ಎನ್ಎಸ್ಎಸ್ ದಿನಾಚರಣೆ ಹಾಗೂ ಕೋವಿಡ್ ಲಸಿಕಾ ಅಭಿಯಾನ

ಬೆಳ್ತಂಗಡಿ: ಸೇಕ್ರೆಡ್ ಹಾರ್ಟ್ ಕಾಲೇಜ್ ಮಡಂತ್ಯಾರಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಸೆಪ್ಟೆಂಬರ್ 24ರಂದು ಎನ್ಎಸ್ಎಸ್ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಅಲೆಕ್ಸ್ ಐವನ್ ಸಿಕ್ವೇರಾ ಅವರು ಭಾಗವಹಿಸಿ, ಎನ್ಎಸ್ಎಸ್ ನಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ಹೇಗೆ ತೊಡಗಿಸಿಕೊಳ್ಳಬೇಕು ಮತ್ತು ತಮ್ಮ ವ್ಯಕ್ತಿತ್ವ ವಿಕಸನವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದರ ಬಗ್ಗೆ ಸಂಕ್ಷಿಪ್ತ ವಿವರವನ್ನು ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಜೋಸೆಫ್ ಎನ್. ಎಮ್. ಅವರು ವಹಿಸಿ, ತಮ್ಮ […]

‘ರಾಜಕೇಸರಿ ಸಂಘಟನೆಯ ಸೇವೆ ಅನುಭವ ಮಂಟಪಕ್ಕೆ ಸಮ’

ಬೆಳ್ತಂಗಡಿ: ಯಾವುದೇ ಹುದ್ದೆಯು ಶ್ರೇಷ್ಠವೂ ಅಲ್ಲ, ಕನಿಷ್ಠವೂ ಅಲ್ಲ. ಸಿಕ್ಕ ಹುದ್ದೆಯಲ್ಲಿ ಕೀಳರಿಮೆ ತೋರದೆ ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ಪ್ರಾಮಾಣಿಕವಾಗಿ ದುಡಿದರೆ ಅಪ್ರತಿಮ ಸ್ಥಾನ ಲಭಿಸುತ್ತದೆ. ಆತ್ಮಸಾಕ್ಷಿಗೆ ಅನುಗುಣವಾಗಿ ಸ್ಥಿತಪ್ರಜ್ಞರಾಗಿ ಉತ್ತಮ ಕೆಲಸ ನಿರ್ವಹಿಸಿದರೆ ಸಮಾಜದ ಉದ್ಧಾರಕ್ಕೆ ಕೊಡುಗೆ ಸಲ್ಲಿಸಿದಂತಾಗುವುದು. ರಾಜಕೇಸರಿ ಸಂಘಟನೆ ಸಕಾರಾತ್ಮಕ ಚಿಂತನೆಯಿಂದ ಕ್ರಾಂತಿಮಾಡುವ ಸೇವೆ  ಅನುಭವ ಮಂಟಪಕ್ಕೆ ಸಮಾನವಾಗಿದೆ ಎಂದು ಬೆಂಗಳೂರು ವಿಭಾಗದ ಸಿಐಡಿ ಎಸ್ಪಿ ರವಿ ಡಿ. ಚೆನ್ನಣ್ಣನವರ್ ಹೇಳಿದರು.ಅವರು ಉಜಿರೆಯ ಇಚ್ಚಿಲದಲ್ಲಿ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ (ರಿ)  ವತಿಯಿಂದ ಇಚ್ಚಿಲದ ಕುಶಲ ಮತ್ತು […]

ಮಂದಿರ, ಮಸೀದಿ, ಚರ್ಚ್, ದೈವಸ್ಥಾನಗಳು ಸಮಾನತೆಯ ಸಂಕೇತ -ಸುಧೀರ್ ಕುಮಾರ್

ಮೂಡುಬಿದಿರೆ: ಮಂದಿರ, ಮಸೀದಿ, ಚರ್ಚ್ ಮತ್ತು ದೈವಸ್ಥಾನಗಳು ಸಮಾನತೆಯ ಹಾಗೂ ಸರ್ವಧರ್ಮ ಸಮಭಾವದ ಸಂಕೇತವೆಂದು ಕಾಂಗ್ರೆಸ್ ಪಕ್ಷವು ಭಾವಿಸಿದ್ದು; ಇಂತಹ ಆರಾಧನಾ ಕೇಂದ್ರಗಳಿಗೆ ಧಕ್ಕೆ ತರುವ ಕೆಲಸ ಬಿಜೆಪಿ ಸರಕಾರದಿಂದ ನಡೆದರೆ ಅದರ ವಿರುದ್ಧ ಕಾಂಗ್ರೆಸ್ ಪಕ್ಷ ಇನ್ನಷ್ಟು ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಕೆ.ಪಿ.ಸಿ.ಸಿ. ವಕ್ತಾರ ಸುಧೀರ್ ಕುಮಾರ್ ಮರೋಳಿ ನುಡಿದರು. ಧಾರ್ಮಿಕ ಕೇಂದ್ರಗಳನ್ನು ಕೆಡವಿದ ಬಿಜೆಪಿ ಸರಕಾರದ ವಿರುದ್ಧ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೆಪ್ಟೆಂಬರ್ 25ರ ರಾತ್ರಿ ನಡೆದ ಬೃಹತ್ ಕಾಲ್ನಡಿಗೆ ಜಾಥಾದ […]

ಪಂಜಿನ ಮೆರವಣಿಗೆಗೆ ಸಜ್ಜಾದ ಮೂಡುಬಿದಿರೆಯ ಕಾಂಗ್ರೆಸ್

ಮೂಡುಬಿದಿರೆ : ರಾಜ್ಯ ಬಿಜೆಪಿ ಸರಕಾರ ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳನ್ನು ಧ್ವಂಸಗೊಳಿಸುತಿರುವುದನ್ನು ಖಂಡಿಸಿ, ಮೂಡಬಿದಿರೆಯಲ್ಲಿ ಸೆಪ್ಟೆಂಬರ್ 25ರಂದು ಸಂಜೆ ಕಾಂಗ್ರೆಸ್ ಪಕ್ಷದ ವತಿಯಿಂದ ಪಂಜಿನ ಮೆರವಣಿಗೆ ನಡೆಯಲಿದ್ದು, ಮೂಡುಬಿದಿರೆಯ ಕಾಂಗ್ರೆಸ್ ಕಾರ್ಯಕರ್ತರು ಈ ಪಾದಯಾತ್ರೆ ಮತ್ತು ಪಂಜಿನ ಮೆರವಣಿಗೆಗೆ ಸಂಪೂರ್ಣ ಸಜ್ಜಾಗಿದ್ದಾರೆ. ಸೆಪ್ಟೆಂಬರ್ 25ರ ಸಂಜೆ ಆಲಂಗಾರು ಬಸ್ ನಿಲ್ದಾಣದಿಂದ ಮೂಡಬಿದ್ರಿಯ ಸರ್ಕಾರಿ ಬಸ್ಸ್ ನಿಲ್ದಾಣದವರೆಗೆ ಹಮ್ಮಿಕೊಳ್ಳಲಾಗಿರುವ ಬೃಹತ್ ಕಾಲ್ನಡಿಗೆ ಜಾಥಾದಲ್ಲಿ ಮಿಥುನ್ ರೈ ಹಾಗೂ ಅಭಯಚಂದ್ರ ಜೈನ್ ಇವರ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ನಡೆಯಲಿದ್ದು, ಮೂಡುಬಿದಿರೆ […]

ಆದಿವಾಸಿಗಳ ತಾಳ್ಮೆ ಪರೀಕ್ಷಿಸದಿರಿಆಡಳಿತಕ್ಕೆ ನ್ಯಾಯವಾದಿ ಶಿವಕುಮಾರ್ ಎಚ್ಚರಿಕೆ

ಬೆಳ್ತಂಗಡಿ: ಆದಿವಾಸಿಗಳ ಮೇಲಿನ ದೌರ್ಜನ್ಯ ಮಿತಿ ಮೀರಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ತಮ್ಮ ತಾಳ್ಮೆಗೂ ಮಿತಿ ಇದೆ‌. ಅದು ಮೀರಿದರೆ ಗಂಭೀರ ಸ್ವರೂಪದ ಹೋರಾಟ ಎದುರಿಸಲು ಸಿದ್ದರಾಗಬೇಕಾಗುತ್ತದೆ ಎಂದು ತಾಲೂಕು ಆಡಳಿತವನ್ನು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಕಾನೂನು ಸಲಹೆಗಾರ ಹಾಗೂ ನ್ಯಾಯವಾದಿ ಶಿವಕುಮಾರ್ ಎಸ್. ಎಂ. ಎಚ್ಚರಿಕೆ ನೀಡಿದರು.ಅವರು ಸೆಪ್ಟೆಂಬರ್ 21ರಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ನಡೆದ ಪ್ರತಿಭಟನೆಯನ್ಬು ಉದ್ಘಾಟಿಸಿ ಮಾತನಾಡುತ್ತಿದ್ದರು.ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಶತಮಾನಗಳಿಂದ […]

ಅ.ಭಾ.ಸಾ.ಪ. ರಾಜ್ಯಮಟ್ಟದ ಸಮ್ಮೇಳನ ಸಿದ್ಧತಾ ಸಭೆ

ಬೆಳ್ತಂಗಡಿ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ತೃತೀಯ ಸಮ್ಮೇಳನವು ಉಜಿರೆಯಲ್ಲಿ ಮುಂದಿನ ಡಿಸೆಂಬರ್ 25  ಮತ್ತು 26  ರಂದು ಉಜಿರೆಯಲ್ಲಿ  ನಡೆಯಲಿದ್ದು, ಇದರ  ಪೂರ್ವಭಾವಿ ಸಿದ್ಧತಾ ಸಭೆಯು ಸೆಪ್ಟೆಂಬರ್ 18ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ನಡೆಯಿತು.  ಅಖಿಲ ಭಾರತ ಸಾಹಿತ್ಯ ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಅವರು ಭಾಗವಹಿಸಿ ಜಿಲ್ಲೆ ಮತ್ತು ತಾಲೂಕು ಸಮಿತಿ ಪದಾಧಿಕಾರಿಗಳೊಂದಿಗೆ  ವಿಚಾರ ವಿನಿಮಯ ನಡೆಸಿ, ಕಾರ್ಯಕ್ರಮದ ರೂಪು ರೇಷೆ  ಬಗ್ಗೆ ಚರ್ಚಿಸಿ, ಮಾರ್ಗದರ್ಶನ ನೀಡಿದರು. ಎರಡು ದಿನಗಳ ಸಮ್ಮೇಳನದಲ್ಲಿ ರಾಜ್ಯದಿಂದ  ಸುಮಾರು 2000ಸಾಹಿತ್ಯ ಆಸಕ್ತರು […]

ವಾರ್ಷಿಕ ಮಹಾಸಭೆ ಹಾಗೂ ಸಹಾಯಧನ ವಿತರಣೆ

ಬೆಳ್ತಂಗಡಿ: ಬೆಳಕು ಸೇವಾತಂಡ ಬೆಳ್ತಂಗಡಿ ಇದರ ಎರಡನೇ ವಾರ್ಷಿಕ ಮಹಾಸಭೆ ಹಾಗೂ ಸಂಕಷ್ಟದಲ್ಲಿರುವ ಜನರಿಗೆ ಸಹಾಯಧನ ವಿತರಣಾ ಕಾರ್ಯಕ್ರಮ ಮಡಂತ್ಯಾರು ಗ್ರಾಮ ಪಂಚಾಯತಿನ ಸಭಾಭವನದಲ್ಲಿ ಆಗಸ್ಟ್13ರಂದು ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪತ್ರಕರ್ತ ಮನೋಹರ ಬಳೆಂಜ ಮಾತನಾಡಿ, ದಾನಮಾಡುವ ಮನಸ್ಸು ಎಲ್ಲರಿಗೂ ಬರುವುದಿಲ್ಲ. ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮನೋಭಾವನೆಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳುವಂತಾಗಬೇಕು. ಈ ರೀತಿಯ ಚಿಂತನೆಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಆಗ ಸಮಾಜದಲ್ಲಿ ಇರುವಂತಹ ಸಮಸ್ಯೆಗಳಿಗೆ ಸ್ಪಂದನೆಯನ್ನು ನೀಡಬಹುದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬೆಳಕು ಸೇವಾ ತಂಡದ ಅಧ್ಯಕ್ಷ ಧರಣೇಂದ್ರ […]

ಪುರಾಣ ವಾಚನ-ಪ್ರವಚನ ಜ್ಞಾನ ದಾಸೋಹದ ಮಹಾಯಜ್ಞ;ಧರ್ಮಸ್ಥಳದಲ್ಲಿ ಪುರಾಣ ವಾಚನ-ಪ್ರವಚನ ಸುವರ್ಣ ಮಹೋತ್ಸವ ಉದ್ಘಾಟಿಸಿ ಚಂದ್ರಹಾಸ್ ಮಹಾರಾಜ್

ಬೆಳ್ತಂಗಡಿ: ಪುರಾಣ ವಾಚನ-ಪ್ರವಚನವು ಜ್ಞಾನದಾಸೋಹದ ಮಹಾ ಯಜ್ಞವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿತ್ವದಲ್ಲಿ ನಿತ್ಯವೂ ನಡೆಯುವ ಅನ್ನದಾನ, ವಿದ್ಯಾದಾನ, ಅಭಯದಾನ ಹಾಗೂ ಔಷಧದಾನವೆಂಬ ಚತುರ್ವಿದ ದಾನ ಪರಂಪರೆ ಎಲ್ಲರಿಗೂ ಅನುಕರಣೀಯ. ಧಾರ್ಮಿಕ ಪ್ರಭಾವನೆಯೊಂದಿಗೆ ಧರ್ಮಜಾಗೃತಿ ಹಾಗೂ ಆದ್ಯಾತ್ಮಿಕತೆಯ ಮೂಲಕ ಸಮಾಜ ಸುಧಾರಣೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ನಾಡಿನ ಇತರ ದೇಗುಲಗಳಿಗೆ ಮಾದರಿಯಾಗಿದೆ ಎಂದು ಚೆನ್ನೈನ ಇಸ್ಕಾನ್‌ನ ರಾಮಪ್ರಭು ಚಂದ್ರಹಾಸ ಮಹಾರಾಜ್ ಹೇಳಿದರು.ಅವರು ಸೆಪ್ಟೆಂಬರ್ 11ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರವಚನ […]

ಕೋವಿಡ್ ವಾರಿಯರ್ಸ್‌ಗಳಿಗೆ ಸಮ್ಮಾನ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ (ರಿ) ರಾಜ್ಯ ಸಮಿತಿಯ ವತಿಯಿಂದ ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ಇಂಡಿಯೋತ್ಸವ-75’ ಕಾರ್ಯಕ್ರಮದ ಭಾಗವಾಗಿ, ಮುಸ್ಲಿಂ ಜಮಾಅತ್ ಕಣಿಯೂರು ಬ್ಲಾಕ್ ಸಮಿತಿ ವ್ಯಾಪ್ತಿಯಲ್ಲಿ ಕೊರೊನೋ ಸೋಂಕು ಬಿಗಡಾಯಿಸಿದ ಸಂದರ್ಭ ಕೋವಿಡ್ ವಾರಿಯರ್ಸ್ ಆಗಿ ಸಕ್ರಿಯವಾಗಿ ದುಡಿದ 14 ಸಾಧಕರಿಗೆ ಅಭಿನಂದನಾ ಕಾರ್ಯಕ್ರಮವು ಕಲ್ಲೇರಿ ಎಸ್.ಎಂ.ಎ. ಕಛೇರಿಯಲ್ಲಿ ನಡೆಯಿತು.ಕಾರ್ಯಕ್ರಮಕ್ಕೆ ಹಿರಿಯ ವಿದ್ವಾಂಸರಾದ ಇಬ್ರಾಹಿಂ ಮದನಿ ತುರ್ಕಳಿಕೆ ಪ್ರಾರ್ಥನೆ ಮೂಲಕ ಚಾಲನೆ ನೀಡಿದರು. ಮುಸ್ಲಿಂ ಜಮಾಅತ್ ಕಣಿಯೂರು ಬ್ಲಾಕ್ ಅಧ್ಯಕ್ಷರಾದ […]

ಬೆಲೆ ಏರಿಕೆ ವಿರುದ್ಧ ಸಿಪಿಐ(ಎಂ) ಪ್ರತಿಭಟನೆ

ಬೆಳ್ತಂಗಡಿ: ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲೋತ್ಪನ್ನಗಳ ಬೆಲೆ ಇಳಿಕೆಯಾಗಿದ್ದರೂ ಪೆಟ್ರೋಲ್ ಹಾಗೂ ಡಿಸೇಲ್ ಸೇರಿದಂತೆ ಅಡುಗೆ ಅನಿಲಗಳ ಬೆಲೆ ಹೆಚ್ಚಿಸುವ ಮೂಲಕ ನರೇಂದ್ರ ಮೋದಿ ಸರ್ಕಾರ ದೇಶದ ಬಡಜನರ ಮೇಲೆ ಸವಾರಿ ಮಾಡುವ ನೀಚ ರಾಜಕೀಯ ಮಾಡುತ್ತಿದೆ ಎಂದು ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯ ಸಂತೋಷ್ ಬಜಾಲ್ ಆರೋಪಿಸಿದರು.ಅವರು ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಬೆಲೆ ಏರಿಕೆ ವಿರುದ್ಧ ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ಸೆಪ್ಟೆಂಬರ್ 11ರಂದು ನಡೆದ ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡುತ್ತಿದ್ದರು ‌.ಕೋವಿಡ್-19 ನಿಂದ […]