರವರು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರಿಗೆ ಟ್ರಸ್ಟ್ ಆವರಣದಲ್ಲಿ ಹಸ್ತಾಂತರಿಸಿದರು.ದೇಶದೆಲ್ಲೆಡೆ ಮಹಾಮಾರಿ ಕೋವಿಡ್ 19 ನಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದು ಈ ಸಂದರ್ಬದಲ್ಲಿ ಸಾಮಾಜಿಕ ಸೇವೆಯನ್ನು ನಡೆಸಿಕೊಂಡು ಬರುತ್ತಿರುವ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ […]
ಆಶಾ ಕಾರ್ಯಕರ್ತೆಯರಿಗೆ ಅಕ್ಕಿ, ಆಹಾರ ಸಾಮಾಗ್ರಿ ವಿತರಣೆ

ನೆಲ್ಯಾಡಿ, ಎ. 21: ನೆಲ್ಯಾಡಿ ಕ್ಷೇತ್ರದ ತಾ.ಪಂ.ಸದಸ್ಯೆ, ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷೆಯೂ ಆಗಿರುವ ಉಷಾ ಅಂಚನ್‍ರವರು ತಮ್ಮ ತಾ.ಪಂ.ಕ್ಷೇತ್ರ ವ್ಯಾಪ್ತಿಯ ನೆಲ್ಯಾಡಿ, ಕೊಣಾಲು ಹಾಗೂ ಆಲಂತಾಯ ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕ್ಕಿ ಹಾಗೂ ಆಹಾರ ಸಾಮಾಗ್ರಿ ವಿತರಣೆ ಮಾಡಿದರು.ಈ ವೇಳೆ ಮಾತನಾಡಿದ ಉಷಾ ಅಂಚನ್‍ರವರು, ಆಶಾ ಕಾರ್ಯಕರ್ತೆಯರು ವೈದ್ಯರು, ಆರೋಗ್ಯ ಸಹಾಯಕಿಯರಿಗೆ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದಾರೆ. ಕೊರೋನಾ ಮಹಾಮಾರಿ ಒಕ್ಕರಿಸಿಕೊಂಡಿರುವ ಸಂಕಷ್ಟ ಕಾಲದಲ್ಲಿ ಆಶಾ […]
ಅಪ್ಪನ ನಿರ್ಮೋಹಿ ಜೀವನ ಪಯಣ

-ದೀಪಾ ಫಡಕೆ ಮೂವತ್ತೇಳು ವರ್ಷಗಳ ಹಿಂದಿನ ಮಾತಿದು. ಆಗಿನ್ನೂ ಲವ್ ಮ್ಯಾರೇಜು ಎಂದರೆ ಹೆತ್ತವರು ಕೆಣ್ಣು ಕೆಂಪಾಗಿಸಿಕೊಳ್ಳುವ ಕಾಲವದು. ಅಣ್ಣನ ಸ್ನೇಹಿತರಲ್ಲಿ ಒಬ್ಬರು ಪ್ರೇಮವಿವಾಹ ಮಾಡಿಕೊಂಡು ವಾಸಕ್ಕೆ ಮನೆ ಸಿಗದೇ ಒದ್ದಾಡುತ್ತಿದ್ದರು. ಅವರದೆ ಸಮುದಾಯದೊಳಗೆ ಮದುವೆಯಾಗಿದ್ದರೂ ಅವರು ಭಿನ್ನ ಒಳಪಂಗಡಕ್ಕೆ ಸೇರಿದ್ದರು. ನಮ್ಮ ಮನೆಯ ಅಂಗಳದಲ್ಲಿ ಒಂದು ಔಟ್ ಹೌಸ್ ಇದ್ದದ್ದೂ ಸ್ನೇಹಿತರ ಕಣ್ಣಿಗೆ ಬಿದ್ದಿತ್ತು. ಪರೀಕ್ಷಿಸಲೆಂದೋ ನಿಜಕ್ಕೂ ಬೇಕೆಂದೊ ಬಾಡಿಗೆಗೆ ಕೊಡುವಿರಾ ಎಂದು ಅಣ್ಣನಲ್ಲಿ ಕೇಳಿದ್ದರು. ಅಣ್ಣ, ಅಪ್ಪನಲ್ಲಿ ಬಂದು ಹೀಗೀಗೆ ನಡೆದಿದೆ ಅಪ್ಪ, ಅವರಿಗೆ […]
ಸಂಪಾದಕೀಯ
ಕೊರೋನಾ ಸೋಂಕು ದಾಳಿಯ ಭೀತಿಯಿಂದ ಭಾರತ ದೇಶವೇ ಲಾಕ್ ಡೌನ್ ಆಗಿ ತಿಂಗಳೊಂದು ಕಳೆಯಿತು. ಲಾಕ್ ಡೌನ್ ಆದೇಶ ಪಾಲಿಸಿ, ದೇಶದ ಸುಮಾರು 95% ಮಂದಿ ಮನೆಯೊಳಗಿದ್ದು ಕೊರೋನಾ ಮಾರಿಯ ವಿರುದ್ಧದ ಹೋರಾಟದಲ್ಲಿ ಸರಕಾರಗಳಿಗೆ ಸಾಥ್ ನೀಡಿದ್ದಾರೆ. 5%ಗೂ ಕಡಿಮೆ ಮಂದಿ ಗೊತ್ತಿದ್ದೋ-ಗೊತ್ತಿಲ್ಲದೆಯೋ ಲಾಕ್ ಡೌನ್ ನಿಯಮ ಮುರಿಯುವುದರ ಜೊತೆಗೆ, ಕೊರೋನಾ ಸೋಂಕಿನ ವಿರುದ್ಧ ಹೋರಾಟದಲ್ಲಿ ಸರಕಾರದೊಂದಿಗೆ ಅಸಹಕಾರ ತೋರುತ್ತಿದ್ದಾರೆ. ಸರಕಾರಗಳ ಎಲ್ಲ ಪ್ರಯತ್ನಗಳ ನಡುವೆಯೂ ಕೊರೋನಾ ಸೋಂಕು ಮನುಕುಲಕ್ಕೇ ಸವಾಲು ಹಾಕುವ ರೀತಿಯಲ್ಲಿ ಅಟ್ಟಹಾಸದಿಂದ ಮೆರೆಯುತ್ತಿದೆ. […]