ವನಮಹೋತ್ಸವ ಮತ್ತು ಹಣ್ಣಿನ ಸಸಿಗಳು

ಬೆಳ್ತಂಗಡಿ: ಅದೊಂದು ಕಾಲವಿತ್ತು. ಜೂನ್ 5 ವಿಶ್ವ ಪರಿಸರ ದಿನದಂದು ವಿವಿಧ ಸಂಘಸಂಸ್ಥೆಗಳವರು ಎಲ್ಲೆಂದರಲ್ಲಿ ವನಮಹೋತ್ಸವ ಆಚರಿಸುವ ಸಂಭ್ರಮದಲ್ಲಿ ಅರಣ್ಯ ಇಲಾಖೆಯಿಂದ ಸಸಿಗಳನ್ನು ಪಡೆದು ನೆಡುತ್ತಿದ್ದರು. ಅರಣ್ಯ ಇಲಾಖೆಯವರೋ ಇಂತಹ ವನಮಹೋತ್ಸವಗಳಿಗೆ ಅಕೇಶಿಯಾ, ಮ್ಯಾಂಜಿಯಂನಂತಹ ಜಾತಿಯ ಸಸಿಗಳನ್ನು ನೀಡುತ್ತಿದ್ದರು. ಈ ರೀತಿಯಾಗಿ ಸಸಿಗಳನ್ನು ಪಡೆದ ಸಂಘಸಂಸ್ಥೆಯವರು ಅವುಗಳನ್ನು ನೆಟ್ಟು ಫೊಟೊ ತೆಗೆಯಿಸಿ, ತಮ್ಮ ಸೇವಾ ದಾಖಲೆಯಲ್ಲಿ ಇರಿಸಿಕೊಳ್ಳುತ್ತಿದ್ದರು. ನಂತರದ ದಿನಗಳಲ್ಲಿ ಅವರು ನೆಟ್ಟ ಗಿಡಗಳತ್ತ ತಿರುಗಿ ನೋಡುವ ಸೇವಾ ಕಾರ್ಯವೂ ಬಹುತೇಕರಿಗೆ ಇರುತ್ತಿರಲಿಲ್ಲ. ಇಂತಹ ಸಂಘಟನೆಗಳಿಗೆ ಮತ್ತೆ […]
ಲಾಕ್‌ಡೌನ್ ಸಂದರ್ಭ ಹಸಿದವರಿಗೆ ನೆರವಿನ ಹಸ್ತ ಚಾಚಿದ ಉಮೇಶ್ ಪ್ರಭು

ಬೆಳ್ತಂಗಡಿ: ಧರ್ಮಸ್ಥಳದ ಉದ್ಯಮಿ ಹಾಗೂ ಪ್ರಗತಿಪರ ಕೃಷಿಕ ಉಮೇಶ್ ಪ್ರಭು ಕೋವಿಡ್-19 ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ಮನೆಯವರ ಜೊತೆಗೆ ಸೇರಿ ಕೋವಿಡ್ ವಾರಿಯರ್ಸ್‌ಗಳಿಗೆ ಮಾತ್ರವಲ್ಲ; ನಿರ್ಗತಿಯರಿಗೆ ಹಾಗೂ ನಿರಾಶ್ರಿತರಿಗೆ ಪ್ರತಿನಿತ್ಯ ಉಚಿತ ಆಹಾರ ಒದಗಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.ಲಾಕ್‌ಡೌನ್ ಸಂದರ್ಭದಲ್ಲಿ ಹೆಚ್ಚಿನ ಕಡೆಗಳಲ್ಲಿ ಹೋಟೆಲ್ ಗಳು ಇಲ್ಲದೆ ಜನ ಪರದಾಡುವಂತದ್ದನ್ನು ಮನಗಂಡು ತನ್ನ ಮನೆಯವರ ಹಾಗೂ ಗೆಳೆಯರ ಜೊತೆಗೆ ಸೇರಿ ಅಡುಗೆ ತಯಾರಿಸಿ ತನ್ನ ಸ್ವಂತ ಪಿಕ್ಆಫ್ ವಾಹನದಲ್ಲಿ ಧರ್ಮಸ್ಥಳದಿಂದ ಉಜಿರೆ ತನಕ ನಿರ್ಗತಿಯರಿಗೆ, ನಿರಾಶ್ರಿತರಿಗೆ, ಅರಕ್ಷಕರಿಗೆ […]
ಆದಿವಾಸಿಗಳ ಜೀವ ಹಾಗೂ ಜೀವನ ಉಳಿಸಲು ಆಗ್ರಹಿಸಿ ಪ್ರತಿಭಟನೆ

ಬೆಳ್ತಂಗಡಿ: ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಜೂನ್ 7ರಂದು ಇಡೀ ರಾಜ್ಯಾದ್ಯಂತ ಆದಿವಾಸಿಗಳ ಜೀವ ಹಾಗೂ ಜೀವನ ಉಳಿಸಲು ಒತ್ತಾಯಿಸಿ ಮನೆಮನೆಗಳಲ್ಲಿ ಪ್ರತಿಭಟನೆ ನಡೆಯಿತು.ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರಾಜ್ಯ ಸಮಿತಿ ಸದಸ್ಯ ಶೇಖರ್ ಎಲ್., ಕಾಡಿನ ಮಕ್ಕಳ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿದೆ. ಕೋವಿಡ್ 19 ಸಂದರ್ಭದಲ್ಲಿ ನಿರುದ್ಯೋಗಿ ಯುವಕ/ಯುವತಿಯರಿಗೆ ನಿರುದ್ಯೋಗ ಭತ್ಯೆಯನ್ನು ನಿಲ್ಲಿಸುವ ಮೂಲಕ ಸರ್ಕಾರಗಳು ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಆರೋಪಿಸಿದರು.ತಾಲೂಕಿನ ನೆರಿಯ, ಬಾಂಜಾರು, ಮಲವಂತಿಗೆ, ಲಾಯಿಲ, […]
ಆರೋಗ್ಯ ಕಾರ್ಯಕರ್ತರ ಸೇವೆ ಶ್ಲಾಘನೀಯ-ವಂl ಬಿಷಪ್

ಬೆಳ್ತಂಗಡಿ: ಕೋವಿಡ್ ನಿಯಂತ್ರಣಕ್ಕಾಗಿ ಆರೋಗ್ಯ ಕಾರ್ಯಕರ್ತರು ಮಾಡುತ್ತಿರುವ ಸೇವೆ ಶ್ಲಾಘನೀಯವಾದುದು.ಇದು ಸರಕಾರ ಮಟ್ಟದ ಕೆಲಸವಾದರೂ ಫ್ರಂಟ್ ಲೈನ್ ಕಾರ್ಯಕರ್ತರು ಮಾಡುತ್ತಿರುವ ಸೇವೆಗೆ ಗೌರವ ನೀಡುತ್ತಿದ್ದೇವೆ. ಆದ್ದರಿಂದ ನಿಮ್ಮ ರಕ್ಷಣೆ ದೃಷ್ಟಿಯಿಂದ ನಾವು ನಿಮಗೆ ಈ ಮೂಲಕ ಆರೋಗ್ಯ ರಕ್ಷೆ ನೀಡುತ್ತಿದ್ದೇವೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಹೇಳಿದರು.ಬೆಳ್ತಂಗಡಿ ಧರ್ಮಪ್ರಾಂತ್ಯದ ಸಮಾಜ ಸೇವಾ ಸಂಸ್ಥೆ ಡಿಕೆಆರ್‌ಡಿಎಸ್ ಇದರ ವತಿಯಿಂದ ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡದ ಸಹಯೋಗದೊಂದಿಗೆ, ಬೆಳ್ತಂಗಡಿ ತಾಲೂಕಿನ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ […]
ಕೋವಿಡ್ ಲಸಿಕಾ ಕೇಂದ್ರದಲ್ಲಿ ಬಿಜೆಪಿ ರಾಜಕೀಯ-ಕಾಂಗ್ರೆಸ್ ನಾಯಕರ ಆರೋಪ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಮಂಜುನಾಥೇಶ್ವರ ಕಲಾಭವನದಲ್ಲಿ ಕೊರೊನ ನಿಯಂತ್ರಣಕ್ಕೆ ಪೂರಕವಾಗಿ ಲಸಿಕಾ ಅಭಿಯಾನ ಕಾರ್ಯ ನಡೆಯುತ್ತಿದ್ದು, ಲಸಿಕೆ ಕೇಂದ್ರದಲ್ಲಿ ಯಾವುದೇ ಚುನಾಯಿತ ಪ್ರತಿನಿಧಿಗಳಲ್ಲದ ಹಲವರು ಅನಧಿಕೃತವಾಗಿ ಸುತ್ತಾಡುತ್ತಿದ್ದು ಹಲವು ಗೊಂದಲ ಹಾಗೂ ಸಂದೇಹಗಳಿಗೆ ಕಾರಣವಾಗಿದೆ. ಈ ಬಗೆಗೆ ಈ ಮೊದಲೇ ಬೆಳ್ತಂಗಡಿ ತಾಲೂಕು ತಹಶೀಲ್ದಾರರಿಗೆ ಲಿಖಿತ ದೂರು ನೀಡಲಾಗಿದ್ದು ಯಾವುದೇ ಕ್ರಮ ಕೈಗೊಂಡಿಲ್ಲ. ಲಸಿಕಾ ಕೇಂದ್ರದ ಡಾಟಾ ಮಾಹಿತಿ ಹಾಗೂ ಗುಪ್ತಸಂಖ್ಯೆಯು ಆರೋಗ್ಯ ಇಲಾಖೆಗೆ ಮಾತ್ರ ತಿಳಿಯಬೇಕಾದುದಾಗಿದ್ದು, ಲಸಿಕಾ ಕೇಂದ್ರದ ಡಾಟಾ […]
ಪರಿಸರ ಸ್ನೇಹಿ ಮಾಸ್ಕ್ ತಯಾರಿಸುವ ನಿತಿನ್ ವಾಸ್ ಪಕ್ಷಿಕೆರೆ ಅವರಿಗೆ ಸನ್ಮಾನ

ಮೂಡುಬಿದಿರೆ: ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಪಕ್ಷಿಕೆರೆಯ ನಿತಿನ್ ವಾಸ್ ಅವರು ಪರಿಸರ ಸ್ನೇಹಿ ಮಾಸ್ಕ್ ಹಾಗು ಮಂಗಳೂರು ಬೊಂಬೆ ತಯಾರಿಸಿ ವಿಶ್ವದಾದ್ಯಂತ ಮನ್ನಣೆ ಗಳಿಸಿದ್ದಾರೆ.ಈ ನಿಮಿತ್ತ ಯುವಮೋರ್ಚಾ ಮಂಡಲದ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ ಅವರು ನಿತಿನ್ ವಾಸ್ ರವರನ್ನು ಗೌರವಿಸಿ ಅಭಿನಂದಿಸಿದರು. ಜಿಲ್ಲಾ ಉಪಾಧ್ಯಕ್ಷರಾದ ಈಶ್ವರ್ ಕಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಮಂಡಲಾಧ್ಯಕ್ಷರಾದ ಸುನೀಲ್ ಆಳ್ವ, ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯಧರ್ಶಿ ಸೂರಜ್ ಜೈನ್ ಮಾರ್ನಾಡ್, ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರಾದ […]
ಯಕ್ಷಧ್ರುವ ಪಟ್ಲ ಫೌಂಡೇಶನ್ ಯಕ್ಷಗಾನ ಕಲಾವಿದರಿಗೆ ಆಹಾರ ಕಿಟ್ ವಿತರಣೆ

ಮೂಡುಬಿದಿರೆ : ವಿವಿಧ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ದುಡಿಯುತ್ತಾ ಕೊರೋನಾ ಸಂಕಷ್ಟ ©ದಲ್ಲಿ ಮೇಳದ ತಿರುಗಾಟವೂ ಇಲ್ಲದೆ ಜೊತೆಗೆ ಬೇರೆ ಆದಾಯವೂ ಇಲ್ಲದೆ ಕಂಗೆಟ್ಟಿರುವ 37 ಮಂದಿ ಕಲಾವಿದರನ್ನು ಗುರುತಿಸಿ ಅವರಿಗೆ 25 ಕೆ.ಜಿ. ಅಕ್ಕಿ, ಬೇಳೆ, ಸಕ್ಕರೆ, ಬೆಲ್ಲ, ಎಣ್ಣೆ, ಸಾಬೂನು, ಮಸಾಲೆ ಸಾಮಗ್ರಿ, ಉಪ್ಪಿನಕಾಯಿ, ಚಹಾಹುಡಿ ಮತ್ತು ಬಿಸ್ಕೆಟ್ ಇರುವ ಆಹಾರದ ಕಿಟ್ ಅನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಮಂಗಳೂರು ಇದರ ಮೂಡುಬಿದಿರೆ ಘಟಕದ ವತಿಯಿಂದ ಮೂಡುಬಿದಿರೆ ಸಮಾಜ ಮಂದಿರ ಸಭಾದ ಆವರಣದಲ್ಲಿ […]
ಸೌಹಾರ್ದ ಚಾರಿಟೇಬಲ್ ಟ್ರಸ್ಟ್ ಸಾರ್ವಜನಿಕ ಉಪಯೋಗಕ್ಕೆ ಆಂಬುಲೆನ್ಸ್ ಕೊಡುಗೆ

ಮೂಡುಬಿದಿರೆ: ಸೌಹಾರ್ಧ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕರ ಉಪಯೋಗಕ್ಕಾಗಿ ಆಂಬುಲೆನ್ಸ್ ಒಂದನ್ನು ಕೊಡುಗೆಯಾಗಿ ನೀಡಲಾಗಿದೆ. ಈ ಆಂಬುಲೆನ್ಸ್ ಕೊಡುಗೆಯನ್ನು ಸ್ಕೌಟ್ ಗೈಡ್ಸ್ ಕನ್ನಡ ಸಂಘದ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸೌಹಾರ್ದ ಚಾರಿಟೇಬಲ್ ಟ್ರಸ್ಟ್ ನ ಪ್ರಮುಖರಾದ ಸಿ.ಎಚ್. ಅಬ್ದುಲ್ ಗಫೂರ್, ಹಸ್ದುಲ್ಲಾ ಇಸ್ಮಾಯಿಲ್, ಅಬುಲ್ ಾಲಾ ಪುತ್ತಿಗೆ, ಮಕ್ಬುಲ್ ಹುಸೇನ್ ಅವರು ಶಾಸಕ ಉಮನಾಥ್ ಎ. ಕೋಟ್ಯಾನ್ ಅವರಿಗೆ ಹಸ್ತಾಂತರಿಸಿದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಚೌಟರ ಅರಮನೆಯ […]
ನವಭಾರತ್ ಗೆಳೆಯರ ಬಳಗದಿಂದ ಸೇವಾಕಾರ್ಯ

ಬೆಳ್ತಂಗಡಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಸಂಘಟನೆ ನವಭಾರತ್ ಗೆಳೆಯರ ಬಳಗ(ರಿ) ಕಲ್ಲಾಜೆ-ಇಂದಬೆಟ್ಟು ವತಿಯಿಂದ ಲಾಕ್‌ಡೌನ್ ಸಮಯದಲ್ಲಿ ಧಾರ್ಮಿಕ ಸೇವಾ ಕಾರ್ಯ ನಡೆಸುತ್ತಿರುವ ಬೆಳ್ತಂಗಡಿ ತಾಲೂಕಿನ ಗೋಶಾಲೆಗಳಾದ ನಂದ ಗೋಕುಲ ಗೋಶಾಲೆ ಕಳೆಂಜ (2 ಲೋಡ್ ಪಿಕಪ್) ಹಾಗೂ ಕಾಮಧೇನು ಗೊಶಾಲೆ ಸೌತಡ್ಕ ಕ್ಷೇತ್ರಕ್ಕೆ(1ಲೋಡ್ ಪಿಕಪ್) ಹಸಿ ಹುಲ್ಲನ್ನು ನೀಡಲಾಯಿತು. ಮತ್ಸ್ಯ ಕ್ಷೇತ್ರ ಶಿಶಿಲದ ದೇವರ ಮೀನುಗಳಿಗೆ ಆಹಾರವನ್ನು ನೀಡುವ ಮೂಲಕ ಸಂಘದ ಸದಸ್ಯರಿಂದ ಸೇವಾ ಕಾರ್ಯ ಮುಂದುವರಿಯಿತು. ಈ ಸಂದರ್ಭದಲ್ಲಿ ನವಭಾರತ್ ಸಂಘಟನೆಯ ಗೌರವ ಅಧ್ಯಕ್ಷ […]
ಬೆಳ್ತಂಗಡಿಯಿಂದ ಬೆಂಗಳೂರಿಗೆ ಮರಳಲೂ ಶಾಸಕ ಹರೀಶ್ ಪೂಂಜರ ಕೃಪೆಯಿಂದ ಉಚಿತ ಬಸ್

ಬೆಳ್ತಂಗಡಿ: ಕಳೆದ ಎಪ್ರಿಲ್ ಕೊನೆಯ ವಾರದಲ್ಲಿ ರಾಜ್ಯ ಸರಕಾರ ಕೊರೋನಾ ಎರಡನೇ ಅಲೆಯ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಜನತಾ ಕರ್ಫ್ಯೂ ಹೆಸರಿನ ಲಾಕ್‌ಡೌನ್‌ಗೆ ಮುಂದಾಗುತ್ತಿದ್ದಂತೆ ಬೆಂಗಳೂರಲ್ಲಿ ಉದ್ಯೋಗದಲ್ಲಿದ್ದ ಸಾಕಷ್ಟು ಮಂದಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಎಪ್ರಿಲ್ 24ಹಾಗೂ 25ತಾರೀಕಿನಂದು ಉಚಿತವಾಗಿ ವ್ಯವಸ್ಥೆಗೊಳಿಸಿದ ಬಸ್‌ಗಳಲ್ಲಿ ಎದ್ದೆನೋ-ಬಿದ್ದೆನೋ ಎಂಬಂತೆ ಓಡಿ ಬಂದು ಬಸ್ಸನ್ನೇರಿ ಬೆಳ್ತಂಗಡಿ ತಾಲೂಕಿನ ತಮ್ಮ ಊರುಗಳಿಗೆ ಮರಳಿದರು. ಇದರಲ್ಲಿ ಅನೇಕರು ಊರಿಗೆ ಮರಳುತ್ತಿದ್ದಂತೆ ಶಾಸಕ ಹರೀಶ್ ಪೂಂಜರ ಉಸ್ತುವಾರಿಯಲ್ಲಿ ಹಳ್ಳಿಯ ಶಾಲೆಗಳಲ್ಲಿ ವ್ಯವಸ್ಥೆಗೊಳಿಸಲಾದ ಕ್ವಾರಂಟೈನ್ ಸೆಂಟರ್‌ಗಳಲ್ಲಿ ವಾಸ್ತವ್ಯವಿದ್ದು […]