ಬೆಳ್ತಂಗಡಿ ಧರ್ಮಪ್ರಾಂತ್ಯದಿಂದ ಆಹಾರ ಮತ್ತು ಆರೋಗ್ಯ ಕಿಟ್ ವಿತರಣೆ

ಬೆಳ್ತಂಗಡಿ: ದೇವರ ಪ್ರೀತಿ ಅರಿಯಲು ಮನುಷ್ಯನ ಮೂಲಕ ಸಾಧ್ಯ. ಕೋವಿಡ್ ನಂತಹಾ ಸಾಂಕ್ರಾಮಿಕ ರೋಗ ನಿಯಂತ್ರಣ ಕೇವಲ ಸರಕಾರದಿಂದ ಮಾತ್ರ ಸಾಧ್ಯವಿಲ್ಲ. ಜನರ ಕಷ್ಟ ದುಃಖ ಅರಿತು ಸಂಘಸಂಸ್ಥೆಗಳು ಕೈ ಜೋಡಿಸಿದರೆ ಪಿಡುಗು ನಿವಾರಿಸಬಹುದಾಗಿದೆ. ಆ ಕೆಲಸವನ್ನು ಪ್ರಚಾರ ಬಯಸದೆ ನಮ್ಮ ಧರ್ಮಪ್ರಾಂತ್ಯ ಮತ್ತು ಸಹಸಂಸ್ಥೆಗಳು ಮಾಡುತ್ತಿದೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಲಾರೆನ್ಸ್ ಮುಕ್ಕುಯಿ ಹೇಳಿದರು.ದಕ್ಷಿಣ ಕನ್ನಡ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಬೆಳ್ತಂಗಡಿ ಇದರ ನೇತೃತ್ವದಲ್ಲಿ ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಶನ್, […]
ಆರ್ಥಿಕ ಸಶಕ್ತೀಕರಣಕ್ಕೆ ಸಹಕಾರಿ ಸಂಘಗಳ ಕೊಡುಗೆ ಅಪಾರ-ಪೂಂಜ

ಬೆಳ್ತಂಗಡಿ: ಗ್ರಾಮೀಣ ಭಾಗದ ಜನರ ಆರ್ಥಿಕ ಅಶಕ್ತೀಕರಣಕ್ಕೆ ಸಹಕಾರಿ ಸಂಘಗಳ ಕೊಡುಗೆ ಅಪಾರ. ಇಂದು ಇಲ್ಲಿ ತನ್ನ ಮೂರನೇ ಶಾಖೆಯನ್ನು ಆರಂಭಿಸಿರುವ ಬೆಳ್ತಂಗಡಿಯ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ತನ್ನ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಅಶಕ್ತರಾಗಿರುವವರನ್ನು ಸಶಕ್ತರನ್ನಾಗಿಸಲು ಅನೇಕ ಯೋಜನೆಗಳನ್ನು ಅನುಷ್ಠಾನಿಸುತ್ತಿದೆ. ಈ ಸೊಸೈಟಿಯ ಅಧ್ಯಕ್ಷರಾದ ಎಲೋಶಿಯಸ್ ಲೋಬೋ ಹಾಗೂ ಆಡಳಿತ ಮಂಡಳಿಯವರು ನಾಡಿನ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರ ಆದರ್ಶಗಳನ್ನು ತಮ್ಮ ಸಂಘದ ಬೆಳವಣಿಗೆಗೆ ಅಳವಡಿಸಿಕೊಳ್ಳುವ ಮೂಲಕ ಮಾದರಿ ಸಹಕಾರಿ ಸಂಘವನ್ನು ಬೆಳೆಸುತ್ತಿದ್ದಾರೆ. ಈ ಸೊಸೈಟಿಯು ಜಿಲ್ಲೆ […]
ಬಕ್ರೀದ್ ಹಬ್ಬದ ಪ್ರಯುಕ್ತ ಪೂರ್ವಭಾವಿ ಶಾಂತಿಸಭೆ

ಬೆಳ್ತಂಗಡಿ: ಇದೇ ಜುಲೈ 2ರ ಬುಧವಾರ ಮುಸ್ಲಿಂ ಬಾಂಧವರು ಆಚರಿಸುವ ಬಕ್ರೀದ್ ಹಬ್ಬಕ್ಕೆ ಪೂರ್ವಭಾವಿಯಾಗಿ ಜುಲೈ 14ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಶಾಂತಿಸಭೆ ನಡೆಯಿತು.ಈ ಸಭೆಯಲ್ಲಿ ಮಾತನಾಡಿದ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಎಂ. ಎಂ. ನಂದಕುಮಾರ್, ಅಕ್ರಮ ದನ ಸಾಗಟ ಮಾಡುವವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು; ಹಾಗೂ ರಾತ್ರಿ ವೇಳೆಯಲ್ಲಿ ಅನಾವಶ್ಯಕವಾಗಿ ತಿರುಗಾಡುವುದು ಕಂಡು ಬಂದಲ್ಲಿ ಸೂಕ್ತ ಕಾನುನು ಕ್ರಮ ಜರುಗಿಸಲಾಗುವುದು. ಹಿಂದು ಮುಸ್ಲಿಂಮರು ಸಹೋದರತ್ವದಿಂದ ಸಹಬಾಳ್ವೆಯಿಂದ ಹಬ್ಬಗಳನ್ನು ಆಚರಿಸಬೇಕು ಎಂದು […]
ರೋಟರಿ ನೇತೃತ್ವದಲ್ಲಿ ನಿರ್ಮಾಣವಾದ ಮನೆ ಹಸ್ತಾಂತರ.

ಬೆಳ್ತಂಗಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರೋಟರಿ ಸೇವಾ ಟ್ರಸ್ಟ್, ವಿವಿಧ ಬ್ರಾಹ್ಮಣ ಸಂಘಟನೆಗಳು ಹಾಗೂ ದಾನಿಗಳ ನೆರವಿನಿಂದ ಅಂದಾಜು 4.60 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಮನೆಯನ್ನು ಮುಂಡಾಜೆಯ ಕಡಂಬಳ್ಳಿ ಸಮೀಪದ ಗಣಪತಿ ಭಟ್ ದಂಪತಿಗಳಿಗೆ ಹಸ್ತಾಂತರಿಸಲಾಯಿತು.ಮನೆಯ ಕೀಲಿಕೈ ಹಸ್ತಾಂತರಿಸಿ ಮಾತನಾಡಿದ ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ, ಸಂಘ-ಸಂಸ್ಥೆಗಳು ಸಮಾಜಮುಖಿಯಾಗಿ ಕೆಲಸ ನಿರ್ವಹಿಸಲು ಅವುಗಳ ಸದಸ್ಯರ ಸಹಕಾರ ಪ್ರಾಮುಖ್ಯವಾಗಿದೆ. ಬೆಳ್ತಂಗಡಿ ರೋಟರಿ ಕ್ಲಬ್‌ನ ಸದಸ್ಯರೆಲ್ಲರೂ ಸಮಾನವಾಗಿ ಜವಾಬ್ದಾರಿ ಹಂಚಿಕೊಂಡು ಮುಂದುವರೆಯುತ್ತಿದ್ದಾರೆ. […]
ಆನ್‌ಲೈನ್‌ನಲ್ಲಿ ಗಮಕ ಹಬ್ಬ

ಬೆಳ್ತಂಗಡಿ: ಗೇರುಕಟ್ಟೆ ವಿಷ್ಣುಪದ್ಮ ನಿವಾಸದಲ್ಲಿ ಜುಲೈ 12ರಂದು ಆನ್‌ಲೈನ್ ಗಮಕ ಹಬ್ಬದ ಮೊದಲ ಕಾರ್ಯಕ್ರಮ ನಡೆಯಿತು . ಕುಮಾರವ್ಯಾಸ ನಮನ ಮತ್ತು ಹಾಗೂ ವಿದುರ ಭಕ್ತಿ ಗಮಕವಾಚನ-ವ್ಯಾಖ್ಯಾನ ಕಾರ್ಯಕ್ರಮಕ್ಕೆ ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ ಅಧ್ಯಕ್ಷ ಜಯರಾಮ ಕುದ್ರೆಂತಾಯರು ದೀಪ ಬೆಳಗಿಸಿ ಚಾಲನೆ ನೀಡಿ ಶುಭ ಹಾರೈಸಿದರು. ಖ್ಯಾತ ಸಾಹಿತಿ ಪ ರಾಮಕೃಷ್ಣ ಶಾಸ್ತ್ರಿ ಕುಮಾರವ್ಯಾಸ ನಮನ ಸಲ್ಲಿಸಿ ಆನ್‌ಲೈನ್ ಕಾರ್ಯಕ್ರಮದ ಹೊಸ ಯೋಚನೆ ಹಾಗೂ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಗಮಕ ಕಲಾ ಪರಿಷತ್ ಅಧ್ಯಕ್ಷ ಮಧೂರು ಮೋಹನ […]
ನಾಳೆ ಕಥೋಲಿಕ್ ಸೊಸೈಟಿಯ ವೇಣೂರು ಶಾಖೆ ಉದ್ಘಾಟನೆ

ಬೆಳ್ತಂಗಡಿ: ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಬೆಳ್ತಂಗಡಿ ತಾಲೂಕಿನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ತಾಲೂಕಿನ ಪ್ರತಿಷ್ಠಿತ ಸೊಸೈಟಿಗಳಲ್ಲೊಂದಾದ ಬೆಳ್ತಂಗಡಿಯ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮೂರನೇ ಶಾಖೆ ವೇಣೂರಿನಲ್ಲಿ ನಾಳೆ ಅಂದರೆ ಜುಲೈ 14ರಂದು ಉದ್ಘಾಟನೆಗೊಳ್ಳಲಿದ್ದು, ಸೊಸೈಟಿಯ ಅಧ್ಯಕ್ಷ ಹಾಗೂ ನ್ಯಾಯವಾದಿ ಎಲೋಶಿಯಸ್ ಲೋಬೊರ ಮಾರ್ಗದರ್ಶನದಲ್ಲಿ ಉದ್ಘಾಟನಾ ಕಾರ್ಯಕ್ರಮದ ಪೂರ್ವಸಿದ್ಧತೆ ಭರದಿಂದ ಸಾಗುತ್ತಿದೆ.ಬೆಳ್ತಂಗಡಿಯಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಕಥೋಲಿಕ್ ಕ್ರೆಡಿಟ್ ಸಹಕಾರ ಸಂಘ, ಈಗಾಗಲೇ ಅಳದಂಗಡಿ ಹಾಗೂ ನಾರಾವಿಯಲ್ಲಿ ಶಾಖೆಗಳನ್ನು ಹೊಂದಿದ್ದು; ಇದೀಗ ನಾಳೆ ವೇಣೂರಿನಲ್ಲಿ ಸೊಸೈಟಿಯ […]
SKSSF ವತಿಯಿಂದ ಮಡಂತ್ಯಾರು ಕ್ಲಸ್ಟರ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ

ಬೆಳ್ತಂಗಡಿ: SKSSF ಬೆಳ್ತಂಗಡಿ ವಲಯ ಮಡಂತ್ಯಾರು ಕ್ಲಸ್ಟರ್ ವಿಖಾಯ ವತಿಯಿಂದ ಮಡಂತ್ಯಾರು ಕ್ಲಸ್ಟರ್ ವ್ಯಾಪ್ತಿಯಲ್ಲಿ ಸ್ವಚ್ಛತೆ, ಫಾಗಿಂಗ್(ಹೊಗೆ ಸಿಂಪಡಣೆ) ಮತ್ತು ಸ್ಯಾನಿಟೈಸರಿಂಗ್ ಕಾರ್ಯಕ್ರಮ ಜುಲೈ 12 ರಂದು ಹಮ್ಮಿಕೊಳ್ಳಲಾಯಿತು. SKSSF ಮಡಂತ್ಯಾರು ಕ್ಲಸ್ಟರ್ ಅಧ್ಯಕ್ಷರಾದ ಹಾಶಿಂ ಫೈಝಿ ಪಾಂಡವರಕಲ್ಲು (ದುಹಃ) ಈ ಸತ್ಕಾರ್ಯಕ್ಕೆ ಚಾಲನೆ ನೀಡಿದರು. ಧೂಮಲಿಕೆ ಖತೀಬರಾದ ಅದಂ ಮುಸ್ಲಿಯಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. SKSSF ಬೆಳ್ತಂಗಡಿ ವಲಯ ಕೊಶಾಧಿಕಾರಿ ಹಕೀಂ ಬಂಗೇರಕಟ್ಟೆ, ಮಡಂತ್ಯಾರು ಕ್ಲಸ್ಟರ್ ಉಪಾಧ್ಯಕ್ಷ ಅಬೂಸ್ವಲಿಹ್ ಧೂಮಲಿಕೆ, ಕ್ಲಸ್ಟರ್ ಕಾರ್ಯದರ್ಶಿ ಶೆರೀಫ್ ಬಂಗೇರಕಟ್ಟೆ, ಕ್ಲಸ್ಟರ್ […]
ಕೊರೋನಾದಿಂದ ಮೃತಪಟ್ಟವರ ಕುಟುಂಬಿಕರಿಗೆ ನೆರವು

ಬೆಳ್ತಂಗಡಿ: ರಾಜ್ಯ ಸರಕಾರ ಕೊರೋನಾದಿಂದ ಮೃತರಾದ ಬಿಪಿಎಲ್ ಪಡಿತರ ಚೀಟಿ ಹೊಂದಿದವರ ಕುಟುಂಬಿಕರಿಗೆ 1ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು,ಈ ಯೋಜನೆಯ ಬಗ್ಗೆ ಸಂಬಂಧಿತ ಮನೆಗಳಿಗೆ ಅಗತ್ಯ ಮಾಹಿತಿ ನೀಡುವುದರ ಜೊತೆಗೆ ದಾನಿಗಳ ಸಹಕಾರದಿಂದ ಸಂಗ್ರಹಿಸಿದ ಸಹಾಯಧನವನ್ನು ಸಂತ್ರಸ್ತ ಕುಟುಂಬಿಕರಿಗೆ ತಲಾ 10,000 ರೂಪಾಯಿಯಂತೆ ವಿತರಿಸಿ, ಅವರಿಗೆ ಸಾಂತ್ವನ ಹೇಳುವ ಕಾರ್ಯವನ್ನು ಕ್ಷೇತ್ರದ ಶಾಸಕನಾಗಿ ಮಾಡುತ್ತಿದ್ದೇನೆ. ಸರಕಾರದ ಪರಿಹಾರಧನ ಪಡೆಯಲು ಸಂಗ್ರಹಿಸಬೇಕಾದ ದಾಖಲೆಗಳ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯರೊಡಗೂಡಿ ಸಂಬಂಧಿಸಿದ ಮನೆಗಳಿಗೆ ತೆರಳಲಾಗುವುದು ಎಂದು ಬೆಳ್ತಂಗಡಿಯ ಶಾಸಕ ಹರೀಶ್ […]
ಸ್ಕೌಟ್ಸ್ ಮತ್ತು ಗೈಡ್ಸ್ ವಿಧ್ಯಾರ್ಥಿಗಳಿಗೆ ಸನ್ಮಾನ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ 11 ವಿದ್ಯಾರ್ಥಿಗಳು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬೆಂಗಳೂರು ಕರ್ನಾಟಕ ರಾಜ್ಯ ಸಂಸ್ಥೆ ಆಯೋಜಿಸಿದ್ದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ರಾಜ್ಯ ಪುರಸ್ಕಾರ ಹಾಗೂ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಷ್ಟ್ರ ಸಂಸ್ಥೆ ಆಯೋಜಿಸಿದ ಗೋಲ್ಡನ್ ಆ್ಯರೊ ರಾಷ್ಟ್ರ ಪುರಸ್ಕಾರ ಪಡೆದ ನಾಲ್ಕು ವಿದ್ಯಾರ್ಥಿಗಳು; ಹಾಗೂ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ರಾಜ್ಯ ಪುರಸ್ಕಾರ ಪಡೆದು ಬೆಳ್ತಂಗಡಿ ತಾಲೂಕಿಗೆ ಹೆಮ್ಮ ಎನಿಸಿಕೊಂಡ ನಾಲ್ವರು ಸಾಧಕ ವಿದ್ಯಾರ್ಥಿಗಳನ್ನು […]
ಈಶಾವಾಸ್ಯ ಪುರಸ್ಕಾರ, ಪುಸ್ತಕ ಬಿಡುಗಡೆ

ಬೆಳ್ತಂಗಡಿ: ವೃತ್ತಿ, ಪ್ರವೃತ್ತಿ, ಸಂಸಾರ ಸಮತೋಲನದಲ್ಲಿ ಇರಬೇಕು. ಬರಹಗಳು ಕತ್ತಲಲ್ಲಿ ಬೆಳಕನ್ನು ಬಗೆಯುವ ಕೆಲಸವನ್ನು ಮಾಡುತ್ತವೆ. ಪುಸ್ತಕ ಓದಿದರೆ ಮನಸ್ಸು ಪ್ರಫುಲ್ಲವಾಗುತ್ತದೆ. ಸುಘಾತ ಪುಸ್ತಕ ಲಯವಾದ್ಯದ ಆಳ, ಹರಹು, ಅರ್ಥ ಹಾಗೂ ವಿಷಯ ವ್ಯಾಪ್ತಿಯನ್ನು ಹೆಚ್ಚಾಗಿ ಹೊಂದಿ; ಕಲಾಮೌಲ್ಯವನ್ನು ವೃದ್ಧಿಸಿದೆ. ಹೋಗೋಣ ಜಂಬೂ ಸವಾರಿ ಪುಸ್ತಕ ಸರಳ ನಿರೂಪಣೆಯಿಂದ ಓದಿಸಿಕೊಂಡು ಹೋಗುತ್ತದೆ. ಲಘುಬರಹದಲ್ಲೂ ಜೀವನಪ್ರೀತಿ, ಜೀವನಮೌಲ್ಯಗಳನ್ನು ಇಲ್ಲಿ ಕಾಣಬಹುದು ಎಂದು ಕರ್ಣಾಟಕ ಬ್ಯಾಂಕ್ ಸಿಇಒ ಹಾಗೂ ಎಂಡಿ ಮಹಾಬಲೇಶ್ವರ ಎಂ. ಎಸ್. ಹೇಳಿದರು.ಅವರು ಜುಲೈ 10ರ ಸಂಜೆ […]