‘ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಸಮರ್ಥ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು’

ಬೆಳ್ತಂಗಡಿ: ಜಗತ್ತಿನ ಶ್ರೇಷ್ಠ ಸಂಪತ್ತು ಮಾನವ ವ್ಯಕ್ತಿತ್ವವಾಗಿದೆ. ನಾವು ಮೌಲ್ಯಾಧಾರಿತ ಶಿಕ್ಷಣದ ಮೂಲಕ ಸಮರ್ಥ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಬದುಕಿನಲ್ಲಿ ಪುರಸ್ಕಾರ ತಿರಸ್ಕಾರ ಯಾವುದೇ ಇರಲಿ ಸಮಾನವಾಗಿ ಸ್ವೀಕರಿಸುವ ಮನಸ್ಸು ನಮ್ಮಲ್ಲಿರಬೇಕು ಎಂದು ಉಪ್ಪಿನಂಗಡಿ ಗಿರಿಜಾ ಕ್ಲಿನಿಕ್‌ನ ದಂತ ವೈದ್ಯ ಡಾl ರಾಜಾರಾಮ್ ಕೆ. ಬಿ. ಹೇಳಿದರು.ಅವರು ಮಾರ್ಚ್ 26ರಂದು ಬೆಳ್ತಂಗಡಿ ಶ್ರೀ ಗುರು ನಾರಾಯಣ ಸಭಾ ಭವನದಲ್ಲಿ ನಡೆದ ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ 2021-22 ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ದ್ವಿತೀಯ […]

ಕನ್ಯಾಡಿಯಲ್ಲಿ 62ನೇ ವರ್ಷದ ಶ್ರೀ ರಾಮನಾಮ ತಾರಕ ಮಂತ್ರ ಸಪ್ತಾಹ ಎಪ್ರಿಲ್ 3ರಿಂದ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕನ್ಯಾಡಿ ನಿತ್ಯಾನಂದ ನಗರದಲ್ಲಿನ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್‌ನಲ್ಲಿ ಎಪ್ರಿಲ್ 3ರಿಂದ ಎ‌ಪ್ರಿಲ್ 10ರವರೆಗೆ 62ನೇ ವರ್ಷದ ಶ್ರೀ ರಾಮ ತಾರಕ ಮಂತ್ರ ಸಪ್ತಾಹ, ಕ್ಷೇತ್ರದ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾ ಬ್ರಹ್ಮರಥೋತ್ಸವ ನಡೆಯಲಿದೆ ಎಂದು ಕನ್ಯಾಡಿ ದೇವರಗುಡ್ಡೆ ಶ್ರೀಗುರುದೇವ ಮಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ತಿಳಿಸಿದರು.ಅವರು ಮಾರ್ಚ್ 26ರಂದು ಕ್ಷೇತ್ರದಲ್ಲಿ‌ ಪತ್ರಿಕಾಗೋಷ್ಠಿ‌ ಕರೆದು ಏಳು ದಿನಗಳಲ್ಲಿ‌ ನಡೆಯುವ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.ಅಹೋರಾತ್ರಿ ನಡೆಯುವ ರಾಮನಾಮ ತಾರಕ ಮಂತ್ರ ಸಪ್ತಾಹದ ಅಖಂಡ […]

ಲಯನ್ಸ್ ಕ್ಲಬ್ ಸುಲ್ಕೇರಿ ಅಸ್ತಿತ್ವಕ್ಕೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಸುಲ್ಕೇರಿಯಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯ ನೂತನ ಕ್ಲಬ್ ಆರಂಭಗೊಳ್ಳಲಿದೆ. ಸ್ಥಾಪಕ ಅಧ್ಯಕ್ಷರಾಗಿ ಸುಂದರ ಶೆಟ್ಟಿ, ಕಾರ್ಯದರ್ಶಿಯಾಗಿ ರವಿ ಶೆಟ್ಟಿ, ಕೋಶಾಧಿಕಾರಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಾರಾವಿ ಶಾಖಾ ಪ್ರಬಂಧಕ ಸುಧೀರ್ ಎಸ್. ಪಿ. ಆಯ್ಕೆಗೊಂಡಿದ್ದಾರೆ. ಸ್ಥಾಪಕ ಆಡಳಿತ ಮಂಡಳಿಯಲ್ಲಿ ಉಪಾಧ್ಯಕ್ಷರುಗಳಾಗಿ ಸಂತೋಷ್ ಕುಮಾರ್ ಹೆಗ್ಡೆ, ಸುಲ್ಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷ ನಾರಾಯಣ ಪೂಜಾರಿ, ಸುರೇಶ್ ಭಟ್, ದೀಪಕ್ ಶೆಟ್ಟಿ ಕೊಕ್ರಾಡಿ ಆಯ್ಕೆಯಾಗಿದ್ದಾರೆ. ದಯಾಕರ ರೈ ಜೊತೆ ಕಾರ್ಯದರ್ಶಿಯ ಜವಾಬ್ದಾರಿ […]

ಉಚಿತ ಆರೋಗ್ಯ ತಪಾಸಣಾ ಶಿಬಿರ

ಬೆಳ್ತಂಗಡಿ: ಆರೋಗ್ಯ ಶಿಬಿರಗಳ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಮೊದಲ ಹಂತದಲ್ಲಿ ರೋಗ ಪತ್ತೆ ಮಾಡಲು ಅನುಕೂಲವಾಗುತ್ತದೆ ಎಂದು ನೆರಿಯ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕುಶಲ ಕೆ. ಅಭಿಪ್ರಾಯಪಟ್ಟರು. ಅವರು ಮಾರ್ಚ್ 20ರಂದು ಗಂಡಿಬಾಗಿಲಿನ ಸೈಂಟ್ ಥೋಮಸ್ ಚರ್ಚ್ ಸಭಾಂಗಣದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ಗಂಡಿಬಾಗಿಲು ಸೈಂಟ್ ತೋಮಸ್ ಚರ್ಚಿನ ಧರ್ಮಗುರು ವಂದನೀಯ ಮ್ಯಾಥ್ಯೂ ವೆಟ್ಟಂತ್ತಡತ್ತಿಲ್ ಶಿಬಿರದ ಉದ್ಘಾಟನೆಯ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಮಂಗಳೂರು ಪ್ರಸಾದ್ ನೇತ್ರಾಲಯದ ಸಾರ್ವಜನಿಕ ಸಂಪರ್ಕ […]

ಚಂದ್ರಮೋಹನ್ ರೈ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟ

ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ತಾಲೂಕು, ಯುವ ಬಂಟರ ವಿಭಾಗ, ಬಂಟರ ಸಂಘ ಉಜಿರೆ ಗ್ರಾಮ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ನಿವೃತ್ತ ಗ್ರಾಮಲೆಕ್ಕಿಗ ಚಂದ್ರಮೋಹನ್ ರೈ ಸ್ಮರಣಾರ್ಥ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಉಜಿರೆ ಬೆಳಾಲು ರಸ್ತೆಯ ಅಜ್ಜರಕಲ್ಲು ಕ್ರೀಡಾಂಗಣದಲ್ಲಿ ಮಾರ್ಚ್ 20ರಂದು ನಡೆಯಿತು. ಬರೋಡಾ ತುಳು ಕೂಟದ ಅಧ್ಯಕ್ಷ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ದೀಪ ಬೆಳಗಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಾ, ಯುವಕರು ಒಟ್ಟಾಗಿ ಸೇರಿಕೊಂಡು ನಡೆಸುತ್ತಿರುವ ಈ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು […]

ಬಸ್-ಬೈಕ್ ಢಿಕ್ಕಿ; ಬೈಕ್ ಸವಾರರಿಬ್ಬರ ಸಾವು

ಬೆಳ್ತಂಗಡಿ: ಗರ್ಡಾಡಿ ಸಮೀಪದ‌ ನಂದಿಬೆಟ್ಟ ಸಮೀಪ ದ್ವಿಚಕ್ರ ವಾಹನಕ್ಕೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರಿಬ್ಬರೂ ಸಾವನ್ನಪ್ಪಿದ ಘಟನೆ ಮಾರ್ಚ್ 18ರ ಮಧ್ಯಾಹ್ನ ವರದಿಯಾಗಿದೆ. ಮೃತರನ್ನು ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿಯವರು ಎಂದು ಗುರುತಿಸಲಾಗಿದೆ. ಧರ್ಮಸ್ಥಳದಿಂದ ಉಡುಪಿ ಕಡೆ ಚಲಿಸುತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ ವೇಣೂರಿನಿಂದ ಗುರುವಾಯನಕೆರೆ ಕಡೆ ಬರುತಿದ್ದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದ್ದೆನ್ನಲಾಗಿದೆ.ಡಿಕ್ಕಿಯ ರಭಸಕ್ಕೆ ಸವಾರರಿಬ್ಬರೂ ರಸ್ತೆಗೆ ಎಸೆಯಲ್ಪಟ್ಟು ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೊರ್ವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದು […]

ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗುರುವಾಯನಕೆರೆ ನಾಗರಿಕರು;ನಿರ್ಲಜ್ಜ ತಾಲೂಕು ಆಡಳಿತದಿಂದ ನಿರ್ಲಕ್ಷ್ಯ ಧೋರಣೆ

ಬೆಳ್ತಂಗಡಿ: ಕುವೆಟ್ಟು ಗ್ರಾಮದ ಗುರುವಾಯನಕೆರೆಯ ಐತಿಹಾಸಿಕ ಕೆರೆಗೆ ಕಿಡಿಗೇಡಿಗಳು ವಿಷ ಬೆರೆಸಿಯೋ ಅಥವಾ ಸ್ಥಾಪಿತ ಹಿತಾಸಕ್ತ ಪ್ರಭಾವಿಗಳು ಹರಿಸಿದ ಮಲಿನ ನೀರಿನಿಂದಲೋ ಕೆರೆಯಲ್ಲಿರುವ ಲಕ್ಷಾಂತರ ಮೀನುಗಳ ಮಾರಣ ಹೋಮವಾಗಿರುವ ವಿಚಾರ ಮಾರ್ಚ್ 13ರಂದು ಬೆಳಕಿಗೆ ಬಂದಿದೆ. ಮೀನುಗಳ ಮಾರಣ ಹೋಮ ನಡೆದು ದಿನಗಳೆರಡು ಕಳೆದರೂ ನಿರ್ಲಜ್ಜ ತಾಲೂಕು ಆಡಳಿತ ಸತ್ತ ಮೀನುಗಳ ವಿಲೇವಾರಿಗೆ ಯಾವೊಂದು ಕ್ರಮಕ್ಕೂ ಮುಂದಾಗದೇ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಗುರುವಾಯನಕೆರೆ ಪರಿಸರದಲ್ಲಿ ಸತ್ತ ಮೀನುಗಳಿಂದ ಹರಡುವ ದುರ್ನಾತ ಬೀರುತ್ತಿದ್ದು, ನಾಗರಿಕರಲ್ಲಿ ಸಾಂಕ್ರಾಮಿಕ ರೋಗದ ಭೀತಿ […]

ಶ್ರೀ ಗುರುದೇವ ಪದವಿಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟ

ಬೆಳ್ತಂಗಡಿ: ವಿದ್ಯಾರ್ಥಿ ಬದುಕು ಸಾಧನೆಗೆ ಮೆಟ್ಟಿಲು. ಆ ಸಂದರ್ಭ ಇರುವ ಅವಕಾಶಗಳನ್ನು ವಿದ್ಯಾರ್ಥಿಗಳು ಚೆನ್ನಾಗಿ ಬಳಸಿಕೊಂಡು ಸಾಧಕರಾಗಬೇಕು. ಪಠ್ಯ ಚಟುಟಿಕೆಗಳ ಜೊತೆ ಜೊತೆಯಲ್ಲಿ ಕ್ರೀಡೆಯಲ್ಲೂ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು ಎಂದು ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.ಅವರು ಮಾರ್ಚ್ 5ರಂದು ಬೆಳ್ತಂಗಡಿಯ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾರ್ಯಕ್ರಮ ಉದ್ಘಾಟಿಸಿದ ಗೇರುಕಟ್ಟೆ ಸರ್ಕಾರಿ ಪ್ರೌಢಶಾಲೆಯ ದೈಹಿಕ […]

ಮಿಶ್ರ ಬೆಳೆಯಿಂದ ಕೃಷಿಕರು ಹೆಚ್ಚಿನ ಲಾಭಗಳಿಸಬೇಕು-ಪೂಂಜಾ

ಬೆಳ್ತಂಗಡಿ: ಪ್ರಸ್ತುತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಅಡಿಕೆ, ಕಾಳುಮೆಣಸು, ರಬ್ಬರಿಗೆ ಉತ್ತಮ ಧಾರಣೆ ಬರುತ್ತಿದ್ದು; ಇದರಿಂದ ರೈತರ ಆರ್ಥಿಕ ಶಕ್ತಿ ಹೆಚ್ಚಾಗುತ್ತಿದೆ. ಅದೇ ರೀತಿಯಲ್ಲಿ ಭವಿಷ್ಯವನ್ನು ದೃಷ್ಠಿಯನ್ನಿಟ್ಟುಕೊಂಡು ವಾತಾವರಣದ ಸ್ಥಿತಿಗೆ ಅನುಗುಣವಾಗಿ ಸಮ್ಮಿಶ್ರ ಬೆಳೆಯತ್ತ ರೈತರು ಮುಂದಾಗಬೇಕು ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.ಅವರು ಮಾರ್ಚ್ 5ರಂದು ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಉಜಿರೆ ಇದರ ಗುರುವಾಯನಕೆರೆಯಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಸುಳ್ಯ ಎಳನೀರು ಪ್ರದೇಶದಲ್ಲಿ ಅಡಿಕೆಗೆ ಹಳದಿ ರೋಗ […]

‘ಹಿಜಾಬ್’ ಮಧ್ಯಂತರ ತೀರ್ಪು ದುರ್ವ್ಯಾಖ್ಯಾನ ವಿರೋಧಿಸಿ ಫೆ 23 ರಂದು ಎಸ್ಸೆಸ್ಸೆಫ್ ನೇತೃತ್ವದಲ್ಲಿ ಮಂಗಳೂರಿನಲ್ಲಿ ಪ್ರತಿಭಟನೆ

ಬೆಳ್ತಂಗಡಿ; ಇತ್ತೀಚೆಗೆ ಕರಾವಳಿಯಲ್ಲಿ ಹುಟ್ಟಿಕೊಂಡ ಹಿಜಾಬ್ ಪ್ರಕರಣ ತೀವ್ರಸ್ವರೂಪದ ವಿವಾದವಾಗಿ ಮಾರ್ಪಟ್ಟು ಮಕ್ಕಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಿದೆ. ಪರೀಕ್ಷೆಗಳಿಗೆ ದಿನ ಎಣಿಸುತ್ತಿರುವ ಸಂದರ್ಭದಲ್ಲಿ ಇಂತಹ ವಿವಾದಗಳು ವಿದ್ಯಾಭ್ಯಾಸಕ್ಕೆ ಕಂಟಕವಾಗಿದ್ದು, ಪ್ರಜಾಸತ್ತಾತ್ಮಕ ದಾರಿಯಲ್ಲಿ ಇದಕ್ಕೆ ಕೊನೆ ಹಾಡಬೇಕಾಗಿದೆ . ಈ ನಡುವೆ ನ್ಯಾಯಾಲಯ ನೀಡಿರುವ ಮಧ್ಯಂತರ ತೀರ್ಪನ್ನು ದುರ್ವಾಖ್ಯಾನಗೊಳಿಸಿ ಶಿರವಸ್ತ್ರ ಧರಿಸಿದ ವಿದ್ಯಾರ್ಥಿನಿಯರಿಗೆ ಶಿಕ್ಷಣವನ್ನು ನಿರಾಕರಿಸುವ ಪ್ರವೃತ್ತಿ ಕೆಲವು ಸಂಸ್ಥೆಗಳಲ್ಲಿ ಕಂಡುಬಂದಿದ್ದು ಇದು ಅತ್ಯಂತ ಖಂಡನಾರ್ಹ. ಇದರ ವಿರುದ್ಧ ಎಸ್ಸೆಸ್ಸೆಫ್ ಈಸ್ಟ್ ಜಿಲ್ಲೆ ವತಿಯಿಂದ ಮಂಗಳೂರಿನಲ್ಲಿ […]