ಮಹತೋಭಾರ ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನ: ನ.6ರ ಸಂಜೆ ತಲುಪಲಿದೆ ನೂತನ ಧ್ವಜಸ್ತಂಭ.

ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ, ಧರ್ಮೋತ್ಥಾನ ಟ್ರಸ್ಟ್‌ನಿಂದ ನವೀಕರಣಗೊಳ್ಳುತ್ತಿರುವ ಮೂಡುಬಿದಿರೆ ತಾಲೂಕು ದರೆಗುಡ್ಡೆಯ ಮಹತೋಭಾರ ಇಟಲ ಶ್ರೀ ಸೋಮನಾಥೇಶ್ವರ ದೇವಾಲಯದ ನೂತನ ಧ್ವಜಸ್ತಂಭವು ಸಿದ್ಧಗೊಂಡಿದ್ದು ಇಂದು ಅಕ್ಟೋಬರ್ 4ರ ಶುಕ್ರವಾರ ಅಪರಾಹ್ನ ಸುಳ್ಯ ತಾಲೂಕಿನ ಗೂನಡ್ಕದಿಂದ ಹೊರಡಲಿರುವ ಧ್ವಜಸ್ತಂಭವು ರಾತ್ರಿವೇಳೆಗೆ ಮೂಡುಬಿದಿರೆ ತಲುಪಿ, ಇಲ್ಲಿನ ಜೈನ ಪದವಿ ಪೂರ್ವ ಕಾಲೇಜಿನಲ್ಲಿ ತಂಗಿ ಅಕ್ಟೋಬರ್ 6ರ ಭಾನುವಾರ ಭವ್ಯ ಮರವಣಿಗೆಯ ಮೂಲಕ ಸಾಗಿ ಸಂಜೆ ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನ […]
ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾದರೂ ಸಂವಿಧಾನ ಸಂಪೂರ್ಣವಾಗಿ ಜಾರಿಯಾಗಿಲ್ಲ.

ಬೆಳ್ತಂಗಡಿ: ಸಂವಿಧಾನವೆಂದರೆ ದೇಶದ ಜನರಿಗೆ ಬದುಕಲು ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟು ಹೋದ ಹಕ್ಕುಪತ್ರ. ಇಂದು ಈ ಸಂವಿಧಾನವೇ ಅಪಾಯದಲ್ಲಿದೆ. ನಮ್ಮನ್ನಾಳುವ ಸರ್ಕಾರಗಳು ಸಂವಿಧಾನ ಜ್ಯಾರಿ ಆಗಿದೆ ಎಂದು ಹೇಳುತ್ತಿವೆ. ಆದರೆ ಸಂವಿಧಾನವು ಸಂಪೂರ್ಣವಾಗಿ ಜಾರಿಯಾಗಿಲ್ಲ.ಕೇವಲ 15% ಇರುವಂಥ ಕೆಲವೇ ಜನರ ಹಿತರಕ್ಷಣೆಗಾಗಿ ಎಷ್ಟು ಬೇಕೋ ಅಷ್ಟು ಮಾತ್ರ ಸಂವಿಧಾನ ಜ್ಯಾರಿಯಾಗಿದೆ ಎಂದು ಬಹುಜನ ಸಮಾಜ ಪಾರ್ಟಿ(ಬಿಎಸ್‌ಪಿ) ಕರ್ನಾಟಕ ರಾಜ್ಯ ಸಂಯೋಜಕರು ಎಂ. ಗೋಪಿನಾಥ್ ಹೇಳಿದರು.ಬಹುಜನ ಸಮಾಜ ಪಕ್ಷ ಸಂವಿಧಾನದ ಸಂರಕ್ಷಣೆಗಾಗಿ ಕರ್ನಾಟಕ ರಾಜ್ಯ ವ್ಯಾಪ್ತಿ ಸಂಚರಿಸುತ್ತಿರುವ […]
ಪರಿಶಿಷ್ಟ ಕೊರಗಪ್ಪರಿಂದ ವಿಶಿಷ್ಟ ಪ್ರತಿಭಟನೆ ಮತ್ತು ಮನವಿ

ಮೂಡುಬಿದಿರೆ: ಪರಿಶಿಷ್ಟ ಜಾತಿಗೆ ಮೀಸಲಿರುವ ಮೂಡುಬಿದಿರೆ ಪುರಸಭೆಯ 16ನೇ ವಾರ್ಡಿಗೆ ಸೂಕ್ತ ಅನುದಾನವನ್ನು ಒದಗಿಸದೆ ಪರಿಶಿಷ್ಟರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿರಿರುವ ಪರಿಶಿಷ್ಟರ ನಾಯಕ ಪುರಸಭಾ ಸದಸ್ಯ ಕೊರಗಪ್ಪ ಅವರು ಶರ್ಟ್ ಬಿಚ್ಚಿ ವಿನೂತನ ಪ್ರತಿಭಟನೆ ನಡೆಸುವ ಜೊತೆಗೆ, ಸ್ವರಾಜ್ಯ ಮೈದಾನದ ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಉದ್ಯಾನವನಕ್ಕೆ ಇತ್ತೀಚೆಗೆ ನಿಧನರಾಗಿರುವ ಗುರುಸ್ಬಾಮಿ ರಮೇಶ ಶಾಂತಿಯವರ ಹೆಸರಿಡುವಂತೆ ಪುರಸಭಾ ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.ಇಂದು (ಅ. 31ರಂದು) ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಪರಿಶಿಷ್ಟರನ್ನು ಪುರಸಭಾಡಳಿತ […]
ಮೇಲ್ಮನವಿಗಳೆಲ್ಲವೂ ತಿರಸ್ಕೃತ – ನ್ಯಾಯಾಲಯಕ್ಕೆ ಶರಣಾದ ಸೋಮನಾಥ ನಾಯಕ್

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಕ್ಷೇತ್ರದ ಸಂಸ್ಥೆಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಮತ್ತು ಅವಮಾನಕರ ಬರವಣಿಗೆ ಮತ್ತು ಹೇಳಿಕೆ ನೀಡಿದ ಪ್ರಕರಣ ಸಂಬಂಧ ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷರಾಗಿರುವ ಸೋಮನಾಥ್ ನಾಯಕ್ ಅವರಿಗೆ ಮೂರು ತಿಂಗಳ ಸಜೆ ಹಾಗೂ 4.5 ಲಕ್ಷ ರೂಪಾಯಿ ಪರಿಹಾರ ನೀಡಲು ಬೆಳ್ತಂಗಡಿ ನ್ಯಾಯಾಲಯ ಈ ಹಿಂದೆ ಆದೇಶ ಮಾಡಿದ್ದು; ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಸೋಮನಾಥ ನಾಯಕ್ ರಾಜ್ಯ ಉಚ್ಛ […]
ಮಿಡ್‌ಟೌನ್ ರೋಟರಿಯಿಂದ ಶಿಕ್ಷಕರ ದಿನಾಚರಣೆ

ಮೂಡುಬಿದಿರೆ: ಇಲ್ಲಿನ ಪ್ರತಿಷ್ಠಿತ ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಮಿಡ್‌ಟೌನ್ ಇದರ ವತಿಯಿಂದ ಅಕ್ಟೋಬರ್ 28ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಕ್ಲಬ್ ಸದಸ್ಯರೆಲ್ಲಾ ಜೊತೆ ಸೇರಿ ದೀಪಾವಳಿ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು. ಸಮಾಜಮಂದಿರ ಸಭಾಭವನದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಡೆದ ಸಮಾರಂಭದಲ್ಲಿ ಯೋಗ ಗುರು, ನಿವೃತ್ತ ಶಿಕ್ಷಕಿ ಪ್ರಫುಲ್ಲಾ ಎಂ. ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಪ್ರಫುಲ್ಲಾ ಎಂ. ಶೆಟ್ಟಿಯವರು ತಮ್ಮ ಅನುಭವವನ್ನು ಹಂಚಿಕೊಂಡರು. ಕ್ಲಬ್ ಅಧ್ಯಕ್ಷ ಪುಷ್ಪರಾಜ್ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ […]
ಡಯಾಲಿಸಿಸ್ ಕೇಂದ್ರದಲ್ಲಿ ಅವ್ಯವಸ್ಥೆ-ರೋಗಿಗಳ ದೂರು

ಬೆಳ್ತಂಗಡಿ: ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ವ್ಯವಸ್ಥೆ ಕಲ್ಪಿಸುತ್ತಿಲ್ಲ ಎಂಬ ದೂರು ರೋಗಿಗಳಿಂದ ಬೆಳ್ತಂಗಡಿ ತಹಶೀಲ್ದಾರ್‌ಗೆ ಬಂದ ಹಿನ್ನೆಲೆಯಲ್ಲಿ ಅಕ್ಟೋಬರ್ 29ರಂದು ದಿಢೀರ್ ಆಸ್ಪತ್ರೆಗೆ ಭೇಟಿ ನೀಡಿ, ಡಯಾಲಿಸಿಸ್ ವಿಭಾಗದಲ್ಲಿ ಅವ್ಯವಸ್ಥೆಯನ್ನು ಕಣ್ಣಾರೆ ಕಂಡು, ಕರ್ತವ್ಯದಲ್ಲಿದ್ದ ತಹಶೀಲ್ದಾರ್ ಪೃಥ್ವಿ ಸಾನಿಕಾಂ ತರಾಟೆಗೆ ತೆಗೆದುಕೊಂಡರು.ತಾಲೂಕು ಆರೋಗ್ಯ ಕೇಂದ್ರ ಬೆಳ್ತಂಗಡಿ ಇಲ್ಲಿಯ ಡಯಾಲಿಸಿಸ್ ವಿಭಾಗದಲ್ಲಿ ಇನ್‌ವರ್ಟರ್ ಸಮಸ್ಯೆಯಿಂದ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂಬ ದೂರು ರೋಗಿಗಳಿಂದ ಬೆಳ್ತಂಗಡಿ ತಹಶೀಲ್ದಾರ್ ಕಚೇರಿಗೆ ಬಂದಿತ್ತು. ಅಕ್ಟೋಬರ್ 29ರಂದು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಾಂ […]
ಸಿಯೋನ್ ಆಶ್ರಮದಲ್ಲಿ ದೀಪಾವಳಿ ಆಚರಣೆ

ಬೆಳ್ತಂಗಡಿ: ಸಿಯೋನ್ ಆಶ್ರಮ ಗಂಡಿಬಾಗಿಲಿನಲ್ಲಿ ಅಕ್ಟೋಬರ್ 26ರಂದು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಿಯೋನ್ ಗೋಶಾಲೆಯಲ್ಲಿ ಗೋವುಗಳಿಗೆ ಹೂವಿನ ಹಾರ ಹಾಕಿ ಗೋಪೂಜೆ ಮಾಡಲಾಯಿತು. ಸಿಯೋನ್ ಸಭಾಂಗಣದಲ್ಲಿ ರಂಗೋಲಿ ಹಾಕಿ ದೀಪ ಹಚ್ಚಿ ವಿವಿಧ ಬಗೆಯ ಪಟಾಕಿಗಳನ್ನು ಸಿಡಿಸಿ ಆಶ್ರಮ ನಿವಾಸಿಗಳೆಲ್ಲರೂ ಸಂಭ್ರಮಿಸಿದರು. ಸಿಯೋನ್ ಸಂಸ್ಥೆಯ ಟ್ರಸ್ಟೀ ಸದಸ್ಯರುಗಳು, ಕುಟುಂಬಸ್ಥರು, ಸಿಬ್ಬಂದಿವರ್ಗದವರು, ಆಶ್ರಮ ನಿವಾಸಿಗಳು ಉಪಸ್ಥಿತರಿದ್ದರು. ವಿವಿಧ ಬಗೆಯ ಸಿಹಿತಿಂಡಿ ಹಾಗೂ ಹಣ್ಣುಹಂಪಲುಗಳನ್ನು ವಿತರಿಸಲಾಯಿತು. ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಭೋಜನವನ್ನು ಹಿತೈಷಿಗಳಾದ ಜಯಪ್ರಕಾಶ್ ಶೆಟ್ಟಿ ಬೆಳ್ತಂಗಡಿ […]
ಸುರತ್ಕಲ್ ಟೋಲ್‌ಗೇಟ್ ಬಳಿ ರಾತ್ರಿಯಿಡೀ ಧರಣಿ ಕುಳಿತ ಅಭಯಚಂದ್ರ

ಮೂಡುಬಿದಿರೆ: ಸುರತ್ಕಲ್ ಅನಧಿಕೃತ ಟೋಲ್‌ಗೇಟ್ ತೆರವು ಬಗ್ಗೆ ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಾ ಇದೆ. ಧರಣಿನಿರತರ ಹೋರಾಟವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಜಿಲ್ಲೆಯ ಸಂಸದರು ಮತ್ತು ಶಾಸಕರುಗಳ ಆಗ್ರಹ ಹಾಗೂ ಸರಕಾರದ ಆದೇಶದಂತೆ ಟೋಲ್‌ಗೇಟ್ ಸುತ್ತಮುತ್ತ ಜಿಲ್ಲಾಡಳಿತ ನಿಷೇಧಾಜ್ಞೆಯನ್ನೂ ಜಾರಿಗೊಳಿಸಿದೆ. ಆದರೂ ಜನಸಾಮಾನ್ಯರಿಂದ ನಿರಂತರವಾಗಿ ಹಣ ದೋಚುತ್ತಿರುವ ಈ ಅನಧಿಕೃತ ಟೋಲನ್ನು ಮುಚ್ಚಿಸಿಯೇ ಸಿದ್ಧ ಎಂದು ಸಂಕಲ್ಪತೊಟ್ಟು ಹೋರಾಟಕ್ಕೆ ಇಳಿದಿರುವ ಮುನೀರ್ ಕಾಟಿಪಳ್ಳ ನೇತೃತ್ವದ ಹೋರಾಟ ಸಮಿತಿಯ ಸದಸ್ಯರು ಅಕ್ಟೋಬರ್ 28ರಂದು ದಿನಪೂರ್ತಿ ಟೋಲ್‌ಗೇಟ್ ಬಳಿ ಧರಣಿ ಕುಳಿತು ಸಂಜೆಯ […]
ಕಲ್ಲಬೆಟ್ಟು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ದೀಪಾವಳಿ ಹಬ್ಬ

ಮೂಡುಬಿದಿರೆ: ಸರಕಾರದಿಂದ ನಡೆಸಲ್ಪಡುವ ಬಡವರ ಹೆಣ್ಣು ಮಕ್ಕಳ ವಸತಿ ಶಾಲೆ ಕಲ್ಲಬೆಟ್ಟು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಲಯನ್ಸ್ ಕ್ಲಬ್ ಮೂಡಬಿದಿರೆ ಇದರ ವತಿಯಿಂದ ಅಕ್ಟೋಬರ್ 27ರಂದು ದೀಪಾವಳಿ ಹಬ್ಬ ಆಚರಿಸಲಾಯಿತು.ಹಿರಿಯ ಲಯನ್ಸ್ ಸದಸ್ಯ, ಮಾಜಿ ಪ್ರಾಂತೀಯ ಅಧ್ಯಕ್ಷ ಪ್ರಮಥ್ ಕುಮಾರ್ ಅವರ ಪ್ರಾಯೋಜಕತ್ವದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲ ಸಂಗಣ್ಣ ಬಸಯ್ಯ ಹಿರೇಮಠ್ ವಹಿಸಿದ್ದರು. ಲಯನ್ಸ್ ಸದಸ್ಯ ವಿನೋದ್ ಕುಮಾರ್ ದೀಪಾವಳಿ ಆಚರಣೆ ಬಗ್ಗೆ ಸವಿಸ್ತಾರವಾಗಿ, ಸ್ವಾರಸ್ಯಪೂರ್ಣವಾಗಿ ವಿವರಿಸಿದರು. ನಿಕಟಪೂರ್ವ ಅಧ್ಯಕ್ಷ ವಿನೋದ್ […]
ರಸ್ತೆ ದುರಸ್ತಿಗೂ ಹೆಗ್ಗಡೆಯವರೇ ಬರಬೇಕಾಯ್ತು.

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿಗೆ ಓರ್ವ ಚುನಾಯಿತ ಆಡಳಿತಾರೂಢ ಬಿಜೆಪಿ ಪಕ್ಷದ ಶಾಸಕರಿದ್ದಾರೆ. ತಾಲೂಕಿನ ಮತದಾರರು ಹೆದ್ದಾರಿಯ ಹೊಂಡಗುಂಡಿಯ ರಸ್ತೆಯಲ್ಲಿ ಸಂಚರಿಸಲು ಪರದಾಡಿ ಸಾಕಷ್ಟು ಬಾರಿ ರಸ್ತೆ ರಿಪೇರಿ ಮಾಡುವಂತೆ ತಮ್ಮ ಬಿಜೆಪಿಯ ಶಾಸಕ ಹರೀಶ್ ಪೂಂಜರಲ್ಲಿ ಪರಿಪರಿಯಾಗಿ ವಿನಂತಿಸಿದರು; ಪ್ರತಿಭಟನೆ ನಡೆಸಿ ಎಚ್ಚರಿಸಲು ನೋಡಿದರು. ಆದರೆ ನಮ್ಮ ಶಾಸಕ ಹರೀಶ್ ಪೂಂಜ ಎಚ್ಚರವಾಗಲೇ ಇಲ್ಲ. ಕಾರ್ಯಕ್ರಮವೊಂದರಲ್ಲಿ ರಸ್ತೆ ದುರಸ್ತಿಗೆ ಮನವಿ ಮಾಡಿದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವರಿಗೆ ಉತ್ತರಿಸಿದ ಶಾಸಕ […]