ಕುಲಾಲ ಸಮುದಾಯ ಭವನಕ್ಕೆ ಸರಕಾರದಿಂದ ರೂ.1.50 ಕೋಟಿಕುಂಬಾರರ ಸೊಸೈಟಿಯ ಬೆಳ್ತಂಗಡಿ ಶಾಖೆ ಉದ್ಘಾಟಿಸಿ ಶಾಸಕ ಪೂಂಜ

ಬೆಳ್ತಂಗಡಿ: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಪುತ್ತೂರು ಇದರ ಬೆಳ್ತಂಗಡಿ ಮಿನಿ ವಿಧಾನ ಸೌಧದ ಬಳಿಯ ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಆರಂಭಗೊಂಡ 11ನೇ ಬೆಳ್ತಂಗಡಿ ಶಾಖೆಯನ್ನು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ಅವರು ಅಕ್ಟೋಬರ್ 15 ವಿಜಯದಶಮಿಯಂದು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಎರಡು ವರ್ಷದ ಹಿಂದೆ ಬೆಳ್ತಂಗಡಿಯಲ್ಲಿ ನಡೆದ ಕುಲಾಲ ಸಮಾಜದ ಸಮಾವೇಶದಲ್ಲಿ ನೀಡಿದ ಭರವಸೆಯಂತೆ ಗುರುವಾಯನಕೆರೆ ಕುಲಾಲ ಮಂದಿರದ ಅಭಿವೃದ್ಧಿಗೆ ಎರಡು ಹಂತಗಳಲ್ಲಿ ಸರಕಾರದಿಂದ […]

ಪೂರ್ವತಯಾರಿಯೇ ಕಾರ್ಯಕ್ರಮದ ಯಶಸ್ಸಿನ ಗುಟ್ಟುಉಜಿರೆಯಲ್ಲಿ ಅ‌.ಭಾ.ಸಾ.ಪ.ದ ಅಧಿವೇಶನದ ಕಾರ್ಯಾಲಯ ಉದ್ಘಾಟಿಸಿ ಹರ್ಷೇಂದ್ರ ಕುಮಾರ್

ಬೆಳ್ತಂಗಡಿ: ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗಿ ಜರಗಲು ಹಿರಿಯರ ಮಾರ್ಗದರ್ಶನ ಹಾಗೂ ಸ್ವಯಂಸೇವಕರ ಬೆಂಬಲ ಅತಿ ಮುಖ್ಯ, ಕಾರ್ಯಕ್ರಮದ ಜವಾಬ್ದಾರಿಗಳನ್ನು ಹಂಚಿ ಕೆಲಸ ನಿರ್ವಹಿಸಿದರೆ ಯಾವುದೇ ಒತ್ತಡ ಇರುವುದಿಲ್ಲ. ಕಾರ್ಯಕ್ರಮಕ್ಕೆ ಮುಂಚಿತವಾಗಿ ಎಲ್ಲಾ ತಯಾರಿಗಳನ್ನು ಪೂರ್ಣಗೊಳಿಸಿದರೆ ಯಶಸ್ಸು ನಿಶ್ಚಿತ. ಉಜಿರೆಯ ಅಧಿವೇಶನ ಶಾಶ್ವತವಾಗಿ ಎಲ್ಲರ  ನೆನಪಿನಲ್ಲಿ ಉಳಿಯುವಂತಾಗಲಿ ಎಂದು ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಜನವರಿ ತಿಂಗಳಲ್ಲಿ ಉಜಿರೆಯಲ್ಲಿ ನಡೆಯಲಿರುವ ಮೂರನೇ ರಾಜ್ಯ ಅಧಿವೇಶನಕ್ಕೆ ಸಂಬಂಧಪಟ್ಟ ಕಾರ್ಯಾಲಯವನ್ನು ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಅಕ್ಟೋಬರ್ 14ರಂದು […]

ಸ್ಕ್ರೀನ್ ಪ್ಲೇ ರೈಟಿಂಗ್ – ಸಿನಿಮಾಟೊಗ್ರಫಿ – ಡೈರೆಕ್ಷನ್ ರಾಜ್ಯ ಮಟ್ಟದ ಕಾರ್ಯಾಗಾರ ಸಮಾರೋಪ ಸಮಾರಂಭ

ಬೆಳ್ತಂಗಡಿ : ಶ್ರೀ ಗುರುಮಿತ್ರ ಸಮೂಹ ಬೆಳ್ತಂಗಡಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ, ಬೋಧಿ ಪ್ರೊಡಕ್ಷನ್ಸ್ ಮುಂಬೈ ಇವರ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 1ರಿಂದ 12ರವರೆಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಆಯೋಜಿಸಲಾದ ಸ್ಕ್ರೀನ್ ಪ್ಲೇ ರೈಟಿಂಗ್ -ಸಿನಿಮಾಟೊಗ್ರಫಿ -ಡೈರೆಕ್ಷನ್ ವಿಷಯದ ಬಗ್ಗೆ ರಾಜ್ಯ ಮಟ್ಟದ ಕಾರ್ಯಾಗಾರದ ಸಮಾರೋಪವು ಅಕ್ಟೋಬರ್ 12ರಂದು ನೆರವೇರಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಡಿಜಿಟಲ್ ಮೀಡಿಯಾ ಮತ್ತು ಫಿಲ್ಮ್ ಮೇಕಿಂಗ್ ಬಿ. ವೋಕ್ […]

ಕುಂಬಾರರ ಸೊಸೈಟಿಯ ಬೆಳ್ತಂಗಡಿ ಶಾಖೆ ಉದ್ಘಾಟನೆ

ಅ. 15: ಬೆಳ್ತಂಗಡಿ: ಕೊಡಗು, ಮೈಸೂರು ಸಹಿತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯನ್ನು ಹೊಂದಿರುವ ಪುತ್ತೂರಿನಲ್ಲಿ ಪ್ರಧಾನ ಶಾಖೆ‌ ಇರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ 11ನೇ ಶಾಖೆಯು ಬೆಳ್ತಂಗಡಿಯ ಮಿನಿ ವಿಧಾನಸೌಧದ ಬಳಿ ಇರುವ ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್‌ನ 1ನೇ ಮಹಡಿಯಲ್ಲಿ ಅಕ್ಟೋಬರ್ 15ರಂದು ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಭಾಸ್ಕರ ಎಂ. ಪೆರುವಾಯಿ ತಿಳಿಸಿದ್ದಾರೆ.ಅಕ್ಟೋಬರ್ 12ರಂದು ಬೆಳ್ತಂಗಡಿಯ ಪತ್ರಿಕಾಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಭಾಸ್ಕರ ಎಂ. ಪೆರುವಾಯಿ, 1958ರಲ್ಲಿ […]

ವರುಣನಾರ್ಭಟಕ್ಕೆ ನಲುಗಿದ ತಾಲೂಕಿನ ಜನತೆ-ರಸ್ತೆ ಹೊಳೆಯಾಗಿ ಜನತೆಯ ಪರದಾಟ

ಬೆಳ್ತಂಗಡಿ: ಉಜಿರೆಯಲ್ಲಿ ಅಕ್ಟೋಬರ್ 12ರಂದು ಸುರಿದ ಭಾರೀ ಮಳೆಗೆ ರಸ್ತೆಗೆ ನುಗ್ಗಿ ಹರಿದ ನೀರಿನಿಂದಾಗಿ ರಾಷ್ಟ್ರೀಯ ಹೆದ್ದಾರಿಯೇ ಹೊಳೆಯಾಗಿ‌ ಮಾರ್ಪಟ್ಟು ಸಾರ್ವಜನಿಕರು ಹಾಗೂ ವಾಹನ ಸವಾರರು ಮನೆ ತಲುಪಲು ಹರಸಾಹಸ ಪಟ್ಟ ಬಗ್ಗೆ ವರದಿಯಾಗಿದೆ. ಸುದೈವವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.ಅಕ್ಟೋಬರ್ 12ರಂದು ಎಡೆಬಿಡದೆ ಸುರಿದ ಮಳೆಗೆ ಉಜಿರೆ ಸಹಿತ ಬೆಳ್ತಂಗಡಿ ತಾಲೂಕಿನ ಬಹುತೇಕ ಕಡೆಗಳಲ್ಲಿ ಜನ ತತ್ತರಿಸಿ ಹೋಗಿದ್ದರು. ವರುಣನಾರ್ಭಟಕ್ಕೆ ತಾಲೂಕಿನಲ್ಲಿ ಜನಜೀವನವೇ ಅಕ್ಷರಶಃ ಸ್ತಬ್ಧಗೊಂಡಿತ್ತು. ಜನ ಭಯಭೀತರಾಗಿ ತಮ್ಮತಮ್ಮ ಮನೆ ಸೇರಿ ಶಾಂತನಾಗುವಂತೆ ವರುಣದೇವನಲ್ಲಿ ಪ್ರಾರ್ಥಿಸುವಷ್ಟರ […]

ಉಜಿರೆಯಲ್ಲಿ ಸರಳ ಶಾರದೋತ್ಸವಕ್ಕೆ ಚಾಲನೆ

ಬೆಳ್ತಂಗಡಿ: ಉಜಿರೆಯ ಶ್ರೀ ಶಾರದಾ ಪೂಜಾ ಸಮಿತಿ ವತಿಯಿಂದ 41ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಉತ್ಸವವು ಶ್ರೀ ಶಾರದಾ ಮಂಟಪದಲ್ಲಿ ಅಕ್ಟೋಬರ್ 12ರಂದು ಪ್ರಾರಂಭಗೊಂಡಿತು. ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಪ್ರಾರ್ಥನೆಯೊಂದಿಗೆ 4  ದಿನಗಳ ಶ್ರೀ ಶಾರದಾ ಉತ್ಸವ  ಸರಕಾರದ ಮಾರ್ಗಸೂಚಿಯಂತೆ  ಸರಳವಾಗಿ  ಆರಂಭಗೊಂಡಿತು. ಶಾರದಾ ಮೂರ್ತಿಯ ಸೇವಾಕರ್ತರಾದ ಪ್ರಭಾತ್ ಭಟ್ ದಂಪತಿ  ನೇತೃತ್ವದಲ್ಲಿ ಅರ್ಚಕ  ವೇದಮೂರ್ತಿ ಶ್ರೀನಿವಾಸ ಹೊಳ್ಳರಿಂದ ಶ್ರೀ ಶಾರದಾ ಮಂಟಪದಲ್ಲಿ ಗಣಹೋಮ ಹಾಗೂ ಶ್ರೀ ಶಾರದಾ ಮೂರ್ತಿಯ ಪ್ರತಿಷ್ಠೆ  ನಡೆಯಿತು.            […]

ಬಸದಿಯ ಒಳಾಂಗಣಕಕ್ಕೆ ಇಂಟರ್‌ಲಾಕ್ ಅಳವಡಿಕೆಗೆ ಚಾಲನೆ

ಬೆಳ್ತಂಗಡಿ : ವೇಣೂರು  ಶ್ರೀ ಬಾಹುಬಲಿ ಕ್ಷೇತ್ರ ಹಾಗೂ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯ ಒಳಾಂಗಣಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ರೂಪಾಯಿ 15 ಲಕ್ಷ ಅನುದಾನದಲ್ಲಿ ಅಳವಡಿಸಲಾಗುವ ಇಂಟರ್‌ಲಾಕ್ ಕಾಮಗಾರಿಗೆ   ಮುನಿಶ್ರೀ ೧೦೮ ಪುಣ್ಯನಂದಿ ಮಹಾರಾಜರ ಉಪಸ್ಥಿತಿಯಲ್ಲಿ ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ನೇಮಯ್ಯ ಕುಲಾಲ್ ಭೂಮಿಪೂಜೆಯನ್ನು ನೆರವೇರಿಸಿದರು.ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ ಯಂ. ವಿಜಯರಾಜ ಅಧಿಕಾರಿ, ಕಾರ್ಯಾಕಾರಿಣಿ ಸದಸ್ಯರುಗಳಾದ ಡಾ| ಕೆ. ಆರ್. ಪ್ರಸಾದ್, ಪ್ರವೀಣ್ ಅಜ್ರಿ, ನವೀನ್‌ಚಂದ್ ಬಲ್ಲಾಳ್, ಮಹಾವೀರ ಜೈನ್ […]

‘ಬ್ರಹ್ಮಶ್ರೀ ನಾರಾಯಣಗುರು ಮತ್ತು ಗಾಂಧಿ ಸಮನ್ವಯತೆ’ ವಿಚಾರಗೋಷ್ಠಿ

ಬೆಳ್ತಂಗಡಿ: ಯುವವಾಹಿನಿ ಮೂಡುಬಿದಿರೆ ಘಟಕ ಮತ್ತು ಗಾಂಧಿ ವಿಚಾರ ವೇದಿಕೆ ಮೂಡುಬಿದ್ರೆಯ ವತಿಯಿಂದ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಅಕ್ಟೋಬರ್ 10ರಂದು ‘ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಗಾಂಧಿ ಸಮನ್ವಯತೆ’ ಎಂಬ ವಿಚಾರದಲ್ಲಿ ವಿಚಾರಗೋಷ್ಠಿ ನಡೆಯಿತು. ಮಾಜಿ ಸಚಿವ ಅಭಯಚಂದ್ರ ಜೈನ್ ಕಾರ್ಯಕ್ರಮವನ್ನು ಉದ್ಘಾಟಿಸಿ ನಾರಾಯಣ ಗುರುಗಳು ಕೇರಳದಲ್ಲಿ ಉದಿಸಿದ ಮಹಾನ್ ದಾರ್ಶನಿಕ, ಸಾಮಾಜಿಕ ಅನಿಷ್ಠಗಳ ನಿವಾರಣೆಗೆ ಶ್ರಮಿಸಿದವರು. ನಾರಾಯಣ ಗುರು ಮತ್ತು ಗಾಂಧಿ ಚಿಂತನೆಗಳು ಪ್ರಸ್ತುತ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮೂಡುಬಿದಿರೆಯ ಹಿರಿಯ ವಕೀಲ ಬಾಹುಬಲಿ […]

ಸಮಾಜದ ಕಂದಕ ನಿವಾರಿಸಿ ಸಮ ಸಮಾಜ ನಿರ್ಮಿಸಬೇಕು-ಡಾl ಆಳ್ವ

ಬೆಳ್ತಂಗಡಿ: ಶ್ರೇಷ್ಠವಾದ ಹಿಂದೂ ಧರ್ಮ, ಅದರಲ್ಲೂ ಬಂಟ ಸಮುದಾಯದಲ್ಲಿ ಜನಿಸಿರುವುದು ದೇವರು ಕೊಟ್ಟ ವರವಾಗಿದೆ. ನಮ್ಮ ಹಿರಿಯರಿಂದಲೇ ರಕ್ತಗತವಾಗಿ ಹಲವು ಗುಣಗಳು ಬಂದಿವೆ. ಮುಖ್ಯವಾಗಿ ಎಲ್ಲರೊಂದಿಗೆ ಹೊಂದಿಕೊಂಡು ಬದುಕುವುದು, ನಾಯಕತ್ವ ಗುಣ, ಹೋರಾಟದ ಮನೋಭಾವ, ಧರ್ಮನಿಷ್ಠೆ, ಪ್ರಾಮಾಣಿಕತೆ ಮೊದಲಾದವು ಬಂದಿದೆ. ಇವುಗಳು ನಾವು ಸಮಾಜದಲ್ಲಿ ಉನ್ನತಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಗಿದೆ. ನಾವು ಬೆಳೆಯುವ ಜೊತೆಗೆ ಸಮಾಜದ ಇತರ ಸಮುದಾಯದವರನ್ನೂ ಜೊತೆಗೆ ಮುನ್ನಡೆಸುವ ಮೂಲಕ ಸಮಾಜದ ವಿಶ್ವಾಸ ಗಳಿಸಿರುವುದು ಹೆಮ್ಮೆಯ ವಿಚಾರ. ಸಮುದಾಯದ ಜನತೆ ಗೌರವಯುತವಾದ ಜೀವನ ಸಾಗಿಸುತ್ತಿರುವುದೇ ಇದಕ್ಕೆ […]

ಧರ್ಮಸ್ಥಳದಲ್ಲಿ ಪಾತಾಳ ಕಲಾ ಮಂಗಳ ಪ್ರಶಸ್ತಿ ಪ್ರದಾನ

ಧರ್ಮಸ್ಥಳ: ಮೂವತ್ತು ಹಿರಿಯ ಯಕ್ಷಗಾನ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ನೋಡುವ ಸೌಭಾಗ್ಯ ನಮ್ಮದಾಗಿದೆ. ಧರ್ಮಸ್ಥಳ ಯಕ್ಷಗಾನ ಮೇಳಕ್ಕೆ ಇನ್ನೂರು ವರ್ಷಗಳ ಇತಿಹಾಸವಿದೆ. ಮೇಳದಲ್ಲಿ ಎಲ್ಲಾ ಕಲಾವಿದರು ಸೇವೆಯನ್ನು ಸಲ್ಲಿಸಿ ಗೌರವ ಹೆಚ್ಚಿಸಿದ್ದಾರೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.ಅವರು ಅಕ್ಟೊಬರ್ 7ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನದ ವತಿಯಿಂದ ಕುರಿಯ ವಿಠಲ ಶಾಸ್ತ್ರೀ ಪ್ರತಿಷ್ಠಾನ ಉಜಿರೆ ಇದರ ಸಹಕಾರದೊಂದಿಗೆ ಪಾತಾಳ ಕಲಾ ಮಂಗಳ ಪ್ರಶಸ್ತಿ ಪ್ರದಾನಿಸಿ […]