ಡಾ.ಸುಬ್ರಹ್ಮಣ್ಯ ಭಟ್ಟರ ಮೂರನೇ ಕಾದಂಬರಿ ‘ಅಚ್ಚಣ್ಣ ಭಟ್ರು’ ಬಿಡುಗಡೆ.

ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಕಾಲೇಜಿನ ಸಹಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಭಟ್ಟರ ದಕ್ಷಿಣ ಕನ್ನಡ ಭಾಷಾ ಸೊಗಡಿನ ಮೂರನೇ ಕಾದಂಬರಿ ‘ಅಚ್ಚಣ್ಣ ಭಟ್ರು’ವನ್ನು ಸೆಪ್ಟೆಂಬರ್ 16ರಂದು ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರದ ತಮ್ಮ ನಿವಾಸ ಬೀಡಿನಲ್ಲಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಾದಂಬರಿ ಕೃತಿಕಾರ ಡಾ. ಸುಬ್ರಹ್ಮಣ್ಯ ಭಟ್ಟರು, ಅವರ ಮಕ್ಕಳಾದ ಅಭಿಗಮ್ಯ ರಾಮ್, ಆಶ್ಮನ್ ಕೃಷ್ಣ, ಹಿರಿಯ ವಕೀಲರೂ, ಜ್ಯೋತಿಷಿಗಳಾದ ಗಟ್ಟಿಗಾರು ಗೋಪಾಲಕೃಷ್ಣ ಭಟ್ ಮತ್ತು […]
ಯಾವುದೇ ಹಿಂಜರಿಕೆಯಿಲ್ಲದೆ ಆರ್ಥಿಕ ವ್ಯವಹಾರಗಳಲ್ಲಿ ಮುನ್ನುಗ್ಗಿ’

‘ ಬೆಳ್ತಂಗಡಿ: ಇಂದಿನ ಶಿಕ್ಷಣ ಪದ್ಧತಿಯಲ್ಲಿ ಮಹತ್ತರ ಬದಲಾವಣೆಯಾಗಬೇಕಾಗಿದೆ. ಪ್ರತಿಯೊಬ್ಬರೂ ವ್ಯಕ್ತಿ ಗೌರವ, ದೇಶಭಕ್ತಿ ಹೊಂದಿ ಪೋಷಕರು ಬ್ರಾಹ್ಮಣ್ಯ ಉಳಿಸುವ ಜೊತೆಗೆ ಮಾದರಿ ಶಾಲೆ ಸ್ಥಾಪಿಸುವ ಹೆಜ್ಜೆಯಿರಿಸಬೇಕಾಗಿದೆ. ವ್ಯವಹಾರ, ಆರ್ಥಿಕತೆಯಲ್ಲಿ ಜಾಗತಿಕ ಹಾಗೂ ರಾಷ್ಟ್ರಮಟ್ಟದ ಅರಿವು ಹೊಂದಿ ಧೈರ್ಯದಿಂದ ಒಗ್ಗಟ್ಟಿನಿಂದ ಮುನ್ನುಗ್ಗಬೇಕಾಗಿದೆ. ತುಳು ಶಿವಳ್ಳಿ ಸಮಾಜವನ್ನು ಬಲಪಡಿಸಲು ಎಲ್ಲರೂ ಸಕ್ರಿಯರಾಗಬೇಕು ಎಂದು ನಿಡ್ಲೆಯ ಅಗ್ರಿಲೀಫ್ ಸಂಸ್ಥೆಯ ಸಂಸ್ಥಾಪಕ ಅವಿನಾಶ್ ರಾವ್ ಹೇಳಿದರು. ಅವರು ಸೆಪ್ಟೆಂಬರ್ 16ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ತುಳು ಶಿವಳ್ಳಿ ಸಭಾ ಉಜಿರೆ […]
‘ವಿದ್ಯೆಯ ಜೊತೆಗೆ ಸಂಸ್ಕಾರ ಬೇಕು’

ಬೆಳ್ತಂಗಡಿ: ಮನುಷ್ಯನಿಗೆ ವಿದ್ಯೆ ದೊಡ್ಡ ಸಂಪತ್ತು, ನಮ್ಮ ಕನಸುಗಳನ್ನು ನನಸಾಗಿಸಲು ಇರಬೇಕು ನಾವು ಕಲಿತ ವಿದ್ಯೆ. ಆದರ ಜೊತೆ ಅದನ್ನು ಬಳಸುವ ಸಂಸ್ಕಾರವೂ ಇದ್ದಲ್ಲಿ ಮಾತ್ರ ವಿದ್ಯೆಗೆ ಬೆಲೆ ಬರುವುದು. ನಿಮಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚು ಇದೆ ಅದರಲ್ಲಿ ತೊಡಗಿಸಿಕೊಂಡು ಅದನ್ನು ಕಲಿತು ವೃತ್ತಿಯನ್ನಾಗಿಸಿಕೊಂಡು ಬೆಳೆಯಬೇಕು. ಆವಾಗ ನೀವು ಗ್ರಾಹಕರ ಹತ್ತಿರ ಹೋಗಬೇಕಾಗಿಲ್ಲ; ಅವರೇ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ. ಅಧ್ಯಕ್ಷರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ರುಡ್‌ಸೆಟ್ ಸಂಸ್ಥೆಯಲ್ಲಿ ಅತ್ಯತ್ತಮವಾದ […]
ಶಿಕ್ಷಕರ ದಿನಾಚರಣೆ

ಬೆಳ್ತಂಗಡಿ: ವೇಣೂರು ಸಮೀಪದ ನಿಟ್ಟಡೆ ಕುಂಭಶ್ರೀ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಸೆಪ್ಟೆಂಬರ್ 13ರಂದು ಆಚರಿಸಲಾಯಿತು. 10ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರಿಗೆ ಗುರುವಂದನೆಯನ್ನು ಮಾಡಿದರು. ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳು ಕವನಗಳ ಮೂಲಕ ಶಿಕ್ಷಕರ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿಗಳು ಶಿಕ್ಷಕರಿಗೆ ವಿಭಿನ್ನ ರೀತಿಯ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನವನ್ನು ವಿತರಿಸಿದರು.ಶಾಲಾ ಸಂಸ್ಥಾಪಕರಾದ ಗಿರೀಶ್ ಕೆ.ಎಚ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ; ಇದು ನಿಮ್ಮ ಜೀವನಕ್ಕೆ ಅಡಿಪಾಯ, ಇನ್ನು ಮುಂದಕ್ಕೂ ನಿಮ್ಮ ಜೀವನ ಉಜ್ವಲವಾಗಲಿ ಎಂದು ಮಕ್ಕಳಿಗೆ […]
ಮುಂಡಾಜೆ ಸೊಸೈಟಿ ಮಹಾಸಭೆ 15% ಡಿವಿಡೆಂಟ್ ಘೋಷಣೆ

ಬೆಳ್ತಂಗಡಿ: ವರದಿ ವರ್ಷದಲ್ಲಿ ಸಂಘವು 623 ಕೋಟಿ ರೂಪಾಯಿಗಿಂತ ಅಧಿಕ ವ್ಯವಹಾರ ನಡೆಸಿದ್ದು 2 ಕೋಟಿ ರೂಪಾಯಿಗಿಂತ ಅಧಿಕ ಲಾಭಗಳಿಸಿದೆ. ಸದಸ್ಯರಿಗೆ 15%ದಂತೆ ಡಿವಿಡೆಂಡ್ ನೀಡಲು ನಿರ್ಣಯಿಸಲಾಗಿದೆ ಎಂದು ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನೂಜಿ ಜನಾರ್ದನ ಗೌಡ ಹೇಳಿದರು. ಮುಂಡಾಜೆಯ ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಭಾರ್ಗವ ಸಭಾಭವನದಲ್ಲಿ ಸೆಪ್ಟೆಂಬರ್ 14ರಂದು ಜರಗಿದ ಸಂಘದ ಮಹಾಸಭೆಯಲ್ಲಿ ಮಾತನಾಡಿದ ಅವರು ವರದಿ ವರ್ಷದಲ್ಲಿ 6,023 ಎ ತರಗತಿ ಸದಸ್ಯರು, 8,321 ಸಿ ಮತ್ತು […]
ಪರಪ್ಪು ಮದರಸದಲ್ಲಿ ಎಂಬ್ರೆಝ್ ಮದೀನಾ-2024

ಬೆಳ್ತಂಗಡಿ: ಕಳಿಯ ಗ್ರಾಮದ ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿ ಅಧೀನದಲ್ಲಿರುವ ಹಿದಾಯ ತುಸ್ಸಿಬಿಯಾನ್ ಮದರಸದಲ್ಲಿ ಈದ್ ಮಿಲಾದ್ ಪ್ರಯುಕ್ತ ಮದರಸ ಮಕ್ಕಳ ಕಲಾ ಕಲರವ ಕಾರ್ಯಕ್ರಮ ‘ಎಂಬ್ರೆಝ್ ಮದೀನಾ – 24’ ನಡೆಯಿತು.ಅಧ್ಯಕ್ಷತೆಯನ್ನು ಅಬೂಬಕ್ಕರ್ ಹಾಜಿ ವಹಿಸಿದ್ದರು.ಖತೀಬರಾದ ಮುಹಮ್ಮದ್ ಮಿಸ್ಬಾಹಿ ಅಲ್ ಫುರ್ಖಾನಿ ಪ್ರಾಸ್ತಾವಿಕವಾಗಿ ಮಾತನಾಡಿ ದುವಾ ನೆರವೇರಿಸಿದರು. ಸದರ್ ಉಸ್ತಾದರಾದ ಅಬೂಬಕ್ಕರ್ ಸಿದ್ದೀಕ್ ಮುಈನಿ, ಹಸೈನಾರ್ ಸಅದಿ, ಅಬ್ಬಾಸ್ ಹಿಶಮಿ, ಮುಹಮದ್ ಝಿಯಾದ್ ಮು ಈನಿ ಕಲಾ ಕಲರವ ಕಾರ್ಯಕ್ರಮ ನಡೆಸಿಕೊಟ್ಟರು. ಕಳೆದ 2023 ನೇ […]
ತಾಲೂಕು ಮಟ್ಟದ ತುಳು ಸಾಹಿತ್ಯ ರಚನಾ ಕಮ್ಮಟ

ಬೆಳ್ತಂಗಡಿ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಮತ್ತು ತುಳು ಸಂಘ ವಾಣಿ ಪದವಿಪೂರ್ವ ಕಾಲೇಜು ಬೆಳ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ತಾಲೂಕು ಮಟ್ಟದ 2 ದಿನಗಳ ತುಳು ಸಾಹಿತ್ಯ ರಚನಾ ಕಮ್ಮಟಕ್ಕೆ ಸೆಪ್ಟೆಂಬರ್ 13ರಂದು ವಾಣಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.ಕಾರ್ಯಕ್ರಮವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ತಾರಾನಾಥ ಗಟ್ಟಿ ದೀಪ ಬೆಳಗಿಸಿ ಉದ್ಭಾಟಿಸಿ ಮಾತನಾಡಿ; ದ್ರಾವಿಡ ಭಾಷಾ ವರ್ಗದಲ್ಲಿ ತುಳುವಿಗೆ ವಿಶಿಷ್ಟವಾದ ಸ್ಥಾನವಿದೆ. ತುಳುವಿಗೆ ಸತ್ವವಿದೆ, ಭಾಷಾ […]
ಸವಾಲನ್ನು ಹಿಮ್ಮೆಟ್ಟಿಸಿದಾಗ ಸಾಧನೆ ಸಾಧ್ಯ-ಸ್ಮಿತೇಶ್

ಬೆಳ್ತಂಗಡಿ: ಸಾಧನೆಯ ಹಾದಿಯಲ್ಲಿ ಪರಿಶ್ರಮ ಹಾಗೂ ಬದ್ಧತೆ ಇದ್ದಲ್ಲಿ ಗುರಿಯನ್ನು ಸಾಕಾರಗೊಳಿಸಬಹುದು. ಕಠಿಣ ಪರಿಶ್ರಮ ಹಾಗೂ ಸತತ ಪ್ರಯತ್ನ ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ‘ಕನಸು ಮಾರಾಟಕ್ಕಿದೆ’ ಚಿತ್ರದ ನಿರ್ದೇಶಕ ಸ್ಮಿತೇಶ್ ಬಾರ್ಯ ಹೇಳಿದರು.ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗವು ಆಯೋಜಿಸಿದ್ದ ನೂತನ ಶೈಕ್ಷಣಿಕ ವರ್ಷದ ವಿಧ್ಯಾರ್ಥಿಗಳ ವಿಭಾಗದ ಓರಿಯಂಟೇಷನ್ ಹಾಗೂ ಮೀಡಿಯಾ ಮೆಸೆಂಜರ್ ಕ್ಲಬ್‌ಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.ಸೃಜನಶೀಲತೆ ಎಂಬುದು ಸತತ […]
ಚುಟುಕು ಚಿನ್ಮಯಿ ಪ್ರಶಸ್ತಿ ಪ್ರದಾನ

ಬೆಳ್ತಂಗಡಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್(ರಿ) ಕೇಂದ್ರ ಸಮಿತಿ ಹುಬ್ಬಳ್ಳಿ ಅವರ ಆಶ್ರಯದಲ್ಲಿ ಸೆಪ್ಟೆಂಬರ್ 5ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸನ್ನಿಧಿ ಸಭಾಭವನದಲ್ಲಿ ನಡೆದ ರಾಜ್ಯಮಟ್ಟದ ಶಿಕ್ಷಕ ಸಾಹಿತಿಗಳ ಏಳನೆಯ ಸಮ್ಮೇಳನದಲ್ಲಿ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅತ್ಯಮೂಲ್ಯ ಸೇವೆಯೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಶೈಕ್ಷಣಿಕ ಕಾಳಜಿ, ಜನಪರ ಚಿಂತನೆ, ಸ್ನೇಹಪರ ಮನೋಭಾವ ಅರಳಿಸಿದ ಬೆಳ್ತಂಗಡಿಯ ಶಿಕ್ಷಕರ ಸಹಕಾರಿ ಬ್ಯಾಂಕಿನ ನಿವೃತ್ತ ಪ್ರಬಂಧಕ ರವೀಂದ್ರ ಶೆಟ್ಟಿ ಬಳಂಜ ಸಹಿತ ಐದು ಮಂದಿ ಸಾಧಕರಿಗೆ ಇತರ […]
ಚುಟುಕು ಚಿನ್ಮಯಿ ಪ್ರಶಸ್ತಿ ಪ್ರಧಾನ

ಬೆಳ್ತಂಗಡಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್(ರಿ) ಕೇಂದ್ರ ಸಮಿತಿ ಹುಬ್ಬಳ್ಳಿ ಅವರ ಆಶ್ರಯದಲ್ಲಿ ಸೆಪ್ಟೆಂಬರ್ 5ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸನ್ನಿಧಿ ಸಭಾಭವನದಲ್ಲಿ ನಡೆದ ರಾಜ್ಯಮಟ್ಟದ ಶಿಕ್ಷಕ ಸಾಹಿತಿಗಳ ಏಳನೆಯ ಸಮ್ಮೇಳನದಲ್ಲಿ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅತ್ಯಮೂಲ್ಯ ಸೇವೆಯೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಶೈಕ್ಷಣಿಕ ಕಾಳಜಿ, ಜನಪರ ಚಿಂತನೆ, ಸ್ನೇಹಪರ ಮನೋಭಾವ ಅರಳಿಸಿದ ಬೆಳ್ತಂಗಡಿಯ ಶಿಕ್ಷಕರ ಸಹಕಾರಿ ಬ್ಯಾಂಕಿನ ನಿವೃತ್ತ ಪ್ರಬಂಧಕ ರವೀಂದ್ರ ಶೆಟ್ಟಿ ಬಳಂಜ ಸಹಿತ ಐದು ಮಂದಿ ಸಾಧಕರಿಗೆ ಇತರ […]