ಬಿಜೆಪಿ ಜಿಲ್ಲಾಧ್ಯಕ್ಷರಿಂದ ಆರ್ಥಿಕ ನೆರವು, ಆಹಾರ ಸಾಮಗ್ರಿ ವಿತರಣೆ

ಮೂಡುಬಿದಿರೆ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಎರಡನೇ ಅವಧಿಯ ಎರಡನೆ ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸಂಭ್ರಮ ಆಚರಣೆ ಆಚರಿಸುವ ಬದಲಾಗಿ ಕಾರ್ಯಕರ್ತರು ತಮ್ಮ ಬೂತ್ ಗಳಲ್ಲಿ ಸೇವಾಕಾರ್ಯ ಮಾಡಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಜೆ.ಪಿ.ನಡ್ಡಾಜಿಯವರ ಹಾಗು ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರ ಸೂಚನೆಯಂತೆ ಬಿಜೆಪಿ ಜಿಲ್ಲಾದ್ಯಕ್ಷರಾದ ಸುದರ್ಶನ ಎಂ ರವರು ತಮ್ಮ ಬೂತ್ ನಲ್ಲಿ ಕೊವಿಡ್ ಪೀಡಿತರಿಗೆ ಆರ್ಥಿಕ ನೆರವು, ಮಾರಿಗುಡಿ ಅರ್ಚಕರಿಗೆ ಆಹಾರ ಸಾಮಗ್ರಿ ವಿತರಣೆ, ಹಾಗು ಸಸಿ ನೆಡುವ […]

ಉಜಿರೆ: ಕೊರೋನಾ ಮುಕ್ತವಾದ ಕಂಟೊನ್ಮೆಂಟ್ ಝೋನ್-ಸಿಹಿ ಹಂಚಿ ಸಂಭ್ರಮ

ಬೆಳ್ತಂಗಡಿ: ಉಜಿರೆ ಗ್ರಾಮ ಪಂಚಾಯತ್‌ನ ಗಾಂಧಿನಗರ ಕಾಲನಿಯಲ್ಲಿ ಹತ್ತಕ್ಕೂ ಅಧಿಕ ಮಂದಿ ಕೊರೋನಾ ಪೀಡಿತರಾಗಿದ್ದು, ಗ್ರಾಮ ಪಂಚಾಯತ್ ವತಿಯಿಂದ ಸರಕಾರದ ಕೋವಿಡ್-19 ನಿಯಮಾವಳಿಯಂತೆ ಈ ಪ್ರದೇಶವನ್ನು ಕಂಟೋನ್ಮೆಂಟ್ ಝೋನ್ ಎಂದು ಘೋಷಿಸಲಾಗಿತ್ತು.ಇದೀಗ ಈ ಪ್ರದೇಶದ ಎಲ್ಲ ಸೋಂಕಿತರೂ ಕೊರೋನಾದಿಂದ ಗುಣಮುಖರಾಗಿದ್ದು; ಗಾಂಧಿನಗರ ಕಾಲನಿಗೆ ಭೇಟಿ ನೀಡಿದ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಆರ್. ಶೆಟ್ಟಿ, ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಕೊರೋನಾದಿಂದ ಗುಣಮುಖರಾದವರಿಗೆ ಸಿಹಿಹಂಚಿ ಕಾಲನಿಯನ್ನು ಕಂಟೆನ್ಮೆಂಟ್ […]

ಪಟ್ರಮೆಯಲ್ಲಿ ವಿದ್ಯುದಾಘಾತಕ್ಕೆ ತಾಯಿ-ಮಗು ಬಲಿ

ಬೆಳ್ತಂಗಡಿ: ಪಟ್ರಮೆ ಗ್ರಾಮದ ಬೋಳೋಡಿ ಸಮೀಪ ಕೊಡಂದೂರು ಎಂಬಲ್ಲಿ ತೋಟದ ಪಂಪ್‌ಶೆಡ್ ಒಳಗೆ ಸಂಭವಿಸಿದ ವಿದ್ಯುದಾಘಾತಕ್ಕೆ ಬೋಳೋಡಿ ನಿವಾಸಿ ಹರೀಶ್ ಗೌಡರ ಪತ್ನಿ ಗೀತಾ (30) ಹಾಗೂ ಕಂದಮ್ಮ ಭವಿಷ್ (4) ಸಾವನ್ನಪ್ಪಿದ ಘಟನೆ ಮೇ 30ರ ಬೆಳಿಗ್ಗೆ ಸಂಭವಿಸಿದೆ.ತಮ್ಮ ತೋಟದ ಮನೆಯಲ್ಲಿದ್ದ ಹಸುಗಳಿಗೆ ನೀರುಣಿಸಲು ಪಂಪ್‌ನ ಸ್ವಿಚ್ ಹಾಕಲು ಗೀತಾ ತನ್ನ ಮಗುವಿನೊಂದಿಗೆ ಪಂಪ್‌ಶೆಡ್‌ಗೆ ತೆರಳಿ ಸ್ವಿಚ್ ಆನ್ ಮಾಡುವ ಸಂದರ್ಭ ಈ ದುರ್ಘಟನೆ ಸಂಭವಿಸಿದೆ ಎಂದು ಸಂದೇಹಿಸಲಾಗಿದೆ. ಪಂಪ್‌ನ ವಿದ್ಯುತ್ ಸಂಪರ್ಕದ ಮೂರು ಫೇಸ್‌ನ […]

ಕಂಟೋನ್ಮೆಂಟ್ ಪ್ರದೇಶದಲ್ಲಿಫಾಗಿಂಗ್ ಮತ್ತು ಸೇನಿಟೈಸರಿಂಗ್ ಕಾರ್ಯ

ಬೆಳ್ತಂಗಡಿ: ಕೋವಿಡ್ ನಿಯಂತ್ರಣ ಬಗ್ಗೆ ಜನಪ್ರತಿನಿಧಿಗಳು ಮತ್ತು ಸರಕಾರದ‌ ವಿವಿಧ ಇಲಾಖೆಗಳ ಜೊತೆಗೆ ಕೈ ಜೋಡಿಸಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡದ ನುರಿತ ವೈದ್ಯರ ತಂಡ ಮೇ 29ರಂದು ಬೆಳ್ತಂಗಡಿ ಪಟ್ಟಣ ಮತ್ತು ಲಾಯಿಲ ಗ್ರಾಮದ ಪಡ್ಲಾಡಿ ಕಂಟೋನ್ಮೆಂಟ್ ಪ್ರದೇಶದ ಮನೆಗಳ ಎಲ್ಲರ‌ ಆರೋಗ್ಯ ತಪಾಸಣೆ ಹಾಗೂ ಸೇನಿಟೈಸರಿಂಗ್ ಮತ್ತು ಫಾಗಿಂಗ್ ಕಾರ್ಯವನ್ನು ಮಾಡಿತು.ಪಟ್ಟಣ ಪಂಚಾಯತ್‌ನಲ್ಲಿ ಆರಂಭವಾದ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವಾ, ಸದಸ್ಯೆ ಗೌರಿ, ಮುಖ್ಯಾಧಿಕಾರಿ ಸುಧಾಕರ್ ಎಂ. […]

ನೆಲ್ಲಿಕಾರು: ಸೋಂಕಿತರಿಗೆ ಆಹಾರ ಕಿಟ್ ವಿತರಣೆ

ನೆಲ್ಲಿಕಾರು: ಮೂಡುಬಿದಿರೆ ತಾಲೂಕಿನ ನೆಲ್ಲಿಕಾರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೆಲ್ಲಿಕಾರು ಮತ್ತು ಮಾಂಟ್ರಾಡಿ ಗ್ರಾಮದ ಕೊರೊನ ಸೋಂಕಿಗೆ ಒಳಗಾದ ಬಡ ಕುಟುಂಬಗಳಿಗೆ ಗ್ರಾಮ ಪಂಚಾಯsತಿ ವತಿಯಿಂದ ದಿನ ನಿತ್ಯದ ಆಹಾರ ಪದಾರ್ಥಗಳ ಕಿಟ್ ಅನ್ನು ವಿತರಿಸಲಾಯಿತು ಮತ್ತು ಆರೋಗ್ಯ ವಿಚಾರಿಸಿ ಮನೋ ದೈರ್ಯ ತುಂಬಲಾಯಿತು.ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುಶೀಲಾ ಉಪಾಧ್ಯಕ್ಷರಾದ ಶಶಿಧರ ಎಂ. ಪಂಚಾಯತ್ ಸದಸ್ಯರುಗಳಾದ ಅಣ್ಣಿ ಪೂಜಾರಿ , ಸುನಂದ , ಜಿನೇಂದ್ರ ಜೈನ್ ,ಆಶಾಲತ ಹಾಗೂ ಮೂಡಬಿದಿರೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ […]

ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಕ್ಸಿಮೀಟರ್, ಮಾಸ್ಕ್, ಸ್ಯಾನಿಟೈಸರ್ ಕೊಡುಗೆ

ಶಿರ್ತಾಡಿ: ಸೌಹಾರ್ದ ಫ್ರೆಂಡ್ಸ್ ಕ್ಲಬ್, ಶಿರ್ತಾಡಿ ಹಾಗೂ ರೋಟರಿ ಕ್ಲಬ್ ಮೂಡುಬಿದಿರೆ, ಇದರ ವತಿಯಿಂದ, ಶಿರ್ತಾಡಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ, ಕೊರೋನ ಕಿಟ್ ಗೆ ಉಪಯೋಗಿಸುವ 3 ಆಕ್ಸಿಮೀಟರ್ ಗಳು, N95 ಮಾಸ್ಕ್ ಗಳು, ಸ್ಯಾನಿಟೈಸರ್ ಗಳನ್ನು ವಿತರಿಸಲಾಯಿತು. ಈ ಸಂಧರ್ಭದಲ್ಲಿ ಸೌಹಾರ್ದ ಫ಼್ರೆಂಡ್ಸ್ ಕ್ಲಬ್ ನ ಗೌರವಾಧ್ಯಕ್ಶರಾಗಿವ ಡಾ| ಆಶಿರ್ವಾದ್, ಅಧ್ಯಕ್ಶರಾದ ಪ್ರವೀಣ್ ಕುಮಾರ್, ರೋಟರಿ ಕ್ಲಬ್‌ ಮೂಡಬಿದಿರೆ ಇದರ ನಿಯೋಜಿತ ಅಧ್ಯಕ್ಶರಾದ ಜೆ. ಡಬ್ಲ್ಯೂ. ಪಿಂಟೊ, ಶಿರ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಶರಾದ ಸಂತೋಷ್ ಕೊಟ್ಯಾನ್, […]

ಸತ್ಯಸ್ಥಳದಲ್ಲೇ ಕಾನೂನಿಗೆ ಸವಾಲು – ಧರ್ಮಸ್ಥಳ ಸರಕಾರಿ ಆಸ್ಪತ್ರೆಯಲ್ಲಿ ಕೊರೋನಾ ಲಸಿಕೆಗೆ ಲಾಬಿ!

ಬೆಳ್ತಂಗಡಿ: ಕೆಲ ದಿನಗಳ ಹಿಂದೆಯಷ್ಟೆ ಉಜಿರೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ನೀಡುವ ವಿಚಾರದಲ್ಲಿ ಬಿಜೆಪಿಯ ಸ್ಥಳೀಯ ಪ್ರಭಾವಿಗಳು ಹಾಗೂ ಕೆಲ ಗ್ರಾಮ ಪಂಚಾಯತ್ ಸದಸ್ಯರು ಲಾಬಿ ನಡೆಸಿ, ತಮಗೆ ಬೇಕಾದವರಿಗೆ ಮಾತ್ರ ಕೋವಿಡ್ ಲಸಿಕೆ ದೊರಕಿಸಿಕೊಡುತ್ತಿದ್ದ ಬಗ್ಗೆ ದೂರುಗಳು ಕೇಳಿ ಬಂದಿತ್ತು. ಇದಕ್ಕೆ ತಕ್ಷಣ ಸ್ಪಂದಿಸಿದ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ, ಮೇ 26ರಂದು ಉಜಿರೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಿ, ಆದ್ಯತೆ ನೆಲೆಯಲ್ಲಿ ಆನ್‌ಲೈನ್‌ನಲ್ಲಿ ನೋಂದಾವಣೆ ಮಾಡಿದವರಿಗೆ ಲಸಿಕೆ […]

ಶಿಶಿಲ ಮತ್ಸ್ಯಗಳಿಗೆ ಆಹಾರ ಸೇವೆ ಮಾಡಿದ ಭಕ್ತಸಮೂಹ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀ ಶಿಶಿಲೆಶ್ವರ ದೇವಸ್ಥಾನದ ಕಪಿಲಾ ನದಿಯಲ್ಲಿರುವ ದೇವರ ‌ಮೀನೆಂದೆ ಪ್ರಖ್ಯಾತವಾದ ಪೆರುವೊಳು ಜಾತಿಯ ಮತ್ಸ್ಯಗಳು ಪ್ರವಾಸಿಗರಿಗೆ ನಿರಂತರ ಮುದ ನೀಡುತ್ತಿತ್ತು. ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದರು. ನಿತ್ಯ ಅವುಗಳಿಗೆ ಆಹಾರ ಒದಗಿಸುತ್ತಿದ್ದರು. ಆದರೆ ಇದೀಗ ಕೊರೊನಾ ಮುಂಜಾಗ್ರತೆಯಾಗಿ ಲಾಕ್‌ಡೌನ್ ಇರುವುದರಿಂದ ಭಕ್ತಾದಿಗಳು ಕೋವಿಡ್ ನಿಯಮದಂತೆ ದೇಗುಲಕ್ಕೆ ಬರುತ್ತಿಲ್ಲ. ಇದರಿಂದ ಮತ್ಸ್ಯಗಳಿಗೂ ಆಹಾರ ಹಾಕುವವರಿಲ್ಲ. ತೀರಾ ಹಳ್ಳಿ ಪ್ರದೇಶವಾಗಿರುವುದರಿಂದ ದೇವಾಲಯಕ್ಕೆ ಆದಾಯವೂ ಇಲ್ಲ. ಇದನ್ನು ಗಮನಿಸಿದ ಊರ ಪರವೂರಿನ ಭಕ್ತರು […]

ನಿರಾಶ್ರಿತರಿಗೆ ಹಾಗೂ ರೋಗಿಗಳಿಗೆ ಉಚಿತ ಊಟ ವಿತರಿಸುತ್ತಿರುವ ಅಲ್ ಅಮೀನ್ ಹೆಲ್ಪ್ ಲೈನ್ ತಂಡ

ಮೂಡಬಿದಿರೆ:ಕೊರೋನ ಸಂದರ್ಭದಲ್ಲಿ ತಮ್ಮ ಜಾತಿ-ಧರ್ಮ-ಮತ ಬೇಧಗಳನ್ನು ಮರೆತು ಮಾನವಕುಲ ಒಂದೇ ಎಂದು ಭಾವಿಸಿ ಆಹಾರವಿಲ್ಲದೆ ಬದುಕು ದೂಡುತ್ತಿರುವ ನಿರ್ಗತಿಕರ ಹೊಟ್ಟೆ ತುಂಬಿಸುವ ಕೆಲಸವನ್ನು ಮೂಡಬಿದಿರೆಯ ಅಲ್ ಅಮೀನ್ ಹೆಲ್ಪ್ ಲೈನ್ ತಂಡದವರು ಕಳೆದ 19 ದಿನಗಳಿಂದ ದಿನನಿತ್ಯ ಮಾಡುತ್ತಿರುವುದು ಮಾನವೀಯ ಮೌಲ್ಯಕ್ಕೆ ಸಾಕ್ಷಿಯಾಗಿದೆ. ಬಡವರ ಕಷ್ಟದ ಬಗ್ಗೆ ಅರಿತ ಕೆಲವರು ತಾವು ತಿನ್ನುವ ಅನ್ನವನ್ನು ಇತರರಿಗೂ ಹಂಚಿ ತಮ್ಮ ದೊಡ್ಡತನವನ್ನು ತೋರಿಸುತ್ತಾರೆ. ಮೂಡಬಿದಿರೆಯಲ್ಲಿ 2015 ರಲ್ಲಿ ಸ್ಥಾಪಿತವಾದ ಬಡ ಹೆಣ್ಣು ಮಕ್ಕಳ ಮದುವೆ ಹಾಗೂ ತೀರ ಬಡವರಿಗೆ […]

ಬಿಗ್ ಬ್ರೇಕಿಂಗ್ ನ್ಯೂಸ್ : ಬೆಳ್ತಂಗಡಿಗೂ ವಕ್ಕರಿಸಿದ ಬ್ಲ್ಯಾಕ್ ಫಂಗಸ್ ವೈರಸ್‌ಗೆ ಓರ್ವ ಬಲಿ

ಬೆಳ್ತಂಗಡಿ: ಎರಡನೇ ಅಲೆಯ ಕೊರೋನಾದೊಂದಿಗೆ ಜನತೆಯಲ್ಲಿ ಇನ್ನಷ್ಟು ಭೀತಿ ಹುಟ್ಟಿಸಿದ ಬ್ಲ್ಯಾಕ್ ಫಂಗಸ್ ವೈರಸ್ ಇದೀಗ ಬೆಳ್ತಂಗಡಿ ತಾಲೂಕಿಗೂ ವಕ್ಕರಿಸಿದ್ದು ಓರ್ವನನ್ನು ಬಲಿ ಪಡೆದಿದೆ.ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಅಳಕೆ ನಿವಾಸಿ ನೋಣಯ್ಯ ಪೂಜಾರಿ (55) ಬ್ಲ್ಯಾಕ್ ಫಂಗಸ್ ವೈರಸ್‌ಗೆ ಬಲಿಯಾದ ವ್ಯಕ್ತಿ. ಕೆಲ ದಿನಗಳಿಂದ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ನೋಣಯ್ಯ ಪೂಜಾರಿಗೆ ಕೊರೋನಾ ಪಾಸಿಟಿವ್ ಜೊತೆಗೆ ಬ್ಲ್ಯಾಕ್ ಫಂಗಸ್ ಕಂಡುಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ […]