ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವಲ್ಲ; 74ನೇ ಸ್ವಾತಂತ್ರ್ಯೋತ್ಸವದಲ್ಲಿ ತಹಶೀಲ್ದಾರ್ ಮಹೇಶ್

ಬೆಳ್ತಂಗಡಿ: ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವಲ್ಲ. ನಮ್ಮ ಇತಿಮಿತಿಗಳನ್ನು ಅರಿತು ಸಹನೆ ಹಾಗೂ ಸಂಯಮದಿಂದ ಮಾನವೀಯ ಮೌಲ್ಯಗಳನ್ನು ಕಾಪಾಡಿಕೊಂಡು ಬದುಕು ರೂಪಿಸಿಕೊಳ್ಳುವುದೇ ನಿಜವಾದ ಸ್ವಾತಂತ್ರ್ಯ ಎಂದು ಬೆಳ್ತಂಗಡಿಯ ತಹಶೀಲ್ದಾರ್ ಮಹೇಶ್ ಜೆ. ಹೇಳಿದರು.ಅವರು ಆಗಸ್ಟ್ 15ರಂದು ಬೆಳ್ತಂಗಡಿಯ ಮಿನಿ ವಿಧಾನಸೌಧದ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ರಾಷ್ಟ್ರದ 74ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸ್ವಾತಂತ್ರ್ಯ ದಿನದ ಸಂದೇಶ ನೀಡುತ್ತಿದ್ದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ತಾಲೂಕು ಪಂಚಾಯತ್‌ಗೆ ಅಧ್ಯಕ್ಷೆ ದಿವ್ಯಜ್ಯೋತಿ ಮಾತನಾಡಿ; […]
ಶಿಶಿಲ: ಕಪಿಲಾ ನದಿಯಲ್ಲಿ ನೀರು ಹೆಚ್ಚಳ ಭೀತಿ: ಬೆಳ್ತಂಗಡಿ ಇ.ಓ ಸ್ಥಳಕ್ಕೆ ಭೇಟಿ.

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಮತ್ಸö್ಯಕ್ಷೇತ್ರ ಖ್ಯಾತಿಯ ಶಿಶಿಲ ದಲ್ಲಿ ಕಪಿಲಾ ನದಿಯ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಈ ಬಗ್ಗೆ ಸ್ಥಳೀಯರ ಮನವಿಯ ಮೇರೆಗೆ ಬೆಳ್ತಂಗಡಿ ತಾಲೂಕು ಇ.ಒ ಕುಸುಮಾಧರ್ ಶಿಶಿಲ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕಪಿಲಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದು ಯಾವುದೇ ಅನಾಹುತಗಳು ಸಂಭವಿಸದAತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಥಳೀಯ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಈ ನಡುವೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರವರು ಇ.ಒ […]
ಅಳಂಬದಲ್ಲಿ ಆದಿವಾಸಿ ದಿನಾಚರಣೆ ; ಎಲ್ಲ ಓಕೆ, ಮಾಸ್ಕ್ ಧರಿಸಿಲ್ಲ ಯಾಕೆ?

ಬೆಳ್ತಂಗಡಿ: ದಿನಾಂಕ 09-08-2020 ವಿಶ್ವ ಆದಿವಾಸಿಗಳ ದಿನ. ಆದಿವಾಸಿ ಹಕ್ಕುಗಳ ಸಂರಕ್ಷಣಾ ಸಮಿತಿ ಬೆಳ್ತಂಗಡಿ ಇದರ ಆಶ್ರಯದಲ್ಲಿ ಕಾರ್ಮಿಕ ಮುಂದಾಳು ಬಿ.ಎಂ.ಭಟ್‌ರ ನಾಯಕತ್ವದಲ್ಲಿ ಬೆಳ್ತಂಗಡಿ ತಾಲೂಕು ಕುತ್ಲೂರು ಗ್ರಾಮದ ರಕ್ಷಿತಾರಣ್ಯ ಅಡವಿಯ ಅಳಂಬಾದಲ್ಲಿ ಸ್ಥಳೀಯ ಆದಿವಾಸಿಗಳು ಸೇರಿ ಆದಿವಾಸಿ ದಿನಾಚರಣೆಯನ್ನು ಆಚರಿಸಿದರು. ಭೂಮಿಯ ಹಕ್ಕು ಹಾಗೂ ಸಮುದಾಯ ಹಕ್ಕು ಆದಿವಾಸಿಗಳ ಜನ್ಮ ಸಿದ್ದ ಹಕ್ಕು ಎನ್ನುತ್ತಾ, ಆದಿವಾಸಿ ಹಕ್ಕುಗಳ ರಕ್ಷಣೆಗಾಗಿ ಸಮರ ದೀರ ಹೋರಾಟ ನಡೆಸಲು ಈ ಸಂದರ್ಭದಲ್ಲಿ ಪ್ರತಿಜ್ಞೆ ಸ್ವೀಕರಿಸಿದರು.ಬಿ.ಎಂ.ಭಟ್ ಹಾಗೂ ಎಲ್. ಮಂಜುನಾಥ್ ಮಾತಾಡಿದರು. […]
ದಿಡುಪೆಯ ಕಲ್ಬೆಟ್ಟು ಸೇತುವೆ ಅಪಾಯದಲ್ಲಿ

ಸಂಪರ್ಕ ಕಡಿದುಕೊಳ್ಳುವ ಭೀತಿಯಲ್ಲಿ ದಿಡುಪೆಯ ಮಂದಿ ಬೆಳ್ತಂಗಡಿ: ಆಗಸ್ಟ್ ತಿಂಗಳ 3 ಮತ್ತು 4ನೇ ತಾರೀಕಿನಂದು ಸುರಿದ ಭಾರೀ ಮಳೆಗೆ ಮಲವಂತಿಗೆ ಗ್ರಾಮದದಿಡುಪೆಯ ಕಲ್ಬೆಟ್ಟು ಎಂಬಲ್ಲಿನ ನೇತ್ರಾವತಿ ಕಿನಾರೆಯ ಸೇತುವೆಯ ಸಂಪರ್ಕ ಕಡಿದುಹೋಗಿ ಅಪಾಯದ ಸ್ಥಿತಿ ನಿರ್ಮಾಣವಾಗಿದೆ. ನದಿಯ ಪ್ರವಾಹಕ್ಕೆ ಸೇತುವೆಯೂ ಹಾನಿಗೊಳಗಾಗಿದ್ದು ಜನರ ಹಾಗೂ ವಾಹನಗಳ ಓಡಾಟಕ್ಕೆ ಅನಾನುಕೂಲವಾಗಿದೆ. ಪರಿಸರದ ನಿವಾಸಿಗರು ಅದರಲ್ಲೂ ನಿತ್ಯ ಸೊಸೈಟಿಗೆ ಹಾಲು ಕೊಂಡೊಯ್ಯುವ ಹೈನುಗಾರರು ಹಾಗೂ ಕೃಷಿಕರು ಈ ರಸ್ತೆಯನ್ನೇ ಅವಲಂಬಿಸಿದ್ದು, ಇದೀಗ ಸೇತುವೆ ಸಂಪರ್ಕ ಕಳೆದುಕೊಂಡದ್ದು ಮಾತ್ರವಲ್ಲದೇ, ಸೇತುವೆಯೇ […]
ದೇವರಗುಡ್ಡೆ ಮಠದಲ್ಲಿ ಪ್ರಭು ಶ್ರೀರಾಮಚಂದ್ರನ ಮೂರ್ತಿ ಸ್ಥಾಪನೆ

ಬೆಳ್ತಂಗಡಿ : ಮನಸ್ಸಿನ ಪವಿತ್ರತೆಯನ್ನು ಹೆಚ್ಚಿಸಲು ದೇವರ ನಾಮಸ್ಮರಣೆ ಅಗತ್ಯ. ನಿಷ್ಠೆಯಿಂದ ಧರ್ಮಪಾಲನೆ ಮಾಡುವ ಮೂಲಕ ಸುಖ, ಶಾಂತಿ, ನೆಮ್ಮದಿಯ ಬದುಕು ನಮ್ಮದಾಗಿಸಿಕೊಳ್ಳಬೇಕು. ರಾಮ ಎಂಬ ಶಬ್ದ ನಮ್ಮ ಜೀವನಾಡಿ. ಸನಾತನ ಧರ್ಮವನ್ನು ಅನುಸರಿಸುವ ಪ್ರತಿಯೊಬ್ಬರ ಮನೆಗಳಲ್ಲಿ ಶ್ರೀರಾಮ ನಾಮ ಜಪಿಸುವಂತಾಗಲಿ ಎಂದು ಧರ್ಮಸ್ಥಳ ನಿತ್ಯಾನಂದನಗರ ಶ್ರೀರಾಮಕ್ಷೇತ್ರದ ಸದ್ಗುರು ಬ್ರಹ್ಮಾನಂದಶ್ರೀಗಳು ನುಡಿದರು.ಅವರು ಆಗಸ್ಟ್ 5ರಂದು ಧರ್ಮಸ್ಥಳ ಕನ್ಯಾಡಿ ದೇವರಗುಡ್ಡೆ ಮಠದಲ್ಲಿ ಶ್ರೀರಾಮಚಂದ್ರ ಸಪರಿವಾರ ಮೂರ್ತಿಗಳ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಪ್ರತಿಷ್ಠೆ ನೆರವೇರಿಸಿದ ಬಳಿಕ ಆಶಿರ್ವಚನ […]
ಮಳೆಗೆ ತಾಲೂಕಿನಲ್ಲಿ ಮೊದಲ ಮನೆ ಹಾನಿ ಪ್ರಕರಣ ದಾಖಲು

ಅದೃಷ್ಟವಶಾತ್ ಐವರೂ ಅಪಾಯದಿಂದ ಪಾರು ಬೆಳ್ತಂಗಡಿ: ಆಗಸ್ಟ್ 4 ರಂದು ಸುರಿದ ಭಾರೀ ಮಳೆಯೊಂದಿಗೆ ಬೀಸಿದ ಗಾಳಿಗೆ ಮೈಯೊಡ್ಡಿ ನಿಂತು, ತನ್ನನ್ನು ನಿರ್ಮಿಸಿದವರನ್ನು ರಕ್ಷಿಸುತ್ತಿದ್ದ ಬಡಪಾಯಿ ವ್ಯಕ್ತಿಯೋರ್ವರ ಮನೆಯೊಂದರ ಮೇಲ್ಛಾವಣಿಯು ಮಳೆಯಬ್ಬರಕ್ಕೆ ತಡೆದು ನಿಲ್ಲಲಾಗದೇ ಕುಸಿದು ಬಿದ್ಧ ದುರ್ಘಟನೆ ಮೇಲಂತಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡೂರು ಗ್ರಾಮದ ಪರಂಬುಡೆಯಲ್ಲಿ ಸಂಭವಿಸಿದೆ. ಈ ಸಂದರ್ಭ ಮನೆಯೊಳಗಿದ್ದ ಐವರೂ ಸುದೈವವಶಾತ್ ಅಪಾಯದಿಂದ ಪಾರಾಗಿದ್ದಾರೆ. ಈ ವರ್ಷ ಮಳೆಗೆ ಹಾನಿಗೀಡಾದ ಮೊದಲ ಮನೆ ಇದಾಗಿದ್ದು, ಇದೇ ಕೊನೆಯಾಗಲಿ ಎಂಬ ಹಾರೈಕೆ ಸ್ಥಳೀಯರದ್ದು.ದುರ್ಘಟನೆಯಲ್ಲಿ […]
ಚಲಿಸುತ್ತಿದ್ದ ರಿಕ್ಷಾ ಮೇಲೆ ಬಿದ್ದ ಮರ

ಸುದೈವವಶಾತ್ ಪಾರಾದ ರಿಕ್ಷಾ ಚಾಲಕ ಬೆಳ್ತಂಗಡಿ: ಆಗಸ್ಟ್ 4ರ ಬೆಳಿಗ್ಗೆ ಸುರಿದ ಭಾರೀ ಗಾಳಿ-ಮಳೆಗೆ ಬೆಳ್ತಂಗಡಿ-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ತೆಂಕಕಾರಂದೂರು ಪೆರಳ್ದರಕಟ್ಟೆ ಮಂಜೊಟ್ಟಿ ತಿರುವು ಬಳಿ ತೆಂಕಕಾರಂದೂರಿನ ಅಬೂಬಕ್ಕರ್ ಚಲಾಯಿಸುತ್ತಿದ್ದ ರಿಕ್ಷಾದ ಮೇಲೆ ರಸ್ತೆ ಬದಿಯಲ್ಲಿದ್ದ ಮರವೊಂದು ಬಿದ್ದು, ರಿಕ್ಷಾ ಜಖಂಗೊಂಡಿದೆ.ಮರ ಬಿದ್ದ ರಭಸಕ್ಕೆ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬ ಹಾಗೂ ತಂತಿಗಳು ವಾಲಿದ್ದು, ಸುದೈಶವಶಾತ್ ರಿಕ್ಷಾ ಚಾಲಕ ಅಬೂಬಕ್ಕರ್ ಅಪಾಯದಿಂದ ಪಾರಾಗಿದ್ದಾರೆ. ಹೆದ್ದಾರಿಯಲ್ಲಿ ಮರ ಬಿದ್ದ ಪರಿಣಾಮ ಸುಮಾರು ಅರ್ಧ ಗಂಟೆಗಳ ಕಾಲ ವಾಹನಗಳು ಜಾಮ್ […]
ಚಲಿಸುತ್ತಿದ್ದ ಪಿಕ್‌ಅಪ್ ಮೇಲೆ ಬಿದ್ದ ವಿದ್ಯುತ್ ಕಂಬ

ಪುಣ್ಯವಶಾತ್ ತಪ್ಪಿದ ಭಾರೀ ದುರಂತ ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನಲ್ಲಿ ಆಗಸ್ಟ್ 3ರ ಸೋಮವಾರದಿಂದ ಸುರಿಯುತ್ತಿರುವ ಭಾರೀ ಗಾಳಿ-ಮಳೆಗೆ ತಾಲೂಕಿನ ಹಲವಡೆ ಅವಘಡ ಹಾಗೂ ಆಸ್ತಿಪಾಸ್ತಿ ನಷ್ಟ ಸಂಭವಿಸಿದ್ದು; ಪಡಂಗಡಿ ಗ್ರಾಮದ ಕನ್ನಡಿಕಟ್ಟೆಯಲ್ಲರುವ ರಬ್ಬರ್ ನರ್ಸರಿ ಮುಂಭಾಗದಲ್ಲಿ ಗುರುವಾಯನಕೆರೆ ವಿದ್ಯುತ್ ಸಬ್‌ಸ್ಟೇಷನ್ ನಿಂದ ವೇಣೂರು ಸಬ್‌ಸ್ಟೇಷನ್ ಗೆ ಹೋಗುವ 33 ಕೆ.ವಿ. ವಿದ್ಯುತ್ ಕಂಬ ಆಗಸ್ಟ್ 4ರ ಬೆಳಿಗ್ಗೆ ಚಲಿಸುತ್ತಿದ್ದ ಪಿಕ್‌ಅಪ್ ವಾಹನದ ಮೇಲೆ ಬಿದ್ದು ವಾಹನ ಜಖಂಗೊಂಡಿದ್ದು; ಪುಣ್ಯವಶಾತ್ ವಾಹನದಲ್ಲಿದವರಿಗೆ ಯಾವುದೇ ಗಂಭೀರ ಸ್ವರೂಪದ ಗಾಯಗಾಳಾಗಲಿಲ್ಲ. […]
ಚಾರ್ಮಾಡಿ ಘಾಟಿ ಅಪಾಯ ಅಪಾಯ ಅಪಾಯ

ಬೆಳ್ತಂಗಡಿ : ಆಗಸ್ಟ್ 3ರಂದು ಬೆಳ್ತಂಗಡಿ ತಾಲೂಕಿನಲ್ಲಿ ಹಾಗೂ ಘಾಟಿ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಚಾರ್ಮಾಡಿ ಘಾಟಿಯ ಎರಡನೇ ತಿರುವಿನಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದು, ವಾಹನ ಸಂಚಾರ ಅಸ್ತವ್ಯಸ್ಥಗೊಂಡಿದೆ. ಅತ್ಯಂತ ದುರ್ಗಮವಾದ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಮಳೆಗಾಲದಲ್ಲಂತೂ ವಾಹನ ಸಂಚಾರ ತೀರಾ ಅಪಾಯಕಾರಿ ಎಂದು ಗೊತ್ತಿದ್ದರೂ ಇಲ್ಲಿ ಸಾಕಷ್ಟು ದುಸ್ಸಾಹಸಿಗರು ತಮ್ಮ ವಾಹನದಲ್ಲಿ ಪಯಣಿಸುತ್ತಲೇ ಇದ್ದಾರೆ. ಈ ರಸ್ತೆಯಲ್ಲಿ ಪಯಣಿಸುವ ದುಸ್ಸಾಹಸಕ್ಕೆ ಮುಂದಾಗುವ ಎಲ್ಲರೂ ಒಂದು ವಿಚಾರವನ್ನು ತಿಳಿದುಕೊಂಡಿರಬೇಕು; ‘ಮಳೆಗಾಲದಲ್ಲಿ ಚಾರ್ಮಾಡಿ ಘಾಟಿ ರಸ್ತೆಯಲ್ಲಿ […]
ಆ್ಯಸಿಡ್ ಸೇವಿಸಿ ಸಾವಿಗೆ ಶರಣು
ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕಾಯರ್ತಡ್ಕ ನಿವಾಸಿ ಯಶೋಧರರ ಪತ್ನಿ ಜಯಶ್ರೀ (23) ರಬ್ಬರ್ ಮರಗಳಿಗೆ ಹಾಕುವ ಆ್ಯಸಿಡ್ ಸೇವಿಸಿ ಸಾವಿಗೆ ಶರಣಾದ ಘಟನೆ ಜುಲೈ 30ರ ರಾತ್ರಿ ವರದಿಯಾಗಿದ್ದು; ಸಾವಿಗೆ ಶರಣಾಗಲು ಕಾರಣಗಳು ತಿಳಿದಿಲ್ಲ. ವಿವಾಹವಾಗಿ ಎರಡೂವರೆ ವರ್ಷಗಳು ಕಳೆದಿದ್ದು, ಪತಿ-ಪತ್ನಿ ತೀರಾ ಅನ್ಯೋನ್ಯವಾಗಿದ್ದರು ಎನ್ನಲಾಗಿದ್ದು; ಮಕ್ಕಳಾಗಲಿಲ್ಲವೆಂಬ ಕೊರಗು ಸಾವಿಗೆ ಶರಣಾಗಲು ಕಾರಣ ಎಂದು ಹೇಳಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡ ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.