ಮಿಡಿಯಿತು ಪೊಲೀಸರ ಮಾನವೀಯ ಹೃದಯ, ವೈಯಕ್ತಿಕ ಅಂತರ ಜಾಗೃತಿ ಇವರಲ್ಲೂ ಇಲ್ಲ..

ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಯವರು ತಮ್ಮ ಠಾಣಾ ವ್ಯಾಪ್ತಿಯ ಪ್ರತೀ ಗಸ್ತಿನ 2 ಅಶಕ್ತ ಕುಟುಂಬಗಳಂತೆ ಒಟ್ಟು 70 ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಅವರವರ ಮನೆಗಳಿಗೆ ಎಪ್ರಿಲ್ 20ರಂದು ತಲುಪಿಸಿ ಮಾನವೀಯತೆ ತೋರಿದರು.ನೂತನ ಗಸ್ತು ವ್ಯವಸ್ಥೆಯ ಜನಸ್ನೇಹಿ ಪೊಲೀಸ್ ವ್ಯವಸ್ಥೆಯಂತೆ ಬೆಳ್ತಂಗಡಿ ಪಿಎಸ್ಐ ನಂದಕುಮಾರ್ ಎಂ. ಎಂ. ರವರ ನೇತೃತ್ವದಲ್ಲಿ ಠಾಣಾ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯವರು ತಮ್ಮ ವೇತನದಿಂದ ಅಗತ್ಯ ವಸ್ತುಗಳ ಕಿಟ್ ತಯಾರಿಸಿ ಹಂಚಿಕೆ ಮಾಡಿರುವುದಾಗಿದೆ.ಕೋವಿಡ್ 19 ತಡೆಗಟ್ಟಲು […]

ಊರು ಕಾಯುವವರೂ ಮರೆತ ವೈಯಕ್ತಿಕ ಅಂತರ.

ಎಪ್ರಿಲ್21ರಂದು ಬೆಳಿಗ್ಗೆ ಬೆಳ್ತಂಗಡಿ ಗೃಹ ರಕ್ಷಕ ಇಲಾಖೆಯ ಕಛೇರಿಗೆ ಆಗಮಿಸಿದ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ಕೋರೊನಾ ವೈರಸ್ ತಡೆಗಟ್ಟುವ ಸರಕಾರದ ಕಾರ್ಯಪಾಲನೆಯಲ್ಲಿ ಗೃಹ ರಕ್ಷಕ ಸಿಬ್ಬಂದಿಗಳು ತನ್ನ ಜೀವದ ಹಂಗು ತೊರೆದು ಶ್ರಮಿಸುತ್ತಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.. ಮತ್ತು ಗೃಹ ರಕ್ಷಕ ಸಿಬ್ಬಂದಿಗಳ ವೇತನ ಮತ್ತು ಮೂಲಭೂತ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸರಕಾರದ ಗಮನ ಸೆಳೆದು ಸೂಕ್ತ ರೀತಿಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು. ಕೋರೊನ ವೈರಸ್ ಲಾಕ್ಡೌನ್ ನಡುವೆ ಕಾರ್ಯ ನಿರ್ವಹಿಸುತ್ತಿರುವ […]

ಅಕ್ರಮ ದನ ಸಾಗಾಟದ ಪಿಕಪ್ ಸಹಿತ ಆರೋಪಿಗಳು ಪರಾರಿ

ಎಪ್ರಿಲ್ 21 ರಂದು ರಾತ್ರಿ ಸುಮಾರು 8 ಗಂಟಗೆ ಗುರುವಾಯನಕೆರೆ ಯಿಂದ ಉಪ್ಪಿನಂಗಡಿ ಕಡೆಗೆ ಅತೀ ವೇಗವಾಗಿ ಬಿಳಿ ಬಣ್ಣದ ಅಕ್ರಮ ದನ ಸಾಗಾಟದ ಪಿಕಪ್ ಒಂದು ಅತೀ ವೇಗವಾಗಿ ಚಲಿಸುತಿದ್ದು, covid-19ನ ಲಾಕ್ ಡೌನ್ ನಿಮಿತ್ತ ಬೆಳ್ತಂಗಡಿ ಪೊಲೀಸ್ ರು ಗಸ್ತು ನಲ್ಲಿದ್ದರು ಪರಪ್ಪು ಎಂಬಲ್ಲಿ ಸಂಶಯಗೊಂಡ ಪೊಲೀಸ್ ರು ತಮ್ಮ ಬೈಕನ್ನು ರಸ್ತೆಗೆ ಅಡ್ಡಲಾಗಿ ಇಟ್ಟಿದ್ದರು ವೇಗವಾಗಿ ಬಂದ ಪಿಕಪ್ ವಾಹನವು ಚಾಲಕ ಮತ್ತ ಇಬ್ಬರು ಆರೋಪಿಗಳೊಂದಿಗೆ ಪೊಲೀಸರನ್ನು ಯಾಮಾರಿಸಿ ನಾಳ ದೇವಸ್ಥಾನದ ಪಳ್ಳಾದೆ […]

ಕಿಡಿಗೇಡಿಗಳ ಕುಕೃತ್ಯಕ್ಕೆ ಸೋಮಾವತಿ ನದಿನೀರು ಕಲುಷಿತ

ಬೆಳ್ತಂಗಡಿ: ನಗರ ಪಂಚಾಯತ್ ವ್ಯಾಪ್ತಿಯಲ್ಲಿ 11 ವಾರ್ಡ್ ಗಳಿಗೆ ನೀರು ಪೂರೈಸುತ್ತಿದ್ದ ಸೋಮಾವತಿ ನದಿ ನೀರಿಗೆ ದುಷ್ಕರ್ಮಿಗಳು ವಿಷ ಬೆರಸಿರುವ ಅನುಮಾನ ವ್ಯಕ್ತವಾಗಿದ್ದು ಮೀನುಗಳ ಮಾರಣಹೋಮವಾಗಿವೆ. ಬೆಳ್ತಂಗಡಿ ನಗರ ಪಂಚಾಯತದ ಕುಡಿಯುವ ನೀರಿನ ಪಂಪುಹೌಸ್ ಬಳಿಯ ಸೋಮವತಿ ನದಿಯ ಗುಂಡಿಯಲ್ಲಿ ಎಪ್ರಿಲ್ 20ರ ರಾತ್ರಿ ಕಿಡಿಗೇಡಿಗಳು ಸ್ಫೋಟಕ ಬೆರೆಸಿ ಮೀನು ಹಿಡಿಯಲು ಯತ್ನಿಸಿ, ನೀರನ್ನು ಕುಲುಷಿತಗೊಳಿಸಿದ ಪರಿಣಾವಾಗಿ ಮೀನುಗಳು ಸಾವನ್ನಪ್ಪಿವೆ.ರಾತ್ರಿ ಐದಾರು ಮಂದಿಯ ತಂಡ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದ್ದು, ಸ್ಥಳೀಯರು ನೀಡಿದ ಖಚಿತ ಮಾಹಿತಿಯನ್ವಯ ಬೆಳ್ತಂಗಡಿ […]

ಆಹಾರ ಸಾಮಗ್ರಿ ವಿತರಣೆ ಜವನೆರ್ ಬೆದ್ರ ನಂ. ೧ ಸಾಧನೆ

ಮೂಡುಬಿದಿರೆ : ಕೊರೋನಾ ವೈರಸ್ ಸಮುದಾಯ ಮಟ್ಟದಲ್ಲಿ ಹರಡುವುದನ್ನು ತಡೆಗಟ್ಟಲು ಸರಕಾರ ಮಾಡಿರುವ ಲಾಕ್ ಡೌನ್ ಆದೇಶ ದೈನಂದಿನ ಸಂಪಾದನೆಯಿಂದ ಜೀವಿಸುವ ಮತ್ತು ಬಾಡಿಗೆ ಮನೆಗಳಲ್ಲಿ ವಾಸಿಸುವ ಕುಟುಂಬಗಳನ್ನು ಹೆಚ್ಚು ಕಂಗೆಡಿಸುವಂತೆ ಮಾಡಿದೆ. ಈ ಸಂದರ್ಭದಲ್ಲಿ ಮೂಡುಬಿದಿರೆ ವಲಯದ ನಾಗರಿಕರ ನೆರವಿಗೆ ಪ್ರಥಮವಾಗಿ ಧಾವಿಸಿದ್ದು ಇಲ್ಲಿನ ಜವನೆರ್ ಬೆದ್ರ ಸಂಘಟನೆ. ಕಳೆದ ಎರಡು ವರ್ಷಗಳಿಂದ ಮೂಡುಬಿದಿರೆಯ ಸ್ವಚ್ಛತೆಗೆ ವಿಶೇಷ ಕೊಡುಗೆ ನೀಡಿರುವ ಜವನೆರ್ ಬೆದ್ರ ಸಂಘಟನೆ ಈಗ ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಜನರ ನೆರವಿಗೆ ಮಿಂಚಿನ […]

ಬಿಹಾರದ ಕಾರ್ಮಿಕರಿಗೆ ಅಕ್ಕಿ ವಿತರಣೆ-ಹಸಿವಿನ ಬೇಗೆಯಲ್ಲಿ ವೈಯಕ್ತಿಕ ಅಂತರ ಮರೆತ ಬಡಪಾಯಿಗಳು

ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದಲ್ಲಿ ಹೊಟ್ಟೆಪಾಡಿಗಾಗಿ ಉದ್ಯೋಗವನ್ನರಸಿ ಬಂದ 24ಮಂದಿ ವಲಸೆ ಕಾರ್ಮಿಕರಿದ್ದಾರೆ. ಇದೀಗ ಲಾಕ್ ಡೌನಿನಿಂದಾಗಿ ಇತ್ತ ಕೆಲಸವೂ ಇಲ್ಲದೇ, ಅತ್ತ ತಮ್ಮೂರಿಗೂ ಹೋಗಲಾಗದೇ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಇವರೆಲ್ಲರೂ ಒಪ್ಪೊತ್ತಿನ ಕೂಳಿಗೂ ಪರದಾಡಬೇಕಾಗಿದೆ. ಇವರ ವೇದನೆಯನ್ನರಿತ ಬೆಳ್ತಂಗಡಿಯ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಈ ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ಪರಿಹಾರವಾಗಿ ನೀಡಿದ 50ಕೆ.ಜಿ. ಅಕ್ಕಿ ಹಾಗೂ 5ಕೆ.ಜಿ. ಅವಲಕ್ಕಿಯನ್ನು ತಣ್ಣೀರುಪಂತ ಗ್ರಾಮ ಪಂಚಾಯತ್ ಅಧ್ಯಕ್ಷ ಜಯವಿಕ್ರಮ್ ಹಸ್ತಾಂತರಿಸಿದರು. ಇದರೊಂದಿಗೆ ಸ್ಥಳೀಯ ದಾನಿಗಳಿಂದ ಗ್ರಾಮ ಪಂಚಾಯತಿನ‌ ಸಂಗ್ರಹಿಸಿದ ಮೂಲಕ […]

ಕೊಕ್ಕಡ ಸ್ವಾಭಿಮಾನಿ ಗೆಳೆಯರ ಬಳಗ ಮತ್ತು ದಾನಿಗಳಿಂದ ಕಿಟ್ ಗಳ ವಿತರಣೆ

ಕೊಕ್ಕಡ, ಎ. 20: ಕೊರೋನಾ ಸಂಬಂದಿ ದೇಶವೇ ಲಾಕ್ ಡೌನ್ ಆಗಿರುವ ಸಂದರ್ಭ ಕೊಕ್ಕಡ ಗ್ರಾಮದಲ್ಲಿರುವ ಸುಮಾರು 80 ಕ್ಕಿಂತಲೂ ಅಧಿಕ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಬಡಕುಟುಂಬಗಳ ಕಷ್ಟವನ್ನು ಮನಗಂಡು ತಾ.ಪಂ. ಸದಸ್ಯ ಲಕ್ಷ್ಮೀನಾರಾಯಣ ಟಿ.ಎಂ. ನೇತೃತ್ವದಲ್ಲಿ ಮತ್ತು ಸ್ವಾಭಿಮಾನಿ ಗೆಳೆಯರ ಬಳಗದಿಂದ ಕಿಟ್ ವಿತರಣೆ ಮಾಡುವ ಕಾರ್ಯ ಸೋಮವಾರದಂದು ಉಪ್ಪಾರು ಸುಬ್ರಹ್ಮಣ್ಯ ಉಪ್ಪಾರ್ಣ ಇವರ ಸಹಯೋಗದಲ್ಲಿ ನಡೆಯಿತು.ಜೈ ಕನ್ನಡಮ್ಮ ಪತ್ರಿಕೆಗೆ ಮಾಹಿತಿ ನೀಡಿದ ಕೊಕ್ಕಡ ತಾ.ಪಂ.ಲಕ್ಷ್ಮೀನಾರಾಯಣ ಟಿ.ಎಂ, ಬಡತನದಲ್ಲಿರುವ ದಿನಗೂಲಿ ಕಾರ್ಮಿಕರು ಅತ್ತ ಕಡೆ […]

ವೈಯಕ್ತಿಕ ಅಂತರ ಹಾಗೂ ಮಾಸ್ಕ್ ಮರೆತು ಕಿಟ್ ವಿತರಣೆ

ಮೂಡಬಿದರೆ ತಾಲೂಕು ವಾಲ್ಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಒಂದನೇ ವಾರ್ಡಿನಲ್ಲಿ ಎಪ್ರಿಲ್ 20ರಂದು ವಾಲ್ಪಾಡಿ ಗ್ರಾಮ ಪಂಚಾಯಿತಿನ ಉಪಾಧ್ಯಕ್ಷರಾದ ಅರುಣ್ ಕುಮಾರ್ ಶೆಟ್ಟಿ ಇವರ ನೇತೃತ್ವದಲ್ಲಿ ವಾಲ್ಪಾಡಿ ಯೂತ್ ಕಾಂಗ್ರೆಸ್ ಮತ್ತು ಮೂಡಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುಮಾರು 220 ಮನೆಗಳಿಗೆ ಹೋಗಿ ಕಿಟ್ ಗಳನ್ನು ವಿತರಿಸಲಾಯಿತು…… ಮಾಜಿ ಸಚಿವರಾದ ಅಭಯಚಂದ್ರ ಜೈನ್, ಮೂಡಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಲೇರಿಯನ್ ಸಿಕ್ವೇರಾ, ಮಂಗಳೂರು ಎಪಿಎಂಸಿ ಅಧ್ಯಕ್ಷರಾದ ಪ್ರವೀಣ್ ಕುಮಾರ್ ,ಶಿವಾನಂದ ಪಾಂಡ್ರು, ಸುಕುಮಾರ್ ಕಡಂಬ ,ಮತ್ತು ಯುತ್ ಕಾಂಗ್ರೆಸ್ […]

ಕೋವಿಡ್-19 ಹೋರಾಟದಲ್ಲಿ ವಿಮುಕ್ತಿ ವೈಯಕ್ತಿಕ ಅಂತರ ಕಾಪಾಡಲು ಮರೆತರಿವರು

ಲಾಯಿಲ: ಕೋವಿಡ್-19 ರೋಗವನ್ನು ತಡೆಗಟ್ಟುವಲ್ಲಿ ಭಾರತ ಸರಕಾರ ಕೈಗೊಂಡ ಲಾಕ್‌ಡೌನ್ ನಿಂದ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ನಿಟ್ಟಿನಲ್ಲಿ ಕಪುಚಿನ್ ಕೃಷಿಕ ಸೇವಾ ಕೇಂದ್ರ ವಿಮುಕ್ತಿ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಚೈಲ್ಡ್ ಪಂಡ್ ಇಂಡಿಯಾ ಸಹಭಾಗಿತ್ವದೊಂದಿಗೆ ತಾಲೂಕಿನ ಅರ್ಹ 600 ಕುಟುಂಬಗಳಿಗೆ ಆಹಾರ ಕಿಟ್, 200 ಆರೋಗ್ಯ/ಸ್ವಚ್ಚತೆ ಕಿಟ್ ಹಾಗೂ 200 ಶಿಕ್ಷಣ ಕಿಟ್ ಹೀಗೆ ಒಟ್ಟು ಹೀಗೆ 5 ಲಕ್ಷ ರೂ. ಮೌಲ್ಯದ ಸಾಮಾಗ್ರಿಗಳನ್ನು ವಿತರಿಸುವ ಕಾರ್ಯಕ್ಕೆ ಏ.20 ರಂದು ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ […]

ರೈತರ ಪ್ರತಿಭಟನೆಯಲ್ಲೂ ವೈಯಕ್ತಿಕ ಅಂತರ

ಮೂಡುಬಿದಿರೆ : ಕೊರೋನಾವೈರಸ್ ಮಹಾಮಾರಿಯ ಅಬ್ಬರ ಮತ್ತು ಈ ಸಂದರ್ಭದಲ್ಲಿ ರೈತರು ಅನುಭವಿಸುತ್ತಿರುವ ಬವಣೆಗೆ ಸರಕಾರದಿಂದ ಸೂಕ್ತ ರೀತಿಯ ಸ್ಪಂದನ ಸಿಗದ ಹಿನ್ನೆಲೆಯಲ್ಲಿ ರೈತರು ತಮ್ಮ ತಮ್ಮ ಮನೆಯಲ್ಲಿದ್ದುಕೊಂಡೇ ಪ್ರತಿಭಟನೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ತೀರ್ಮಾನ ಕೈಗೊಂಡಿತ್ತು.ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿ ಮತ್ತು ಮೂಡುಬಿದಿರೆ ಕ್ಷೇತ್ರ ಕಾಂಗ್ರೆಸ್ ಕಿಸಾನ್ ಘಟಕದ ನೂತನ ಅಧ್ಯಕ್ಷರೂ ಆಗಿರುವ ಆಲ್ವಿನ್ ಎಸ್. ಮಿನೇಜಸ್ ಅವರು ಗಂಟಾಲ್ಕಟ್ಟೆಯ ತಮ್ಮ ಮನೆಯ ತೋಟದಲ್ಲಿ ಮೂಡುಬಿದಿರೆ ಕೃಷಿಕರ […]