ಸವಾಲುಗಳ ಮಧ್ಯೆಯೂ ಜನಪರ ಕಾರ್ಯಕ್ರಮ ಸಂಘಟಿಸಿದ ತೃಪ್ತಿ – ನಿರ್ಗಮಿತ ರೋಟರಿ ಅಧ್ಯಕ್ಷ ಬಿ. ಕೆ. ಧನಂಜಯ ರಾವ್

ಬೆಳ್ತಂಗಡಿ: ಸುವರ್ಣ ಮಹೋತ್ಸವ ವರ್ಷದಲ್ಲಿರುವ ಬೆಳ್ತಂಗಡಿ ರೋಟರಿ ಕ್ಲಬ್ ಕೋವಿಡ್ ಎರಡನೇ ಅಲೆಯ ಹೊಡೆತ ಸಹಿತ ಅನೇಕ ಸಮಸ್ಯೆ-ಸವಾಲುಗಳ ಮಧ್ಯೆಯೂ ಜನಪರವಾದ 1 ಸಾವಿರದಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಷ್ಟ್ರಮಟ್ಟದಲ್ಲಿ ರೋಟರಿ ಇತಿಹಾಸದಲ್ಲೇ ಒಂದು ವರ್ಷದಲ್ಲಿ ಅತೀ ಹೆಚ್ಚು ಕಾರ್ಯಕ್ರಮ ಸಂಘಟಿಸಿದ ಕ್ಲಬ್ ಎಂದು ಗುರುತಿಸಿಕೊಂಡಿದೆ. ಜೊತೆಗೆ ರೋಟರಿ ನ್ಯೂಸ್ ರಾಷ್ಟ್ರೀಯ ಪತ್ರಿಕೆಯಲ್ಲಿ ಬೆಳ್ತಂಗಡಿ ಕ್ಲಬ್ಬಿನ ಕಾರ್ಯಕ್ರಮಗಳ 6 ಪುಟದ ವರದಿ ಬಂದಿರುವುದು ಸಂಘಟಿತ ಪ್ರಯತ್ನಕ್ಕೆ ಹಿಡಿದ ಕೈಗನ್ನಡಿ ಎಂದು ರೋಟರಿ ಕ್ಲಬ್ ಬೆಳ್ತಂಗಡಿಯ ನಿರ್ಗಮಿತ ಅಧ್ಯಕ್ಷ, ನ್ಯಾಯವಾದಿ […]
ಗೃಹರಕ್ಷಕ ದಳದಿಂದ ವನಮಹೋತ್ಸವ

ಬೆಳ್ತಂಗಡಿ: ಗೃಹರಕ್ಷಕ ದಳ ಬೆಳ್ತಂಗಡಿ ಘಟಕದ ವತಿಯಿಂದ ಜೂನ್ 29ರಂದು 2ನೇ ಹಂತದ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.ಬೆಳ್ತಂಗಡಿ ಗೃಹರಕ್ಷಕದಳ ಘಟಕದ ಘಟಕಾಧಿಕಾರಿ ಜಯಾನಂದ ಹಾಗೂ ಎಲ್ಲಾ ಗ್ರಹರಕ್ಷಕರು ಉಪಸ್ಥಿತರಿದ್ದರು.ಈ ಸಂದರ್ಭ ‘ಅರಣ್ಯ ಸಂರಕ್ಷಣೆ- ಪರಿಸರ ಜಾಗೃತಿ ಮತ್ತು ವನ್ಯ ಪ್ರಾಣಿಗಳ ಸಂರಕ್ಷಣೆ’ ಬಗ್ಗೆ ಸಂಕಲ್ಪ ಕೈಗೊಳ್ಳಲಾಯಿತು
ಸಂಕಷ್ಟದಲ್ಲಿರುವ ಕುಟುಂಬಗಳಿಗೆ ದಿನಬಳಕೆ ಸಾಮಾಗ್ರಿಗಳ ಕಿಟ್ ವಿತರಣೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಾದ್ಯಂತ ಕೊರೋನ ಪೀಡಿತರಾಗಿ ಕಾರಂಟೈನ್‌ನಲ್ಲಿರುವ ಹಾಗೂ ಮನೆಯಿಂದ ಹೊರಗೆ ಬರಲು ಅನಾನುಕೂಲವಾಗಿದ್ದವರನ್ನು ಗುರುತಿಸಿ, ಅಂತವರ ಕಷ್ಟಗಳಿಗೆ ಸ್ಪಂದಿಸಿ ಆಹಾರ ಪರಿಕರಗಳ ಕಿಟ್‌ಗಳನ್ನು ಅವರವರ ಮನೆಗೆ ಹೋಗಿ ನೇರವಾಗಿ ಕೊಡುವ ಯೋಜನೆಯನ್ನು ಹಮ್ಮಿಕೊಂಡಿರುವ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರರ ಮಕ್ಕಳು ಹಾಗೂ ಕುಟುಂಬಿಕರು ಜೂನ್ 29ರಂದು ವೇಣೂರು ಹೋಬಳಿಯ ವೇಣೂರು, ಕರಿಮಣೇಲು, ಬಡಕೊಡಿ, ಬಜ್ರೆ ಮತ್ತು ಹೊಸಂಗಡಿ ಗ್ರಾಮಗಳಲ್ಲಿ ಅಗತ್ಯ ದಿನಬಳಕೆ ವಸ್ತುಗಳ ಕಿಟ್ ವಿತರಣೆ ಮಾಡಿದರು.ಬಡವರ ಕಷ್ಟಗಳಿಗೆ ಸದಾ ಸ್ಪಂದಿಸುವ ಬಡವರಬಂಧು ಎಂದೇ […]
ಸ್ಪಂದನಾ ಸೇವಾ ಸಂಘದಿಂದ ನೆರವು

ಬೆಳ್ತಂಗಡಿ: ಕ್ಯಾನ್ಸರ್ ನಿಂದ ಬಳಲುತ್ತಿರುವ ಉಜಿರೆ ಗ್ರಾಮದ ಮುಂಡತ್ತೋಡಿ ಪೂರ್ಣಿಮಾ ಅವರಿಗೆ ಚಿಕಿತ್ಸಾ ಸಹಾಯಾರ್ಥವಾಗಿ ಬೆಳ್ತಂಗಡಿ ಸ್ಪಂದನಾ ಸೇವಾ ಸಂಘದ ವತಿಯಿಂದ ರೂಪಾಯಿ 15,000/- ದ ಚೆಕ್ಕನ್ನು ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿರ್ದೇಶಕರಾದ ಉಷಾದೇವಿ ಕಿನ್ಯಾಜೆ ಇವರ ಮೂಲಕ ಫಲಾನುಭವಿಗೆ ಜೂನ್ 29ರಂದು ಹಸ್ತಾಂತರ ಮಾಡಲಾಯಿತು.ಈ ಸಂಧರ್ಭದಲ್ಲಿ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ಗೌಡ ಕೊಯ್ಯೂರು, ನಿಕಟಪೂರ್ವ ನಿರ್ದೇಶಕರಾದ ಆನಂದ […]
ಗುರುದೇವ ಕಾಲೇಜಿನಲ್ಲಿ ಕೋವಿಡ್ ವ್ಯಾಕ್ಸಿನೇಷನ್

ಬೆಳ್ತಂಗಡಿ: ಬೆಳ್ತಂಗಡಿಯ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕೋವಿಡ್ ವ್ಯಾಕ್ಸಿನೇಷನ್ ನೀಡುವ ಕಾರ್ಯಕ್ರಮವು ಜೂನ್ 29ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ವಸಂತ ಬಂಗೇರ ಉದ್ಘಾಟನೆ ನೆರವೇರಿಸಿದರು.ತಾಲೂಕು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾl ವಿದ್ಯಾವತಿ, ಕಾಲೇಜಿನ ನೋಡೆಲ್ ಅಧಿಕಾರಿ ಶಮೀವುಲ್ಲಾ, ರಾಷ್ಟ್ರೀಯ ಸೇವಾ ಯೋಜನೆಯ ಪದಾಧಿಕಾರಿಗಳಾದ ಸಂತೋಷ್, ಭವ್ಯಶ್ರೀ ಮೊದಲಾದವರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಡಾ. ಪ್ರವೀಣ್ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ […]
ಪೆಟ್ರೋಲ್ ಬೆಲೆ ಲೀಟರಿಗೆ ರೂಪಾಯಿ 100/- ದಾಟಿದರೇನು…. ಬಂಗುಡೆ ಮೀನಿಗೆ ಕಿಲೋಗೆ 200/- ರೂಪಾಯಿ ಆಗಿಲ್ಲವಾ…..

ಬೆಳ್ತಂಗಡಿ: ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸಿಲ್ ಬೆಲೆ ಗಗನಕ್ಕೇರುತ್ತಿರುವ ಬಗ್ಗೆ ಮಾಧ್ಯಮಗಳು ಹಾಗೂ ಸಾಕಷ್ಟು ಜನಸಾಮಾನ್ಯರು ಆತಂಕ ವ್ಯಕ್ತಪಡಿಸಿದಾಗ ಆಕ್ರೋಶ ವ್ಯಕ್ತಪಡಿಸಿದ ಕೆಲ ಯುವಕ ಮಿತ್ರರು ‘ಪೆಟ್ರೋಲ್ ಬೆಲೆ ರೂಪಾಯಿ 100/- ದಾಟಿದರೇನು? ಬಂಗುಡೆ ಮೀನಿಗೆ ಕಿಲೋಗೆ 200/-ರೂಪಾಯಿ ಆಗಿಲ್ಲವಾ? ನಾವೇನು ಬಂಗುಡೆ ಮೀನು ತಿನ್ನೋದನ್ನು ಬಿಟ್ಟಿದ್ದೇವಾ? ಅಂತೆಯೇ ಪೆಟ್ರೋಲ್ ಬೆಲೆ ಲೀಟರಿಗೆ 200/- ಆದರೂ ನಾವು ತಿರುಗುವುದನ್ನು ಬಿಡೋದಿಲ್ಲ’ ಎಂದು ತಿರುಗೇಟು ನೀಡಿದ್ದರು.ನಾನೇನೋ ಇದು ಬಿಸಿರಕ್ತದ ಯುವಕರು ಪ್ರಧಾನಿ ನರೇಂದ್ರ ಮೋದಿ ಮೇಲಿನ ಅಂಧಾಭಿಮಾನದದ ವ್ಯಕ್ತ […]
‘ಹಣ್ಣಿನ ಗಿಡನಾಟಿಯ ಫಲಿತಾಂಶ ಮುಂದಿನ ದಿನಗಳಲ್ಲಿ ಲಭ್ಯ’

ಬೆಳ್ತಂಗಡಿ: ಹಣ್ಣಿನ ಗಿಡಗಳ ನಾಟಿ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಯಶಸ್ವಿಯಾಗಿ ನಿರ್ವಹಿಸುತ್ತಿದ್ದು, ಮುಂದಿನ ಹತ್ತು ವರ್ಷಗಳಲ್ಲಿ ಇದರ ಸಕಾರಾತ್ಮಕ ಪರಿಣಾಮ ನಮ್ಮ ಕಣ್ಣೆದುರಿಗೆ ಬರಲಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದರು.ಅವರು ಜೂನ್ 28ರಂದು ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಂಬಾರು ಬುಡ್ಡೇಲುಮಾರು ರುದ್ರಭೂಮಿಯಲ್ಲಿ, ಗ್ರಾಮ ಪಂಚಾಯತ್ ಶಿರ್ಲಾಲು ಮತ್ತು ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ನಡೆದ ಗಿಡನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.ಶಿರ್ಲಾಲು […]
ಒಂಟಿ ಸಲಗದ ಸವಾರಿ ಮನೆಯಂಗಳಕ್ಕೆ

ಬೆಳ್ತಂಗಡಿ: ಮುಂಡಾಜೆ ಗ್ರಾಮದ ಕಲ್ಲಾಜೆ, ಮುಂಡ್ರುಪಾಡಿ, ಚಾಮುಂಡಿ ನಗರ, ಧುಂಬೆಟ್ಟು, ಮಜಲು ಮತ್ತಿತರ ಪರಿಸರಗಳಲ್ಲಿ ಜೂನ್ 27ರ ಮುಂಜಾನೆ ಒಂಟಿ ಸಲಗ ಸವಾರಿ ನಡೆಸಿದೆ. ಈ ಪ್ರದೇಶದ ಗ್ರಾಮೀಣ ರಸ್ತೆಯ ಮೂಲಕ ಸುಮಾರು 2ಕಿ.ಮೀ ವ್ಯಾಪ್ತಿಯಲ್ಲಿ ಓಡಾಟ ನಡೆಸಿರುವ ಒಂಟಿ ಸಲಗ, ಮುಂಡ್ರುಪಾಡಿ ಜಯಾನಂದ ಶೆಟ್ಟಿ, ಸಂಜೀವ ಶೆಟ್ಟಿ, ಬಾಲಕೃಷ್ಣ ಗೌಡ ಮೊದಲಾದವರ ಮನೆಯ ಅಂಗಳದ ಮೂಲಕ ತೋಟಗಳ ಕಡೆಗೆ ಸಂಚರಿಸಿದೆ. ಜಯಾನಂದ ಶೆಟ್ಟಿಯವರ ಮನೆಯ ಅಂಗಳದ ಮೂಲಕ ಮುಂಜಾನೆ 4:30ರ ಸುಮಾರಿಗೆ ಒಂಟಿ ಸಲಗ ಸಂಚರಿಸಿರುವ […]
ಅಂಬ್ಯುಲೆನ್ಸ್ ನಲ್ಲಿ ಮಹಿಳೆ ಹೆರಿಗೆ

ಬೆಳ್ತಂಗಡಿ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ 108 ಅಂಬುಲೆನ್ಸ್‌ನಲ್ಲೇ ಹೆರಿಗೆಯಾದ ಘಟನೆ ಜೂನ್ 25ರಂದು ವರದಿಯಾಗಿದೆ.ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಮಜಲಡ್ಡ ನಿವಾಸಿ ಲಲಿತ (38) ಅಂಬುಲೆನ್ಸ್‌ನಲ್ಲಿ ಮಗುವಿಗೆ ಜನ್ಮ ನೀಡಿದವರು. ಹೆರಿಗೆ ನೋವಿನಿಂದ ಬಳಲುತ್ತಿದ್ದ ಇವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಡಂತ್ಯಾರು ಸಮೀಪಿಸುತ್ತಿದ್ದಂತೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣ ಕಾರ್ಯಪ್ರವೃತ್ತರಾದ ಶುಶ್ರೂಷಕಿ ವಿಲ್ಮಾ ಹಾಗೂ ವಾಹನ ಚಾಲಕ ಗಿರೀಶ್‌ರವರ ಸಹಾಯದಿಂದ ಅಂಬುಲೆನ್ಸ್ ನ ಒಳಗೆ ಹೆರಿಗೆ ಮಾಡಿಸಿ ಸಾರ್ವಜನಿಕರ […]
ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷೀಲಿ ಎಂಬಂತೆ ಮತ್ತೆ ವಕ್ಕರಿಸಿದ ಕೊರೋನಾ ಸೋಂಕು

ಬೆಳ್ತಂಗಡಿ: ಇಡೀ ದೇಶದಲ್ಲಿ ಕೊರೊನಾ ಹಾವಳಿ ಸ್ವಲ್ಪ ಕಡಿಮೆಯಾಗಿದ್ದರೂ ಗ್ರಾಮೀಣ ಭಾಗಗಳಲ್ಲಿ ಇನ್ನೂ ಸೋಂಕಿನ ಪ್ರಮಾಣ ಹೆಚ್ಚಾಗುತ್ತಾ ಇದೆ. ಬೆಳ್ತಂಗಡಿ ತಾಲೂಕು ಜಿಲ್ಲೆಯಲ್ಲೇ ಕೊರೊನಾ ಸೋಂಕಿನ ಹಾಟ್ ಸ್ಪಾಟ್ ಆಗಿದೆ. ತಾಲೂಕಿನ ಕೆಲವೊಂದು ಗ್ರಾಮಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಲಾಯ್ಲ ಗ್ರಾಮದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾಗಿದ್ದ ಕಾರಣ ಜಿಲ್ಲಾಡಳಿತ ಕಳೆದ ವಾರ ಇಡೀ ಗ್ರಾಮವನ್ನು ಸೀಲ್‌ಡೌನ್ ಮಾಡಿತ್ತು. ಇನ್ನೇನು ಲಾಯ್ಲ ಗ್ರಾಮದಲ್ಲಿ ಕೊರೋನಾ ಸೋಂಕು ಹತೋಟಿಗೆ ಬಂದು ಸೀಲ್‌ಡೌನ್ ತೆರವಾಯಿತು ಅನ್ನೋವಾಗಲೇ ಗ್ರಾಮದ ಕನ್ನಾಜೆ […]