‘ಸಾಧನೆಯ ಹಾದಿ’ ಕೃತಿ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆ

ಬೆಳ್ತಂಗಡಿ: ಯುವ ಸಾಹಿತಿ ಬಹುಮುಖ ಪ್ರತಿಭೆಯ ಚಂದ್ರಹಾಸ ಬಳಂಜರವರ ‘ಸಾಧನೆಯ ಹಾದಿಗೆ’ ಕೃತಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಯಲ್ಲಿ ದಾಖಲಿಸಿ, ಅವರ ಸಾಧನೆಗೆ ಇನ್ನೊಂದು ಗರಿ ಮೂಡಿಸಿದೆ. ಬಹುಮುಖ ಪ್ರತಿಭೆಯಾಗಿ ಗುರುತಿಸಿ ಕೊಂಡಿರುವ ಅ ವರು ಒಬ್ಬ ಯುವ ಸಾಹಿತಿ, ವಾಗ್ಮಿ, ನಿರೂಪಕ, ಹಾಡುಗಾರ, ನೃತ್ಯಪಟು, ನಟ ಮತ್ತು ತರಬೇತುದಾರ. ಸಾಂಸ್ಕ್ರತಿಕ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವ ಇವರು ಹಲವಾರು ಕಾರ್ಯಕ್ರಮಗಳನ್ನು ಸಂಯೋಜಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಿದ್ದು, ಹಲವಾರು […]
ಯೋಗ ತರಬೇತಿ ಶಿಬಿರದ ಸಮಾರೋಪ

ಬೆಳ್ತಂಗಡಿ: ಯೋಗಾಭ್ಯಾಸವು ನಮ್ಮ ದಿನಚರಿಯ ಅವಿಭಾಜ್ಯ ಅಂಗವಾಗಬೇಕು. ಅನೇಕ ಒತ್ತಡಗಳ ಮಧ್ಯೆ ಜೀವನ ಸಾಗಿಸುವ ಇಂದಿನ ಸಂದರ್ಭದಲ್ಲಿ ಪ್ರತಿ ದಿನ ಯೋಗಾಭ್ಯಾಸಕ್ಕಾಗಿ ಸಮಯ ಮೀಸಲಿಟ್ಟು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ ಡಾl ಅಶ್ವಿನ್ ಹೇಳಿದರುಅವರು ಜೂನ್ 20ರಂದು ಬೆಳ್ತಂಗಡಿಯ ಸಂತೋಮ್ ಟವರ್ ಸಭಾಂಗಣದಲ್ಲಿ 8ನೇ ವಿಶ್ವ ಯೋಗ ದಿನಾಚರಣೆ ನಿಮಿತ್ತ ಶ್ರೀ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ […]
ನಾಲ್ಕು ವರ್ಷದಲ್ಲಿ ಮೂರು ಸಾವಿರ ಹಕ್ಕುಪತ್ರ ವಿತರಣೆ-ಪೂಂಜ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಹಕ್ಕುಪತ್ರವನ್ನು ನಿರಂತರವಾಗಿ ವಿತರಿಸುವ ಮೂಲಕ ಉತ್ತಮ ವ್ಯವಸ್ಥೆಗಳನ್ನು ಜನರಿಗೆ ಮಾಡುವ ದೃಷ್ಟಿಯಿಂದಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ 4 ವರ್ಷಗಳ ಅವಧಿಯಲ್ಲಿ ಸುಮಾರು 3 ಸಾವಿರ ಹಕ್ಕುಪತ್ರಗಳನ್ನು ವಿತರಿಸುವ ಕೆಲಸ ಶಾಸಕನಾಗಿಮಾಡಿದ್ದೇನೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.ಅವರು ಜೂನ್ 20ರಂದು ಬೆಳ್ತಂಗಡಿ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಕಂದಾಯ ಇಲಾಖೆ ವತಿಯಿಂದ ಅರ್ಹ ಫಲಾನುಭವಿಗಳಿಗೆ 94ಸಿ, 94ಸಿಸಿ ಹಕ್ಕುಪತ್ರ ವಿತರಿಸಿ ಮಾತನಾಡುತ್ತಿದ್ದರು. ಸರಕಾರದ ಜನಪರ ಯೋಜನೆಗಳು ತಾಲೂಕಿನ ಕಟ್ಟ ಕಡೆಯ ವ್ಯಕ್ತಿಗೂ ತಲುಪ […]
ಉಚಿತ ಆರೋಗ್ಯ ತಪಾಸಣಾ ಶಿಬಿರ

ಬೆಳ್ತಂಗಡಿ: ಎನ್. ಎಸ್. ಗೋಖಲೆ ಸಂಸ್ಮರಣಾ ಸಮಿತಿಯ ಆಶ್ರಯದಲ್ಲಿ ಯೆನಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ,ದೇರಳಕಟ್ಟೆ ಮಂಗಳೂರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಡಾಜೆಯ ಸಹಭಾಗಿತ್ವದಲ್ಲಿ, ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಭಜಕರು, ಚಿತ್ಪಾವನ ಸಂಘಟನೆ ಮುಂಡಾಜೆ, ರೋಟರಿ ಸಮುದಾಯದಳ ಮುಂಡಾಜೆ, ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ಮುಂಡಾಜೆ ಇವರ ಸಹಕಾರದಲ್ಲಿ ಜೂನ್ 19ರಂದು ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಸಭಾಭವನದಲ್ಲಿ ಉಚಿತ ವೈದ್ಯಕೀಯ ಶಿಬಿರ, ನೇತ್ರ ತಪಾಸಣೆ […]
ಶ್ರೀ ಕ್ಷೇತ್ರ ದೇಲಂಪುರಿಯಲ್ಲಿ ನಿಧಿಕುಂಭ ಷಡಾಧಾರ ಪ್ರತಿಷ್ಠೆ

ಬೆಳ್ತಂಗಡಿ: ಸೃಷ್ಟಿಯ ಎಲ್ಲಾ ತತ್ವಗಳು ಪ್ರತಿಯೊಂದು ದೇವಾಲಯಗಳಲ್ಲಿದೆ ಎಂದು ವಾಸ್ತು ತಜ್ಞ ಪ್ರಸಾದ ಮುನಿಯಂಗಳ ಹೇಳಿದರು.ಅವರು, ಜೀರ್ಣೋದ್ಧಾರಗೊಳ್ಳುತ್ತಿರುವ ವೇಣೂರು ಸನಿಹದ ಕರಿಮಣೇಲು ಗ್ರಾಮದ ಶ್ರೀಕ್ಷೇತ್ರ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದ ನಿಧಿ ಕುಂಭಾದಿ ಷಡಾಧಾರ ಪ್ರತಿಷ್ಠೆ ಸಂದರ್ಭ ಜೂನ್ 19ರಂದು ನಡೆದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡುತ್ತಿದ್ದರು.ಲೋಕಕ್ಕೆ ಅನುಗ್ರಹ ಸಿಗಬೇಕಾದರೆ ಭಗವಂತನ ಪ್ರತಿಷ್ಠೆ ಅಗತ್ಯ. ದೈವಿಕ ಚಿಂತನೆ ಮಾಡಲು ಅತ್ಯಂತ ಸರಳ ವಿಧಾನ ಪ್ರತಿಮಾ ಪೂಜೆಯಾಗಿದೆ. ದೇಹದ ರಚನೆಯಂತೆ ದೇವಾಲಯವೂ ಇರುತ್ತದೆ. ಪಂಚತತ್ವಗಳನ್ನು ದೇವಸ್ಥಾನದಲ್ಲಿ ಕಾಣಬಹುದಾಗಿದೆ. […]
ನಿವೃತ್ತ ಶಿಕ್ಷಕರಿಗೆ ಅಭಿವಂದನೆ

ಬೆಳ್ತಂಗಡಿ: ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಪದವೀಧರೇತರ ಮುಖ್ಯ ಶಿಕ್ಷಕ ಮೋನಪ್ಪ ಕೆ., ಗಾರ್ಡಿಯನ್ ಏಂಜೆಲ್ ಅನುದಾನಿತ ಶಾಲೆ ಮಡಂತ್ಯಾರು ಇಲ್ಲಿನ ಮುಖ್ಯ ಶಿಕ್ಷಕಿ ಜೆಸಿಂತಾ ಮೆಟಿಲ್ಡಾ ಲೊಬೊ ಮತ್ತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೋಣಂದೂರು ಇಲ್ಲಿನ ಸಹಶಿಕ್ಷಕಿ ವಿಜಯಲಕ್ಷ್ಮಿ ಈ ಮೂರು ಮಂದಿ ನಿವೃತ್ತ ಶಿಕ್ಷಕರಿಗೆ ಪುಂಜಾಲಕಟ್ಟೆ ಸಮೂಹ ಸಂಪನ್ಮೂಲ ಕೇಂದ್ರದ ಸಮಸ್ತ ಶಿಕ್ಷಕರ ಪರವಾಗಿ ಅಭಿಮಾನ ಪೂರ್ವಕವಾಗಿ ಸಮ್ಮಾನಿಸಿ ಅಭಿವಂದಿಸಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ ಪಬ್ಲಕ್ ಸ್ಕೂಲ್ ಪುಂಜಾಲಕಟ್ಟೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಯರಾಮ್ […]
ಅಪರಿಚಿತ ವ್ಯಕ್ತಿಯ ಶವ ಬಾವಿಯಲ್ಲಿ ಕೊಳೆತ ಪತ್ತೆ

ಬೆಳ್ತಂಗಡಿ: ಉಜಿರೆ ಗ್ರಾಮದ ನಾಗರಾಜ್ ಕಾಂಪೌಂಡ್‌ನ ಶಂಕರ್ ಶೆಟ್ಟಿ ಎಂಬವರ ಮನೆಯ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಜೂನ್ 19ರಂದು ಪತ್ತೆಯಾಗಿದೆ.ಮೈಸೂರಿನಲ್ಲಿ ಹೊಟೇಲ್ ಹೊಂದಿರುವ ಉದ್ಯಮಿಯಾಗಿರುವ ಉಜಿರೆ ಗ್ರಾಮದ ನಾಗರಾಜ್ ಕಾಂಪೌಂಡ್ ನಿವಾಸಿ ಶಂಕರ್ ಶೆಟ್ಟಿ ಮತ್ತು ಕುಟುಂಬ ಮೈಸೂರಿನಲ್ಲಿ ವಾಸ್ತವ್ಯ ಇರುವುದು; ರಜೆ ಇರುವ ಸಂದರ್ಭ ಉಜಿರೆ ಮನೆಗೆ ಬಂದು ಹೋಗುತ್ತಿದ್ದರು.ಜೂನ್ 19ರಂದು ಶಂಕರ್ ಶೆಟ್ಟಿ ಮನೆಯ ಕಾಂಪೌಂಡ್ ಒಳಗಿನಿಂದ ದುರ್ವಾಸನೆ ಬರುತ್ತಿತ್ತು ಎನ್ನಲಾಗಿದ್ದು, ಪಕ್ಕದ ಮನೆಯ ನಿವಾಸಿ ಶ್ರೀಧರ್ ಗೌಡ ಎಂಬವರು […]
ಭಾರತೀಯ ಸೈನ್ಯದ ಲೆಫ್ಟಿನೆಂಟ್ ಹುದ್ದೆಗೆ ಆಯ್ಕೆ

ಬೆಳ್ತಂಗಡಿ: ಬೆಳ್ತಂಗಡಿಯ ಅಲ್ಲಾಟಬೈಲು ಬಡಾವಣೆಯ ನಿವಾಸಿ ಪುಂಜಾಲಕಟ್ಟೆ ಪ್ರಥಮದರ್ಜೆ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಗಣಪತಿ ಭಟ್ ಕುಳಮರ್ವ ಮತ್ತು ನಡ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ವಸಂತಿ ಕುಳಮರ್ವರ ಪುತ್ರ ಸಾತ್ವಿಕ್ ಕುಳಮರ್ವ ಭಾರತೀಯ ಸೈನ್ಯದ ಲೆಫ್ಟಿನಂಟ್ ಹುದ್ದೆಗೆ ಆಯ್ಕೆಯಾಗಿದ್ದಾರೆ.ದೂರದ ಅಮೇರಿಕಾದಲ್ಲಿ ಅರಿಝೋನಾ ಯುನಿವರ್ಸಿಟಿಯಲ್ಲಿ ಎಂ.ಎಸ್. ಪದವಿ ಪಡೆದ ಬಳಿಕ ಎರಡು ವರ್ಷಗಳ ಕಾಲ ಅಲ್ಲೇ ಉದ್ಯೋಗ ನಿರ್ವಹಿಸಿದ ಸಾತ್ವಿಕ್ ಕುಳಮರ್ವ ಭಾರತೀಯ ಸೇನೆ ಸೇರಬೇಕೆಂಬ ತುಡಿತದಿಂದ ಅಮೇರಿಕಾದಲ್ಲಿದ್ದ ಉದ್ಯೋಗವನ್ನು ತ್ಯಜಿಸಿ ತಾಯ್ನಾಡಿಗೆ ಮರಳಿದರು. ಭಾರತೀಯ ಸೇನೆಗೆ […]
ಡಾ. ಬಿ. ಯಶೋವರ್ಮ ಎಲ್ಲರಿಗೂ ಪ್ರೇರಣಾ ಶಕ್ತಿಯಾಗಿದ್ದರು ಡಾ. ಬಿ. ಯಶೋವರ್ಮರ ನುಡಿನಮನ ಕಾರ್ಯಕ್ರಮದ ಲ್ಲಿ ಎನ್. ಜಿ.ಪಟವರ್ಧನ್

ಬೆಳ್ತಂಗಡಿ: ಡಾ. ಬಿ. ಯಶೋವರ್ಮ ಅವರು ಸ್ನೇಹಮಯಿಯಾಗಿ ಮಾನವೀಯ ಮೌಲ್ಯ ಹಾಗೂ ಸಂಬಂಧಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದವರು. ಅವರು ತಾಲೂಕಿನ ಸಾಹಿತ್ಯ ಪರಿಷತ್ತಿನ ಬೆಳವಣಿಗೆಗೆ ಸಲ್ಲಿಸಿರುವ ಸೇವೆ ಅನನ್ಯವಾದುದು. ಸಾಹಿತ್ಯ ಸಮ್ಮೇಳನಗಳನ್ನು ಅಚ್ಚುಕಟ್ಟಾಗಿ, ಸುಂದರವಾಗಿ ನಡೆಸಿ ನಮಗೆ ಪ್ರೇರಣೆಯ ಶಕ್ತಿಯಾಗಿದ್ದಾರೆ. ಹಿರಿಯರನ್ನು ಗೌರವಿಸುವ ಅವರು ದಾರ್ಶನಿಕರಾಗಿ, ಶಿಕ್ಷಣತಜ್ಞರಾಗಿ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿದ್ದು, ಅವರನ್ನು ಕಳೆದುಕೊಂಡ ನಷ್ಟವನ್ನು ಭರಿಸುವುದು ಕಷ್ಟದಾಯಕ ಎಂದು ಹಿರಿಯ ಸಾಹಿತಿ ಎನ್. ಜಿ. ಪಟವರ್ಧನ್ ಹೇಳಿದರುಅವರು ಜೂನ್ 18ರಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಮ್ಯಗ್ದರ್ಶನ ಸೆಮಿನಾರ್ ಹಾಲ್‌ನಲ್ಲಿ […]
ಸಾಮಾಜಿಕ ಜಾಲತಾಣದಿಂದ ಮೌಲ್ಯ ಕಳೆದುಕೊಂಡ ಗ್ರಂಥಾಲಯ-ಪೂಂಜ

ಬೆಳ್ತಂಗಡಿ: ಸರಕಾರ ಗ್ರಾಮಕ್ಕೊಂದು ಗ್ರಂಥಾಲಯ ಎಂಬ ಯೋಜನೆಯನ್ನು ಜಾರಿಗೊಳಿಸಿದ್ದು, ಸಾಮಾಜಿಕ ಜಾಲತಾಣಗಳು ಬಂದ ನಂತರ ಇದರ ಮೌಲ್ಯ ಕಳೆದುಕೊಂಡಿದೆ. ಆದರೆ ಓದುಗರನ್ನು ಆಕರ್ಷಿಸಬೇಕು, ವಿದ್ಯಾರ್ಥಿಗಳು ಹೆಚ್ಚಿನ ರೀತಿಯಲ್ಲಿ ಗ್ರಂಥಾಲಯದ ಜ್ಞಾನ ಲಾಭ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಬೆಳ್ತಂಗಡಿ ಯಲ್ಲಿ ರಾಜ್ಯಕ್ಕೆ ಮಾದರಿಯಾಗುವಂತಹ ಅತ್ಯುತ್ತಮ ರೀತಿಯ ಗ್ರಂಥಾಲಯ ನಿರ್ಮಾಣವಾಗಬೇಕು ಎಂಬ ಕಲ್ಪನೆಯೊಂದಿಗೆ 2 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣವಾಗುತ್ತಿದ್ದು, ಈ ಗ್ರಂಥಾಲಯ ಜ್ಞಾನದಾಹಿಗಳಿಗೆ ಜ್ಞಾನತುಂಬುವ ಪವಿತ್ರ ಕ್ಷೇತ್ರವಾಗಬೇಕು ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.ಅವರು ಜೂನ್ 18ರಂದು ಬೆಳ್ತಂಗಡಿ […]