NETSURF ಸಂಸ್ಥೆಯಿಂದ ಕೋವಿಡ್ -19 ಟೆಸ್ಟ್ ಕಿಟ್ ಬಿಡುಗಡೆ-ಇನ್ನು 10 ನಿಮಿಷದಲ್ಲಿ ಮನೆಯಲ್ಲೇ ಟೆಸ್ಟ್ ಮಾಡಿಕೊಂಡು ರಿಪೋರ್ಟ್ ಪಡೆಯಬಹುದು

ಬೆಳ್ತಂಗಡಿ. ಮೂಲತಃ ಸಾಫ್‌ವೇರ್ ಕಂಪೆನಿಯಾದ Netsurf ಕಂಪೆನಿಯ ಮೈ Lab ಇದೀಗ ಕೇವಲ 250/ ರೂಪಾಯಿಗೆ ನಮ್ಮ ಮನೆಯಲ್ಲೇ ಕುಳಿತು 10 ನಿಮಿಷದಲ್ಲಿ Covid ಟೆಸ್ಟ್ Report ಪಡೆಯಬಹುದಾದ Coviself ಕಿಟ್‌ನ್ನು ಬಿಡುಗಡೆ ಮಾಡಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಕೌನ್ಸಿಲ್ ( ICMR) ನಿಂದ ಮಾನ್ಯತೆ ಪಡೆದು ಬಿಡುಗಡೆ ಯಾದ ಈ Coviself ಅನ್ನು ಕಳೆದ ವಾರ Netsurf ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಸುಜೀತ್ ಜೈನ್ ಬಿಡುಗಡೆ ಮಾಡಿದ್ದರು. ಇದೀಗ ದೇಶದಾದ್ಯಂತ ಎಲ್ಲ ಮೆಡಿಕಲ್ ಸ್ಟೋರ್ ಗಳಲ್ಲಿ […]
ನಿದ್ದೆ ಬರುವವನನ್ನು ಹಾಸಿಗೆಗೆ ತಳ್ಳಿದ ಆಡಳಿತ! ಮರಳು ಮಾಫಿಯಾದವರಿಗಿನ್ನು ಹಬ್ಬ?

ಬೆಳ್ತಂಗಡಿ: ಎರಡು ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಕೆಲವೆಡೆ ಸುರಿದ ಭಾರೀ ಮಳೆ ಅದರಿಂದ ಉಂಟಾದ ನೆರೆ ಹಾಗೂ ಭೂಕುಸಿತದಿಂದ ಯಾರು ನಷ್ಟ ಅನುಭವಿಸಿದ್ದಾರೆ; ಯಾರು ತಮ್ಮ ಕೃಷಿ ಮತ್ತು ಮನೆ ಕಳೆದುಕೊಂಡಿದ್ದಾರೆ; ಯಾರು ಸರಕಾರದಿಂದ ಪರಿಹಾರ ಪಡೆದಿದ್ದಾರೆ ಎಂಬುದು ಈಗ ಎಲ್ಲರೂ ಮರೆತ ವಿಚಾರ. ಆದರೆ ಆ ಭೀಕರ ನೆರೆಯ ಸಂದರ್ಭ ನದಿ, ಹೊಳೆ, ತೊರೆ, ಹಳ್ಳಗಳಲ್ಲಿ ತುಂಬಿದ ಹೂಳೆತ್ತುವ ನೆಪದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಹುಟ್ಟಿಕೊಂಡ ಮರಳು ಮಾಫಿಯಾ ಇಂದು ತನ್ನ ಕಬಂಧ ಬಾಹುಗಳನ್ನು ಚಾಚಿ […]
ಸಂಕಷ್ಟದಲ್ಲಿದ್ದವರ ಸೇವೆ ಮಾನವೀಯತೆ-ವಂ. ಬಿಷಪ್

ಬೆಳ್ತಂಗಡಿ : ‘ನಿರ್ಗತಿಕರ, ಮಾನಸಿಕ ಅಸ್ವಸ್ಥರ, ವೃದ್ಧರ ಸೇವೆ ಮಾಡುವ ಸಿಯೋನ್ ಆಶ್ರಮದ ಕಾರ್ಯ ದೇವರು ಮೆಚ್ಚುವಂತಹುದ್ದು. ಇದೀಗ ಕೊರೊನಾ ಮಹಾಮಾರಿಯು ಇಲ್ಲಿನ ಅನಾಥರಿಗೆ ಮಾತ್ರವಲ್ಲ; ಮಾನಸಿಕ ಅಸ್ವಸ್ಥರಿಗೂ ಕಾಡುತ್ತಿದ್ದು, ಇವರ ಸೇವೆ ಮಾಡುವ ಜವಾಬ್ದಾರಿ ಎಲ್ಲರದ್ದಾಗಿದೆ’ ಎಂದು ಬೆಳ್ತಂಗಡಿ ಧರ್ಮ ಪ್ರಾಂತ್ಯದ ಬಿಷಪ್ ಅತಿವಂದನೀಯ ಲಾರೆನ್ಸ್ ಮುಕ್ಕುಯಿ ಹೇಳಿದ್ದಾರೆ.ಅವರು ಜೂನ್ 3ರಂದು ನೆರಿಯ ಗ್ರಾಮದ ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಅನ್ನದಾನ ಸೇವೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.‘ಸೇವಾ ಕಾರ್ಯವನ್ನು ಸರ್ಕಾರ ಮಾಡಬೇಕಿದ್ದರೂ ಸರ್ಕಾರದ ಪರವಾಗಿ ಇಲ್ಲಿನ ಮ್ಯಾನೆಜಿಂಗ್ […]
ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ಜೀವ ಬೆದರಿಕೆ ಶರಣ್ ಪಂಪ್ ವೆಲ್ ವಿರುದ್ಧ ದೂರು ದಾಖಲು

ಮೂಡುಬಿದಿರೆ : ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಕುಮಾರ್ ಶೆಟ್ಟಿ ಅವರಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಯ ಮುಖಂಡ ಶರಣ್ ಪಂಪ್ ವೆಲ್ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.ಮೇ 28ರಂದು ಸಂಜೆ 7-30ರ ಸುಮಾರಿಗೆ ಶರಣ್ ಪಂಪ್ ವೆಲ್ ಅವರು ಜಯಕುಮಾರ್ ಶೆಟ್ಟಿ ಅವರಿಗೆ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೆ ಜೀವ ಬೆದರಿಯನ್ನೂ ಒಡ್ಡಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ಜಯಕುಮಾರ್ ಶೆಟ್ಟಿ ಅವರು ಸ್ವತ: […]
ಶ್ರಮಿಕ ವರ್ಗಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಲು ಮನವಿ

ಬೆಳ್ತಂಗಡಿ: ಕೋವಿಡ್-19 ಎರಡನೆಯ ಅಲೆಯ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಲಾಕ್‌ಡೌನ್ ಘೋಷಿಸಿದ ಹಿನ್ನಲೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ 1,250 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವುದು ಸಾಮಾನ್ಯ ವರ್ಗದ ಜನರಿಗೆ ತುಂಬಾ ಸಹಕಾರಿಯಾಗಿದ್ದು, ಕರಾವಳಿ ಜನತೆಯ ಪರವಾಗಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರಿಗೆ ಅನಂತ ವಂದನೆಗಳನ್ನು ಸಲ್ಲಿಸಿದ್ದಾರೆ.ಕರ್ನಾಟಕ ರಾಜ್ಯದ ಇತರ ಪ್ರದೇಶಗಳಿಗಿಂತ ಭೌಗೋಳಿಕವಾಗಿ ಬಿನ್ನವಾಗಿರುವ ಕರಾವಳಿ ಜನತೆ ವಿಭಿನ್ನ ರೀತಿಯ ಸಂಕಷ್ಟಕ್ಕೊಳಗಾಗಿದ್ದು, ನಮ್ಮ ಜಿಲ್ಲೆಯಲ್ಲಿ […]
ಎರಡು ತಿಂಗಳ ಹಿಂದೆ ಮದುವೆಯಾಗಿದ್ದ ಬೆಳ್ತಂಗಡಿ ಫಾರೆಸ್ಟ್ ಗಾರ್ಡ್ ನೇಣಿಗೆ ಶರಣು

ಬೆಳ್ತಂಗಡಿ : ಕಳಿಯ ಗ್ರಾಮದ ಗೇರುಕಟ್ಟೆ ಪಲ್ಲಿದಳಿಕೆ ನಿವಾಸಿಯಾಗಿರುವ ಬೆಳ್ತಂಗಡಿ ಸಾಮಾಜಿಕ ಅರಣ್ಯ ವಲಯದ ಅರಣ್ಯ ವೀಕ್ಷಕ ಬಾಲಕೃಷ್ಣ ಗೌಡ (40) ರವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ.3 ರಂದು ವರದಿಯಾಗಿದೆ.ಬಾಲಕೃಷ್ಣ ಗೌಡರವರು ಬೆಳ್ತಂಗಡಿ ಸಾಮಾಜಿಕ ಅರಣ್ಯ ವಲಯದಲ್ಲಿ ಅರಣ್ಯ ವೀಕ್ಷಕರಾಗಿ ಕರ್ತವ್ಯನಿರ್ವಹಿಸುತ್ತಿದ್ದು, ಎರಡು ತಿಂಗಳ ಹಿಂದೆ ವಿವಾಹವಾಗಿದ್ದರು.ಇಂದು ಬೆಳಿಗ್ಗೆ ಮನೆಯ ಪಕ್ಕದ ಗುಡ್ಡ ಪ್ರದೇಶದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಯಾವ ಕಾರಣಕ್ಕಾಗಿ ಈ ಕೃತ್ಯವೆಸಗಿದ್ದಾರೆ ಎಂಬುವುದು ತನಿಖೆಯಿಂದ ತಿಳಿದುಬರಬೇಕಾಗಿದೆ.ಈ ಬಗ್ಗೆ […]
ಚರ್ಚ್ ವತಿಯಿಂದ ಆಹಾರ ಕಿಟ್ ವಿತರಣೆ

ಬೆಳ್ತಂಗಡಿ: ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಉದ್ಯೋಗವಿಲ್ಲದೇ ಸಂಕಷ್ಟದಲ್ಲಿರುವ 70 ಬಡ ಕುಟುಂಬಿಕರಿಗೆ ಬೆಳ್ತಂಗಡಿಯ ಹೋಲಿ ರೆಡಿಮರ್ ಚರ್ಚ್ ವತಿಯಿಂದ ಆಹಾರ ಧಾನ್ಯಗಳ ಕಿಟ್ ವಿತರಿಸುವ ಕಾರ್ಯಕ್ರಮವು ಜೂನ್ 3ರಂದು ಚರ್ಚ್ ವಠಾರದಲ್ಲಿ ನಡೆಯಿತು.ಈ ಸಂದರ್ಭಸಲ್ಲಿ ಸಾಂಕೇತಿಕವಾಗಿ ಕಿಟ್ ವಿತರಿಸಿ ಆಶೀರ್ವಚನ ನೀಡಿದ ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್‌ನ ಪ್ರಧಾನ ಧರ್ಮಗುರು ವಂದನೀಯ ಜೋಸೆಫ್ ಕಾರ್ಡೋಝ, ಮನುಕುಲವನ್ನು ಹಿಂಸಿಸಿ ಕಾಡುತ್ತಿರುವ ಮಹಾಮಾರಿ ಕೊರೋನಾ ಸೋಂಕು ದೇವರ ದಯೆಯಿಂದ ಸಂಪೂರ್ಣ ನಿರ್ಮೂಲನವಾಗಲಿ ಎಂದು ಹಾರೈಸಿದರು.ಬೆಳ್ತಂಗಡಿ ಹೋಲಿ ರೆಡಿಮರ್ ಆಂಗ್ಲ ಮಾಧ್ಯಮ ಶಾಲೆಯ […]
ಕಥೋಲಿಕ್ ಸೊಸೈಟಿಯಿಂದ ಆಹಾರ ಕಿಟ್ ವಿತರಣೆ

ಬೆಳ್ತಂಗಡಿ: ಕೊರೋನಾ ಸಾಂಕ್ರಾಮಿಕ ರೋಗ ತಡೆಗಟ್ಟುವ ಉದ್ಧೇಶದಿಂದ ಸರಕಾರ ಘೋಷಿಸಿದ ಲಾಕ್‌ಡೌನ್‌ನಿಂದಾಗಿ ಸಾಕಷ್ಟು ಕುಟುಂಬಿಕರು ಸಂಕಷ್ಟವನ್ನೆದುರಿಸುತ್ತಿದ್ದು; ಇಂತಹ ಕುಟುಂಬಿಕರ ನೆರವಿಗೆ ತನ್ನ ಕೈಲಾದ ಸೇವೆ ಸಲ್ಲಿಸಲು ಕಾರ್ಯಯೋಜನೆ ರೂಪಿಸಿರುವ ಬೆಳ್ತಂಗಡಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿ, ತಾಲೂಕಿನ ಆಯ್ದ 50ಬಡ ಕುಟುಂಬಿಕರಿಗೆ ಅಂದಾಜು 50ಸಾವಿರ ರೂಪಾಯಿ ಮೌಲ್ಯದ ದಿನಬಳಕೆ ಆಹಾರಧಾನ್ಯಗಳ ಕಿಟ್ ವಿತರಣೆಗೆ ಮೇ 29ರಂದು ಸೊಸೈಟಿಯ ಎದುರುಗಡೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾಂಕೇತಿಕವಾಗಿ ಕಿಟ್ ವಿತರಿಸಿ ಮಾತನಾಡಿದ ಬೆಳ್ತಂಗಡಿಯ ಶಾಸಕ ಹರೀಶ್ […]
ಬೆಳ್ತಂಗಡಿ ಚರ್ಚ್ ಗುರುಗಳಿಂದ ಪಡ್ಲಾಡಿಯ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಬೆಳ್ತಂಗಡಿ: ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ ಲಾಯಿಲ ಗ್ರಾಮದ ಪಡ್ಲಾಡಿಯ ಸೀಲ್‌ಡೌನ್ ಆಗಿರುವ ಮನೆಗಳಿಗೆ ಹಾಗೂ ಇತರ ಪಾಸಿಟಿವ್ ಪ್ರಕರಣಗಳಿರುವ ಮನೆಗಳಿಗೆ ಆಹಾರ ಕಿಟ್ಟನ್ನು ಬೆಳ್ತಂಗಡಿ ಚರ್ಚ್ ಧರ್ಮಗುರುಗಳು ನೀಡಿದರು.ಬೆಳ್ತಂಗಡಿ ಕ್ಯಾಥೋಲಿಕ್ ಚರ್ಚ್‌ನ ಧರ್ಮಗುರುಗಳಾದ ವಂದನೀಯ ಜೋಸೆಫ್ ಆಲ್ಫೋನ್ಸ್ ಕಾರ್ಡೊಜ ಅವರು ವೈಯಕ್ತಿಕ ನೆಲೆಯಲ್ಲಿ ಪಡ್ಲಾಡಿ ವಿಲಿಯಂ ವೇಗಸ್ ಮನವಿಗೆ ಸ್ಪಂದಿಸಿ ಕೊರೊನಾ ಪಾಸಿಟಿವ್ ಇರುವ ಸುಮಾರು 20 ಕುಟುಂಬಗಳಿಗೆ ಆಹಾರದ ಕಿಟ್ ನೀಡಿದರು. ಸಂಕಷ್ಟದ ಸಂದರ್ಭದಲ್ಲಿ ಅಶಕ್ತರಿಗೆ ಕಿಟ್ ನೀಡಿ ಸಹಕರಿಸಿದ ಚರ್ಚ್‌ನ ಧರ್ಮಗುರುಗಳಿಗೆ […]
ಗ್ರಾಮೀಣ ಜನರ ಆರೋಗ್ಯದ ಬಗ್ಗೆ ಕಾಳಜಿ- ‘ವೈದ್ಯರ ನಡಿಗೆ ಹಳ್ಳಿಯ ಕಡೆಗೆ’ ಅಭಿಯಾನ

ಬೆಳ್ತಂಗಡಿ: ಗ್ರಾಮೀಣ ಭಾಗದ ಜನರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಇರಿಸಿ, ಜಿಲ್ಲಾಡಳಿತದ ಸೂಚನೆಯಂತೆ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ವೈದ್ಯರ ಸಹಯೋಗದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ‘ವೈದ್ಯರ ನಡೆ ಹಳ್ಳಿಯ ಕಡೆ’ ಅಭಿಯಾನವನ್ನು ನಡೆಸಲಾಗುತ್ತದೆ ಎಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಹೇಳಿದರು.ಅವರು ಜೂನ್ 1ರಂದು ಬೆಳ್ತಂಗಡಿಯ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ನಡೆದ ಗ್ರಾಮ ಪಂಚಾಯತ್ ವಾರ್ ಕೋವಿಡ್-19 ನಿರ್ವಹಣಾ ಮತ್ತು ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆಯನ್ನುದ್ಧೇಶಿಸಿ ಮಾತನಾಡುತ್ತಿದ್ದರು.ಗ್ರಾಮೀಣ ಪ್ರದೇಶಗಳಲ್ಲಿ ವಯಸ್ಸಾದವರು ಬೇರೆಬೇರೆ ಆರೋಗ್ಯ […]