ಮಕ್ಕಳಿಗೆ ಧಾರ್ಮಿಕ ಚಿಂತನೆಯ ಸಂಸ್ಕಾರ ನೀಡೋಣಾ-ವಜ್ರದೇಹಿಶ್ರೀಗಳು

ಬೆಳ್ತಂಗಡಿ: ಧಾರ್ಮಿಕ ಶ್ರದ್ಧಾಕೇಂದ್ರಗಳಾದ ದೇವಸ್ಥಾನ ಹಾಗೂ ಮಂದಿರಗಳಲ್ಲಿ ನಡೆಯುವ ಧಾರ್ಮಿಕ ಆಚರಣೆಗಳಲ್ಲಿ ನಾವು ನಮ್ಮ ಮಕ್ಕಳೊಂದಿಗೆ ಬಾಗವಹಿಸುವುದರ ಮೂಲಕ ಮಕ್ಕಳಿಗೆ ಧಾರ್ಮಿಕ ಚಿಂತನೆ ಸಂಸ್ಕಾರವನ್ನು ಕಲಿಸುವುದರೊಂದಿಗೆ ಸದ್ರಢ ರಾಷ್ಠ್ರ ನಿರ್ಮಾಣ ಮಾಡೋಣ ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮಿಜಿ ಹೇಳಿದರು. ಅವರು ಅಕ್ಟೋಬರ್ 9ರಂದು ಓಡಿಲ್ನಾಳ ಮೈರಲ್ಕೆ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ನಡೆದ 2ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಲಾದ ಧಾರ್ಮಿಕ […]
“ಆಚಾರ-ವಿಚಾರ ಹಾಗೂ ಆಹಾರ-ವಿಹಾರ ಮುಖ್ಯ’

ಬೆಳ್ತಂಗಡಿ: ಇಂದು ಹೆಚ್ಚುತ್ತಿರುವ ಜನಸಂಖ್ಯೆಯ ಪರಿಣಾಮ ನಮ್ಮ ದೇಶದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಸ್ಪರ್ಧೆ ಇರುವುದರಿಂದ ಜೀವನದಲ್ಲಿ ನಾವು ಯಾವ ರೀತಿಯ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದೇವೆ ಅನ್ನುವುದರ ಮೇಲೆ ನಮ್ಮ ಯಶಸ್ಸು ಇರುತ್ತದೆ. ಸ್ವಯಂ ಶಿಸ್ತು ಅಳವಡಿಸಿಕೊಂಡು ಉತ್ತಮ ಆಚಾರ-ವಿಚಾರಗಳನ್ನು ಅನುಸರಿಸಿ, ಜೊತೆಗೆ ಉತ್ತಮವಾದ ಆಹಾರ ಪದ್ಧತಿ ಅಳವಡಿಸಿಕೊಂಡು ಅದಕ್ಕೆ ಸರಿಯಾದ ವಿಹಾರ ಮಾಡಿಕೊಂಡಲ್ಲಿ ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಬಹುದು. ಇದಕ್ಕೆ ಪೂರಕವಾಗಿ ನಿಮಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆಯುವ ರುಡ್‌ಸೆಟ್ […]
ಧರ್ಮಸ್ಥಳದಲ್ಲಿ ಸಂಗೀತ ಕಾರ್ಯಕ್ರಮ

Pಬೆಳ್ತಂಗಡಿ: ನವರಾತ್ರಿ ಸಂದರ್ಭದಲ್ಲಿ ಅಕ್ಟೋಬರ್ 7ರ ರಾತ್ರಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬೆಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿ ರಕ್ಷಣ್ ಜಿ. ರಾವ್ ಸಂಗೀತ ಕಾರ್ಯಕ್ರಮ ನೀಡಿದರು.ವಯಲಿನ್ ವಾದಕರಾಗಿ ಮಂಗಳೂರಿನ ಗೌತಮ್ ಭಟ್, ಮೃದಂಗ ವಾದಕರಾಗಿ ವಿದ್ವಾನ್ ವಸಂತಕೃಷ್ಣ ಕಾಂಚನ ಮತ್ತು ತಬಲಾವಾದಕರಾಗಿ ಶಿವಮೊಗ್ಗದ ವಿಠಲ ರಂಗಧೋಳ್ ಸಹಕರಿಸಿದರು.
ಗಮಕ-ನೃತ್ಯರೂಪಕ ಪ್ರದರ್ಶನ

ಬೆಳ್ತಂಗಡಿ: ಶರನ್ನವರಾತ್ರಿ ಪ್ರಯುಕ್ತ ಮಲೆಬೆಟ್ಟು ಶ್ರೀ ವನದುರ್ಗ ದೇವಸ್ಥಾನದಲ್ಲಿ ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ ವತಿಯಿಂದ ಪರಿಷತ್‌ನ ಸದಸ್ಯರು ಗಮಕ-ನೃತ್ಯ ರೂಪಕವನ್ನು ಪ್ರದರ್ಶಿಸಿದರು. ನಿತ್ಯಾತ್ಮಯೋಗಿ ಕವಿಯು ಬರೆದ ಶ್ರೀ ಕರ್ನಾಟಕ ಭಾಗವತದಿಂದ ಆಯ್ದ ಕಾವ್ಯಭಾಗಗಳನ್ನು ಆಧರಿಸಿ ‘ಶ್ರೀ ಕೃಷ್ಣ ಲೀಲಾಮೃತಂ’ ಎಂಬ ನೃತ್ಯರೂಪಕ ಕಾರ್ಯಕ್ಮವನ್ನು ನಡೆಸಿಕೊಟ್ಟರು. ಕಾವ್ಯ ವಾಚನದಲ್ಲಿ ತಾಲೂಕು ಗಮಕ ಕಲಾ ಪರಿಷತ್ ಕಾರ್ಯದರ್ಶಿ ಗಮಕಿ ಮೇಧಾ ಅಶೋಕ ಭಟ್ ಮತ್ತು ಗಮಕ ವಿದ್ಯಾರ್ಥಿನಿ ಶ್ರೀವಿದ್ಯಾ ಐತಾಳ್ ಪ್ರಸ್ತುತ ಪಡಿಸಿದರು. ನಿರೂಪಣಾ ವ್ಯಾಖ್ಯಾನವನ್ನು ಗಮಕ […]
‘ಮ್ಯೂಸಿಯಂಗಳು ಈ ನೆಲದ ಜ್ಞಾನ ಸಂಪತ್ತು’

ಬೆಳ್ತಂಗಡಿ: ಮ್ಯೂಸಿಯಂಗಳು ಭೌತಿಕ ಸಂಶೋಧನೆಗಳಿಗೆ ಬಹುದೊಡ್ಡ ಸಂಪನ್ಮೂಲ. ಇದನ್ನು ಸಂರಕ್ಷಿಸಿಕೊಂಡು ಮುಂದಿನ ತಲೆಮಾರಿಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇವುಗಳು ಈ ನೆಲದ ಸಂಪತ್ತು ಎಂದು ಧರ್ಮಸ್ಥಳದ ಮಂಜೂಷ ಮ್ಯೂಸಿಯಂನ ಮೇಲ್ವಿಚಾರಕ ರಿತೇಶ್ ಅಭಿಪ್ರಾಯಪಟ್ಟರು. ಅವರು ಅಕ್ಟೋಬರ್ 8ರಂದು ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ರೋಟರಿ ಸೇವಾಭವನ ಕಾಶಿಬೆಟ್ಟುನ ರೊ. ಕೆ. ರಮಾನಂದ ಸಾಲಿಯಾನ್ ಸಭಾಂಗಣದಲ್ಲಿ ನಡೆದ ‘ಮ್ಯೂಸಿಯಂ ಆಳ-ಅಗಲ’ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಮ್ಯೂಸಿಯಂ ಕಟ್ಟಲು ಮತ್ತು ಅದನ್ನು ಸದಾ ಸಂರಕ್ಷಿಸಲು […]
ರಾಷ್ಟ್ರೀಯ ಹೆದ್ದಾರಿ ಕಳಪೆ ಕಾಮಗಾರಿಯ ನಗ್ನನರ್ತನ

ಬೆಳ್ತಂಗಡಿ: ಕಳಪೆ ಕಾಮಗಾರಿ ಮತ್ತು ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಪರ್ಸಂಟೇಜ್ ಪೈಪೋಟಿಯಿಂದ ನಾಗರಿಕರ ನಾಲಗೆಗೆ ಆಹಾರವಾಗಿರುವ ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಕಳಪೆ ಕಾಮಗಾರಿಯ ನಗ್ನನರ್ತನ ರಾಷ್ಟ್ರೀಯ ಹೆದ್ದಾರಿಯ ಉಜಿರೆಯ ಎಂ.ಜಿ. ಟ್ರೇಡರ್ಸ್ ಬಳಿ ಅಕ್ಟೋಬರ್ 8ರ ಬೆಳಿಗ್ಗೆ ಸಂಭವಿಸಿದೆ.ಅವೈಜ್ಞಾನಿಕ ಕಾಮಗಾರಿಗೆ ಪ್ರತ್ಯಕ್ಷ ಉದಾಹರಣೆಯಾಗಿರುವ ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಕೆಲವೆಡೆ ಇಕ್ಕೆಲಗಳಲ್ಲಿ ನಿರ್ಮಿಸಲಾದ ಬೃಹತ್ ಗಾತ್ರದ ಒಳಚರಂಂಡಿ ವ್ಯವಸ್ಥೆ ಯಾಕೆ ಎಂಬುವುದು ಒಗಟಾಗಿಯೇ ಉಳಿದಿದೆ. (ಸುದೈವವಶಾತ್!) ಈ ಒಳಚರಂಡಿ ಕಾಮಗಾರಿ ಎಷ್ಟು ಕಳಪೆಯಾಗಿದೆ ಎಂದರೆ ಈ ಸಿಮೆಂಟ್ ಕಾಮಗಾರಿಗೆ […]
ಮಹಾಭಾರತ ಸರಣಿಯಲ್ಲಿ ‘ಸಮರ ಸನ್ನಾಹ’ ಯಕ್ಷಗಾನ ತಾಳಮದ್ದಳೆ

ಬೆಳ್ತಂಗಡಿ: ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಸಹಯೋಗದಲ್ಲಿ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ 49ನೇ ಕಾರ್ಯಕ್ರಮವಾಗಿ ‘ಭೀಮ-ದ್ರೌಪದಿ ಸಮರ ಸನ್ನಾಹ’ ಪೌರಾಣಿಕ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಜರಗಿತು.ಭಾಗವತರಾಗಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಹರೀಶ ಆಚಾರ್ಯ ಉಪ್ಪಿನಂಗಡಿ ಮತ್ತು ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಜಗದೀಶ ಚಾರ್ಮಾಡಿ, ಚಂದ್ರಶೇಖರ ಆಚಾರ್ಯ ಗೇರುಕಟ್ಟೆ ಮತ್ತು ಅರ್ಥಧಾರಿಗಳಾಗಿ ಮಧೂರು ಮೋಹನ ಕಲ್ಲೂರಾಯ (ದ್ರೌಪದಿ […]
ಅಂತರ್ ಕಾಲೇಜು ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ

ಬೆಳ್ತಂಗಡಿ: 2024-25ನೇ ಸಾಲಿನ ಅಂತರ್ ಕಾಲೇಜು ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ, ಮಂಗಳೂರು ವಿಶ್ವವಿದ್ಯಾನಿಲಯ ಆಯೋಜಿಸಿದ ಚರ್ಚಾ ಸ್ಪರ್ಧೆ- ‘ಕೃಷಿ ಕ್ಷೇತ್ರದ ಬೆಳವಣಿಗೆಗೆ ಸಹಕಾರ ಸಂಘಗಳ ಪಾತ್ರ’ ಎಂಬ ವಿಷಯದಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಬಿ.ಎಡ್. ಕಾಲೇಜಿನ ಪ್ರಥಮ ಬಿ.ಇಡಿ. ವಿದ್ಯಾರ್ಥಿಗಳಾದ ದೀಕ್ಷಿತ್ ಎಂ. ಹಾಗೂ ಫಾತಿಮಾತ್ ರಾಫಿಯಾ ಭಾಗವಹಿಸಿದ್ದು, ಫಾತಿಮಾತ್ ರಾಫಿಯಾರವರು ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯಮಟ್ಟದಲ್ಲಿ ನಡೆಯುವ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲಿದ್ದಾರೆ. ಶ್ರೀ ಧರ್ಮಸ್ಥಳ […]
ಕೃಷಿ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃಧ್ಧಿ ಬಗ್ಗೆ ಹ್ಯಾಕಥಾನ್

ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಧಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಿಲೈತ್ ಬೆಂಗಳೂರು ಹಾಗೂ ಐಎಸ್‌ಟಿಇ ಸಹಭಾಗಿತ್ವದಲ್ಲಿ ಕೃಷಿ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃಧ್ಧಿ ಎಂಬ ವಿಷಯದ ಕುರಿತು ಸೆಪ್ಟೆಂಬರ್ 27 ಮತ್ತು 28 ರಂದು ‘ಇನೊವೇಟ್-ಥಾನ್’ ಎನ್ನುವ ಎರಡು ದಿನದ ಹ್ಯಾಕಥಾನ್ ಅಯೋಜಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಂಗಳೂರು ಇನ್‌ಫೋಸಿಸ್‌ನ ಹಿರಿಯ ತಾಂತ್ರಿಕ ಆರ್ಕಿಟೆಕ್ಟ್ ಕಾಟಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ; ವಿದ್ಯಾರ್ಥಿಗಳು ದೈನಂದಿನ ಸಮಸ್ಯೆಗಳಿಗೆ ತಾಂತ್ರಿಕ ಹಿನ್ನಲೆಯಲ್ಲಿ ಪರಿಣಾಮಕಾರಿಯಾದ ಪರಿಹಾರ ಕಂಡುಕೊಳ್ಳುವಂತೆ ಹಾಗೂ ನೂತನ ಉತ್ಪನ್ನಗಳ ಅಭಿವೃಧ್ಧಿಯೆಡೆಗೆ ಆಲೋಚಿಸಲು […]
ಅಂತರ್ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ

ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಆಶ್ರಯದಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟದ ಸಮಾರೋಪ ಸಮಾರಂಭವು ಅಕ್ಟೋಬರ್ 1ರಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯಿತು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್.ಸತೀಶ್ಚಂದ್ರ ಮತ್ತು ಬೆಳ್ತಂಗಡಿ ನ್ಯಾಯವಾದಿ ಶಶಿಕಿರಣ್ ಜೈನ್ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿದರು. ಕಾಲೇಜಿನ ಪ್ರಾಂಶುಪಾಲ ಸಂತೋಷ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರಕ್ರೀಡಾ […]