ಜ. 23ರಿಂದ 27 ಬಂಗಾಡಿ ಸಹಸ್ರ ನಾಗಬನ ಪ್ರತಿಷ್ಠಾಃ ಬ್ರಹ್ಮಕಲಶಾಭಿಷೇಕ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಬಂಗಾಡಿಯಲ್ಲಿ ನಂದ ಕುಮಾರ ತಂತ್ರಿ ಹಾಗೂ ವರದರಾಜ ವಾಸುಕೀವನ ಇವರ ಪೌರೋಹಿತ್ಯದಲ್ಲಿ ಸ್ಥಾಪಿತಗೊಂಡಿರುವ ಸಹಸ್ರನಾಗಬನದ ಶ್ರೀ ಸಹಸ್ರ ನಾಗಬ್ರಹ್ಮಲಿಂಗೇಶ್ವರ ದೇವರ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ಶ್ರೀ ಮಹಾಗಣಪತಿ ದೇವರ ಅಷ್ಟಬಂಧ ಪವಿತ್ರ ಬ್ರಹ್ಮ ಕಲಶೋತ್ಸವ ಹಾಗೂ ನಾಗಮಂಡಲೋತ್ಸವ ಜನವರಿ 23ರಿಂದ 27ರವರೆಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರಗಲಿರುವುದು ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ| ಪ್ರದೀಪ್ ಎ. ನಾವೂರು ಹೇಳಿದರು.ಕ್ಷೇತ್ರದಲ್ಲಿ ಜನವರಿ 21ರಂದು ದೇಗುಲದ ವಠಾರದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ […]
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ
ಬೆಳ್ತಂಗಡಿ: ಉಜಿರೆಯಲ್ಲಿ ಫೆಬ್ರವರಿ 3ರಿಂದ 5ರತನಕ ನಡೆಯುವಬದಕ್ಷಿಣ ಕನ್ನಡ ಜಿಲ್ಲೆಯ 25ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಜನವರಿ 22ರಂದು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಸಮ್ಮೇಳನ ಸರ್ವಾಧ್ಯಕ್ಷರಾಗಿರುವ ಡಾ. ಹೇಮಾವತಿ ವೀ. ಹೆಗ್ಗಡೆಯವರಿಗೆ ಆಮಂತ್ರಣ ಪತ್ರಿಕೆಯನ್ನು ನೀಡಿ ಆಹ್ವಾನಿಸಲಾಯಿತು.ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಯದುಪತಿ ಗೌಡ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್. […]
ಆರೋಗ್ಯವಂತರು ರಕ್ತದಾನ ಮಾಡಿ ಇನ್ನೊಂದು ಜೀವ ಉಳಿಸಬೇಕು-ಬಂಗೇರ

ಬೆಳ್ತಂಗಡಿ: ರಕ್ತದಾನ ಜೀವ ಉಳಿಸುವ ಬದುಕಿನ ಪುಣ್ಯದ ಕಾರ್ಯ. ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವ ಶ್ರೇಷ್ಠ ಕಾರ್ಯವನ್ನು ಮಾಡಬೇಕು ಎಂದು ಮಾಜಿ ಶಾಸಕ ಕೆ.ವಸಂತ ಬಂಗೇರ ಹೇಳಿದರು.ಅವರು ಜನವರಿ 15ರಂದು ತನ್ನ 78ನೇ ಹುಟ್ಟುಹಬ್ಬದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಘ (ರಿ) ಮಂಗಳೂರು, ರೆಡ್ ಸೊಸೈಟಿ ಬೆಳ್ತಂಗಡಿ ಹಾಗೂ ಶ್ರೀ ಗುರುದೇವ ಎಜುಕೇಶನ್ ಟ್ರಸ್ಟ್ (ರಿ) ಬೆಳ್ತಂಗಡಿ ಇದರ ಸಹಯೋಗದಲ್ಲಿ ನಡೆಸಿದ ಬೃಹತ್ ರಕ್ತದಾನ ಶಿಬಿರವನ್ನು […]
ಶ್ರೀ ಗುರುದೇವ ಸೊಸೈಟಿಯ 18ನೇ ಶಾಖೆ ಶುಭಾರಂಭ.

ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಪ್ರಧಾನ ಕಚೇರಿ ಬೆಳ್ತಂಗಡಿ ಇದರ 18ನೇ ಶಾಖೆ ಹಿರಿಯಡ್ಕದ ಶ್ರೀ ದುರ್ಗಾ ಕಾಂಪ್ಲೆಕ್ಸ್ ಇಲ್ಲಿ ಜನವರಿ 6ರಂದು ಶುಭಾರಂಭಗೊಂಡಿತು.ಕರ್ನಾಟಕ ಸರಕಾರದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಕಚೇರಿ ಉದ್ಘಾಟಿಸಿ ಮಾತನಾಡುತ್ತಾ; ಸಂಘದ ಬೆಳವಣಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಹಕಾರ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಯನ್ನು ಮಾಡುವಂತೆ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎನ್. ಪದ್ಮನಾಭ ಮಾಣಿಂಜ ವಹಿಸಿದ್ದರು. ಭದ್ರತಾ ಕೋಶದ ಉದ್ಘಾಟನೆ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ […]
‘ಮಕ್ಕಳು ಕಷ್ಟಪಟ್ಟು ಅಲ್ಲ; ಇಷ್ಟಪಟ್ಟು ಕಲಿಯಬೇಕು’

ಬೆಳ್ತಂಗಡಿ: ನಮ್ಮ ವ್ಯಕ್ತಿತ್ವ ವಿಕಸನ ಮತ್ತು ಬುದ್ಧಿವಂತಿಕೆಯು ಅನುವಂಶಿಕತೆ ಮತ್ತು ನಾವು ಬೆಳೆಯುವ ಪರಿಸರವನ್ನು ಅವಲಂಬಿಸಿದೆ ಎಂದು ಬೆಂಗಳೂರಿನ ಖ್ಯಾತ ಲೇಖಕ ಡಾ. ನಾ. ಸೋಮೇಶ್ವರ ಹೇಳಿದರು.ಅವರು ಜನವರಿ 14ರಂದು ಧರ್ಮಸ್ಥಳದಲ್ಲಿ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ ಆಯೋಜಿಸಿದ 28ನೇ ವರ್ಷದ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನಾಧರಿಸಿದ ಸ್ಪರ್ಧೆಗಳ ವಿಜೇತರಿಗೆ ಪುರಸ್ಕಾರ ಸಮಾರಂಭದಲ್ಲಿ ಶುಭಾಶಂಸನೆ ಮಾಡಿ ಮಾತನಾಡಿದರು.ಮನೆಯೇ ಮೊದಲ ಪಾಠಶಾಲೆ; ತಾಯಿಯೇ ಮೊದಲ ಗುರು. ಯಾರೂ ದಡ್ಡರಲ್ಲ. ಪ್ರತಿಯೊಬ್ಬರೂ ಮನೆ, ಶಾಲೆ ಮತ್ತು […]
ಆವಿಷ್ಕಾರಗಳಿಂದ ಹೊಸ ವಿಷಯ ಪರಿಚಯವಾಗಬೇಕು;ನ್ಯಾಶನಲ್ ಬಯೋಫ್ಯುಯೆಲ್ ಎನರ್ಜಿ ಸೊಸೈಟಿ ಉದ್ಘಾಟಿಸಿ ಧರ್ಮಪಾಲಶ್ರೀಗಳು.

ಬೆಳ್ತಂಗಡಿ: ಯೋಜನೆ ಹಾಗೂ ಯೋಚನೆಗಳನ್ನು ಸಹಕಾರಿ ರೂಪದಲ್ಲಿ ಮನೆ ಹಾಗೂ ಮನಗಳಲ್ಲಿ ಯಾವ ಸಂಸ್ಥೆಯು ಮಾಡುತ್ತದೋ ಆದು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಂಗಳೂರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ಧರ್ಮಪಾಲನಾಥ ಸ್ವಾಮೀಜಿ ಹೇಳಿದರು ಅವರು ಜನವರಿ 12ರಂದು ಲಾಯ್ಲ ಗ್ರಾಮದ ಟಿ.ಬಿ. ಕ್ರಾಸ್‌ನಲ್ಲಿರುವ ಗಣೇಶ್ ಪ್ರಸಾದ್ ಕಾಂಪ್ಲೆಕ್ಸ್‌ನಲ್ಲಿ ನ್ಯಾಶನಲ್ ಬಯೋಫ್ಯುಯೆಲ್ ಎನರ್ಜಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಇದರ ಕಚೇರಿ ಉದ್ಘಾಟಿಸಿ, ಹಳೆಪೇಟೆಯ ಶ್ರೀ ಸೀತಾರಾಮ ಕಲಾಮಂದಿರದಲ್ಲಿ ನಡೆದ ಉದ್ಘಾಟನಾ ಸಭಾರಂಭದಲ್ಲಿ ಆಶೀರ್ವಚನ ನೀಡುತ್ತಿದ್ದರು.ಭಗವಂತನು ಭೂಗರ್ಭದಲ್ಲಿ […]
ಮೆಸ್ಕಾಂಗೆ ದಾಕ್ಷಿಣ್ಯವೇ ಮುಳುವಾಯಿತೇ…?

ಬೆಳ್ತಂಗಡಿ: ಸಾಕಷ್ಟು ಬಾರಿ ಎಚ್ಚರಿಸಿದರೂ ಕೆಲ ಮಂದಿ ಇಂದಿಗೂ ವಿದ್ಯುತ್ ಕಂಬಗಳಿಗೆ ಫ್ಲೆಕ್ಸ್ ಅಳವಡಿಸುವುದನ್ನು ಬಿಟ್ಟಿಲ್ಲ. ಇದಕ್ಕೆ ಮೆಸ್ಕಾಂ ಅಧಿಕಾರಿಗಳು ತೋರುವ ಅತಿಯಾದ ಮಾನವೀಯತೆ ಹಾಗೂ ದಾಕ್ಷಿಣ್ಯವೇ ಕಾರಣ ಎಂಬುವುದು ಜನಸಾಮಾನ್ಯರ ಅಭಿಪ್ರಾಯ. ಕಾನೂನಿಗೇ ಸವಾಲಾಗಿ ಈ ರೀತಿಯಾಗಿ ವಿದ್ಯುತ್ ಕಂಬಗಳಲ್ಲಿ ಫ್ಲೆಕ್ಸ್ ಅಳವಡಿಸುವ ಸಮಾಜಘಾತುಕರಿಗೆ ಸರಕಾರಿ ಸೊತ್ತು ದುರ್ಬಳಕೆ ಕಾಯ್ದೆದಡಿ ಪ್ರಕರಣ ದಾಖಲಿಸಿ ದಂಡ ವಸೂಲಿಗೆ ಮೆಸ್ಕಾಂ ಅಧಿಕಾರಿಗಳು ಮುಂದಾದರೆ ಮಾತ್ರ ಇಂತಹ ಘಾತಕ ಶಕ್ತಿಗಳಿಗೆ ಮೂಗುದಾರ ಹಾಕಲು ಸಾಧ್ಯ. ಇಂದಿನ ರಾಜಕಾರಣಿಗಳ ಒತ್ತಡದ ನಡುವೆ […]
ಮಂಗದ ಮೃತದೇಹ ಪತ್ತೆಮಾಹಿತಿ ನೀಡಿದರೂ ಪಂ. ಅಧಿಕಾರಿಗಳ ನಿರ್ಲಕ್ಷ.

ಬೆಳ್ತಂಗಡಿ: ತಾಲೂಕಿನಲ್ಲಿ ಎಲ್ಲಿ ಮಂಗನ ಮೃತದೇಹ ಕಂಡರೂ ಜನಸಾಮಾನ್ಯರಲ್ಲಿ ಮಂಗನ ಕಾಯಿಲೆ ಸಾಂಕ್ರಾಮಿಕ ರೋಗದ ಬಗ್ಗೆ ಭಯ ಮೂಡುವುದು ಸಹಜ. ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಂಗಿಲಬೈಲು ಎಂಬಲ್ಲಿ ಡಿಸೆಂಬರ್ 23ರ ಸಂಜೆಯ ವೇಳೆಗೆ ಮಂಗನ ಮೃತದೇಹವನ್ನು ಕಂಡ ಸ್ಥಳೀಯರು, ಸಹಜ ಭಯದಿಂದ ವಿಚಾರವನ್ನು ಅಳದಂಗಡಿ ಗ್ರಾಮ ಪಂಚಾಯತ್‌ಗೆ ತಿಳಿಸಿದರೂ ಇಲ್ಲಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಸಡ್ಡೆಯಿಂದ ಗ್ರಾಮಸ್ಥರು ತೀವ್ರ ಅಸಮಾಧಾನಗೊಂಡಿದ್ದಾರೆ.ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ನಿರ್ಲಕ್ಷ್ಯದಿಂದಾಗಿ ಇಲ್ಲಿ ಕಂಡುಬಂದ ಮಂಗನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಲಿಲ್ಲ. ಮಂಗನ […]
ವರದಿಯ ಫಲಶ್ರುತಿ – ತೆರವುಗೊಂಡ ಫ್ಲೆಕ್ಸ್ ಹಾಗೂ ಅಲಂಕಾರಿಕ ಲೈಟ್‌ಗಳ ವಯರ್

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹೆದ್ದಾರಿ ಬದಿಯ ವಿದ್ಯುತ್ ಕಂಬಗಳಿಗೆ ಕಾನೂನುಬಾಹಿರವಾಗಿ ಅಳವಡಿಸಲಾದ ಅಲಂಕಾರಿಕ ಲೈಟ್ ಹಾಗೂ ಹೈಮಾಸ್ಟ್ ದಾರಿದೀಪದ ಕಂಬಕ್ಕೆ ಅಳವಡಿಸಲಾದ ಫ್ಲೆಕ್ಸ್ ಬಗ್ಗೆ ‘ಇನ್ನೆಷ್ಟು ಬಲಿ ಬೇಕು ಮೆಸ್ಕಾಂಗೆ ರಾಮಾ…’ ಶಿರೋನಾಮೆಯಲ್ಲಿ ಇಂದು (ಡಿಸೆಂಬರ್ 21) ಬೆಳಿಗ್ಗೆ ವರದಿ ಮಾಡಲಾಗಿತ್ತು.ವರದಿ ನೋಡಿದ ತಕ್ಷಣ ಕಾರ್ಯಕ್ರಮ ಸಂಘಟಕರನ್ನು ಸಂಪರ್ಕಿಸಿದ ಬೆಳ್ತಂಗಡಿ ಮೆಸ್ಕಾಂ ಅಧಿಕಾರಿಗಳು ಹೈಮಾಸ್ಟ್ ಬೀದಿದೀಪದ ಕಂಬಕ್ಕೆ ಅಳವಡಿಸಲಾಗಿದ್ದ ಫ್ಲಕ್ಸ್‌ನ್ನು ಮತ್ತು ವಿದ್ಯುತ್ ಕಂಬಗಳಿಗೆ ಕಟ್ಟಲಾಗಿದ್ದ ಅಲಂಕಾರಿಕ ಬಲ್ಬ್‌ಗಳ ವಯರನ್ನು ಸಂಘಟಕರಿಂದಲೇ ತೆರವುಗೊಳಿಸಿದರು. ಮೆಸ್ಕಾಂ […]
ಇನ್ನೆಷ್ಟು ಬಲಿ ಬೇಕು ಮೆಸ್ಕಾಂಗೆ ರಾಮಾ….

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹೆದ್ದಾರಿ ಬದಿಯ ವಿದ್ಯುತ್ ಕಂಬಗಳಲ್ಲಿ ಅಲಂಕಾರಿಕ ವಿದ್ಯುತ್ ಸಣ್ಣ ಎಲ್‌ಇಡಿ ಬಲ್ಬುಗಳ ಮಾಲೆಗಳನ್ನು ಕಟ್ಟುವ ಮೂಲಕ ಕಾರ್ಮಿಕರು ಅಪಾಯವನ್ನು ಆಹ್ವಾನಿಸಿದ್ದಾರೆ. ಅಂತೆಯೇ ಬೆಳ್ತಂಗಡಿಯ ಶ್ರೀ ಅಯ್ಯಪ್ಪ ದೇವಸ್ಥಾನದ ಎದುರುಗಡೆ ಇರುವ ಹೈಮಾಸ್ಟ್ ಬೀದಿ ದೀಪದ ಕಂಬಕ್ಕೇ ಫ್ಲೆಕ್ಸ್ ಬಿಗಿಯುವ ಮೂಲಕ ಕಾನೂನು ವ್ಯವಸ್ಥೆಗೇ ಸವಾಲು ಹಾಕಿದ್ದಾರೆ. ಇದು ಡಿಸೆಂಬರ್ 21ರ ಬೆಳಗ್ಗೆ ಬೆಳ್ತಂಗಡಿಯಲ್ಲಿ ಕಂಡುಬಂದ ದೃಶ್ಯ. ಇದನ್ನು ಕಂಡ ನನ್ನ ಮನಸ್ಸಲ್ಲಿ ಮೂಡಿದ್ದು ‘ಇನ್ನಷ್ಟು ಬಲಿ ಬೇಕು ಮೆಸ್ಕಾಂಗೆ ರಾಮಾ…’.ಫ್ಲೆಕ್ಸ್ […]