ನವಭಾರತ್ ಗೆಳೆಯರ ಬಳಗದಿಂದ ಸೇವಾಕಾರ್ಯ

ಬೆಳ್ತಂಗಡಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಸಂಘಟನೆ ನವಭಾರತ್ ಗೆಳೆಯರ ಬಳಗ(ರಿ) ಕಲ್ಲಾಜೆ-ಇಂದಬೆಟ್ಟು  ವತಿಯಿಂದ ಲಾಕ್‌ಡೌನ್ ಸಮಯದಲ್ಲಿ ಧಾರ್ಮಿಕ ಸೇವಾ ಕಾರ್ಯ ನಡೆಸುತ್ತಿರುವ ಬೆಳ್ತಂಗಡಿ  ತಾಲೂಕಿನ ಗೋಶಾಲೆಗಳಾದ  ನಂದ ಗೋಕುಲ ಗೋಶಾಲೆ ಕಳೆಂಜ (2 ಲೋಡ್ ಪಿಕಪ್) ಹಾಗೂ ಕಾಮಧೇನು ಗೊಶಾಲೆ ಸೌತಡ್ಕ ಕ್ಷೇತ್ರಕ್ಕೆ(1ಲೋಡ್ ಪಿಕಪ್) ಹಸಿ ಹುಲ್ಲನ್ನು ನೀಡಲಾಯಿತು. ಮತ್ಸ್ಯ ಕ್ಷೇತ್ರ ಶಿಶಿಲದ ದೇವರ ಮೀನುಗಳಿಗೆ ಆಹಾರವನ್ನು ನೀಡುವ ಮೂಲಕ ಸಂಘದ ಸದಸ್ಯರಿಂದ ಸೇವಾ ಕಾರ್ಯ ಮುಂದುವರಿಯಿತು. ಈ ಸಂದರ್ಭದಲ್ಲಿ ನವಭಾರತ್ ಸಂಘಟನೆಯ ಗೌರವ ಅಧ್ಯಕ್ಷ […]

ಬೆಳ್ತಂಗಡಿಯಿಂದ ಬೆಂಗಳೂರಿಗೆ ಮರಳಲೂ ಶಾಸಕ ಹರೀಶ್ ಪೂಂಜರ ಕೃಪೆಯಿಂದ ಉಚಿತ ಬಸ್

ಬೆಳ್ತಂಗಡಿ: ಕಳೆದ ಎಪ್ರಿಲ್ ಕೊನೆಯ ವಾರದಲ್ಲಿ ರಾಜ್ಯ ಸರಕಾರ ಕೊರೋನಾ ಎರಡನೇ ಅಲೆಯ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಜನತಾ ಕರ್ಫ್ಯೂ ಹೆಸರಿನ ಲಾಕ್‌ಡೌನ್‌ಗೆ ಮುಂದಾಗುತ್ತಿದ್ದಂತೆ ಬೆಂಗಳೂರಲ್ಲಿ ಉದ್ಯೋಗದಲ್ಲಿದ್ದ ಸಾಕಷ್ಟು ಮಂದಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಎಪ್ರಿಲ್ 24ಹಾಗೂ 25ತಾರೀಕಿನಂದು ಉಚಿತವಾಗಿ ವ್ಯವಸ್ಥೆಗೊಳಿಸಿದ ಬಸ್‌ಗಳಲ್ಲಿ ಎದ್ದೆನೋ-ಬಿದ್ದೆನೋ ಎಂಬಂತೆ ಓಡಿ ಬಂದು ಬಸ್ಸನ್ನೇರಿ ಬೆಳ್ತಂಗಡಿ ತಾಲೂಕಿನ ತಮ್ಮ ಊರುಗಳಿಗೆ ಮರಳಿದರು. ಇದರಲ್ಲಿ ಅನೇಕರು ಊರಿಗೆ ಮರಳುತ್ತಿದ್ದಂತೆ ಶಾಸಕ ಹರೀಶ್ ಪೂಂಜರ ಉಸ್ತುವಾರಿಯಲ್ಲಿ ಹಳ್ಳಿಯ ಶಾಲೆಗಳಲ್ಲಿ ವ್ಯವಸ್ಥೆಗೊಳಿಸಲಾದ ಕ್ವಾರಂಟೈನ್ ಸೆಂಟರ್‌ಗಳಲ್ಲಿ ವಾಸ್ತವ್ಯವಿದ್ದು […]

‘ವೈದ್ಯರ ನಡೆ-ಹಳ್ಳಿಯ ಕಡೆ’ ಕಾರ್ಯಕ್ರಮಕ್ಕೆ ಚಾಲನೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತ ಬೆಳ್ತಂಗಡಿ ಇದರ ಸಂಯಕ್ತ ಆಶ್ರಯದಲ್ಲಿ ಜೂನ್ 6ರಂದು ಬೆಳ್ತಂಗಡಿಯ ಮಿನಿ ವಿಧಾನಸೌಧದ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ‘ವೈದ್ಯರ ನಡೆ ಹಳ್ಳಿಯ ಕಡೆ’ ಜಾಗೃತಿಗೆ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಚಾಲನೆ ನೀಡಿದರು.ಕೋರೊನಾ ಸಂಧಿಗ್ಧತೆಯ ಈ ಸಂದರ್ಭದಲ್ಲಿ ಮುಂಚೂಣಿಯಲ್ಲಿ ನಿಂತು ಜನರ ಸೇವೆ ಮಾಡುತ್ತಿರುವ ವೈದ್ಯರು ಹಳ್ಳಿಗಳಿಗೆ ತೆರಳಿ ಜನರಲ್ಲಿ ಧೈರ್ಯತುಂಬಲಿದ್ದಾರೆ.

ಕೊರೋನಾ ಸೋಂಕಿತರ ಪಾಲಿಗೆ ವರವಾದ ಧರ್ಮಸ್ಥಳದ ರಜತಾದ್ರಿ ಕೋವಿಡ್ ಸೆಂಟರ್

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿರುವ ಕೊರೋನಾ ಸೋಂಕಿತರಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವಿರೇಂದ್ರ ಹೆಗ್ಗಡೆಯವರು ಯವರು ರಜತಾದ್ರಿ ವಸತಿಗೃಹದಲ್ಲಿ 300 ಕೊಠಡಿಗಳ 600 ಬೆಡ್ ಇರುವಂತಹ ಕಟ್ಟಡವನ್ನು ಕೋವಿಡ್ ಕೇರ್ ಸೆಂಟರ್ ಮಾಡಲು ಅವಕಾಶ ಕಲ್ಪಿಸಿರುತ್ತಾರೆ.ಸದ್ರಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಪ್ರಸ್ತುತ 106 ಪುರುಷರು,72 ಮಹಿಳೆಯರು ಒಟ್ಟು 178 ಮಂದಿ ಸೋಂಕಿತರಿಗೆ ಸಕಲ ಸೌಕರ್ಯಗಳೊಂದಿಗೆ ಸೂಕ್ತ ಚಿಕಿತ್ಸೆ ನೀಡಿ ಆರೈಕೆ ಮಾಡಲಾಗುತ್ತಿದೆ.ಪ್ರತಿದಿನ ಶ್ರೀ ಕ್ಷೇತ್ರದಿಂದ ಬೆಳಗ್ಗಿನ ಉಪಹಾರ, 11ಗಂಟೆಗೆ ಕಷಾಯ-ಬಿಸ್ಕೆಟ್, ಮದ್ಯಾಹ್ನ […]

ಕೋವಿಡ್-19 ಸರಕಾರದ ನಿಯಮ ಉಲ್ಲಂಘಿಸಿದ ಸಚಿವ ಲಿಂಬಾವಳಿ

ಬೆಳ್ತಂಗಡಿ: ರಾಜ್ಯ ಸರಕಾರದ ಕೋವಿಡ್-19 ನಿಯಮಾವಳಿಯನ್ನು ರಾಜ್ಯ ಸರಕಾರದ ಅರಣ್ಯ ಸಚಿವ ಅರವಿಂದ ಲಿಂಬಾವಳಿಯವರು ಉಲ್ಲಂಘಿಸಿದ ಪ್ರಕರಣ ಜೂನ್ 5ರಂದು ಧರ್ಮಸ್ಥಳದಲ್ಲಿ ನಡೆದಿದೆ.ರಾಜ್ಯ ಸರಕಾರ ಹೊರಡಿಸಿದ ಕೋವಿಡ್-19 ಲಾಕ್‌ಡೌನ್ ಮಾರ್ಗಸೂಚಿಯಂತೆ ರಾಜ್ಯದ ಎಲ್ಲ ದೇಗುಲಗಳು, ಚರ್ಚ್‌ಗಳು, ಮಸೀದಿಗಳ ಸಹಿತ ಎಲ್ಲ ಧರ್ಮೀಯರ ಎಲ್ಲ ಶ್ರದ್ಧಾಕೇಂದ್ರಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಸರಕಾರದ ಆದೇಶ ಎಂದ ಮೇಲೆ ಇದು ಸಚಿವರಿಂದ ಜನಸಾಮಾನ್ಯನವರೆಗೆ ಎಲ್ಲರಿಗೂ ಅನ್ವಯ. ಜೂನ್ 5ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ಸರಕಾರದ ಅರಣ್ಯ ಸಚಿವ […]

ಎಂ.ಆರ್.ಪಿ.ಎಲ್‌ನ ಉದ್ಯೋಗ ನೀತಿ ಖಂಡಿಸಿ ಮನೆಮನೆ ಹೋರಾಟ

ಬೆಳ್ತಂಗಡಿ: ಎಂ.ಆರ್.ಪಿ.ಎಲ್ ಸಂಸ್ಥೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾರಂಭಿಸುವ ಸಂದರ್ಭ ಇಲ್ಲಿಯ ಜನರ ಒಡೆತನದ ಭೂಸ್ವಾದೀನ ಮಾಡುವ ಸಂದರ್ಭ, ಎಂ.ಆರ್.ಪಿ.ಎಲ್ ಸಂಸ್ಥೆಯಲ್ಲಿ ಉದ್ಯೋಗ ನೀಡುವಾಗ ಸ್ಥಳಿಯರಿಗೇ ಆದ್ಯತೆ ನೀಡುವ ಭರವಸೆ ಸಂಸ್ಥೆ ನೀಡಿತ್ತು. ಆದರೆ ಇಂದು ಎಂ.ಆರ್.ಪಿ.ಎಲ್. ನವರು ಮೆರಿಟ್ ಇಲ್ಲದೆ, ನಮ್ಮ ಜಿಲ್ಲೆಗೆ ಆದ್ಯತೆಯನ್ನೂ ನೀಡದೇ ಸರಕಾರದ ಕಾನೂನು ಉಲ್ಲಂಘಿಸಿ ಉದ್ಯೊಗ ನೀಡುತ್ತಿರುವುದು ಖಂಡನೀಯ. ಆದ್ದರಿಂದ ಎಂ.ಆರ್.ಪಿ.ಎಲ್‌ನ ಉದ್ಯೋಗದಲ್ಲಿ ಸ್ಥಳಿಯರಿಗೆ ಆದ್ಯತೆ ನೀಡ ಬೇಕು ಎಂದು ಕರ್ನಾಟಕ ರಾಜ್ಯ ಋಣಮುಕ್ತ ಹೋರಾಟ ಸಮಿತಿಯ ರಾಜ್ಯದ್ಯಕ್ಷರಾದ ಬಿ. […]

ವಾರದಲ್ಲಿ ಮೂರು ದಿನ ವ್ಯವಹಾರ ನಡೆಸಲು ಅವಕಾಶ ಕಲ್ಪಿಸಿ;ಮೂಡುಬಿದಿರೆ ಜವಳಿ ವರ್ತಕರ ಸಂಘದಿಂದ ಮುಖ್ಯಮಂತ್ರಿಗೆ ಪತ್ರ

ಮೂಡುಬಿದಿರೆ: ಈಗಿನಲಾಕ್ ಡೌನ್ ನಲ್ಲಿ ಜವಳಿ ವರ್ತಕರು ಚಿಂತಾಜನಕ ಪರಿಸ್ಥಿತಿಯನ್ನು ತಲುಪಿದ್ದು ಲಾಕ್ ಡೌನ್ ಆದೇಶದಲ್ಲಿ ಒಂದಿಷ್ಟು ಸಡಿಲಿಕೆ ಮಾಡಿ ಜವಳಿ ವರ್ತಕರಿಗೂ ವಾರದಲ್ಲಿ ಮೂರುದಿನ ವ್ಯವಹಾರ ನಡೆಸಲು ಅವಕಾಶ ಕಲ್ಪಿಸುವಂತೆ ಮೂಡುಬಿದಿರೆ ತಾಲೂಕು ಜವಳಿ ವರ್ತಕರ ಸಂಘವು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದು ಮನವಿ ಮಾಡಿದೆ.ಈ ಬಗ್ಗೆ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಪತ್ರಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಜವಳಿ ವರ್ತಕರ ಸಂಘದ ಪ್ರಮುಖರು ಈ ಬಾರಿ ಕೊರೋನಾ ಹಾವಳಿಯಿಂದ ಎಪ್ರಿಲ್ […]

ಕೊರೊನಾ ವಾರಿಯರ್ಸ್‌ಗೆ ವ್ಯಾಪರೈಸರ್ ಕೊಡುಗೆ

ಬೆಳ್ತಂಗಡಿ: ಬೆಳ್ತಂಗಡಿಯ ನ್ಯಾಯವಾದಿ ಮತ್ತು ನೋಟರಿ ಪಬ್ಲಿಕ್ ಶಶಿಕಿರಣ್ ಜೈನ್ ಜೂನ್ 5ರಂದು ಕಲ್ಮಂಜ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಲ್ಮಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು,ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ವ್ಯಾಪರೈಸರ್ ಕೊಡುಗೆಯಾಗಿ ನೀಡಿ ಸಹಕರಿಸಿದರು. ಈ ಸಂದರ್ಭದಲ್ಲಿ ಕಲ್ಮಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಎಂ. ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.

ಕೊರೊನಾ ಸೋಂಕು ಮುಕ್ತರಿಂದ ಗಿಡ ನೆಟ್ಟು ಸಂಭ್ರಮ

ಬೆಳ್ತಂಗಡಿ: ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸೀಲ್‌ಡೌನ್ ಆಗಿದ್ದ 16 ಮನೆಯವರು ಸೇರಿ ಗಿಡ ನೆಟ್ಟು ಕೊರೊನಾ ಮುಕ್ತರಾಗಿದ್ದೇವೆ ಎಂಬ ಸಂದೇಶ ಸಾರುವ ಮೂಲಕ ಮಾದರಿ ಕಾರ್ಯಕ್ರಮ ಮಾಡಿ ಗಮನ ಸೆಳೆದಿದ್ದಾರೆ.ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡ್ಲಾಡಿಯ ಬಡಾವಣೆಯೊಂದರ 16 ಮನೆಗಳಿರುವ ಈ ಕಾಲನಿಯ 12 ಮನೆಗಳ ಸುಮಾರು 36 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಈ ಪ್ರದೇಶವನ್ನು ಮೇ 20ರಂದು ಸೀಲ್ ಡೌನ್ ಮಾಡಲಾಗಿತ್ತು. 17 ದಿನಗಳ ಬಳಿಕ […]

ರಂಗಮನೆಯಿಂದ ಕಿರುಚಿತ್ರ ನಿರ್ಮಾಣ

ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ( ರಿ.) ಸುಳ್ಯ ಇದರ ಆಶ್ರಯದಲ್ಲಿ ಸಾಮಾಜಿಕ ಜಾಗೃತಿಯ ಒಂದು ಕಿರುಚಿತ್ರ ನಿರ್ಮಾಣಗೊಳ್ಳಲಿದೆ. ಹಿರಿಯ ಯಕ್ಷರಂಗ ಕಲಾವಿದ ಸುಜನಾ ಸುಳ್ಯ ಶುಭಹಾರೈಸಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ರಂಗನಿರ್ದೇಶಕ ಜೀವನ್ ರಾಂ ಸುಳ್ಯ ನಿರ್ದೇಶನದಲ್ಲಿ ರಂಗಮನೆ ಸುತ್ತಲಿನ ಪರಿಸರದಲ್ಲಿ ಚಿತ್ರೀಕರಣ ಆರಂಭಗೊಂಡಿತು. ಮಾ| ಮನುಜ ನೇಹಿಗ,ಕು| ಲಾಲಿತ್ಯ ಹಾಗೂ ಜೀವನ್ ರಾಂ ಸುಳ್ಯ ಪ್ರಧಾನವಾಗಿ ಅಭಿನಯಿಸುವ ಈ ಕಿರುಚಿತ್ರದ ಕ್ಯಾಮರಾ ಝೀಟೋಗ್ರಫಿಯ ಝೀಶನ್,ಸಹ ನಿರ್ದೇಶನ ಹರ್ಷಿತ್ ಕೆ, ತಾಂತ್ರಿಕವಾಗಿ ಉಪನ್ಯಾಸಕರಾದ ಕುಸುಮಾಧರ ಸಂಕಡ್ಕ ಮತ್ತು […]