ರಾಷ್ಟ್ರೀಯ ಹೆದ್ದಾರಿ ಕಳಪೆ ಕಾಮಗಾರಿಯ ನಗ್ನನರ್ತನ

ಬೆಳ್ತಂಗಡಿ: ಕಳಪೆ ಕಾಮಗಾರಿ ಮತ್ತು ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಪರ್ಸಂಟೇಜ್ ಪೈಪೋಟಿಯಿಂದ ನಾಗರಿಕರ ನಾಲಗೆಗೆ ಆಹಾರವಾಗಿರುವ ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಕಳಪೆ ಕಾಮಗಾರಿಯ ನಗ್ನನರ್ತನ ರಾಷ್ಟ್ರೀಯ ಹೆದ್ದಾರಿಯ ಉಜಿರೆಯ ಎಂ.ಜಿ. ಟ್ರೇಡರ್ಸ್ ಬಳಿ ಅಕ್ಟೋಬರ್ 8ರ ಬೆಳಿಗ್ಗೆ ಸಂಭವಿಸಿದೆ.ಅವೈಜ್ಞಾನಿಕ ಕಾಮಗಾರಿಗೆ ಪ್ರತ್ಯಕ್ಷ ಉದಾಹರಣೆಯಾಗಿರುವ ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಕೆಲವೆಡೆ ಇಕ್ಕೆಲಗಳಲ್ಲಿ ನಿರ್ಮಿಸಲಾದ ಬೃಹತ್ ಗಾತ್ರದ ಒಳಚರಂಂಡಿ ವ್ಯವಸ್ಥೆ ಯಾಕೆ ಎಂಬುವುದು ಒಗಟಾಗಿಯೇ ಉಳಿದಿದೆ. (ಸುದೈವವಶಾತ್!) ಈ ಒಳಚರಂಡಿ ಕಾಮಗಾರಿ ಎಷ್ಟು ಕಳಪೆಯಾಗಿದೆ ಎಂದರೆ ಈ ಸಿಮೆಂಟ್ ಕಾಮಗಾರಿಗೆ […]
ಮಹಾಭಾರತ ಸರಣಿಯಲ್ಲಿ ‘ಸಮರ ಸನ್ನಾಹ’ ಯಕ್ಷಗಾನ ತಾಳಮದ್ದಳೆ

ಬೆಳ್ತಂಗಡಿ: ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಸಹಯೋಗದಲ್ಲಿ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ 49ನೇ ಕಾರ್ಯಕ್ರಮವಾಗಿ ‘ಭೀಮ-ದ್ರೌಪದಿ ಸಮರ ಸನ್ನಾಹ’ ಪೌರಾಣಿಕ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಜರಗಿತು.ಭಾಗವತರಾಗಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಹರೀಶ ಆಚಾರ್ಯ ಉಪ್ಪಿನಂಗಡಿ ಮತ್ತು ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಜಗದೀಶ ಚಾರ್ಮಾಡಿ, ಚಂದ್ರಶೇಖರ ಆಚಾರ್ಯ ಗೇರುಕಟ್ಟೆ ಮತ್ತು ಅರ್ಥಧಾರಿಗಳಾಗಿ ಮಧೂರು ಮೋಹನ ಕಲ್ಲೂರಾಯ (ದ್ರೌಪದಿ […]
ಅಂತರ್ ಕಾಲೇಜು ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ

ಬೆಳ್ತಂಗಡಿ: 2024-25ನೇ ಸಾಲಿನ ಅಂತರ್ ಕಾಲೇಜು ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ, ಮಂಗಳೂರು ವಿಶ್ವವಿದ್ಯಾನಿಲಯ ಆಯೋಜಿಸಿದ ಚರ್ಚಾ ಸ್ಪರ್ಧೆ- ‘ಕೃಷಿ ಕ್ಷೇತ್ರದ ಬೆಳವಣಿಗೆಗೆ ಸಹಕಾರ ಸಂಘಗಳ ಪಾತ್ರ’ ಎಂಬ ವಿಷಯದಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಬಿ.ಎಡ್. ಕಾಲೇಜಿನ ಪ್ರಥಮ ಬಿ.ಇಡಿ. ವಿದ್ಯಾರ್ಥಿಗಳಾದ ದೀಕ್ಷಿತ್ ಎಂ. ಹಾಗೂ ಫಾತಿಮಾತ್ ರಾಫಿಯಾ ಭಾಗವಹಿಸಿದ್ದು, ಫಾತಿಮಾತ್ ರಾಫಿಯಾರವರು ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯಮಟ್ಟದಲ್ಲಿ ನಡೆಯುವ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲಿದ್ದಾರೆ. ಶ್ರೀ ಧರ್ಮಸ್ಥಳ […]
ಕೃಷಿ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃಧ್ಧಿ ಬಗ್ಗೆ ಹ್ಯಾಕಥಾನ್

ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಧಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಿಲೈತ್ ಬೆಂಗಳೂರು ಹಾಗೂ ಐಎಸ್‌ಟಿಇ ಸಹಭಾಗಿತ್ವದಲ್ಲಿ ಕೃಷಿ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃಧ್ಧಿ ಎಂಬ ವಿಷಯದ ಕುರಿತು ಸೆಪ್ಟೆಂಬರ್ 27 ಮತ್ತು 28 ರಂದು ‘ಇನೊವೇಟ್-ಥಾನ್’ ಎನ್ನುವ ಎರಡು ದಿನದ ಹ್ಯಾಕಥಾನ್ ಅಯೋಜಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಂಗಳೂರು ಇನ್‌ಫೋಸಿಸ್‌ನ ಹಿರಿಯ ತಾಂತ್ರಿಕ ಆರ್ಕಿಟೆಕ್ಟ್ ಕಾಟಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ; ವಿದ್ಯಾರ್ಥಿಗಳು ದೈನಂದಿನ ಸಮಸ್ಯೆಗಳಿಗೆ ತಾಂತ್ರಿಕ ಹಿನ್ನಲೆಯಲ್ಲಿ ಪರಿಣಾಮಕಾರಿಯಾದ ಪರಿಹಾರ ಕಂಡುಕೊಳ್ಳುವಂತೆ ಹಾಗೂ ನೂತನ ಉತ್ಪನ್ನಗಳ ಅಭಿವೃಧ್ಧಿಯೆಡೆಗೆ ಆಲೋಚಿಸಲು […]
ಅಂತರ್ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ

ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಆಶ್ರಯದಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟದ ಸಮಾರೋಪ ಸಮಾರಂಭವು ಅಕ್ಟೋಬರ್ 1ರಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯಿತು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್.ಸತೀಶ್ಚಂದ್ರ ಮತ್ತು ಬೆಳ್ತಂಗಡಿ ನ್ಯಾಯವಾದಿ ಶಶಿಕಿರಣ್ ಜೈನ್ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿದರು. ಕಾಲೇಜಿನ ಪ್ರಾಂಶುಪಾಲ ಸಂತೋಷ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರಕ್ರೀಡಾ […]
ಅಂತರ್ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ

ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಆಶ್ರಯದಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟದ ಸಮಾರೋಪ ಸಮಾರಂಭವು ಅಕ್ಟೋಬರ್ 1ರಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯಿತು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್.ಸತೀಶ್ಚಂದ್ರ ಮತ್ತು ಬೆಳ್ತಂಗಡಿ ನ್ಯಾಯವಾದಿ ಶಶಿಕಿರಣ್ ಜೈನ್ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿದರು. ಕಾಲೇಜಿನ ಪ್ರಾಂಶುಪಾಲ ಸಂತೋಷ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರಕ್ರೀಡಾ […]
ಕಾಪಿನಡ್ಕ ಶಾಲೆಗೆ ಕಂಪ್ಯೂಟರ್ ಕೊಡುಗೆ.

ಬೆಳ್ತಂಗಡಿ: ಇತ್ತೀಚೆಗೆ ನಡೆದ ಬೆಳ್ತಂಗಡಿ ಲಯನ್ಸ್ ಕ್ಲಬ್‌ಗೆ ಲಯನ್ಸ್ ಪ್ರಾಂತ್ಯ ಮತ್ತು ವಲಯಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮದ ಸಂದರ್ಭದಲ್ಲಿ ಲಯನ್ಸ್ ಸಂಸ್ಥೆಯ ‘ಸೇವೆಯನ್ನು ಅಪ್ಪಿಕೊಳ್ಳಿ” ಎಂಬ ಧ್ಯೇಯೋದ್ಧೇಶದಂತೆ ಕಾಪಿನಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ಉಪಕರಣಗಳನ್ನು ಕೊಡುಗೆಯಾಗಿ ಹಸ್ತಾಂತರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಅನಿತಾ ಕಂಪ್ಯೂಟರ್ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಲಯನ್ಸ್ ಪ್ರಾಂತ್ಯಧ್ಯಕ್ಷ ವೆಂಕಟೇಶ್ ಹೆಬ್ಬಾರ್, ಪ್ರತಿಭಾ ಹೆಬ್ಬಾರ್, ವಲಯಾಧ್ಯಕ್ಷ ಉಮೇಶ್ ಶೆಟ್ಟಿ ಉಜಿರೆ, ರೋಷನ್ ಮುಚ್ಚೂರ್, ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ […]
ಸುವರ್ಣ ಸಮ್ಮಿಲನ ಕಾರ್ಯಕ್ರಮದಲ್ಲಿ ‘ಸುವರ್ಣ ಸೇವಾ ರತ್ನ’ ಪ್ರಶಸ್ತಿ ಪ್ರದಾನ

ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಕ್ಕೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಕ್ಟೋಬರ್ 5ರಂದು ಆಯೋಜಿಸಲಾಗಿದ್ದ ‘ಸುವರ್ಣ ಸಮ್ಮಿಲನ – ಇದು ಸುವರ್ಣ ಹೆಜ್ಜೆಗಳ ಅವಲೋಕನ’ ಕಾರ್ಯಕ್ರಮದಲ್ಲಿ ಉಜಿರೆಯ ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕ, ‘ಬದುಕು ಕಟ್ಟೋಣ ಬನ್ನಿ’ ತಂಡದ ಸಂಚಾಲಕ ಮೋಹನ್ ಕುಮಾರ್ ಹಾಗೂ ಉಡುಪಿಯ ಸಮಾಜಸೇವಕ ರವಿ ಕಟಪಾಡಿ ಅವರನ್ನು ‘ಸುವರ್ಣ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಚದುರಿ ಹೋದ ಹಲವಾರು ಬದುಕುಗಳನ್ನು ಪುನರ್ನಿಮಾಣ ಮಾಡುವ ಜೊತೆ ಹಲವಾರು […]
ಚಾರ್ಮಾಡಿಯಲ್ಲಿ ಕಾಡಾನೆ ಹಾವಳಿ

ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ಮಠದ ಮಜಲು ಎಂಬಲ್ಲಿ ಅನಂತರಾಮ ರಾವ್ ಎಂಬವರ ತೋಟಕ್ಕೆ ಅಕ್ಟೋಬರ್ 5ರ ಮುಂಜಾನೆ ನುಗ್ಗಿದ ಕಾಡಾನೆಗಳ ಹಿಂಡು 60 ಅಡಕೆ ಮರ ಹಾಗೂ ಒಂದು ತೆಂಗಿನ ಮರವನ್ನು ಮುರಿದುಹಾಕಿವೆ. ಹಿಂಡಿನಲ್ಲಿ ಸುಮಾರು 6 ಕಾಡಾನೆಗಳಿರುವ ಶಂಕೆ ವ್ಯಕ್ತವಾಗಿದ್ದು ತೋಟದಲ್ಲಿ ಮೂಡಿರುವ ಆನೆಗಳ ಹೆಜ್ಜೆಗಳು ಇದನ್ನು ದೃಢೀಕರಿಸುತ್ತಿವೆ.ಮಠದ ಮಜಲು ಪರಿಸರದಲ್ಲಿ ಒಂಟಿ ಸಲಗ ಸೇರಿದಂತೆ ಎರಡರಿಂದ ಮೂರು ಆನೆಗಳಿರುವ ಹಿಂಡು ಆಗಾಗ ಕಂಡು ಬರುತ್ತಿದ್ದರೆ, ಈ ಬಾರಿ ಏಕಾಏಕಿ ಆರು ಆನೆಗಳು ಕಂಡುಬಂದಿವೆ ಎಂದು […]
ಬೆಳಾಲಿನಲ್ಲಿ ಮದ್ಯವರ್ಜನ ಶಿಬಿರ ಉದ್ಘಾಟನೆ

ಬೆಳ್ತಂಗಡಿ: ಮದ್ಯಪಾನದ ಪರಿಣಾಮ ಕೇವಲ ವ್ಯಕ್ತಿಯ ಮೇಲೆ ಅಲ್ಲದೆ ಮನೆಯವರಿಗೆ, ಕುಟುಂಬಕ್ಕೆ ಹಾಗು ಇಡೀ ಸಮಾಜಕ್ಕೆ ಬೀಳುತ್ತದೆ. ಸಮಾಜದಲ್ಲಿ ಅನೇಕ ರೀತಿಯ ದುಶ್ಚಟಗಳಲ್ಲಿ ಮದ್ಯಪಾನವು ಸಮಾಜವನ್ನು ಗಂಭೀರವಾಗಿ ಕಾಡುವ ದುಶ್ಚಟವಾಗಿದೆ. ಇಂತಹ ಕೆಟ್ಟ ಚಟದಿಂದ ಹೊರಬರಲು ಜನಜಾಗೃತಿ ವೇದಿಕೆಯ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಬೃಹತ್ ಯೋಜನೆ ರೂಪಿಸಿ ಸಮಾಜದ ಪರಿವರ್ತನೆಗೆ ಕಾರಣರಾಗಿದ್ದಾರೆ. ಮದ್ಯವರ್ಜನ ಶಿಬಿರದಲ್ಲಿ ಶಿಬಿರಾರ್ಥಿಗಳಾಗಿ ಬಂದು ಕುಡುಕ ಎಂಬ ಹಣೆಪಟ್ಟಿಯಿಂದ ದೂರವಾಗಿ ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ಗೌರವಯುತರಾಗಿ ಬಾಳಿ ಎಂದು ಉಜಿರೆ […]