‘ಮಹಿಳೆಯರಿಗೆ ಕೌಶಲ್ಯದೊಂದಿಗೆ ವ್ಯಕ್ತಿತ್ವ ವಿಕಸನವೂ ಮುಖ್ಯ’

‘ಬೆಳ್ತಂಗಡಿ: ಹೆಣ್ಣು ಮಕ್ಕಳನ್ನು ಪೋಷಕರು ಬೆಳೆಸುವಾಗ ಸಾಮಾನ್ಯವಾಗಿ ಮದುವೆಯ ಬಗ್ಗೆ ಯೋಚನೆ ಮಾಡುತ್ತಾರೆ. ವಿದ್ಯಾಭ್ಯಾಸ ನೀಡುತ್ತಾರೆ. ಆದರೆ ಉದ್ಯೋಗದ ಬಗ್ಗೆ ಯೋಚಿಸುವುದು ಕಡಿಮೆ. ಇಂದಿನ ಹೆಣ್ಣು ಮಕ್ಕಳಿಗೆ ವಿದ್ಯೆಯ ಜೊತೆಗೆ ಉದ್ಯೋಗ ಬೇಕು; ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ‍್ಯ ಬಹು ಮುಖ್ಯವಾಗುತ್ತದೆ. ನಮ್ಮ ಕೈಯಲ್ಲಿ ನಮ್ಮ ದುಡ್ಡು ಇರಬೇಕು. ನಮ್ಮ ಮತ್ತು ಮಕ್ಕಳ ಬೇಕು-ಬೇಡಗಳಿಗೆ, ಸ್ಪಂದಿಸಲು ಅನುಕೂಲವಾಗತ್ತದೆ. ಇನ್ನೂ ಮುಖ್ಯವಾಗಿ ನಮ್ಮ ಮನೋಬಲ ಏನು, ನಮ್ಮ ಒಳಗೆ ಏನು ಆಸೆ ಇದೆ. ನಮ್ಮಲ್ಲಿ ಏನು ಪ್ರತಿಭೆ ಇದೆ. ನಮ್ಮ […]
ಬಸವ ಜಯಂತಿ ಆಚರಣೆ

ಬೆಳ್ತಂಗಡಿ: 12ನೇ ಶತಮಾನದಲ್ಲಿನ ಕುರುಡು ನಂಬಿಕೆ, ಗೊಡ್ಡು ಸಂಪ್ರದಾಯಗಳನ್ನು ತೊಲಗಿಸಿ, ತಮ್ಮ ಅನುಭವ ಮಂಟಪದ ಮೂಲಕ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಪ್ರತಿಪಾದಿಸಿದವರು ಬಸವಣ್ಣ. ಬಸವ ಜಯಂತಿಯ ಆಚರಣೆಯ ಮೂಲಕ ನಾವೆಲ್ಲರೂ ಭಾರತೀಯತೆಯನ್ನು ಬೆಳೆಸಿಕೊಳ್ಳಬೇಕು. ಯಾವ ಧರ್ಮವು ಶ್ರೇಷ್ಠವಲ್ಲ, ಕನಿಷ್ಟವೂ ಅಲ್ಲ ಎಂಬುವುದನ್ನು ತಿಳಿದು ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕೆಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆ.ವಿ.ಎಸ್.ಎಂ. ಪ್ರೌಢಶಾಲೆ ಕಾಂಚನ ಇಲ್ಲಿನ ಮುಖ್ಯ ಶಿಕ್ಷಕ ರಮೇಶ ಮಯ್ಯ ಹೇಳಿದರು.ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಬಸವ […]
ಮನೆಮನೆಯಲ್ಲಿ ಗಮಕ ಕಾರ್ಯಕ್ರಮಕ್ಕೆ ಚಾಲನೆ

ಬೆಳ್ತಂಗಡಿ: ಕನ್ನಡ ಕಾವ್ಯ ಪರಂಪರೆಯ ಪರಿಚಯ ಮತ್ತು ಸಂಸ್ಕೃತಿಯನ್ನು ಉಳಿಸುವ ಹೊಸ ಆಂದೋಲನವನ್ನು ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ ಆರಂಭಿಸಿದೆ. ಮನೆ ಮನೆಗಳಲ್ಲಿ ಗಮಕ ಕಾರ್ಯಕ್ರಮವನ್ನು ನಡೆಸುವ ಅಭಿಯಾನಕ್ಕೆ ಧರ್ಮಸ್ಥಳ ಗ್ರಾಮದ ನಾರ್ಯದ ಜಯರಾಮ ಕುದ್ರೆಂತಾಯರ ಮನೆಯಲ್ಲಿ ಮೇ 7 ರಂದು ಅಧಿಕೃತವಾಗಿ ಚಾಲನೆ ನೀಡಲಾಯಿತು. ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ ಪೂರ್ವಾಧ್ಯಕ್ಷ ಮತ್ತು ಬೆಳ್ತಂಗಡಿ ತಾಲೂಕು ದ್ವಿತೀಯ ಗಮಕ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಜಯರಾಮ ಕುದ್ರೆಂತಾಯರ ಮನೆಯಲ್ಲಿ ‘ಮನೆ ಮನೆ ಗಮಕ ಕಾರ್ಯಕ್ರಮ’ವನ್ನು ಕಲಾ […]
‘ವಿದ್ಯಾರ್ಥಿಗಳು ಸಾಧನೆಯ ಮೂಲಕ ನಾಡಿಗೆ ಕೀರ್ತಿ ತರಬೇಕು’

ಬೆಳ್ತಂಗಡಿ : ಭಾರತೀಯ ವಿಜ್ಞಾನಿಗಳು ಇಸ್ರೋದಲ್ಲಿ ವಿಶೇಷ ಸಾಧನೆ, ಸಂಶೋಧನೆಗಳಿಂದ ನಾಡಿಗೆ ಕೀರ್ತಿ ತಂದಿದ್ದಾರೆ. ರಾಕೆಟ್ ಹಾಗೂ ಉಪಗ್ರಹ ಉಡಾವಣೆಯಲ್ಲಿ ಇಸ್ರೋ ವಿಜ್ಞಾನಿಗಳ ಸಾಧನೆ ಶ್ರೇಷ್ಠ ಹಾಗೂ ಅದ್ವಿತೀಯವಾದುದು. ಚಂದ್ರಯಾನದ ಸಾಧನೆಯ ಯಶಸ್ಸಿಗೆ ಪ್ರಧಾನಿ ಸಹಿತ ಎಲ್ಲೆಡೆಗಳಿಂದ ಅಭಿನಂದನೆ ವ್ಯಕ್ತವಾಗಿದೆ. ಇಸ್ರೋ ಸಂಸ್ಥೆಯಲ್ಲಿ ಗಗನಯಾನಿ ಹಾಗೂ ವಿಜ್ಞಾನಿಗಳಿಗೆ ವಿಫುಲ ಉದ್ಯೋಗಾವಕಾಶವಿದ್ದು, ಅವರಿಗೆ ಎಲ್ಲ ಸವಲತ್ತು ದೊರೆಯಲಿದೆ. ವಿದ್ಯಾರ್ಥಿಗಳು ಬದುಕಿನಲ್ಲಿ ವಿಶೇಷ ಸಾಧನೆಯಿಂದ ನಾಡು ನುಡಿಗೆ ಕೀರ್ತಿ ತರುವಂತವರಾಗಬೇಕು ಎಂದು ಬೆಂಗಳೂರಿನ ಇಸ್ರೋ ಸೆಟ್‌ಲೈಟ್ ಕೇಂದ್ರದ ವಿಜ್ಞಾನಿ ಶ್ರೀನಿವಾಸ್ […]
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ

ಬೆಳ್ತಂಗಡಿ: ಬೆಳ್ತಂಗಡಿ ಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಚಿನ್ಮಯ್ ಜಿ.ಕೆ. ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 624 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿ ಹೆತ್ತವರಿಗೆ ಹಾಗೂ ಶಾಲೆಗೆ ಕೀರ್ತಿ ತಂದಿದ್ದಾನೆ. ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಗಣೇಶ ರಾಮಚಂದ್ರ ಭಟ್ ಹಾಗೂ ಕಲ್ಮಂಜ ಸರಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕಿ ಮಾಲಿನಿ ಹೆಗಡೆಯವರ ಪುತ್ರನಾದ ಜಿ.ಕೆ. ಚಿನ್ಮಯ್; ಎಲ್‌ಕೆಜಿ ಯಿಂದ ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ.ಜಿ.ಕೆ. ಚಿನ್ಮಯ್ ಕನ್ನಡದಲ್ಲಿ-125 ಇಂಗ್ಲಿಷ್-100, […]
ದೈವಗಳ ಗಗ್ಗರ ಸೇವೆ

ಬೆಳ್ತಂಗಡಿ: ಸ್ವಾಮಿ ಸತ್ಯಕೊರಗಜ್ಜ ಕಟ್ಟೆ ಸೇವಾ ಸಮಿತಿ ಮಿಯೊಟ್ಟು ಪಲ್ಕೆ ಸಾವ್ಯ ಇಲ್ಲಿ ಕಲ್ಲುರ್ಟಿ ಹಾಗೂ ಸ್ವಾಮಿ ಕೊರಗಜ್ಜ ದೈವದ ವಾರ್ಷಿಕ ಗಗ್ಗರ ಸೇವೆ ಎಪ್ರಿಲ್ 30ರಂದು ವಿಧಿವಿಧಾನಗಳೊಂದಿಗೆ ಜರುಗಿತು.ಬೆಳಿಗ್ಗೆ ಸ್ಥಳದಲ್ಲಿ ಪುಣ್ಯಾಹಕಲಶ ನಡೆದು ವಿವಿಧ ಕಟ್ಟು ಕಟ್ಟಲೆಗಳಂತೆ ಸ್ಥಳದ ಆರಾಧ್ಯ ದೈವ ಕಲ್ಲುರ್ಟಿಗೆ ಗಗ್ಗರ ಸೇವೆಯೊಂದಿಗೆ ಭಕ್ತರಿಂದ ಹರಕೆ ಸಮರ್ಪಿಸಲಾಗಿಯಿತು. ಬಳಿಕ ಕೊರಗಜ್ಜ ದೈವದ ಗಗ್ಗರ ಸೇವೆ ಜರುಗಿ ಭಕ್ತರಿಂದ ಬಂದ ಬೆಳ್ಳಿಯ ಮುಟ್ಟಾಳೆಯನ್ನು ಒಪ್ಪಿಸಲಾಯ್ತು. ಹಾಗೂ ಭಕ್ತರಿಂದ ಬಂದ ತೆಂಗಿನೆಣ್ಣೆ, ದೀಪದ ಎಣ್ಣೆ, ದನದ […]
ಸೊಸೆಯಿಂದ ಹಲ್ಲೆ – ಜೀವಬೆದರಿಕೆ

ಬೆಳ್ತಂಗಡಿ: ತಿಂಗಳ ಹಿಂದೆ ಪತಿ ಮತ್ತು ಪತಿಯ ಮನೆಯವರೊಂದಿಗೆ ಜಗಳವಾಡಿ, ದೊಡ್ಡ ಮಗನನ್ನು ಅಲ್ಲೇ ಬಿಟ್ಟು ಚಿಕ್ಕ ಮಗನನ್ನು ಕರೆದುಕೊಂಡು ತವರು ಮನೆಗೆ ಹೋಗಿದ್ದ ಸೊಸೆ ಮತ್ತೆ ದೊಡ್ಡ ಮಗನನ್ನು ಕರೆದುಕೊಂಡು ಹೋಗಲು ತನ್ನ ಸಹೋದರನೊಂದಿಗೆ ಪತಿಯ ಮನೆಗೆ ಬಂದು ಪತಿಯ ಮನೆಯಲ್ಲಿ ಗಲಾಟೆ ಮಾಡಿ, ಹಿರಿಯ ಜೀವಕ್ಕೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಘಟನೆ ಮೂಡುಕೋಡಿ ಗ್ರಾಮದಲ್ಲಿ ಮೇ 7ರಂದು ವರದಿಯಾಗಿದೆ. ಬೆಳ್ತಂಗಡಿ ತಾಲೂಕು ವೇಣೂರು ಸಮೀಪದ ಮೂಡುಕೋಡಿ ಗ್ರಾಮದ ನಿವಾಸಿ ವೆಂಕಟರಮಣ ಭಟ್ ಎಂಬವರೇ […]
ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿ-2024 ಪ್ರಧಾನ.

ಬೆಳ್ತಂಗಡಿ: ಉಜಿರೆಯ ಎಸ್‌ಎಲ್‌ವಿ ಕನ್‌ಸ್ಟ್ರಕ್ಷನ್ಸ್‌ನ ಸಿವಿಲ್ ಇಂಜಿನಿಯರ್ ಸಂಪತ್‌ರತ್ನ ರಾವ್ ಅವರಿಗೆ ಮೇ 4ರಂದು ರಾಷ್ಟ್ರ ಮಟ್ಟದ ‘ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿ-2024’ ಪ್ರಧಾನ ಮಾಡಲಾಯಿತು. ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಇಂಡಿಯಾ ಇದರ ಫೌಂಡರ್ಸ್ ಡೇ ಸಮಾರಂಭದಲ್ಲಿ ಮಹಾರಾಷ್ಟ್ರದ ನಾಸಿಕ್‌ನ ರಡಿಸ್ಸನ್ ಬ್ಲೂ ಹೋಟೆಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. . ಸಂಪತ್‌ರತ್ನ ರಾವ್ ಅವರು ಕಳೆದ 30 ವರ್ಷಗಳಿಂದ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಅತ್ಯುತ್ತಮ ಸೇವೆ ಮಾಡಿ ಸಮಾಜದ ಗೌರವಾದರಕ್ಕೆ ಪಾತ್ರರಾದ […]
ವೇಣೂರಿನಲ್ಲಿ ಭಗವಾನ್ ಬಾಹುಬಲಿಸ್ವಾಮಿಗೆ ಮಹಾಮಸ್ತಕಾಭಿಷೇಕ

ಬೆಳ್ತಂಗಡಿ: ವೇಣೂರಿನಲ್ಲಿ ಮೇ 4ರ ರಾತ್ರಿ ಭಗವಾನ್ ಬಾಹುಬಲಿಸ್ವಾಮಿ ಮೂರ್ತಿಗೆ ಈ ಬಾರಿಯ ಕೊನೆಯ ಮಹಾಮಸ್ತಕಾಭಿಷೇಕ ನಡೆಯಿತು.ಮೂಡಬಿದ್ರೆ ಜೈನಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ ಅಜಿಲ, ಶಿವಪ್ರಸಾದ ಅಜಿಲ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮೊದಲಾದವರು ಭಾಗವಹಿಸಿದ್ದರು.ಇನ್ನು 12 ವರ್ಷಗಳ ಬಳಿಕ 2036ರಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನಾ ದಿನಾಚರಣೆ

ಬೆಳ್ತಂಗಡಿ: ನಮ್ಮ ಮಾತೃಭೂಮಿ ಸ್ವರ್ಗಕ್ಕಿಂತ ಮಿಗಿಲಾದುದು. ತಾಯಿ ಭಾಷೆ ಹೃದಯದ ಭಾಷೆ. ರಾಜ್ಯದಲ್ಲಿ ಮಾತೃಭಾಷೆಗೆ ಪ್ರಾಧಾನ್ಯತೆ ಇದ್ದರೂ ರಾಜಧಾನಿಯಲ್ಲೇ ಕನ್ನಡದ ಉಳಿವಿಗೆ ಸವಾಲು ಎದುರಾಗಿದೆ. ಕಾರಣ ಅನ್ಯಭಾಷಿಗರ ಆಕ್ರಮಣ! ಕನ್ನಡ. ಭಾಷೆಯನ್ನು ಮುಂದಿನ ಅನೇಕ ವರ್ಷಗಳವರೆಗೆ ಜೀವಂತವಾಗಿರಿಸಲು ಕನ್ನಡ ನಾಡು, ನುಡಿ, ಸಂಸ್ಕೃತಿ ಭಾಷೆಯ ಸಂವರ್ಧನೆಗೆ ಭಾಷೆಯ ಆಸ್ಮಿತೆಯಾದ ಕನ್ನಡ ಸಾಹಿತ್ಯ ಪರಿಷತ್ತನ್ನು ಬಲಗೊಳಿಸೋಣ ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಹೇಳಿದರು.ಅವರು ಮೇ 5ರಂದು […]