ಯಕ್ಷಗಾನ ಕಲಾವಿದ ವೇಣೂರು ಸುಂದರ ಆಚಾರ್ಯ ಸಂಸ್ಮರಣೆ

ಬೆಳ್ತಂಗಡಿ: ಭಾವಪೂರ್ಣ ಹಾಸ್ಯಗಾರರಾಗಿದ್ದ ವೇಣೂರು ಸುಂದರ ಆಚಾರ್ಯ ಅವರ ಹಾಸ್ಯದಲ್ಲಿ ರಸವಿತ್ತೇ ಹೊರತು ಕಸವಿರಲಿಲ್ಲ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಯಂ. ಕೆ. ರಮೇಶ್ ಆಚಾರ್ಯ ತೀರ್ಥಹಳ್ಳಿ ಹೇಳಿದರು.ಅವರು ಜುಲೈ 10ರಂದು  ವೇಣೂರಿನ ಶ್ರೀ ಭರತೇಶ ಸಮುದಾಯ ಭವನದಲ್ಲಿ ನಡೆದ ಹಾಸ್ಯಗಾರ ವೇಣೂರು ಸುಂದರ ಆಚಾರ್ಯ ಸಂಸ್ಮರಣಾ ಕಾರ್ಯಕ್ರಮದಲ್ಲಿ ಸಂಸ್ಮರಣೆ ಹಾಗೂ ಅಭಿನಂದನಾ ನುಡಿಗಳನ್ನಾಡಿದರು.ಅವರು ಶೇಣಿ ಗೋಪಾಲಕೃಷ್ಣ ಭಟ್ಟರು ಮೆಚ್ಚಿದ ಹಾಸ್ಯಗಾರರಾಗಿದ್ದರು. ಆಚಾರ್ಯ ಅವರು ದಿವಂಗತರಾದ ಮೇಲೆಯೂ ಅವರ ಸ್ಮರಣೆ ಎಲ್ಲರಲ್ಲಿದೆ. ಸಜ್ಜನರು ನಾಮ […]

ದ.ಕ. ಜಿಲ್ಲಾ ಬಿಜೆಪಿ ಶಾಸಕರುಗಳಿಂದ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ

ಬೆಳ್ತಂಗಡಿ: ರಾಜ್ಯಸಭಾ ಸದಸ್ಯರಾಗಿ ಭಾರತ ಸರಕಾರದಿಂದ ನಾಮನಿರ್ದೇಶನಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು ಜುಲೈ 11ರಂದು ಬೀಡಿನಲ್ಲಿ‌ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಮಂಗಳೂರು ಸಂಸದರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಪುತ್ತೂರು ಶಾಸಕ ಸಂಜೀವ ಮಠಂದೂರು, ಮಂಗಳೂರು ದಕ್ಷಿಣ‌ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್,‌ ಉತ್ತರ ಕ್ಷೇತ್ರದ ಶಾಸಕ ಡಾ| ಭರತ್‌ ಶೆಟ್ಟಿ, ‌ಮೂಡಬಿದ್ರೆ […]

ಮುದ್ರಾಧಾರಣೆಯಿಂದ ಜನ್ಮಾಂತರದ ಪಾಪಕರ್ಮ ದೂರ: ಸುಬ್ರಹ್ಮಣ್ಯಶ್ರೀಗಳು

                               ಬೆಳ್ತಂಗಡಿ: ಆಷಾಢ ಶುದ್ಧ ಏಕಾದಶಿ ದಿನದಂದು  ಸುದರ್ಶನ ಹವನದಲ್ಲಿ ಭಗವಂತನ ಆಯುಧವಾದ ಶಂಖ-ಚಕ್ರ ಚಿಹ್ನೆಯನ್ನು    ಅಭಿಮಂತ್ರಿಸಿ, ತೋಳುಗಳಲ್ಲಿ ಧರಿಸುವುದು ಪರಂಪರೆ ಯಿಂದ ನಡೆದುಕೊಂಡು ಬಂದಿದೆ.  ಮುದ್ರಾಧಾರಣೆಯಿಂದ  ಆರೋಗ್ಯಕರವಾಗಿಯೂ ಭಗವಂತನ ಸಾಮೀಪ್ಯ ಹೊಂದಲು  ಸಹಕಾರಿಯಾಗಿ  ಜನ್ಮಾಂತರದ ಪಾಪಕರ್ಮಗಳು ಪರಿಹಾರವಾಗುವುದೆಂದು ಶಾಸ್ತ್ರೀಯವಾಗಿಯೂ  ನಂಬಿಕೊಂಡು ಬರಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳವರು ನುಡಿದರು.    […]

ಬಹುಜನ ಚಳವಳಿ ನಾಯಕ ಪಿ. ಡೀಕಯ್ಯ ನಿಧನ

ಬೆಳ್ತಂಗಡಿ: ಮೆದುಳಿನ ರಕ್ತಸ್ರಾವದಿಂದ ಗಂಭೀರ ಸ್ಥಿತಿಯಲ್ಲಿದ್ದ ಬಹುಜನ ಚಳುವಳಿಯ ಹಿರಿಯ ನಾಯಕ, ಅಂಬೇಡ್ಕರ್ ವಾದಿ ಪಿ. ಡೀಕಯ್ಯ(63) ನವರು ಜುಲೈ 9ರಂದು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಜನ ಚಳುವಳಿಯನ್ನು ಕಟ್ಟಿ ಬೆಳೆಸುವುದರಲ್ಲಿ ಡೀಕಯ್ಯ ಅವರ ಪಾತ್ರ ಅತ್ಯಂತ ಹಿರಿದು. ಜಿಲ್ಲೆಯ ಗ್ರಾಮ ಗ್ರಾಮಗಳಲ್ಲಿ ಸಂಚರಿಸಿ ಚಳವಳಿಯನ್ನು ಕಟ್ಟಿದವರು  ಪಿ.ಡೀಕಯ್ಯನವರು.  ದೇಶದ ಇತಿಹಾಸದ ಜೊತೆಗೆ ತುಳುನಾಡಿನ ಇತಿಹಾಸವನ್ನೂ ಅರೆದು ಕುಡಿದಿದ್ದರು. ತುಳುನಾಡಿನಲ್ಲಿ ತಮ್ಮದೇ ಶೈಲಿಯಲ್ಲಿ ಬಹುಜನ ಚಳವಳಿಯನ್ನು ಕಟ್ಟಿದವರು. ಅವರು ಸಾಕಷ್ಟು ಯುವ ನಾಯಕರನ್ನು […]

ಬೀದಿಬದಿ ವ್ಯಾಪಾರಿಗಳಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ

ಬೆಳ್ತಂಗಡಿ: ಪಟ್ಟಣ ಪಂಚಾಯತ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ ವತಿಯಿಂದ ದೀನದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ನಗರ ಬೀದಿ ವ್ಯಾಪಾರಿಗಳ ಬೆಂಬಲ ಉಪ ಘಟಕದಡಿ ಬೀದಿ ಬದಿ ವ್ಯಾಪಾರಿಗಳಿಗೆ 2 ದಿನಗಳ ಸಾಮರ್ಥ್ಯ ಅಭಿವೃದ್ದಿ ತರಬೇತಿ ಕಾರ್ಯಾಗಾರವು ಬೆಳ್ತಂಗಡಿ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಜುಲೈ 6ರಂದು ಆರಂಭಗೊಂಡಿತು. ಬೆಳ್ತಂಗಡಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಾಗಾರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಇವರು […]

ಎನ್‌ಸಿಸಿ ಶಿಬಿರದ ಸಮಾರೋಪ ಸಮಾರಂಭ

ಬೆಳ್ತಂಗಡಿ: 18 KAR BN ಎನ್‌ಸಿಸಿ ವಿಭಾಗದ 2022-23ನೇ ಶೈಕ್ಷಣಿಕ ವರ್ಷದ ಮೊದಲ ವಾರ್ಷಿಕ ತರಬೇತಿ ಶಿಬಿರವು ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಮುಕ್ತಾಯಗೊಂಡಿತು2022ರ ಜೂನ್ 23ರಿಂದ ಹತ್ತು ದಿನಗಳ ಕಾಲ ಈ ಶಿಬಿರವು ನಡೆಯಿತು. ಆಡಳಿತ ಅಧಿಕಾರಿ 18 KAR BN ಎನ್‌ಸಿಸಿ ಕರ್ನಲ್ ಅಮಿತಾಬ್ ಸಿಂಗ್, 18 KAR BN ಎನ್‌ಸಿಸಿ ರಾಜು ಗುರುಂಗ್ ಎಸ್‌. ಎಂ. ಉಪಸ್ಥಿತರಿದ್ದರುಈ ವಾರ್ಷಿಕ ತರಬೇತಿ ಶಿಬಿರವನ್ನು ನಡೆಸಲು ಅನುಮತಿಸಿದ ಸೇಕ್ರೆಡ್ ಹಾರ್ಟ್ ಸಂಸ್ಥೆಯ ಸಂಚಾಲಕರಾದ ವಂದನೀಯ ಬಾಸಿಲ್ […]

ಬೆಳ್ತಂಗಡಿಯಲ್ಲಿ ಭೂಕಂಪ?-ವದಂತಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕೆಲವೆಡೆ ಭೂಕಂಪನವಾದ ಬಗ್ಗೆ ವದಂತಿಗಳು ಹರಿದಾಡುತ್ತಿದ್ದು; ಈ ಬಗ್ಗೆ ತಾಲೂಕು ಆಡಳಿತ ಯಾವುದೇ ದೃಢೀಕರಣ ನೀಡಿಲ್ಲ. ಈ ಭೂಕಂಪನ ಎಲ್ಲಿ ಎಷ್ಟು ಹೊತ್ತಿಗೆ ಆಯಿತು ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಾಗಿದೆ.

ಹೊಸ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ’

ಬೆಳ್ತಂಗಡಿ: ಸರಕಾರ ಜ್ಯಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020, ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳನ್ನು ಕಲ್ಪಿಸುವ ಪ್ರಯತ್ನವಾಗಿದೆ ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್.  ಹೇಳಿದರು.ಅವರು ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾಲಯ ಸಸ್ಯಶಾಸ್ತ್ರ ಬೋಧಕರ ಸಂಘ ಮತ್ತು ‘ವನಶ್ರೀ’ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಜರಗಿದ ಒಂದು ದಿನದ ಪಠ್ಯಕ್ರಮ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನೂತನ ಶಿಕ್ಷಣ ನೀತಿ ವಿದ್ಯಾರ್ಥಿಗಳ […]

ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ’

ಬೆಳ್ತಂಗಡಿ: ಸರಕಾರ ಜ್ಯಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020, ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳನ್ನು ಕಲ್ಪಿಸುವ ಪ್ರಯತ್ನವಾಗಿದೆ ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್.  ಹೇಳಿದರು.ಅವರು ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾಲಯ ಸಸ್ಯಶಾಸ್ತ್ರ ಬೋಧಕರ ಸಂಘ ಮತ್ತು ‘ವನಶ್ರೀ’ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಜರಗಿದ ಒಂದು ದಿನದ ಪಠ್ಯಕ್ರಮ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನೂತನ ಶಿಕ್ಷಣ ನೀತಿ ವಿದ್ಯಾರ್ಥಿಗಳ […]

ಬೆಳಾಲು ಪ್ರೌಢಶಾಲೆಯಲ್ಲಿ ‘ಬಾರಿಸು ಕನ್ನಡ ಡಿಂಡಿಮ’

ಬೆಳ್ತಂಗಡಿ: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ ಮತ್ತು ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಜಂಟಿ ಆಶ್ರಯದಲ್ಲಿ ಬೆಳಾಲು ಗ್ರಾಮದ ಪ್ರೌಢಶಾಲೆ ಮತ್ತು ಎಲ್ಲ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗಾಗಿ ‘ಬಾರಿಸು ಕನ್ನಡ ಡಿಂಡಿಮ’ ಕನ್ನಡ ಗೀತೆಗಳ ಗಾಯನ ಮತ್ತು ಕಥೆ-ಕವನ ಕಟ್ಟುವುದರ ಕುರಿತು ತರಬೇತಿ ಕಾರ್ಯಕ್ರಮ ಜರಗಿತು. ಉದ್ಘಾಟಕರಾಗಿ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ. […]