ಗ್ರಾ.ಪಂ. ಗಳಿಗೆ ವೈದ್ಯಕೀಯ ಸಲಕರಣೆ ಕಿಟ್ ಮತ್ತು ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ವಿತರಣೆ

ಮೂಡುಬಿದಿರೆ : ಬ್ಯಾಂಕ್ ಆಫ್ ಬರೋಡ ಮೂಡುಬಿದಿರೆ ಶಾಖೆ ವತಿಯಿಂದ ಮೂಡುಬಿದಿರೆ ತಾಲೂಕಿನ ಎಲ್ಲಾ 12 ಗ್ರಾಮ ಪಂಚಾಯತ್ ಗಳಿಗೆ ಉಚಿತವಾಗಿ ನೀಡಿರುವ ವೈದ್ಯಕೀಯ ಸಲಕರಣೆ ಕಿಟ್ ಗಳನ್ನು ಮತ್ತು ಮೂಡುಬಿದಿರೆ ತಾಲೂಕಿನ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಮೂಡುಬಿದಿರೆ ತಾಲೂಕು ಪಂಚಾಯತ್ ವತಿಯಿಂದ ನೀಡಿರುವ ದಿನಸಿ ಕಿಟ್ ಗಳನ್ನು ಶಾಸಕ ಉಮಾನಾಥ ಎ. ಕೋಟ್ಯಾನ್ ವಿತರಿಸಿದರು.ಮೂಡುಬಿದಿರೆ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದ ಸಭಾಂಗಣದಲ್ಲಿ ಈ ಕಿಟ್ ಗಳನ್ನು ವಿತರಿಸಿ ಮಾತನಾಡಿದ ಮೂಡುಬಿದಿರೆಯ ಶಾಸಕ ಉಮಾನಾಥ ಎ. ಕೋಟ್ಯಾನ್ […]
ಕ್ಯಾನ್ಸರ್ ಪೀಡಿತೆಯ ಚಿಕಿತ್ಸೆಗೆ ನೆರವು

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಯುವ ಬಿಲ್ಲವ ವೇದಿಕೆಯು ಸಂಕಷ್ಟದಲ್ಲಿರುವ ಸಮಾಜಭಾಂದವರಿಗೆ ಆಸರೆಯಾಗುವ ಉದ್ದೇಶದಿಂದ ‘ಶ್ರೀ ಗುರು ಸೇವೆ’ ಎಂಬ ಸೇವಾಯೋಜನೆಯನ್ನು ಪ್ರಾರಂಭಿಸಿದ್ದು, ಐದನೇ ಸೇವಾಯೋಜನೆಯಾಗಿ ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಕಾಯರಾಡ್ಕ ಮನೆಯ ರೇವತಿ ಹಾಗೂ ಜನಾರ್ದನ ಪೂಜಾರಿ ಯವರ ಪ್ರಥಮ ಪುತ್ರಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಬಾಲಕಿಯ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚ ಭರಿಸಬೇಕಾಗಿರುವುದರಿಂದ ಬಡ ಕುಟುಂಬಕ್ಕೆ ಕೈಲಾದಷ್ಟು ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಜೂನ್ 16 ರಂದು ಅವರ ಮನೆಗೆ ಬೇಟಿ ನೀಡಿ ಸಮಾಜದ ದಾನಿಗಳಿಂದ ಸಂಗ್ರಹಿಸಿದ್ದ ರೂಪಾಯಿ 15,000/- ಆರ್ಥಿಕ […]
ಪರಿಹಾರ ಪ್ಯಾಕೇಜ್‌ಗೆ ಮನವಿ

ಬೆಳ್ತಂಗಡಿ: ಕೋವಿಡ್ -19 ಎರಡನೇ ಅಲೆಯ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಮುಂದುವರೆಸಿದ ಹಿನ್ನಲೆಯಲ್ಲಿ ಪ್ರಮುಖವಾಗಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ರಾಜ್ಯದ ಇತರ ಭಾಗದಲ್ಲಿರುವ ಎಂಡೋಸಲ್ಫಾನ್ ಪೀಡಿತರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುತುವರ್ಜಿ ವಹಿಸಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ರಾಜ್ಯದ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪರಿಗೆ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಮನವಿ ಸಲ್ಲಿಸಿದರು.ಜೊತೆಗೆ ಕೊರೋನ ಸಂಕಷ್ಟದ ಈ ಸಂದರ್ಭದಲ್ಲಿ ಕೊರೋನ ವಾರಿಯರ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಲಾಕ್‌ಡೌನ್ ಪರಿಣಾಮವಾಗಿ ತೀವ್ರ ಸಂಕಷ್ಟ […]
ಆಪತ್ತು ತಪ್ಪಿಸಿದ ಶಿಶಿಲದ ವಿಪತ್ತು ತಂಡ

ಬೆಳ್ತಂಗಡಿ: ಧರ್ಮಸ್ಥಳ ಯೋಜನೆಯ ಕೊಕ್ಕಡ ವಲಯದ ವಿಪತ್ತು ನಿರ್ವಹಣಾ ತಂಡದವರು ಜೂನ್ 17ರಂದು ಈ ದಿನ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದಲ್ಲಿರುವ ಕಪಿಲಾ ನದಿಯ ಕಿಂಡಿ ಅಣೆಕಟ್ಟು ಸ್ವಚ್ಚ ಗೊಳಿಸುವಕಾರ್ಯ ಮಾಡಿದರು. ಪ್ರತೀ ವರ್ಷ ಇಲ್ಲಿ ಮಳೆಗಾಲದಿಂದ ಕೃತಕ ನೆರೆ ಬರುತ್ತಿತ್ತು. ಇದನ್ನು ಮನಗಂಡ ವಿಪತ್ತು ಸದಸ್ಯರು ಮೊದಲೆ ಕಿಂಡಿ ಅಣೆಕಟ್ಟು ಸ್ವಚ್ಚಗೊಳಿಸಿ ಮುಂದಾಗಬಹುದಾದ ಅನಾಹುತ ತಪ್ಪಿಸಿದರು. ಕೊಕ್ಕಡ ವಲಯದ ವಿಪತ್ತು ನಿರ್ವಹಣಾ ಸಮಿತಿಯ ಶೀನಪ್ಪ ಶಿಶಿಲ, ಮಾಧವ ದೇನೋಡಿ, ಗಿರಿಜಾ ಕೆದಿಲಾಯ, […]
ಗುಡ್ಡ ಕುಸಿತ-ತಪ್ಪಿದ ಅನಾಹುತ

ಬೆಳ್ತಂಗಡಿ: ಜೂನ್ 16ರ ಸಂಜೆ ಸುರಿದ ಭಾರೀ ಮಳೆಗೆ ಮನೆಯ ಪಕ್ಕದ ಬಂಡೆಕಲ್ಲು ಸಹಿತ ಗುಡ್ಡವೊಂದು ಕುಸಿದು ಬಿದ್ದ ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಸವಣಾಲು ರಸ್ತೆಯಲ್ಲಿ ನಡೆದಿದೆ.ಲಾಯಿಲ ಗ್ರಾಮದ ಹೆರಾಜೆ ಸಮೀಪದ ಹಸನಬ್ಬ ಎಂಬವರ ಮನೆಯ ಪಕ್ಕದ ಗುಡ್ಡ ಕುಸಿದಿದ್ದು ದೊಡ್ಡ ದೊಡ್ಡ ಕಲ್ಲುಗಳು ಮನೆಯ ಗೋಡೆಯ ಪಕ್ಕದಲ್ಲೇ ಉರುಳಿ ಬಿದ್ದಿದೆ. ಅದರೆ ಮನೆಯ ಗೋಡೆಗೆ ಸಣ್ಣಪುಟ್ಟ ಹಾನಿಯಾಗಿದ್ದು, ಸುದೈವವಶಾತ್ ದೊಡ್ಡ ಅನಾಹುತ ತಪ್ಪಿದೆ.
ಕೋವಿಡ್ ನಿರ್ವಹಣೆಯಲ್ಲಿ ಭಾರೀ ಗೋಲ್‌ಮಾಲ್-ಜೀವ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುವ ದಾದಿಯರಿಗಿಲ್ಲ ಕನಿಷ್ಠ ಆರೋಗ್ಯ ರಕ್ಷಾ ಕವಚ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮ ಪಂಚಾಯತ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಧರ್ಮಸ್ಥಳ ಅಶೋಕನಗರ ದಲಿತ ಕಾಲನಿಯ ನಿವಾಸಿಗರಿಗಾಗಿ ಇಲ್ಲಿಯ ಸೂರ್ಯ ಸಭಾಭವನ ಹಾಗೂ ಆಶ್ರಮ ಶಾಲೆಯ ಸಭಾಂಗಣದಲ್ಲಿ ಜೂನ್ 16ರಂದು ಕೊವಿಡ್ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿತ್ತು. ಧರ್ಮಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿಯರು ಇಲ್ಲಿ ಕೋವಿಡ್ ಪರೀಕ್ಷೆಗೆ ಗಂಟಲದ್ರವವನ್ನು ಆರೋಗ್ಯ ರಕ್ಷಾ ಕವಚಗಳಾದ ಪಿಪಿಇ ಕಿಟ್ ಹಾಗೂ ಗ್ಲೌಸ್ ಧರಿಸದೇ ಸಂಗ್ರಹಿಸುವ ಮೂಲಕ ತಾವೂ ಅಪಾಯವನ್ನು ಆಹ್ವಾನಿಸಿಕೊಂಡರಲ್ಲದೇ; ಕೊರೋನಾ ಸೋಂಕಿನ ವಿರುದ್ಧ ಮುಂಜಾಗ್ರತಾ ಕ್ರಮಗಳ ಬಗ್ಗೆ ದಲಿತ […]
ಚೇತನ್ ವಿರುದ್ಧ ಸಂಘ ಪರಿವಾರದ ಪಿತೂರಿಗೆ ಖಂಡನೆ

ಬೆಳ್ತಂಗಡಿ: ಬ್ರಾಹ್ಮಣ್ಯದ ಅಪಾಯಕಾರಿ ಬಗ್ಗೆ ಜಾಗೃತಿಗಾಗಿ ಅಂಬೇಡ್ಕರ್, ಪೆರಿಯಾರ್, ಬಸವಣ್ಣ ಅವರ ಹೇಳಿಕೆಗಳನ್ನು ಮತ್ತೊಮ್ಮೆ ನೆನಪಿದ ಚಲನಚಿತ್ರ ನಟ, ಯುವ ಹೋರಾಟಗಾರ ಚೇತನ್ ಅಹಿಂಸಾ ಅವರ ವಿರುದ್ಧ ಸಂಘಪರಿವಾರ ವ್ಯವಸ್ಥಿತ ಪಿತೂರಿ ನಡೆಸುತ್ತಿದೆ ಎಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ್ ಲಾಯಿಲ ಆರೋಪಿಸಿದ್ದಾರೆ.12 ಶತಮಾನದಲ್ಲಿಯೇ ಬಸವಣ್ಣ ಬ್ರಾಹ್ಮಣ್ಯದ ಅಪಾಯದ ಬಗ್ಗೆ ವಚನ ಚಳವಳಿ ನಡೆಸಿದ್ದಾರೆ. ಮುಂದುವರಿದ ಭಾಗವಾಗಿ ಪೆರಿಯಾರ್ ಅವರು ಬ್ರಾಹ್ಮಣ್ಯದ ವಿರುದ್ಧ ತೀವ್ರ ಸ್ವರೂಪದ ಹೋರಾಟ ನಡೆಸಿದರು. ನಂತರ ಅಂಬೇಡ್ಕರ್ ಅವರು ಬ್ರಾಹ್ಮಣ್ಯದ […]
ಕಡವೆಯ ರಕ್ಷಣೆಗೆ ನಿಂತ ಶೌರ್ಯ ಸ್ವಯಂಸೇವಕ

ಬೆಳ್ತಂಗಡಿ: ಧರ್ಮಸ್ಥಳ ನೇತ್ರಾವತಿ ಸಮೀಪದಲ್ಲಿ ಜೂನ್ 17ರಂದು ಕಡವೆಯೊಂದು ವಾಹನಕ್ಕೆ ಡಿಕ್ಕಿ ಹೊಡೆದು ತೀವ್ರ ಗಾಯಗೊಂಡಿತ್ತು. ಇದನ್ನು ಗಮನಿಸಿದ ಶೌರ್ಯ ವಿಪತ್ತು ನಿರ್ವಹಣಾ ಘಟಕ ಧರ್ಮಸ್ಥಳದ ಧರ್ಮಸ್ಥಳ ವಲಯದ ಸ್ವಯಂಸೇವಕ ಸ್ನೇಕ್ ಪ್ರಕಾಶ್ ಸ್ಥಳೀಯರೊಂದಿಗೆ ಸೇರಿ ಪ್ರಥಮ ಚಿಕಿತ್ಸೆ ಒದಗಿಸಿದ್ದಾರೆ. ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ರವಾನಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಉಜಿರೆಯ ಪಶು ಆಸ್ಪತ್ರೆಗೆ ಕಡವೆಯನ್ನು ಸಾಗಿಸಿದ್ದಾರೆ. ಸ್ನೇಕ್ ಪ್ರಾಕಾಶ್ ಅವರ ಸಮಯಪ್ರಜ್ಞೆಯಿಂದ ಕಡವೆ ಪ್ರಾಣಾಪಾಯದಿಂದ ಪಾರಾಗಿದೆ.ವರದಿ : ಸ್ವಸ್ತಿಕ್ ಕನ್ಯಾಡಿ
ಈ ಸಾವು ನ್ಯಾಯವೇ…?ಲಾಕ್‌ಡೌನ್‌ನಿಂದ ಖಿನ್ನತೆಗೊಳಗಾದ ವ್ಯಕ್ತಿಯನ್ನು ಸೆಳೆದೊಯ್ದ ವಿಧಿ!

ಬೆಳ್ತಂಗಡಿ: ಬೆಳ್ತಂಗಡಿಯ ಸುವರ್ಣ ಪ್ರಿಂಟರ್ಸ್‌ನ ಮಾಲಕ, ಸಮಾಜಮುಖೀ ಚಿಂತಕ ಗಣೇಶ್ ಸುವರ್ಣ ಜೂನ್ 14ರಂದು ಕಾಲನ ಕರೆಗೆ ಓಗೊಟ್ಟು ವಿಧಿವಶರಾಗಿದ್ದಾರೆ. ಇವರ ಅಕಾಲಿಕ ಮರಣ ಇನ್ನೂ ಜೀವಂತವಿರುವ ಸಮಾಜಕ್ಕೆ ಹತ್ತಾರು ಪ್ರಶ್ನೆಗಳನ್ನು ಸೃಷ್ಟಿಸಿ ಹೋಗಿದೆ. ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದೇ ಹೋದಲ್ಲಿ ತದ್ರೂಪಿ ಸಮಸ್ಯೆಗೆ ಇನ್ನಷ್ಟು ಪ್ರಾಣ ಬಲಿಯಾಗಬೇಕಾದೀತು.ಮೇಲ್ನೋಟಕ್ಕೆ ಗಣೇಶ್ ಸುವರ್ಣರ ಸಾವು ಹಾರ್ಟ್ ಅ್ಯಟಾಕ್‌ನಿಂದ ಸಂಭವಿಸಿದೆ. ಆದರೆ ಗಣೇಶ್ ಸುವರ್ಣ ಸತ್ತು ಎರಡು ದಿನಗಳ ತನಕ ಆತನಿಗೆ ಚಿಕಿತ್ಸೆ ನೀಡಿದ ಮಂಗಳೂರಿನ ಪ್ರಖ್ಯಾತ ಆಸ್ಪತ್ರೆಯಾದ ಕೆಎಂಸಿಯ […]
ಪಾಂಗಳ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಶಾಸಕ ಹರೀಶ್ ಪೂಂಜ ನೆರವು

ಬೆಳ್ತಂಗಡಿ:ತಾಲೂಕಿನ ಕಳೆಂಜ ಗ್ರಾಮದ ಪಾಂಗಾಳ ಎಂಬಲ್ಲಿ ಸುರಿದ ಭಾರಿ ಮಳೆಗೆ ಸುಮಾರು 8 ಮನೆಗಳು ಹಾನಿಗೊಳಗಾಗಿದ್ದ ಪ್ರದೇಶದ ಕುರಿತು ಕಳೆಂಜ ಗ್ರಾ.ಪಂ. ಜನಪ್ರತಿನಿಧಿಗಳು ಶಾಸಕ ಹರೀಶ್ ಪೂಂಜ ಅವರ ಗಮನಕ್ಕೆ ತಂದ ಕೂಡಲೇ, ತಕ್ಷಣ ಸ್ಪಂದಿಸಿದ ಶಾಸಕರು ಧನಸಹಾಯ ಸಹಿತ ತುರ್ತು ಸ್ಪಂದನೆ ನೀಡಿದರು.ಶಾಸಕ ಹರೀಶ್ ಪೂಂಜ ಅವರು ಬೆಂಗಳೂರು ತೆರಳಿದ್ದರಿಂದ ಅವರು ಬೆಳ್ತಂಗಡಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾವ್ ಹಾಗು ತಮ್ಮ ಆಪ್ತ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ ಮೇರೆಗೆ ಬುಧವಾರ ಹಾನಿಗೊಳಗಾದ […]