‘ಭ್ರಷ್ಟ ಬಿಜೆಪಿ ಸರಕಾರ ತೊಲಗಿಸುವುದು ದುಡಿಯುವ ಜನರ ಕರ್ತವ್ಯ’

ಬೆಳ್ತಂಗಡಿ: ಇಂದು ನಮ್ಮ ದೇಶವನ್ನು ಆಳುತ್ತಿರುವ ಬಿಜೆಪಿಯ ನರೇಂದ್ರ ಮೋದಿ ಸರಕಾರ ಅತಿ ಭ್ರಷ್ಟ ಸರಕಾರವಾಗಿದ್ದು, ಇಂತಹ ಭ್ರಷ್ಟ ಮತ್ತು ಕಾರ್ಮಿಕ ವಿರೋದಿ ಸರಕಾರವನ್ನು ಹಿಮ್ಮೆಟ್ಟಿಸುವುದು ಭಾರತೀಯರ ಇಂದಿನ ಕರ್ತವ್ಯವಾಗಿದ್ದು; ಆ ಮೂಲಕ ರೈತರ, ಕಾರ್ಮಿಕರ ಬದುಕಿನ ರಕ್ಷಣೆ ಮಾಡಬೇಕಾದ್ದು ಅತೀ ಅಗತ್ಯ ಕೆಲಸವಾಗಿದೆ ಮತ್ತು ಅದು ಸಿಪಿಐ(ಎಂ) ಬೆಳವಣಿಗೆಯಿಂದಷ್ಟೇ ಸಾದ್ಯ ಎಂದು ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ. ಕೃಷ್ಣಪ್ಪ ಕೊಂಚಾಡಿ ಹೇಳಿದರು. ಅವರು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ಭಾರತ […]

ನವರಾತ್ರಿ ಉತ್ಸವ ಸಂಪನ್ನ

ಬೆಳ್ತಂಗಡಿ: ಉಜಿರೆ ಶ್ರೀ ಮಹಮ್ಮಾಯಿ (ಮಾರಿಗುಡಿ) ದೇವಸ್ಥಾನದಲ್ಲಿ ಅಕ್ಟೋಬರ್ 3ರಿಂದ ಮೊದಲ್ಗೊಂಡು ಅಕ್ಟೋಬರ್ 11 ಮಹಾನವಮಿ ಪರ್ಯಂತ ಪ್ರತಿ ರಾತ್ರಿ ವಿವಿಧ ತಂಡಗಳಿಂದ ಭಜನೆ ಹಾಗೂ ಸೇವಾರ್ಥಿಗಳಿಂದ ವಿಶೇಷ ರಂಗ ಪೂಜೆ ನಡೆಯಿತು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ಣಾಯರ ನೇತೃತ್ವದಲ್ಲಿ ದೇವಸ್ಥಾನವನ್ನು ವಿಶೇಷವಾಗಿ ಪುಷ್ಪಾಲಂಕಾರ ಮತ್ತು ವಿದ್ದ್ಯುದ್ದೀಪಗಳಿಂದ ಶೃಂಗರಿಸಲಾಗಿತ್ತು. ಅಕ್ಟೋಬರ್ 11 ರಂದು ಶುಕ್ರವಾರ ರಾತ್ರಿ ಉಜಿರೆಯ ಕನಸಿನ ಮನೆ ಲಕ್ಷ್ಮಿ ಗ್ರೂಪ್ ಮಾಲಕರಾದ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಕೆ. ಮೋಹನ […]

ಧರ್ಮಸ್ಥಳದಲ್ಲಿ ಸೀರೆ ವಿತರಣೆ

ಬೆಳ್ತಂಗಡಿ: ನವರಾತ್ರಿ ಸಂದರ್ಭದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಕ್ಟೋಬರ್ 11ರ ರಾತ್ರಿ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮುತ್ತೈದೆಯರಿಗೆ ದೇವಸ್ಥಾನದಲ್ಲಿ 3,026 ಸೀರೆಗಳನ್ನು ಪ್ರಸಾದ ರೂಪವಾಗಿ ವಿತರಿಸಿದರು.

ಸಮಾಜದ ಆಚಾರ-ವಿಚಾರ ಉಳಿಸೋಣಾ-ಅಜಿತ್ ರೈ ಮಾಲಾಡಿ

ಬೆಳ್ತಂಗಡಿ: ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ನಮ್ಮ ಸಂಸ್ಕೃತಿ ಮತ್ತು ಆಚಾರ-ವಿಚಾರಗಳನ್ನು ಉಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಮಾಜದ ವಿದ್ಯಾರ್ಥಿಗಳಲ್ಲಿ ಸಮಾಜ ನಿಮ್ಮ ಜೊತೆಗಿದೆ ಎಂಬ ಭರವಸೆ ಮೂಡಿಸಿ, ಶಿಕ್ಷಣಕ್ಕೆ ಪ್ರೋತ್ಸಾಹಿಸಲು ಇಂದು ಇಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಹೇಳಿದರು.ಅವರು ಅಕ್ಟೋಬರ್ 13ರಂದು ಗುರುವಾಯನಕೆರೆ ಬಂಟರ ಯಾನೆ ನಾಡವರ ಸಂಘದ ಸಭಾಭವನದಲ್ಲಿ ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ […]

ಕೊಯ್ಯೂರಿನಲ್ಲಿ ಹರಿಕಥಾ ಕಾಲಕ್ಷೇಪ

ಬೆಳ್ತಂಗಡಿ: ಕೊಯ್ಯೂರು ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿಯ ಪ್ರಯುಕ್ತ ‘ಶ್ರೀ ಮಹಿಷ ಮರ್ದಿನಿ’ ಪುರಾಣಕಥೆಯ ಹರಿಕಥಾ ಕಾಲಕ್ಷೇಪವು ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯರಿಂದ ನಡೆಯಿತು. ಸುವರ್ಣ ಕುಮಾರಿ, ಸುಮಂಗಲ ಕುಂಟಿನಿ ಹಾಗೂ ಮಧೂರು ವಿಷ್ಣು ಪ್ರಸಾದ ಕಲ್ಲೂರಾಯ ಹಿಮ್ಮೇಳದಲ್ಲಿ ಹಾಡಿನಲ್ಲಿ ಸಹಕರಿಸಿದರೆ; ಓಜಸ್ವಿ ತಬಲದಲ್ಲಿ ಸಹಕರಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಕೊಯ್ಯುರು ಅಶೋಕ ಭಟ್ ಅಗ್ರಶಾಲೆ ಮತ್ತು ದೇವಳದ ಭಜನಾ ಸಂಘವು ಸಹಕಾರವನ್ನು ನೀಡಿತ್ತು.

ನೆನಪುಗಳ ನೇವರಿಕೆ’ ಪುಸ್ತಕ ಬಿಡುಗಡೆ

‘ಬೆಳ್ತಂಗಡಿ: ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ರಾಮಕುಂಜದ ಟಿ. ನಾರಾಯಣ ಭಟ್ ರಚಿಸಿದ ‘ನೆನಪುಗಳ ನೇವರಿಕೆ’ ಪುಸ್ತಕವನ್ನು ಅಕ್ಟೋಬರ್ 12ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಬೀಡಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.ತಮ್ಮ ಬದುಕಿನ ಜೊತೆಗೆ ಸುತ್ತಮುತ್ತಲ ಬದುಕಿಗೂ ಒಂದಲ್ಲ ಒಂದು ರೀತಿಯಲ್ಲಿ ಆಸರೆಯಾಗಿ ನಡೆದುಕೊಂಡವರನ್ನು ಗುರುತಿಸಿ, ನೆನವರಿಕೆ ಮಾಡಿರುವ ಕೃತಿ ‘ನೆನಪುಗಳ ನೇವರಿಕೆ’ ಯಲ್ಲಿ ಪ್ರಸ್ತುತ ಜನಾಂಗಕ್ಕೆ ಹಾಗೂ ಮುಂದಿನ ತಲೆಮಾರಿಗೂ ಉಪಯುಕ್ತ ಮಾಹಿತಿ, ಮಾರ್ಗದರ್ಶನವಿದೆ. ಇದು […]

ಸಂಗೀತ ಕಾರ್ಯಕ್ರಮ

ಬೆಳ್ತಂಗಡಿ: ನವರಾತ್ರಿಯ ಶುಭ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಅಕ್ಟೋಬರ್ 11ರಂದು ಬೆಂಗಳೂರಿನ ಡಾ. ಅರ್ಚನಾ ಕುಲಕರ್ಣಿ, ಸಿದ್ಧಯ್ಯ, ಹಾಗೂ ಗುಂಡಪ್ಪ ಸಂಗೀತ ಕಾರ್ಯಕ್ರಮ ನೀಡಿದರು.ಕೀಬೋರ್ಡ್ ವಾದಕರಾಗಿ ವೆಂಕಟೇಶ್, ರಿದಂಪ್ಯಾಡ್ ವಾದಕರಾಗಿ ಪ್ರಸಾದ್, ತಬಲಾ ವಾದಕರಾಗಿ ಕ್ಷೀರಲಿಂಗ ಹಾಗೂ ತಾಳದಲ್ಲಿ ಸೂರ್ಯನಾರಾಯಣ ಸಹಕರಿಸಿದರು.

ಕೋಳಿ ಸಾಕಾಣಿಕೆಯ ಬಗ್ಗೆ ಮಾಹಿತಿ ಶಿಬಿರ

ಬೆಳ್ತಂಗಡಿ: ಲಯನ್ಸ್ ಕ್ಲಬ್ ಸುಲ್ಕೇರಿಯ ಮಾಸಿಕ ಸಭೆ ಮತ್ತು ಕೋಳಿ ಸಾಕಾಣಿಕೆ ಬಗ್ಗೆ ಮಾಹಿತಿ ಕಾರ್ಯಕ್ರಮವು ಲಯನ್ ಹರೀಶ್ ಪೂಜಾರಿಯವರ ಮನೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸುಲ್ಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ರವಿ ಶೆಟ್ಟಿಣ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ, ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ ಹಾಗೂ ಲಯನ್ ಸದಸ್ಯರುಗಳಾದ ಸುಂದರ ಶೆಟ್ಟಿ ಕೆ., ವಸಂತ ರಾವ್, ನಾರಾಯಣ ಪೂಜಾರಿ, ರಾಮಣ್ಣ ಶೆಟ್ಟಿ, ಹರೀಶ್ ಪೂಜಾರಿ, ಸಂದೀಪ್ ಶೆಟ್ಟಿ, ಮಹಾಬಲ ಶೆಟ್ಟಿ ಉಪಸ್ಥಿತರಿದ್ದರು

ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಸಾಲಿಗ್ರಾಮ ಮಕ್ಕಳ ಮೇಳ

ಬೆಳ್ತಂಗಡಿ: ಸಾಲಿಗ್ರಾಮ ಮಕ್ಕಳ ಮೇಳದ ಬಾಲಕಲಾವಿದರ ಪ್ರತಿಭೆ, ವಾಕ್‌ಚಾತುರ್ಯ, ಪ್ರೌಢ ಅಭಿನಯ, ಹೃದಯಸ್ಪರ್ಶಿ ಹಾವಭಾವವನ್ನು ಶ್ಲಾಘಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಎಳೆಯ ಕಲಾವಿದರೆ ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸಲು ಸಮರ್ಥರು ಹಾಗೂ ಪ್ರಬುದ್ಧರು ಎಂದು ಹೇಳಿದರು.ಅವರು ಅಕ್ಟೋಬರ್ 10ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರವಚನಮಂಟಪದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ಸುವರ್ಣಪರ್ವ ಆಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಹಿರಿಯ ಕಲಾವಿದರ ಕೊರತೆ ಕಾಡುತ್ತಿರುವಾಗ ಎಳೆಯ ಮಕ್ಕಳೆ ಯಕ್ಷಗಾನ ಕಲೆಯನ್ನು […]

ಬೆಳಾಲಿನಲ್ಲಿ 1867ನೇ ಮದ್ಯವರ್ಜನ ಶಿಬಿರದಕ್ಕೆ ಡಾ. ಹೆಗ್ಗಡೆ ಭೇಟಿ

ಬೆಳ್ತಂಗಡಿ: ಮದ್ಯಪಾನದಂತಹ ವ್ಯಸನದಿಂದ ವ್ಯಕ್ತಿ ತನ್ನ ವ್ಯಕ್ತಿತ್ವವನ್ನೇ ಕಳೆದುಕೊಳ್ಳುತ್ತಾನೆ. ಆ ಮೂಲಕ ಸಮಾಜದಲ್ಲಿ ತನ್ನ ಹಾಗೂ ತನ್ನ ಕುಟುಂಬಿಕರ ಗೌರವಕ್ಕೆ ಕುತ್ತು ತರುತ್ತಾನೆ. ಪಂಚೇಂದ್ರಿಯಗಳನ್ನು ಹತೋಟಿಯಲ್ಲಿರಿಸಿ, ದುರ್ಜನರ ಸಂಘದಿಂದ ದೂರವಿದ್ದು, ಸಜ್ಜನರ ಸಹವಾಸ ಮಾಡಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು. ದುಶ್ಚಟಗಳು ಕ್ರಿಮಿನಲ್ ಕೃತ್ಯಗಳಿಗೂ ಪ್ರೇರಣೆ ನೀಡುತ್ತದೆ ಎಂಬ ಬಗ್ಗೆ ಎಚ್ಚರ ಅಗತ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸಲಹೆ ನೀಡಿದರು.ಅವರು ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಬೆಳಾಲು ಇದರ ಆಶ್ರಯದಲ್ಲಿ; […]