‘ಪುಸ್ತಕ ಮಾತ್ರ ಪ್ರಪಂಚವಲ್ಲ; ಪರಿಸರವನ್ನು ಓದಬೇಕು’

ಬೆಳ್ತಂಗಡಿ: ನಾವು ಈಗ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಭೂಮಿಯಲ್ಲಿ ಜೀವಿಸಲು ಕಷ್ಟವಾಗಬಹುದು ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ (ಬಿ.ಎಡ್) ಉಜಿರೆ ಇಲ್ಲಿ ನಡೆದ ಪರಿಸರ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ರತ್ನಮಾನಸ ವಿದ್ಯಾರ್ಥಿ ನಿಲಯದ ನಿಲಯಪಾಲಕರಾದ ಯತೀಶ್ ಕೆ ಬಳಂಜ ಎಚ್ಚರಿಸಿದರು.ಈಗಿನ ಕಾಲದಲ್ಲಿ ಗಿಡ ನೆಡುವುದು ಕೇವಲ ಪರಿಸರ ದಿನಾಚರಣೆಗೆ ಸೀಮಿತವಾಗಿದೆ. ಪರಿಸರ ನಾಶದಿಂದಾಗಿ ತಾಪಮಾನದ ಏರಿಕೆ ಮಾತ್ರವಲ್ಲ; ಕಾಡಿನಲ್ಲಿನ ಪ್ರಾಣಿಗಳನ್ನು ನಾಡಿನಲ್ಲಿ ಕಾಣುತ್ತಿದ್ದೇವೆ ಹಾಗೂ ವಿವಿಧ ರೀತಿಯ ಆಶ್ರಯ ನೀಡುವ ಆರೋಗ್ಯಕರ ಹಣ್ಣಿನ […]

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮರು ಮೌಲ್ಯಮಾಪನ- ಪ್ರತೀಕ್ ವಿ.ಎಸ್. ರಾಜ್ಯಕ್ಕೆ 7ನೇ ರಾಂಕ್

ಬೆಳ್ತಂಗಡಿ: 2023-2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಬಂದಾಗ 612ಅಂಕ ಗಳಿಸಿದ್ದ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಪ್ರತೀಕ್ ವಿ.ಎಸ್. ಇದೀಗ ಮರುಮೌಲ್ಯಮಾಪನದಲ್ಲಿ 619 ಅಂಕಗಳಿಸಿ ರಾಜ್ಯಕ್ಕೆ 7ನೇ ರಾಂಕ್ ಪಡೆದು ತಾಲೂಕಿಗೆ ದ್ವಿತೀಯ ಸ್ಥಾನಿಯಾಗಿದ್ದಾರೆ. ಇವರು ಬೆಳ್ತಂಗಡಿಯ ಉದ್ಯಮಿ ಲಯನ್ಸ್ ಮಾಜಿ ಪ್ರಾಂತೀಯ ಅಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ ಮತ್ತು ಶಾಲಿನಿ ವಿ. ಶೆಟ್ಟಿ ದಂಪತಿಯ ಪುತ್ರ.

ಹೆದ್ದಾರಿಯಲ್ಲೊಂದು ಅನಧಿಕೃತ ಡೇರೆ

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆಯಿಂದಾಗಿ ಪಾದಾಚಾರಿಗಳದ್ದು ನಿತ್ಯದ ಗೋಳಾಗಿದೆ. ಪಾದಾಚಾರಿಗಳು ರಸ್ತೆ ಬದಿಯಲ್ಲಿ ನಡೆಯಲು ಸಾಕಷ್ಟು ವಾಹನ ಪಾರ್ಕಿಂಗ್‌ಗಳ ಕಿರಿಕಿರಿಯೊಂದಿಗೆ ಕೆಲ ಅನಧಿಕೃತ ಡೇರೆಗಳೂ ಸಮಸ್ಯೆ ಒಡ್ಡುತ್ತಿದೆ.ಇಂತಹ ಅನಧಿಕೃತ ಡೇರೆಯೊಂದು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಮಾರಿಗುಡಿ ದೇವಸ್ಥಾನದ ಎದುರು ತಲೆ ಎತ್ತಿದೆ. ಪ್ರತೀ ಸೋಮವಾರ ವಾರದ ಸಂತೆಯ ದಿನ ಹೆದ್ದಾರಿಯ ಇಕ್ಕೆಲಗಳಲ್ಲೂ ವ್ಯಾಪಾರೀ ಡೇರೆಗಳು ಸಾಮಾನ್ಯ. ಇದೀಗ ಹೆದ್ದಾರಿ ಬದಿಯಲ್ಲಿ ಖಾಯಂ ಆಗಿ ಅನಧಿಕೃತ ಡೇರೆಗಳು ತಲೆ ಎತ್ತಿದರೆ ವಾಹನ […]

ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ನಿಧಿ ವಿತರಣೆ

ಬೆಳ್ತಂಗಡಿ: ಮುಂಡಾಜೆಯ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಆಶ್ರಯದಲ್ಲಿ ಊರ ದಾನಿಗಳ ಸಹಕಾರದಲ್ಲಿ ಮುಂಡಾಜೆಯ ಯಂಗ್ ಚಾಲೆಂಜರ್ಸ್ ಭವನದಲ್ಲಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಶೈಕ್ಷಣಿಕ ನಿಧಿ ವಿತರಣೆ ಕಾರ್ಯಕ್ರಮ ಜರಗಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಪೂರ್ವಾಧ್ಯಕ್ಷ ಸುಜಿತ್ ಎಂ.ಭಿಡೆ; ನಮ್ಮನ್ನು ಗುರುತಿಸಿದವರನ್ನು ಸದಾ ಸ್ಮರಣೆಯಲ್ಲಿಟ್ಟುಕೊಂಡು ಭವಿಷ್ಯದಲ್ಲಿ ಅವರಿಗೆ ನೆರವಾಗುವ ಸಂಕಲ್ಪ ಮಾಡಬೇಕು. ಸಮಾಜವನ್ನು ಕಟ್ಟುವ ಕೆಲಸಕ್ಕೆ ವಿದ್ಯಾರ್ಥಿ ಸಮೂಹ ಮುಂದಾಗಬೇಕಿದ್ದು, ಸಿಗುವ ಅವಕಾಶಗಳನ್ನು ಬಳಸಿಕೊಂಡು ಕಲಿಕೆಯಲ್ಲಿ ಛಲವನ್ನು ಹೊಂದಿ […]

ಬಿಜೆಪಿ ಗೆಲುವು-ಬೆಳ್ತಂಗಡಿಯಲ್ಲಿ ಕಾರ್ಯಕರ್ತರ ಸಂಭ್ರಮಾಚರಣೆ

ಬೆಳ್ತಂಗಡಿ: ಭಾರಿ ಕುತೂಹಲ ಕೆರಳಿಸಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಮತಎಣಿಕೆಯಲ್ಲಿ ಪ್ರಾರಂಭದಿಂದಲೇ ಬಿಜೆಪಿ ಅಭ್ಯರ್ಥಿ ಕ್ಯಾ| ಬೃಜೇಶ್ ಚೌಟ ಮುನ್ನಡೆ ಸಾಧಿಸಿದ್ದು ಅಂತಿಮವಾಗಿ 1,44,522 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅವರು 7,47,002 ಮತಗಳನ್ನು ಪಡೆದು ಜಿಲ್ಲೆ ಬಿಜೆಪಿಯ ಭದ್ರಕೋಟೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಬೆಳ್ತಂಗಡಿಯ ಬಸ್ ನಿಲ್ದಾಣದ ಬಳಿಯಿರುವ ಬಿಜೆಪಿ ಕಚೇರಿ ಮುಂಭಾಗದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಜಯ ಘೋಷ ಕೂಗಿ ಬಿಜೆಪಿ ಅಭ್ಯರ್ಥಿಯ ಗೆಲುವನ್ನು ಸಂಭ್ರಮಿಸಿದರು. ವಿಧಾನ ಪರಿಷತ್ ಸದಸ್ಯ […]

ಐತಿಹಾಸಿಕ ಸಂಶೋಧನೆಗಾಗಿ ಡಾ. ಉಮಾನಾಥ ಶೆಣೈ ಅವರಿಗೆ ಸಮ್ಮಾನ

ಇತ್ತೀಚೆಗೆ ಗುರುವಾಯನಕೆರೆ ವಿದ್ಯಾಸಾಗರ ಕ್ಯಾಂಪಸ್‌ನಲ್ಲಿರುವ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಅಕ್ಷರೋತ್ಸವ ಸಮಾರಂಭದಲ್ಲಿ ವಿಶೇಷ ಐತಿಹಾಸಿಕ ಸಂಶೋಧನೆ ಮಾಡಿರುವ ಡಾ. ಉಮಾನಾಥ ಶೆಣೈಯವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಕಾಲೇಜು ಅಧ್ಯಾಪನದ ಜೊತೆಯಲ್ಲಿ ಡಾ. ಉಮಾನಾಥ ಶೆಣೈ ಅವರು ಅನೇಕ ಪ್ರಾಚೀನ ವಿಚಾರಗಳನ್ನು ಸಂಶೋಧನೆಯ ಮೂಲಕ ಬೆಳಕಿಗೆ ತಂದು, ಅವುಗಳನ್ನು ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನಾಗಿ ಮಂಡಿಸುವ ಮೂಲಕ ವಿದ್ವಾಂಸರ ಹಾಗೂ ಶ್ರೀಸಾಮಾನ್ಯರ ಗಮನಕ್ಕೆ ತರುತ್ತಿದ್ದರು. ನಾಡಿನ ಅನೇಕ ಐತಿಹಾಸಿಕ ಸ್ಥಳಗಳಿಗೆ ತನ್ನ ಕಾಲೇಜು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಕ್ಷೇತ್ರ ಅಧ್ಯಯನ ಕಾರ್ಯ […]

ಹೆದ್ದಾರಿಯೋ….ಸಂತೆ ಅಡ್ಡೆಯೋ….

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಂತೆ ಮಾರುಕಟ್ಟೆಯ ಒಳಗೆ ನಡೆಯುತ್ತಿದ್ದ ಸಂತೆ ಮಾರುಕಟ್ಟೆ ಇಂದು ಬೆಳೆದು ರಾಷ್ಟ್ರೀಯ ಹೆದ್ದಾರಿಯನ್ನೂ ವ್ಯಾಪಿಸಿದೆ. ಪರಿಣಾಮ ವಾಹನ ಸವಾರರು ಮತ್ತು ಪಾದಾಚಾರಿಗಳು ವಾರದ ಸಂತೆಯ ದಿನವಾದ ಸೋಮವಾರ ಪರದಾಡುವಂತಾಗಿದೆ. ಸಂತೆಯ ಪರಿಣಾಮವಾಗಿಯೇ ನಾಲ್ಕಾರು ಸರಣಿ ಅಪಘಾತ ನಡೆದು ಒಂದಂಷ್ಟು ಮಂದಿ ಗಾಯಗೊಂಡರೂ ಪಟ್ಟಣ ಪಂಚಾಯತ್ ಆಡಳಿತವಾಗಲೀ, ತಾಲೂಕು ಆಡಳಿತವಾಗಲೀ ದೀರ್ಘ ನಿದ್ರೆಯಿಂದ ಎಚ್ಚೆತ್ತಂತೆ ಕಾಣುತ್ತಿಲ್ಲ.ಹೌದು, ಇಲ್ಲಿ ಪ್ರತೀ ಸೋಮವಾರ ವಾಹನ ಮಿಸುಕಾಡಲು ತಾಸುಗಟ್ಟಲೆ ಒದ್ದಾಡುವುದು ಸಾಮಾನ್ಯವಾಗಿದೆ. ತುರ್ತು ಚಿಕಿತ್ಸೆಗೆ ರೋಗಿಗಳನ್ನು […]

ನೈತಿಕತೆ ಮರೆತ ಅಧಿಕಾರಿಗಳಿಂದ ಚುನಾವಣಾ ನೀತಿಸಂಹಿತೆ ಉಲ್ಲಂಘನೆ

ಬೆಳ್ತಂಗಡಿ: ಇಲ್ಲಿ ಪರಿಣಾಮ ದುಷ್ಪರಿಣಾಮದ ಪ್ರಶ್ನೆ ಅಲ್ಲ; ಬದಲಾಗಿ ನೈತಿಕತೆಯ ಪ್ರಶ್ನೆ. ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವಾಗಲೇ ನೌಕರರೊಬ್ಬರ ನಿವೃತ್ತಿ ನೆಪದಲ್ಲಿ ಜವಾಬ್ದಾರಿಯುತ ಸರಕಾರಿ ಅಧಿಕಾರಿಗಳು ಸೇರಿ ಭರ್ಜರಿ ಭೋಜನದ ವ್ಯವಸ್ಥೆ ಸಹಿತ ಸಮಾರಂಭ ಏರ್ಪಡಿಸಿದರೆ….. ಇವರಿಗೆ ನೈತಿಕತೆ ಇದೆಯಾ ಎಂಬ ಪ್ರಶ್ನೆ ಜನಸಾಮಾನ್ಯರಲ್ಲೂ ಮೂಡದಿರದು.ಮೇ 31ರಂದು ಬೆಳ್ತಂಗಡಿ ಕೃಷಿ ಇಲಾಖೆಯ ಅಧಿಕಾರಿ ಚಿದಾನಂದ ಹೂಗಾರ್ ಸೇವೆಯಿಂದ ನಿವೃತ್ತರಾಗಲಿದ್ದರು. ಅವರಿಗಾಗಿ ಬೆಳ್ತಂಗಡಿ ಕೃಷಿ ಇಲಾಖೆಯಲ್ಲಿ ಭರ್ಜರಿ ಕಾರ್ಯಕ್ರಮ. ನೂರಾರು ಮಂದಿಗೆ ಭರ್ಜರಿ ಭೋಜನ. ಈ ಕಾರ್ಯಕ್ರಮದಲ್ಲಿ ಚುನಾವಣಾ ನೀತಿಸಂಹಿತೆ […]

ಸರಕಾರಿ ಪ್ರೌಢಶಾಲೆ ಕಾಶಿಪಟ್ಣದಲ್ಲಿ ಶಾಲಾ ಪ್ರಾರಂಭೋತ್ಸವ

ಬೆಳ್ತಂಗಡಿ: ಕಾಶಿಪಟ್ಣ ಸರಕಾರಿ ಪ್ರೌಢ ಶಾಲೆಯಲ್ಲಿ 2024-25ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವು ಶಾಲೆಗೆ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳಿಗೆ ಶಾಲಾಭಿವೃದ್ಧಿ ಸಮಿತಿಯ ಕಾರ್ಯಧ್ಯಕ್ಷ ಯಶೋಧರ ನಲ್ಲರಬೆಟ್ಟು ಹೂಗುಚ್ಛ ನೀಡಿ ಸ್ವಾಗತಿಸುವುದರ ಮೂಲಕ ಉದ್ಘಾಟಿಸಿದರು. ಸರಕಾರದಿಂದ ವಿದ್ಯಾರ್ಥಿಗಳಿಗೆ ಸರಬರಾಜಾದ ಪಠ್ಯಪುಸ್ತಕಗಳನ್ನು ಮತ್ತು ಸಮವಸ್ತ್ರವನ್ನು ಇದೇ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ವಿತರಿಸಿದರು. ಶಾಲಾ ಮುಖ್ಯ ಶಿಕ್ಷಕ ಶಶಿಧರ್ ಕೆ. ಎಲ್ಲರನ್ನು ಸ್ವಾಗತಿಸಿ; 2024-25ನೇ ಶೈಕ್ಷಣಿಕ ವರ್ಷದ ಬಲವರ್ದನೆಗೆ ರೂಪುರೇಷೆಗಳನ್ನು ಪೋಷಕರಿಗೆ ತಿಳಿಯಪಡಿಸಿದರು. ಶಾಲಾ ಶಿಕ್ಷಕ ದೇವುದಾಸ್ ನಾಯಕ್ ಶಾಲಾ […]

‘ದೇವರ ಪೂಜೆ ಯಾವತ್ತೂ ಭಕ್ತರಿಗೋಸ್ಕರ’

ಬೆಳ್ತಂಗಡಿ: ಪೂಜೆ ದೇವರನ್ನು ಒಲಿಸಿಕೊಳ್ಳುವ ಸುಲಭ ಮಾರ್ಗ. ಪೂಜೆಯಿಂದ ನಮ್ಮ ಇಷ್ಟಾರ್ಥ ಸಿದ್ಧಿಯಾಗುವುದು. ತುಪ್ಪದಿಂದ ಹೋಮ ಹವನಾದಿಗಳನ್ನು ಮಾಡುತ್ತೇವೆ. ಹೋಮ ಹವನಾದಿಗಳು ನಮ್ಮ ಸ್ವಾರ್ಥಕ್ಕಾಗಿಯಲ್ಲ; ಧರ್ಮ ಕರ್ಮಗಳು ನಮಗಾಗಿಯಲ್ಲ; ಅದು ಸಮಸ್ತರ ಏಳಿಗೆಗಾಗಿ. ಭಕ್ತಿಯಿಂದ ಧರ್ಮ ಕರ್ಮಗಳನ್ನು ಮಾಡಿದರೆ ಇಡೀ ರಾಷ್ಟ್ರಕ್ಕೆ ಒಳಿತಾಗುವುದು. ನಾವು ದೇವರ ಪೂಜೆ ಮಾಡುವುದು ಯಾವತ್ತೂ ಭಕ್ತರಿಗೋಸ್ಕರ ಎಂದು ಉಡುಪಿ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಗಳವರು ನುಡಿದರು. ಅವರು ಮೇ 31ರಂದು ಬೆಳ್ತಂಗಡಿ ಯ ಲಾಯ್ಲ ಶ್ರೀ ರಾಘವೇಂದ್ರ ಮಠದಲ್ಲಿ […]