ಕರ್ನಾಟಕ ಮುಸ್ಲಿಂ ಜಮಾಅತ್ ಕಣಿಯೂರು ಬ್ಲಾಕ್: ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಬೆಳ್ತಂಗಡಿ: ಮುಸ್ಲಿಂ ಸಮುದಾಯದ ಅಭಿವೃದ್ಧಿ, ಸಮಾಜದ ಸಾಂಸ್ಕೃತಿಕ-ಆರ್ಥಿಕ-ಸಾಮಾಜಿಕ-ಶೈಕ್ಷಣಿಕ-ಆರೋಗ್ಯ, ಔದ್ಯೋಗಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸಬಲೀಕರಣ, ನಾಡಿನ ಸರ್ವ ಜನರ ಮಧ್ಯೆ ಸಾಮರಸ್ಯ ಸೌಹಾರ್ದತೆ ಸಹಿಷ್ಣುತೆ ಸೃಷ್ಟಿಸಿ, ರಾಷ್ಟ್ರದ ಏಕತೆಗಾಗಿ ಶ್ರಮಿಸುವ ಧ್ಯೇಯದೊಂದಿಗೆ ಕರ್ನಾಟಕ ಮುಸ್ಲಿಂ ಜಮಾಅತ್ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದೆ.ನವೆಂಬರ್ 1ರಿಂದ 30ರತನಕ ನಡೆಯುವ ಸದಸ್ಯತ್ವ ಅಭಿಯಾನದ ಭಾಗವಾಗಿ, ಕಣಿಯೂರು ಬ್ಲಾಕ್ ವ್ಯಾಪ್ತಿಯಲ್ಲಿ ಚಾಲನೆಯನ್ನು ನೀಡಲಾಯಿತು. ಬ್ಲಾಕ್ ಸಮಿತಿ ಅಧ್ಯಕ್ಷರಾದ ಮುಹಮ್ಮದ್ ಅಶ್ರಫ್ ಸಖಾಫಿ ಮೂಡಡ್ಕ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು, SMA ಕುಪ್ಪೆಟ್ಟಿ ರೀಜನಲ್ ಹಾಗೂ […]

ಜಾತಿ ನಿಂದನೆ ದೂರು; ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲು

ಬೆಳ್ತಂಗಡಿ: ಅಕ್ಟೋಬರ್ 13ರಂದು ನಡೆದ ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಮಾನ್ಯ ಸಭೆಯಲ್ಲಿ ಸಂಘದ ನಿರ್ದೇಶಕ ರಘುಚಂದ್ರ ರಾವ್ ಸಂಘದ ಇನ್ನೋರ್ವ ನಿರ್ದೇಶಕ ನಾರ್ಯ ನಿವಾಸಿ ಶೀನ ಎಂಬವರನ್ನು ಜಾತಿ ಹೆಸರಲ್ಲಿ ನಿಂದನೆ ಮಾಡಿರುವ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.ಅಕ್ಟೋಬರ್ 13ರಂದು ನಡೆದ ಸಂಘದ ಸಾಮಾನ್ಯ ಸಭೆಯಲ್ಲಿ ಇತ್ತೀಚೆಗೆ ಅಸಹಜವಾಗಿ ನಿಧನರಾದ ಸಂಘದ ದೈನಿಕ ಠೇವಣಿ ಸಂಗ್ರಾಹಕ ಜಗದೀಶ್‌ರ ಕುಟುಂಬಕ್ಕೆ ಸಂಘದಿಂದ ಆರ್ಥಿಕ ನೆರವು ನೀಡುವ ವಿಚಾರ ಪ್ರಸ್ತಾಪವಾದಾಗ ಮಾತನಾಡಿದ ನಿರ್ದೇಶಕ ರಘುಚಂದ್ರ […]

ಹಣತೆ ಹಚ್ಚೋಣ ಬಾ ಬೆಳಕಿಗೆ ಪ್ರೀತಿ ಹಂಚೋಣ ಬಾ ಬದುಕಿಗೆ

ಬೆಳ್ತಂಗಡಿ: ದೀಪಾವಳಿ ಬೆಳಕಿನ ಹಬ್ಬ. ಈ ಹಬ್ಬ ಸೌಹಾರ್ದತೆಯನ್ನು ತುಂಬಿ ಜಗದ ಕತ್ತಲೆಯನ್ನು ಕಳೆದು, ಮನದಲ್ಲಿ ಮಾನವೀಯತೆ ತುಂಬಿ, ಬದುಕಲ್ಲಿ ವಾತ್ಸಲ್ಯ ತುಂಬುವ ಉದ್ದೇಶದಿಂದ ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಬೆಳ್ತಂಗಡಿಯ ಸಮುದಾಯ ಹಾಡುಗಾರರ ತಂಡ ಮನೆಮನೆಗೆ ತೆರಳಿ ಸೌಹಾರ್ದತೆಯ ದೀಪ ಬೆಳಗಿ ಹಾಡುವುದರ ಮೂಲಕ ದೀಪಾವಳಿಯನ್ನು ವಿನೂತನವಾಗಿ ಆಚರಿಸುವುದಕ್ಕೆ ಮುನ್ನುಡಿ ಬರೆಯಿತು.80 ದಶಕದಲ್ಲಿ ಹಾಡಿನ ಮೂಲಕ ನಾಡಿನ ಸೌಹಾರ್ದತೆಗೆ ಹೊಸ ರೀತಿಯ ಕಲ್ಪನೆ ಕೊಟ್ಟ ಸಮುದಾಯ ತಂಡ ಇದೀಗ ತಾಲೂಕಿನಲ್ಲಿ ಸೌಹಾರ್ದ ದೀಪಾವಳಿ ಎಂಬ ಪರಿಕಲ್ಪನೆಯೊಂದಿಗೆ […]

ಶಿಕ್ಷಣ ಸಚಿವರಿದ್ದ ಕಾರ್ಯಕ್ರಮದಲ್ಲಿ ನಾಡಗೀತೆಗೆ ಅವಮಾನ

ಬೆಳ್ತಂಗಡಿ: 66ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಿದ ಮರುದಿನವೇ ಅಂದರೆ ನವೆಂಬರ್ 2ರಂದು ಬೆಳ್ತಂಗಡಿಯ ಶ್ರೀ ಮಂಜುನಾಥಸ್ವಾಮಿ ಕಲಾಭವನದಲ್ಲಿ ನಡೆದ ಸರಕಾರಿ ಕಾರ್ಯಕ್ರಮದಲ್ಲಿ ರಾಜ್ಯದ ಶಿಕ್ಷಣ ಸಚಿವ ಬಿ. ಸಿ‌. ನಾಗೇಶ್‌ರ ಉಪಸ್ಥಿತಿಯಲ್ಲಿಯೇ ನಾಡಗೀತೆಗೆ ಅವಮಾನಿಸಿದ ಪ್ರಸಂಗ ನಡೆಯಿತು. ತನಗಾದ ಅವಮಾನಕ್ಕೆ ಕನ್ನಡತಾಯಿ ಭುವನೇಶ್ವರಿ ಸುರಿಸಿದ ಕಣ್ಣೀರು ಮಾತ್ರ ಅರಣ್ಯರೋದನವಾಗಿತ್ತು.ಬೆಳ್ತಂಗಡಿ ತಾಲೂಕಿನ 55 ಸರಕಾರಿ ಶಾಲೆಗಳಿಗೆ ಎಂಆರ್‌ಪಿಎಲ್ ಕಂಪೆನಿಯವರು ತಮ್ಮ ಸಿಎಸ್‌ಆರ್ ಫಂಡ್ ಮೂಲಕ ಒದಗಿಸಿದ ಹೈಟೆಕ್ ಶೌಚಾಲಯಗಳ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಆರಂಭದಲ್ಲಿ ಉಜಿರೆಯ ಬದನಾಜೆ […]

ರಾಜ್ಯೋತ್ಸವ ಆಚರಣೆ ಶಿಷ್ಟಾಚಾರಕ್ಕೆ ಸವಾಲ್ : ಹಸಿದ ಮಕ್ಕಳು ಬರಿಹೊಟ್ಟೆಯಲ್ಲಿ ಮನೆಗೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಆಡಳಿತದ ನೇತೃತ್ವದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ನವೆಂಬರ್ 1ರಂದು ಬೆಳ್ತಂಗಡಿಯ ಮಿನಿವಿಧಾನಸೌಧದ ಆವರಣದಲ್ಲಿ ನಡೆದ 66ನೇ ಕನ್ನಡ ರಾಜ್ಯೋತ್ಸವವು ಸಾಕಷ್ಟು ಎಡವಟ್ಟುಗಳಿಗೆ ಸಾಕ್ಷಿಯಾಯಿತು.ರಾಜ್ಯದೆಲ್ಲೆಡೆ ಶಿಷ್ಟಾಚಾರದಂತೆ ಬೆಳಿಗ್ಗೆ ಗಂಟೆ 9-00ರಿಂದ 9-30ರೊಳಗೆ ಧ್ವಜಾರೋಹಣವಾದರೆ; ಬೆಳ್ತಂಗಡಿಯಲ್ಲಿ ಮಾತ್ರ ಗಂಟೆ 10-00 ಆದರೂ ಧ್ವಜಾರೋಹಣಕ್ಕೆ ಮುಹೂರ್ತ ಕೂಡಿ ಬಂದಿರಲೇ ಇಲ್ಲ. ಈ ರೀತಿ ಶಿಷ್ಟಾಚಾರ ಉಲ್ಲಂಘನೆಗೆ ಕಾರಣ ಎಲ್ಲರಿಗೂ ಗೊತ್ತಿತ್ತು. ಆದರೆ ಅಭಿಪ್ರಾಯಿಸುವ ‘ದಂ’ ಯಾರಿಗೂ ಇದ್ದಂತಿರಲಿಲ್ಲ. ಶಾಸಕ ಹರೀಶ್ ಪೂಂಜರಿಗೆ ಬಕೆಟ್ ಹಿಡಿಯುವುದೇ […]

ಸಹಕಾರ ಭಾರತಿಗೆ ಆಯ್ಕೆ

ಬೆಳ್ತಂಗಡಿ: ಸಹಕಾರ ಭಾರತಿ ಬೆಳ್ತಂಗಡಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ರಾಜೇಶ್ ಪೆಂರ್ಬುಡ ಆಯ್ಕೆಯಾಗಿದ್ದಾರೆ. ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 20ರಂದು ಬೆಳ್ತಂಗಡಿಯಲ್ಲಿ ನಡೆದ ಸಹಕಾರ ಭಾರತಿಯ ಸಭೆಯಲ್ಲಿ ಜಿಲ್ಲಾಧ್ಯಕ್ಷರು ತಾಲೂಕಿನ ನೂತನ ಸಮಿತಿಯನ್ನು ಘೋಷಿಸಿದರು.ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಸಹಸೇವಾ ಪ್ರಮುಖ್ ಸುಭಾಷ್ ಕಳೆಂಜ, ಸಹಕಾರ ಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಕೊಂಪದವು, ಸಹಕಾರ ಭಾರತಿ ತಾಲೂಕು ಅಧ್ಯಕ್ಷರಾಗಿದ್ದ ಸುಂದರ ಹೆಗ್ಡೆ ವೇಣೂರು ಉಪಸ್ಥಿತರಿದ್ದರು.ಮುಂದಿನ‌ ಮೂರು ವರ್ಷಗಳ ಅವಧಿಗೆ ನೂತನ […]

ಶ್ರೀ ಗುರುದೇವ ಸೊಸೈಟಿಯ ವಾರ್ಷಿಕ ಮಹಾಸಭೆ

ಬೆಳ್ತಂಗಡಿ: ಸಾಧನೆಯ ಮಹಾಪೂರ ಹೊತ್ತುಕೊಂಡು ‘ನಿಮ್ಮ ಸ್ಫೂರ್ತಿ ನಮ್ಮ ಉತ್ಕೃಷ್ಟ ಸೇವೆ’ ಎಂಬ ಧ್ಯೇಯವಾಕ್ಯದೊಂದಿಗೆ ನಮ್ಮ ಸಹಕಾರ ಸಂಘವು ಅದ್ವಿತೀಯ ಸಾಧನೆ ತೋರಿದೆ. ಸಂಸ್ಥೆಯ ಬೆನ್ನೆಲುಬಾದ ಸದಸ್ಯ ಮಿತ್ರರ ಸಹಕಾರ ಮತ್ತು ಗ್ರಾಹಕ ಸ್ನೇಹಿ ವ್ಯವಹಾರ ನೀಡಿದ್ದರಿಂದ ಸಂಸ್ಥೆಯ ಪ್ರಗತಿಯಲ್ಲಿ ಮಹತ್ತರ ಏಳಿಗೆ ಕಾಣಲು ಸಾಧ್ಯವಾಗಿದೆ ಎಂದು ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎನ್. ಪದ್ಮನಾಭ ಮಾಣಿಂಜ ಹೇಳಿದರು.ಬೆಳ್ತಂಗಡಿ ಶ್ರೀ ನಾರಾಯಣಗುರು ವಾಣಿಜ್ಯ ಸಂಕೀರ್ಣದಲ್ಲಿ ಅಕ್ಟೋಬರ್ 17ರಂದು ನಡೆದ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ […]

ಮಂಜುಶ್ರೀ ಸೀನಿಯರ್ ಚೇಂಬರ್‌ನಿಂದ ಸರಕಾರಿ ಶಾಲೆಗೆ ಡೆಸ್ಕ್-ಬೆಂಚುಗಳ ಕೊಡುಗೆ

ಬೆಳ್ತಂಗಡಿ: ಗ್ರಾಮೀಣ ಸರಕಾರಿ ಶಾಲೆಗೆ ಡೆಸ್ಕ್-ಬೆಂಚುಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಬೆಳ್ತಂಗಡಿಯ ಮಂಜುಶ್ರೀ ಸೀನಿಯರ್ ಚೇಂಬರ್‌ನವರು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದರು.ಅಕ್ಟೊಬರ್ 2ರ ಬೆಳಿಗ್ಗೆ ಅಧ್ಯಕ್ಷ ಲ್ಯಾನ್ಸಿ ಎ. ಪಿರೇರಾರ ನೇತೃತ್ವದಲ್ಲಿ ನಾವೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿದ ಬೆಳ್ತಂಗಡಿಯ ಮಂಜುಶ್ರೀ ಸೀನಿಯರ್ ಚೇಂಬರ್‌ನ ಸದಸ್ಯರು ಮೊದಲಿಗೆ ಶಾಲಾ ಮಕ್ಕಳೊಂದಿಗೆ ಗಾಂಧಿ ಜಯಂತಿಯನ್ನು ಆಚರಿಸಿದರು. ಗಾಂಧಿ ಜಯಂತಿ ಪ್ರಯುಕ್ತ ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಬಳಿಕ ಶಾಲೆಗೆ ಡೆಸ್ಕ್-ಬೆಂಚುಗಳನ್ನು ಕೊಡುಗೆಯಾಗಿ ನೀಡಿದರು. ಶಾಲಾಭಿವೃದ್ಧಿ […]