ಮತ್ತೆ ಒಂಟಿ ಸಲಗ ಪ್ರತ್ಯಕ್ಷ – ಆತಂಕದಲ್ಲಿ ನಾಗರಿಕರು

ಬೆಳ್ತಂಗಡಿ: ಮತ್ತೆ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದೆ. ಮೇ 14ರ ಬೆಳಗ್ಗೆ ಚಾರ್ಮಾಡಿ ಘಾಟಿಯ ರಾಷ್ಟ್ರೀಯ ಹೆದ್ದಾರಿಯ ಎರಡನೇ ತಿರುವಿನಲ್ಲಿ ತನ್ನ ಸೊಂಡಿಲಿನಲ್ಲಿ ಮರದ ಕೊಂಬೆಯೊಂದನ್ನು ಹಿಡಿದು ಪ್ರತ್ಯಕ್ಷವಾದ ಒಂಟಿ ಸಲಗ ಕೆಲಕಾಲ ನೂರಾರು ವಾಹನಗಳ ಚಾಲಕ ಹಾಗೂ ಪ್ರಯಾಣಿಕರನ್ನು ಆತಂಕದಲ್ಲಿ ಸಮಯ ಕಳೆಯುವಂತೆ ಮಾಡಿದೆ. ಘಾಟಿ ಪ್ರದೇಶದಲ್ಲೂ ಅರಣ್ಯ ನಾಶ ಮಾಡಿ ತನ್ನ ಬದುಕನ್ನು ಕಿತ್ತುಕೊಳ್ಳ ಹೊರಟ ಮನುಕುಲಕ್ಕೆ ಎಚ್ಚರಿಕೆ ನೀಡಲು ರಾಷ್ಟ್ರೀಯ ಹೆದ್ದಾರಿ ಬದಿಗೆ ಬಂದ ಒಂಟಿ ಸಲಗವನ್ನು ಮರಳಿ ಕಾಡಿಗೆ […]

‘ಕುಕೃತ್ಯಗಳಲ್ಲಿ ಧರ್ಮ ಹುಡುಕುವುದು ಸರಿಯಲ್ಲ’ಕಾಜೂರು ಸರ್ವಧರ್ಮೀಯ ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ಮೌಲಾನಾ ಶಾಫಿ.

‘ಬೆಳ್ತಂಗಡಿ; ರಾಜಕೀಯ ಉದ್ದೇಶಕ್ಕಾಗಿ ಯುವಜನರನ್ನು ಪ್ರಚೋದಿಸುವ ಕಾರ್ಯ ಕೆಲ ಸ್ವಾರ್ಥ ರಾಜಕಾರಣಿಗಳಿಂದ ಆಗುತ್ತಿದೆ. ಅಂತವರಿಂದ ಹಿಂದೂ ಮುಸಲ್ಮಾನ ಯುವಜನರನ್ನು ರಕ್ಷಿಸುವ ಕೆಲಸ ಆಗಬೇಕು. ಧರ್ಮದ ಅನುಷ್ಠಾನ ಮತ್ತು ಪರಧರ್ಮದ ಮೇಲಿನ ಗೌರವ ಪಾಲಿಸೋಣ. ಆ ನಿಟ್ಟಿನಲ್ಲಿ ಎಲ್ಲಾ ಧರ್ಮಗಳ ಶ್ರದ್ಧಾ ಕೇಂದ್ರಗಳು ಸಹಿಷ್ಣುತೆಯ ಪಾಠ ಶಾಲೆಗಳಾಗಬೇಕು ಎಂದು ಕರ್ನಾಟಕ ವಕ್ಫ್ ಮಂಡಳಿ ನಿಕಟಪೂರ್ವ ರಾಜ್ಯಾಧ್ಯಕ್ಷ ಮೌಲಾನಾ ಶಾಫಿ ಸ‌ಅದಿ ಹೇಳಿದರು.ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಖ್ಯಾತಿ ಪಡೆದಿರುವ ಸುಮಾರು 800 ವರ್ಷಗಳಿಗೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ […]

‘ದಾದಿಯರು ಆಸ್ಪತ್ರೆಯ ಹೃದಯವಿದ್ದಂತೆ’

‘ಬೆಳ್ತಂಗಡಿ: ಜಗತ್ತು ಕಂಡ ಅಪ್ರತಿಮ ದಾದಿ ಫ್ಲೊರೆನ್ಸ್ ನೈಟಾಂಗಲ್ ಅವರ ಜನ್ಮದಿನ ಮೇ 12ನೇ ದಿನಾಂಕವನ್ನು ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಉಜಿರೆಯ ಬೆನಕ ಹೆಲ್ತ್ ಸೆಂಟರ್‌ನಲ್ಲಿ ಪ್ರತಿ ವರ್ಷ ಇದನ್ನು ಆಚರಿಸಿಕೊಂಡು ಬರುತ್ತಿದ್ದು , ಈ ವರ್ಷ ಕೂಡ ಕೆಲವು ವಿಶೇಷತೆಗಳನ್ನು ಒಳಗೊಂಡಂತೆ ದಾದಿಯರ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೆನಕ ಹೆಲ್ತ್ ಸೆಂಟರ್ ನ ವೈದ್ಯಕೀಯ ನಿರ್ದೇಶಕರಾದ ಡಾ| ಗೋಪಾಲಕೃಷ್ಣ ಕೆ. ಮಾತನಾಡಿ; ಒಂದು ಆಸ್ಪತ್ರೆ ಸರಿಯಾದ ರೀತಿಯಲ್ಲಿ ರೋಗಿಗಳಿಗೆ […]

ಎಸ್‌ಎಸ್‌ಎಲ್‌ಸಿ ಸಾಧಕನಿಗೆ ಸಮ್ಮಾನ

ಬೆಳ್ತಂಗಡಿ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 624ಅಂಕಗಳನ್ನು ಗಳಿಸಿ ರಾಜ್ಯಕ್ಕೇ ದ್ವಿತೀಯ ಸ್ಥಾನಿಯಾದ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಜಿ.ಕೆ. ಚಿನ್ಮಯ್‌ರನ್ನು ಅವರ ನಿವಾಸದಲ್ಲಿ ಬೆಳ್ತಂಗಡಿಯ ಮುಳಿಯ ಜ್ಯುವೆಲರ್ಸ್ ವತಿಯಿಂದ ಅಭಿನಂದಿಸಿ ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಚಿನ್ಮಯ್‌ನ ತಂದೆ ಗಣೇಶ ರಾಮಚಂದ್ರ ಭಟ್, ತಾಯಿ ಮಾಲಿನಿ ಹೆಗಡೆ, ಮುಳಿಯ ಜ್ಯುವೆಲ್ಲರ್ಸ್‌ನ ಸಿಬ್ಬಂದಿಗಳು ಉಪಸ್ಥಿತರಿದ್ದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚಾರ್ಮಾಡಿ ಘಾಟಿಯ ಒಂದನೇ ತಿರುವಿನ ಬಳಿ ಒಂಟಿ ಸಲಗ ಮೇ 12ರ ರಾತ್ರಿ ಕಂಡುಬಂದಿದೆ.ಮೇ 12ರ ರಾತ್ರಿ ಗಂಟೆ 8ರ ಸುಮಾರಿಗೆ ಒಂಟಿ ಸಲಗ ರಸ್ತೆಯ ತೀರಾ ಬದಿಯಲ್ಲಿ ಇದ್ದು ಕೊಂಚ ಹೊತ್ತು ವಾಹನ ಸವಾರರು ಎರಡು ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿದ್ದರು. ಆನೆ ಕಾಡಿನತ್ತ ತಿರುಗುತ್ತಿದ್ದಂತೆ ವಾಹನಗಳು ಓಡಾಟ ನಡೆಸಿದವು. ಕಳೆದ ಎರಡು ದಿನಗಳ ಹಿಂದೆ ಇದೇ ಘಾಟಿ ಪ್ರದೇಶದಲ್ಲಿ ಹಗಲು ಹೊತ್ತು ಒಂಟಿ ಸಲಗ ಕಂಡುಬಂದಿತ್ತು.ಘಾಟಿ ಪರಿಸರದಲ್ಲಿ ಮೇ 12ರಂದು ಉತ್ತಮ […]

ಮೇ 15ರಿಂದ ಕರುಂಬಿತ್ತಿಲ್‌ನಲ್ಲಿ ಸಂಗೀತ ಶಿಬಿರ

ಬೆಳ್ತಂಗಡಿ: ಧರ್ಮಸ್ಥಳ ಸಮೀಪದ ನಿಡ್ಲೆ ಕರುಂಬಿತ್ತಿಲ್ ಮನೆಯಂಗಳದಲ್ಲಿ 24ನೇ ವರ್ಷದ ‘ಸಂಗೀತ ಶಿಬಿರ’ವು ವರ್ಷಂಪ್ರತಿಯಂತೆ ಈ ವರ್ಷವೂ ಮೇ 15 ರಿಂದ 19ರವರೆಗೆ ನಾಡಿನ ಪ್ರಸಿದ್ಧ ಸಂಗೀತ ಕಲಾವಿದರ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯಲಿದೆ. ಸಂಗೀತದೊಳಗಿನ ಆಟ, ಲಯದೊಂದಿಗಿನ ಮೋಜು, ಅಭಿನಯ, ಉಪನ್ಯಾಸ ಮತ್ತು ವಿಶೇಷ ಸಂಗೀತ ಕಚೇರಿಗಳನ್ನೊಳಗೊಂಡ ಕರುಂಬಿತ್ತಿಲ್ ಶಿಬಿರ ಮೇ 15ರಂದು ಬೆಳಿಗ್ಗೆ ಧರ್ಮಸ್ಥಳದ ಪ್ರಕಾಶ್ ದೇವಾಡಿಗ ಅವರ ಮಂಗಳ ವಾದ್ಯದೊಂದಿಗೆ ಪ್ರಾರಂಭಗೊಳ್ಳಲಿದೆ. ಉಡುಪಿ ಶ್ರೀ ಕೃಷ್ಣ ಮಠದ ಭಾವಿ ಪರ್ಯಾಯ ಪೀಠಾಧೀಶ ಶೀರೂರು ಮಠದ ವೇದವರ್ಧನ […]

ಬೆಳ್ತಂಗಡಿ ಬಸ್ ನಿಲ್ದಾಣಕ್ಕೆ ಬಂಗೇರರ ಹೆಸರಿಡಲು ಮನವಿ

ಬೆಳ್ತಂಗಡಿ: 5 ಬಾರಿ ಬೆಳ್ತಂಗಡಿ ಕ್ಷೇತ್ರದ ಶಾಸಕರಾಗಿ, ಕಳೆದ 50 ವರ್ಷದಲ್ಲಿ ಕ್ಷೇತ್ರದ ಬಡ ಜನತೆಯ ಧ್ವನಿಯಾಗಿ ಕೆಲಸ ಮಾಡಿ ಇಹಲೋಕ ತ್ಯಜಿಸಿದ ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸ್ಥಾಪನೆಗೆ ಕಾರಣಕರ್ತರು ಹಾಗೂ ಸಂಘದ ವಾಣಿಜ್ಯ ಸಂಕೀರ್ಣದ ರೂವಾರಿ; ಸಂಘದ ಗೌರವಾದ್ಯಕ್ಷರಾಗಿದ್ದ ವಸಂತ ಬಂಗೇರರ ಹೆಸರಿನಲ್ಲಿ ಬೆಳ್ತಂಗಡಿ ಪೇಟೆಯ ಹೆದ್ದಾರಿಯ ಮುಖ್ಯ ವೃತ್ತದಲ್ಲಿ ಬಂಗೇರರ ಕಂಚಿನ ಪುತ್ಥಳಿ ನಿರ್ಮಿಸಲು ಮತ್ತು ಬೆಳ್ತಂಗಡಿಯಲ್ಲಿ ನಿರ್ಮಾಣವಾಗುತ್ತಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ವಸಂತ ಬಂಗೇರರ ಹೆಸರು ಇಡುವಂತೆ ಕರ್ನಾಟಕದ ಸನ್ಮಾನ್ಯ […]

ಸಮಾಜಕ್ಕಾಗಿ ದುಡಿಯುವ ತುಡಿತವಿರಬೇಕು: ಡಾ. ಹೆಗ್ಗಡೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಡಾ| ಎಲ್.ಎಚ್. ಮಂಜುನಾಥ್ ಅವರ ಬೀಳ್ಕೊಡುಗೆ ಹಾಗೂ ಸಮ್ಮಾನ ಸಮಾರಂಭವು ಮೇ 11ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು.ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿ ಮಾತನಾಡಿ; ಡಾ|ಎಲ್.ಎಚ್. ಮಂಜುನಾಥರವರು ಅದ್ಬುತ ಕೆಲಸಗಳ ಮೂಲಕ ಜನರ ಪ್ರೀತಿ ವಿಶ್ವಾಸ ನಂಬಿಕೆ ಗಳಿಸಿದ್ದಾರೆ. ನಮ್ಮಲ್ಲಿ ಸಮಾಜಕ್ಕಾಗಿ ದುಡಿಯುವ ತುಡಿತವಿರಬೇಕು. ಏನು ಮಾಡಬೇಕು ಎಂಬುದರ ಬಗ್ಗೆ ಜ್ಞಾನವೀರಬೇಕು ಎಂದರು.ಡಾ| ಎಲ್.ಎಚ್. […]

ಅಕ್ರಮ ಗೋಸಾಟ ಪತ್ತೆ

ಬೆಳ್ತಂಗಡಿ: ಕಣಿಯೂರು ಗ್ರಾಮದ ಪದ್ಮುಂಜ ಎಂಬಲ್ಲಿ ಮೇ 11ರ ಮಧ್ಯಾಹ್ನ ಕೆಎ 21 ಬಿ 8892 ನಂಬರಿನ ಪಿಕ್‌ಅಪ್ ವಾಹನದಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ವಿ. ಭರತ್ ಕುಮಾರ್ ಮತ್ತು ಸಿಬ್ಬಂದಿಗಳು; ಪಿಕ್‌ಅಪ್ ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ ವಾಹನದಲ್ಲಿ ಮೂರು ಜಾನುವಾರುಗಳನ್ನು ಅಮಾನುಷವಾಗಿ ತುಂಬಿ ಸಾಗಾಟ ಮಾಡುತ್ತಿದ್ದುದು ಪತ್ತೆಯಾಗಿದೆ. ವಾಹನ ಹಾಗೂ ಜಾನುವಾರುಗಳನ್ನು ಮುಟ್ಟುಗೋಲು ಹಾಕಿದ ಉಪ್ಪಿನಂಗಡಿ ಪೊಲೀಸರು ಆರೋಪಿ ವಾಹನ ಚಾಲಕ ಬಂದಾರು ಗ್ರಾಮದ […]

‘ಮಹಿಳೆಯರಿಗೆ ಕೌಶಲ್ಯದೊಂದಿಗೆ ವ್ಯಕ್ತಿತ್ವ ವಿಕಸನವೂ ಮುಖ್ಯ’

‘ಬೆಳ್ತಂಗಡಿ: ಹೆಣ್ಣು ಮಕ್ಕಳನ್ನು ಪೋಷಕರು ಬೆಳೆಸುವಾಗ ಸಾಮಾನ್ಯವಾಗಿ ಮದುವೆಯ ಬಗ್ಗೆ ಯೋಚನೆ ಮಾಡುತ್ತಾರೆ. ವಿದ್ಯಾಭ್ಯಾಸ ನೀಡುತ್ತಾರೆ. ಆದರೆ ಉದ್ಯೋಗದ ಬಗ್ಗೆ ಯೋಚಿಸುವುದು ಕಡಿಮೆ. ಇಂದಿನ ಹೆಣ್ಣು ಮಕ್ಕಳಿಗೆ ವಿದ್ಯೆಯ ಜೊತೆಗೆ ಉದ್ಯೋಗ ಬೇಕು; ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ‍್ಯ ಬಹು ಮುಖ್ಯವಾಗುತ್ತದೆ. ನಮ್ಮ ಕೈಯಲ್ಲಿ ನಮ್ಮ ದುಡ್ಡು ಇರಬೇಕು. ನಮ್ಮ ಮತ್ತು ಮಕ್ಕಳ ಬೇಕು-ಬೇಡಗಳಿಗೆ, ಸ್ಪಂದಿಸಲು ಅನುಕೂಲವಾಗತ್ತದೆ. ಇನ್ನೂ ಮುಖ್ಯವಾಗಿ ನಮ್ಮ ಮನೋಬಲ ಏನು, ನಮ್ಮ ಒಳಗೆ ಏನು ಆಸೆ ಇದೆ. ನಮ್ಮಲ್ಲಿ ಏನು ಪ್ರತಿಭೆ ಇದೆ. ನಮ್ಮ […]