ನಮ್ಮ ತಾಲೂಕು - Jai Kannadamma

ಧರ್ಮಸ್ಥಳದಲ್ಲಿ 27ನೇ ವರ್ಷದ ಭಜನಾ ಕಮ್ಮಟಕ್ಕೆ ಚಾಲನೆ.
ಬೆಳ್ತಂಗಡಿ: ಮನುಷ್ಯನಿಗೆ ಸಂಸ್ಕಾರ ದೊರೆಯಬೇಕಾದರೆ ಗುರು ಇರಬೇಕು. ಶುದ್ಧ ಮನಸ್ಸು ಹಾಗೂ ಭಕ್ತಿಯಿಂದ ದೇವರನ್ನು ಭಜಿಸುವ ಮೂಲಕ ದೇವರನ್ನು ಒಲಿಸಿಕೊಳ್ಳಬಹುದು. ಭಜನೆಯಿಂದ ಸಂಸ್ಕಾರಯುತ ನಾಗರಿಗ ಸಮಾಜ ನಿರ್ಮಾಣ ಸಾಧ್ಯ ಎಂದು ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದರು.ಅವರು ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಸೆಪ್ಟೆಂಬರ್ 14ರಿಂದ 21ರವರೆಗೆ ನಡೆಯಲಿರುವ 27ನೇ ವರ್ಷದ ಭಜನಾ ಕಮ್ಮಟವನ್ನು ಸೆಪ್ಟೆಂಬರ್ 14ರಂದು ಉದ್ಘಾಟಸಿ ಮಾತನಾಡುತ್ತಿದ್ದರು.ಮಾನವನಿಗೆ ಉತ್ತಮ ಸಂಸ್ಕಾರ ನೀಡಿ ಭವಿಷ್ಯದ ನಾಗರಿಕನನ್ನಾಗಿಸಲು ಧರ್ಮಸ್ಥಳ ಧರ್ಮಾಧಿಕಾರಿಗಳ ಕೊಡುಗೆ ಅತ್ಯಮೂಲ್ಯ. ಈವರೆಗೆ 350 ದೇವಸ್ಥಾನಗಳ ಜೀರ್ಣೋದ್ಧಾರ, 18 ಸಾವಿರ ಧಾರ್ಮಿಕ ಕ್ಷೇತ್ರಗಳಿಗೆ ದಾನ ಧರ್ಮ ಮಾಡಿ, ವಾರ್ಷಿಕ 70 ಲಕ್ಷಕ್ಕೂ ಅಧಿಕ ಮಂದಿಗೆ ಅನ್ನದಾಸೋಹ ನಡೆಸುತ್ತಿರುವ ಹೆಗ್ಗಡೆಯವರ ಮನಸ್ಸೇ ಅಕ್ಷಯಪಾತ್ರೆ ಎಂದು ಡಾ| ಎಂ. ಮೋಹನ ಆಳ್ವ ಹೇಳಿದರು.ಧರ್ಮಸ್ಥಳದ ಧರ್ಮಾಧಿಕಾರಿಯವರು ತಮ್ಮ ಅಧಿಕಾರದ 58ನೇ ವರ್ಷದ ಸುಧೀರ್ಘ ಪಯಣದಲ್ಲಿ ಸಾವಿರಾರು ಸೇವಾ ಕಾರ್ಯಕ್ರಮ ಅನುಷ್ಠಾನ ಮಾಡಿದ್ದು, ಇಂತಹಾ ಕಾರ್ಯ ಜಗತ್ತಿನಲ್ಲಿ ಜನ ಮನ್ನಣೆಗಳಿಸಿದೆ. ಹಾಗಾಗಿ ಅವರು ಗುರುಸ್ಥಾನದಲ್ಲಿ ಇದ್ದಾರೆ. ಗುರುಗಳು ನಮ್ಮನ್ನು ದೇವರ ಬಳಿಗೆ ಕರೆದೊಯ್ಯುಲು ಭಜನೆಯೆಂಬ ಶುದ್ಧ ಭಕ್ತಿ ಮಾರ್ಗವನ್ನು ಸುಂದರವಾಗಿ ಸಮರ್ಪಿಸಿದ್ದಾರೆ. ಮನುಷ್ಯನ ಜೀವನವನ್ನು ಹೇಗೆ ಸುಂದರವಾಗಿ ಕಟ್ಟಬಹುದೆಂದು ದಾಸ ಸಾಹಿತ್ಯ ತಿಳಿಸುತ್ತದೆ. ಮನುಷ್ಯನಿಗೆ ಮಾನಸಿಕ ನೆಮ್ಮದಿ ಭಜನೆಯಿಂದ ಸಿಗಲು ಸಾಧ್ಯ ಎಂದು ಅವರು ಹೇಳಿದರು.ಮಾಣಿಲದ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿ; ಗ್ರಾಮೀಣ ಜನರ ಭಕ್ತಿಗೆ ಭಜನೆ ಮೂಲಕ ಆಯಾಮ ನೀಡಿದವರು ಹೆಗ್ಗಡೆಯವರು. ಮೂಢನಂಬಿಕೆ ಹೋಗಲಾಡಿಸಿ ಮೂಲನಂಬಿಕೆಯನ್ನು ಉಳಿಸುವ ಕೆಲಸ ಮಾಡಿದ್ದಾರೆ. ದೇವರ ಮೇಲಿನ ಭಯವೇ ಭಕ್ತಿಯ ಆರಂಭ ಎಂಬಂತೆ ಭಜನೆಯಲ್ಲಿ ನೃತ್ಯ ಭಜನೆ ಅಳವಡಿಸಿ ಜನರನ್ನು ಆಕರ್ಷಿಸುವ ಕೆಲಸ ಮಾಡಿದೆ. ಭಜನೆಯಲ್ಲಿ ಪುರುಷರು ಮಾತ್ರವಲ್ಲದೆ ತಾಯಂದಿರು ತೊಡಗಿಸಿಕೊಳ್ಳುವಲ್ಲಿ ಹೇಮಾವತಿ ಅಮ್ಮನವರು ಮಾಡಿದ ಪರಿವರ್ತನೆ ಸಮಾಜದಲ್ಲಿ ಕ್ರಾಂತಿಗೆ ಕಾರಣವಾಯಿತು ಎಂದು ಹೇಳಿದರು.ಧರ್ಮಸ್ಥಳದ ಜೋತಿರ್ಲಿಂಗ ಶಾಶ್ವತವಾಗಿರುವಂತಹದು. ಇಲ್ಲಿನ ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ, ಧರ್ಮದೇವತೆಗಳ ಪ್ರಭಾವ ಹಾಗೂ ಶಕ್ತಿ ಕುಂದಿಲ್ಲ, ಕುಂದುವುದೂ ಇಲ್ಲ. ಧರ್ಮಾಧಿಕಾರಿಗಳ ಪೀಠಕ್ಕೆ ಚ್ಯುತಿ ತರುವ ಕೆಲಸ ಮಾಡುತ್ತಿದ್ದಾರೆ. ಆದರೆ ಇಲ್ಲಿನ ದೇವತೆಗಳೇ ಸೂತ್ರದಾರಿಗಳು ಎಂದು ಅವರಿಗೆ ತಿಳಿದಿಲ್ಲ, ಬೇರೆಲ್ಲ ಪಾತ್ರಧಾರಿಗಳಾಗಿ ಹುಟ್ಟಿಕೊಳ್ಳುತ್ತಿದ್ದಾರೆ ಅಷ್ಟೆ. ಆದರೆ ದುಷ್ಟಶಕ್ತಿಯ ಅಂತ್ಯ ಶೀಘ್ರದಲ್ಲೇ ಆಗಲಿದೆ ಎಂದು ಮಾಣಿಲ ಶ್ರೀ ಹೇಳಿದರು. ಧರ್ಮಕ್ಷೇತ್ರದ ಸಂರಕ್ಷಣೆಗೆ ಭಜನಾ ಮಂಡಳಿಗಳು ತಮ್ಮ ಭಜನಾ ಕಾರ್ಯಕ್ರಮದಲ್ಲಿ ಪ್ರತಿನಿತ್ಯ ಶಿವ ಪಂಚಾಕ್ಷರಿಯನ್ನು ಹಾಡುವ ಮೂಲಕ ದೇವರಲ್ಲಿ ಪ್ರಾರ್ಥಿಸಬೇಕೆಂದು ಸ್ವಾಮೀಜಿ ಕರೆ ನೀಡಿದರು.ಧಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ; ಭಜನಾ ಕಮ್ಮಟದಿಂದ ಶುದ್ಧ ಉಚ್ಚಾರಣೆ, ಪದಗಳ ಬಳಕೆ ಸ್ಪಷ್ಟವಾಗುತ್ತದೆ. ಭಜನೆಯಿಂದ ಮಕ್ಕಳಲ್ಲಿ ನಾಯಕತ್ವ ಬೆಳೆಸುವುದು ಪ್ರಮುಖ ಉದ್ದೇಶವಾಗಿದೆ. ಸಂಸ್ಕಾರ ಎಂದರೆ ಧಾರ್ಮಿಕ ಸಂಸ್ಕಾರ ಮಾತ್ರವಲ್ಲ; ಸಾಮಾಜಿಕ ಸಂಸ್ಕಾರವು ಅಗತ್ಯ. ಭಜನೆಯು ದೇವರಿಗೆ ಆಪ್ಯಾಯಮಾನವಾಗುವ ಮೂಲಕ ಪ್ರಕೃತಿ, ಪ್ರಪಂಚ ಎಲ್ಲವೂ ನಮ್ಮದೇ ಎಂದು ತಿಳಿದು ಸಂರಕ್ಷಿಸುವ ಜವಾಬ್ದಾರಿ ನಮ್ಮಲ್ಲಿ ಬೆಳೆಯಬೇಕು ಎಂದರು.ವೇದಿಕೆಯಲ್ಲಿ ಡಾ. ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಸಾಲಿಯಾನ್, ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು.ಭಜನಾ ಕಮ್ಮಟದ ಕಾರ್ಯದರ್ಶಿ ಎ.ವಿ. ಶೆಟ್ಟಿ ವರದಿ ವಾಚಿಸಿ; ಸನಾತನ ಪರಂಪರೆಯನ್ನು ಬೆಳೆಸುವ ಸಲುವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ನಿಂದ ಭಜನಾ ಕಮ್ಮಟ ಆಯೋಜಿಸಲಾಗುತ್ತಿದೆ. ಈವರೆಗೆ ರಾಜ್ಯದ ಎಲ್ಲೆಡೆ ಭಜನಾ ತಂಡಗಳಿಗೆ ಕ್ಷೇತ್ರದಿಂದ 2.37 ಕೋ.ರೂಪಾಯಿ ನೆರವು ಒದಗಿಸಲಾಗಿದೆ. ಈ ವರ್ಷ 35 ಕಡೆಗಳಲ್ಲಿ ಆಯ್ಕೆಯ ಸಭೆಗಳು ನಡೆದಿದ್ದು 19 ತಾಲೂಕಿನ 87 ಭಜನಾ ಮಂಡಳಿಗಳಿಂದ 111 ಪುರುಷ ಹಾಗೂ 71 ಮಹಿಳಾ  ಸದಸ್ಯರೊಂದಿಗೆ ಒಟ್ಟು 182 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ ಎಂದು ತಿಳಿಸಿದರು.ಶಿಬಿರಾರ್ಥಿಗಳಾದ ಮಹೇಶ್ ಕುಂದಾಪುರ ಮತ್ತು ಶಿಲ್ಪಾ ಕಡಬ ಅವರಿಗೆ ಭಜನಾಕಿಟ್ ವಿತರಿಸುವ ಮೂಲಕ ಭಜನಾ ಕಮ್ಮಟಕ್ಕೆ ಡಾ. ಹೆಗ್ಗಡೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಭಜನಾ ಕಮ್ಮಟ-2025 ಎಂಬ ಮಾಹಿತಿ ಕೈಪಿಡಿ ಬಿಡುಗಡೆ ಮಾಡಲಾಯಿತು. ಸುಪ್ರೀತಾ ಮತ್ತು ವರ್ಚಸ್ ಧರ್ಮಸ್ಥಳ ಪ್ರಾರ್ಥನೆ ನೆರವೇರಿಸಿ, ವಿದುಷಿ ಚೈತ್ರಾ ತಂಡದವರು ದೃಶ್ಯರೂಪಕ ಸಾದರಪಡಿಸಿದರು. ಶಿಕ್ಷಕಿ ಪದ್ಮಶ್ರೀ ಕಾರ್ಯಕ್ರಮ ನಿರೂಪಿಸಿದರು. ಭಜನಾ ಕಮ್ಮಟ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಪ್ರಾಸ್ತಾವಿಸಿ, ಸ್ವಾಗತಿಸಿದರು. ಪ್ರತಿ ದಿನ ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಧಾರ್ಮಿಕ ಉಪನ್ಯಾಸ, ಸಂಜೆ ಗಂಟೆ 5-30 ರಿಂದ ನಗರಭಜನೆ ಇರಲಿದೆ. ಸೆಪ್ಟೆಂಬರ್ 21 ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಪೂರ್ವಾಹ್ನ 10 ಗಂಟೆಯಿಂದ 400 ಭಜನಾ ತಂಡಗಳ 8,000 ಭಜನಾ ಪಟುಗಳಿಂದ ಶೋಭಾಯಾತ್ರೆ ಹಾಗೂ ಅಮೃತವರ್ಷಿಣಿ ಸಭಾಭವನದಲ್ಲಿ ಸಾಮೂಹಿಕ ನೃತ್ಯಭಜನೆ ನಡೆಯಲಿದೆ. ಈವರೆಗೆ 29 ತರಬೇತಿ ನಡೆದಿದ್ದು, 5,800 ಮಂದಿಗೆ ತರಬೇತಿ ನೀಡಲಾಗಿದೆ. 26 ಕಮ್ಮಟಗಳಿಂದ 240 ಹಾಡು ರಚಿಸಿ, 2,000 ಮಂದಿಗೆ ಕುಣಿತ ಭಜನೆ ಕಲಿಸಿಕೊಡಲಾಗಿದೆ. ಈಮೂಲಕ ರಾಜ್ಯಾದ್ಯಂತ 5,500  ಭಜನಾ ಮಂಡಳಿ ತೊಡಗಿಸಿಕೊಂಡಿದೆ ಎಂದು ತಿಳಿಸಿದರು. ಕೋಶಾಧಿಕಾರಿ ಪದ್ಮರಾಜ್ ಜೈನ್ ವಂದಿಸಿದರು.ಖ್ಯಾತ ಗಾಯಕರಾದ ಶಂಕರ್‌ಶಾನ್‌ಭಾಗ್, ಅರ್ಚನಾ ಉಡುಪ, ರಾಮಕೃಷ್ಣ ಕಾಟುಕುಕ್ಕೆ, ಉಷಾ ಹೆಬ್ಬಾರ್, ಮಣಿಪಾಲ, ಸೌಮ್ಯ ಸುಭಾಷ್, ಧರ್ಮಸ್ಥಳ, ಮಂಗಲದಾಸ ಗುಲ್ವಾಡಿ, ವಿದುಷಿ ಚೈತ್ರಾ ಉಜಿರೆ, ಸುನಿಲ್ ಶೆಟ್ಟಿ, ಧರ್ಮಸ್ಥಳ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಕಮ್ಮಟದಲ್ಲಿ ಮಾಹಿತಿ, ಮಾರ್ಗದರ್ಶನ ನೀಡಲಿರುವರು.

The post ಧರ್ಮಸ್ಥಳದಲ್ಲಿ 27ನೇ ವರ್ಷದ ಭಜನಾ ಕಮ್ಮಟಕ್ಕೆ ಚಾಲನೆ. first appeared on Jai Kannadamma.

ಸಂಗೀತ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್
ಬೆಳ್ತಂಗಡಿ: ಕರ್ನಾಟಕ ಸರಕಾರದ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯವರು ನಡೆಸಿದ ಸಂಗೀತ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಬೆಳ್ತಂಗಡಿಯ ಪ್ರತೀಕ್ ವಿ. ಎಸ್. ಡಿಸ್ಟಿಂಕ್ಷನ್ ಗಳಿಸಿ ಉನ್ನತ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿರುತ್ತಾರೆ. ಇವರು ಬೆಳ್ತಂಗಡಿಯ ಸಂಗೀತ ಶಿಕ್ಷಕಿ ವಿಧುಷಿ ಕವಿತಾ ಕೋರ್ನಾಯರ ಶಿಷ್ಯರಾಗಿದ್ದು, ಬೆಳ್ತಂಗಡಿಯ ಉದ್ಯಮಿ ಲಯನ್ ವಸಂತ ಶೆಟ್ಟಿ ಮತ್ತು ಶಾಲಿನಿ ದಂಪತಿಗಳ ಪುತ್ರ ಹಾಗೂ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ.

The post ಸಂಗೀತ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ first appeared on Jai Kannadamma.

ಯೋಗ ತರಬೇತಿ ಶಿಬಿರದ ಸಮಾರೋಪ
ಬೆಳ್ತಂಗಡಿ: ಯೋಗಾಭ್ಯಾಸವು ನಮ್ಮ ದಿನಚರಿಯ ಅವಿಭಾಜ್ಯ ಅಂಗವಾಗಬೇಕು. ಅನೇಕ ಒತ್ತಡಗಳ ಮಧ್ಯೆ ಜೀವನ ಸಾಗಿಸುವ ಇಂದಿನ ಸಂದರ್ಭದಲ್ಲಿ ಪ್ರತಿ ದಿನ ಯೋಗಾಭ್ಯಾಸಕ್ಕಾಗಿ ಸಮಯ ಮೀಸಲಿಟ್ಟು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಉಜಿರೆ   ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ ಡಾl ಅಶ್ವಿನ್ ಹೇಳಿದರುಅವರು ಜೂನ್ 20ರಂದು ಬೆಳ್ತಂಗಡಿಯ ಸಂತೋಮ್ ಟವರ್ ಸಭಾಂಗಣದಲ್ಲಿ 8ನೇ ವಿಶ್ವ ಯೋಗ ದಿನಾಚರಣೆ ನಿಮಿತ್ತ ಶ್ರೀ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ನೇತೃತ್ವದಲ್ಲಿ ಬೆಳ್ತಂಗಡಿ ತಾಲ್ಲೂಕು ಪತ್ರಕರ್ತರ ಸಂಘದ ಸದಸ್ಯರಿಗೆ 8  ದಿನಗಳ ಕಾಲ ನಡೆದ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ‌ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಕರ್ತದ ಸಂಘದ ಅಧ್ಯಕ್ಷ ಗಣೇಶ್ ಶಿರ್ಲಾಲು ವಹಿಸಿದ್ದರು. ವೇದಿಕೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸಹಾಯಕ ಪ್ರಾಧ್ಯಾಪಕ ಡಾl ಅರುಣ್ ಬಿ. ಆರ್., ಪ್ರವೀಣ್, ತರಬೇತುದಾರ ಉಲ್ಲಾಸ್ ಉಪಸ್ಥಿತರಿದ್ದರು.ಪತ್ರಕರ್ತರಾದ ದೇವಿಪ್ರಸಾದ್, ಮಂಜುನಾಥ್ ರೈ, ಮನೋಹರ್ ಬಳಂಜ ಯೋಗ ಶಿಬಿರದ ಅನುಭವವನ್ನು ವ್ಯಕ್ತಪಡಿಸಿದರು. ತರಬೇತುದಾರ ಉಲ್ಲಾಸ್ ಇವರನ್ನು ಪತ್ರಕರ್ತರ ಸಂಘದ ವತಿಯಿಂದ ಗೌರವಿಸಲಾಯಿತು. ಸಂಘದ ಕಾರ್ಯದರ್ಶಿ ಚೈತ್ರೇಶ್ ಇಳಂತಿಲ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

The post ಯೋಗ ತರಬೇತಿ ಶಿಬಿರದ ಸಮಾರೋಪ first appeared on Jai Kannadamma.

ಶ್ರೀ ಕ್ಷೇತ್ರ ದೇಲಂಪುರಿಯಲ್ಲಿ ನಿಧಿಕುಂಭ ಷಡಾಧಾರ ಪ್ರತಿಷ್ಠೆ
ಬೆಳ್ತಂಗಡಿ: ಸೃಷ್ಟಿಯ ಎಲ್ಲಾ ತತ್ವಗಳು ಪ್ರತಿಯೊಂದು ದೇವಾಲಯಗಳಲ್ಲಿದೆ ಎಂದು ವಾಸ್ತು ತಜ್ಞ  ಪ್ರಸಾದ ಮುನಿಯಂಗಳ ಹೇಳಿದರು.ಅವರು,   ಜೀರ್ಣೋದ್ಧಾರಗೊಳ್ಳುತ್ತಿರುವ  ವೇಣೂರು ಸನಿಹದ ಕರಿಮಣೇಲು ಗ್ರಾಮದ ಶ್ರೀ‌ಕ್ಷೇತ್ರ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದ ನಿಧಿ ಕುಂಭಾದಿ ಷಡಾಧಾರ ಪ್ರತಿಷ್ಠೆ ಸಂದರ್ಭ ಜೂನ್ 19ರಂದು ನಡೆದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡುತ್ತಿದ್ದರು.ಲೋಕಕ್ಕೆ ಅನುಗ್ರಹ ಸಿಗಬೇಕಾದರೆ ಭಗವಂತನ ಪ್ರತಿಷ್ಠೆ ಅಗತ್ಯ. ದೈವಿಕ ಚಿಂತನೆ ಮಾಡಲು ಅತ್ಯಂತ ಸರಳ ವಿಧಾನ ಪ್ರತಿಮಾ ಪೂಜೆಯಾಗಿದೆ. ದೇಹದ ರಚನೆಯಂತೆ ದೇವಾಲಯವೂ ಇರುತ್ತದೆ. ಪಂಚತತ್ವಗಳನ್ನು ದೇವಸ್ಥಾನದಲ್ಲಿ ಕಾಣಬಹುದಾಗಿದೆ. ಬ್ರಹ್ಮಾಂಡದಲ್ಲಿರುವ ಸಮಸ್ತ ಚೈತನ್ಯಗಳು ಇರುವಂತಾಗಲು ಬ್ರಹ್ಮಕಲಶ ಮಾಡಲಾಗುತ್ತದೆ.  ಷಡಾಧಾರ ಪ್ರತಿಷ್ಠೆಯಂತಹ ಅಪೂರ್ವ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಬೇಕು. ಯಾಕೆಂದರೆ ಇಂತಹ ಕಾರ್ಯಕ್ರಮ ನೋಡಲು ಮತ್ತೆಂದಿಗೂ ಸಿಗದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡ್ಯಾರಬೆಟ್ಟಿನ ಆಡಳಿತೆದಾರ ಎ. ಜೀವಂಧರ ಕುಮಾರ್ ವಹಿಸಿದ್ದರು. ವೇಣೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪುಷ್ಪಾ ಡಿ., ಉದ್ಯಮಿ ಕೆ. ಭಾಸ್ಕರ ಪೈ, ಪೆರಿಂಜೆ ರಾಜ್ಯಗುತ್ತು ಪಿ. ಜಯರಾಜ ಕಂಬಳಿ, ತೀರ್ಥ ಮಂಟಪದ ದಾನಿ ಪಾಳೆಂಜ ಕರಂಬಾರಿನ ಸದಾನಂದ ಹೆಗ್ಡೆ, ವೇಣೂರು ವಲಯ ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ, ಕರಿಮಣೇಲು ಮರಾಠಿ ಸಂಘದ ಅಧ್ಯಕ್ಷ ಲಕ್ಷ್ಮಣ ನಾಯ್ಕ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ರಾಜಗೋಪಾಲ ಭಟ್, ಚೆನ್ನೈನ ಸುಕೀರ್ತಿರಾಜ ಅಜ್ರಿ ಉಪಸ್ಥಿತರಿದ್ದರು.ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ  ಕೃಷ್ಣ ಕೆ. ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಲಕೃಷ್ಣ ಭಟ್ ದಡ್ಡು ಪ್ರಸ್ತಾವಿಸಿದರು. ಪ್ರಧಾನ‌ ಕಾರ್ಯದರ್ಶಿ ಸತೀಶ್ ಪೂಜಾರಿ ವಂದಿಸಿದರು. ಉಪಾಧ್ಯಕ್ಷ ಮಹಾವೀರ ಜೈನ್ ಕಾರ್ಯಕ್ರಮ ನಿರ್ವಹಿಸಿದರು.ವೇದಮೂರ್ತಿ ನಡ್ವಂತಾಡಿ ಉದಯ ಪಾಂಗಣ್ಣಾಯ ತಂತ್ರಿಯವರ ನೇತ್ವದಲ್ಲಿ, ಅರ್ಚಕ ಚಂದ್ರಶೇಖರ ಅಸ್ರಣ್ಣ ಅವರ ಸಹಕಾರದಲ್ಲಿ ನಿಧಿ‌ ಕುಂಭಾದಿ ಷಡಾಧಾರ ಪ್ರತಿಷ್ಠೆ ನೆರವೇರಿತು.ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್ ಹಾಗೂ ಪ್ರತಾಪಸಿಂಹ ನಾಯಕ್ ಭೇಟಿ ನೀಡಿದರು.

The post ಶ್ರೀ ಕ್ಷೇತ್ರ ದೇಲಂಪುರಿಯಲ್ಲಿ ನಿಧಿಕುಂಭ ಷಡಾಧಾರ ಪ್ರತಿಷ್ಠೆ first appeared on Jai Kannadamma.

ಬಡವರ ಮನೆಗಳ ನಳ್ಳಿನೀರಿನ ಸಂಪರ್ಕ ಕಟ್-ಬಡಪಾಯಿಗಳ ಪರದಾಟ
ಬೆಳ್ತಂಗಡಿ: ಕುಡಿಯುವ ನೀರಿನ ಸಮಸ್ಯೆ ಇರುವ ಅನಾರೋಗ್ಯ ಪೀಡಿತ ದಲಿತ ವೃದ್ಧ ದಂಪತಿಯ ಮನೆಯೂ  ಸೇರಿದಂತೆ ಹಲವು ಬಡ ಕುಟುಂಬಗಳ ಕುಡಿಯುವ ನೀರಿನ ನಳ್ಳಿ ಸಂಪರ್ಕವನ್ನು ಗ್ರಾಮಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಯಾವುದೇ ನಿರ್ಣಯ ಮಾಡದೇ ಹಾಗೂ ಮುನ್ಸೂಚನೆ ಅಥವಾ ನಿಗದಿತ ಗಡುವು ನೀಡದೇ ಪಂಪು ಚಾಲಕ  ದಿಡೀರ್ ಕಡಿತಗೊಳಿಸಿದ ಘಟನೆ ಕೊಯ್ಯೂರು ಗ್ರಾಮಪಂಚಾಯತ್ ವ್ಯಾಪ್ತಿಯ ಮಲೆಬೆಟ್ಟು ಪರಿಶಿಷ್ಟ ಜಾತಿ  ಕಾಲೋನಿಯಲ್ಲಿ ನಡೆದಿದೆ. ಕೊಯ್ಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲೆಬೆಟ್ಟು ನೀರಕಜೆ ಪರಿಸರದಲ್ಲಿ ಅಧ್ಯಕ್ಷರ ವಾರ್ಡಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 30  ಕುಟುಂಬಗಳೂ ಸೇರಿದಂತೆ ಸುಮಾರು 50 ಬಡ  ಕುಟುಂಬಗಳು ಗ್ರಾಮ ಪಂಚಾಯತ್ ಸರಬರಾಜು ಮಾಡುವ ನಳ್ಳಿ ನೀರನ್ನೇ ಅವಲಂಬಿಸುತ್ತಿದ್ದು, ಇದೀಗ ಗ್ರಾಮ ಪಂಚಾಯತ್ ಆಡಳಿತ ಯಾವುದೇ ನಿರ್ಣಯ ಕೈಗೊಳ್ಳದಿದ್ದರೂ, ಯಾವುದೇ ಮುನ್ಸೂಚನೆಯಾಗಲಿ ನೋಟೀಸ್ ಆಗಲಿ ನೀಡದೆ ಪಂಪು ಚಾಲಕ ಸ್ಥಳೀಯ ಕೆಲವು ಕಡು ಬಡ ಕುಟುಂಬಗಳ ಮನೆಗಳ ನಳ್ಳಿ ಸಂಪರ್ಕವನ್ನು ಅಕ್ರಮವಾಗಿ ಕಡಿತಗೊಳಿಸಿರುವುದು ಫಲಾನುಭವಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಮಲೆಬೆಟ್ಟು ಜನತಾ ಕಾಲೋನಿಯಲ್ಲಿ ಅನಾರೋಗ್ಯ ಪೀಡಿತ ಮಹಿಳೆ ಇರುವ ಕಡು ಬಡ ದಲಿತ ಕುಟುಂಬದ ಮನೆಯ ನಳ್ಳಿ ಸಂಪರ್ಕವನ್ನೂ ಅಮಾನವೀಯವಾಗಿ ಕಡಿತಗೊಳಿಸಿರುವುದು ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದೆ.ಕೆಲವು ಬಡ ದಲಿತ ಕುಟುಂಬಗಳೂ ಸೇರಿದಂತೆ ಇತರ ಬಡ ಫಲಾನುಭವಿ ಕುಟುಂಬಗಳು ಗ್ರಾಮ ಪಂಚಾಯತ್ ಸರಬರಾಜು ಮಾಡುವ ಕುಡಿಯುವ ನೀರಿನ ಬಿಲ್ ಪಾವತಿ ಬಾಕಿ ಮಾಡಿರುವ ನೆಪ ಹೇಳಿ ಪಂಪು ಚಾಲಕ ನಳ್ಳಿ ನೀರಿನ ಸಂಪರ್ಕ ಕಡಿತಗೊಳಿಸುತ್ತಿರುವುದಾಗಿ  ತಿಳಿಸಿದ್ದರೂ ಈ ಬಗ್ಗೆ ಗ್ರಾಮ ಪಂಚಾಯತ್ ಆಡಳಿತ ಯಾವುದೇ ಅಧಿಕೃತ ಸಭೆ ನಡೆಸಿಯೂ ಇಲ್ಲ; ನಿರ್ಣಯವನ್ನೂ ಕೈಗೊಂಡಿರುವುದಿಲ್ಲ:; ಯಾವುದೇ ನೋಟೀಸೂ ನೀಡಿರುವುದಿಲ್ಲ ಎಂದು ಸ್ಥಳೀಯ ಫಲಾನುಭವಿಗಳು ತಿಳಿಸಿದ್ದಾರೆ.ಇಲ್ಲಿನ ಬಹುತೇಕ ಬಡ ಕುಟುಂಬಗಳಿಗೆ ಗ್ರಾಮ ಪಂಚಾಯತ್‌ನ ನಳ್ಳಿ ನೀರು ಅಲ್ಲದೆ ಕುಡಿಯುವ ನೀರಿಗಾಗಿ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲವೆಂಬ ಸಂಗತಿ ಗೊತ್ತಿದ್ದರೂ ನಳ್ಳಿ ನೀರಿನ ಸಂಪರ್ಕ ಕಡಿತ ಗೊಳಿಸಿರುವುದು ಫಲಾನುಭವಿಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಿದ್ದರೂ ಈ ಬಗ್ಗೆ ಗ್ರಾಮ ಪಂಚಾಯತ್ ಆಡಳಿತ ಯಾವುದೇ ರೀತಿಯ ಅಗತ್ಯ ಸ್ಪಂದನೆ ನೀಡದಿರುವುದು ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.ನೀರಿನ ಬಿಲ್ ಕಟ್ಟಲು ಬಾಕಿ ಇರುವ ನಳ್ಳಿ ನೀರಿನ ಫಲಾನುಭವಿಗಳ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಹೇಳಲಾಗುತ್ತಿದ್ದರೂ ಕಡಿಮೆ ಬಿಲ್ ಬಾಕಿ ಇರುವ ಫಲಾನುಭವಿಗಳ ಸಂಪರ್ಕವನ್ನು ಮಾತ್ರ ಕಡಿತಗೊಳಿಸಿದ್ದು 4000 ರೂಪಾಯಿ ಅಥವಾ ಅದಕ್ಕಿಂತಲೂ ಹೆಚ್ಚು ಬಿಲ್ ಪಾವತಿಸಲು ಬಾಕಿ ಇರುವ ದೊಡ್ಡವರ ನಳ್ಳಿ ನೀರಿನ ಸಂಪರ್ಕವನ್ನು  ಕಡಿತ ಮಾಡದೆ ಕಡು ಬಡವರಿಗೊಂದು ನ್ಯಾಯ, ಅನುಕೂಲ ಇರುವವರಿಗೊಂದು ಕಾನೂನು ಎಂಬಂತೆ  ತಾರತಮ್ಯ  ರಾಜಕೀಯ ಮಾಡಲಾಗುತ್ತಿದೆ; ಮಾತ್ರವಲ್ಲದೆ  ಮನೆಯೇ ಇಲ್ಲದ ಸರಕಾರಿ ಅಧಿಕಾರಿಯ ಖಾಸಗಿ ಜಾಗಕ್ಕೆ ಉಚಿತವಾಗಿ ಅನಧಿಕೃತ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ ಎಂಬ ಆರೋಪವೂ ನೊಂದ ಫಲಾನುಭವಿಗಳಿಂದ ಕೇಳಿ ಬಂದಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ಆಡಳಿತಕ್ಕೆ ಮನವಿ ನೀಡಿರುವ ಫಲಾನುಭವಿಗಳುಸುಡು ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣೆಯಲ್ಲಿ ಬಡ ಕುಟುಂಬಗಳು ಪರದಾಡುತ್ತಿದ್ದರೂ ಮುನ್ಸೂಚನೆ ನೀಡದೆ ನಿರ್ದಾಕ್ಷೀಣ್ಯವಾಗಿ ಕಡಿತಗೊಳಿಸಲಾದ ನಳ್ಳಿಗಳಿಗೆ ಕೂಡಲೇ ಮತ್ತೆ ನೀರಿನ ಸಂಪರ್ಕವನ್ನು ಒದಗಿಸಬೇಕು,  ಬಿಲ್ ಕಟ್ಟಲು ಬಾಕಿ ಇರುವ ಬಡ ಕುಟುಂಬಗಳಿಗೆ  ಹಂತಹಂತವಾಗಿ ಬಿಲ್ ಪಾವತಿಸಲು ವಿಶೇಷ ಕಾಲಾವಕಾಶ ಕಲ್ಪಿಸಬೇಕು ಎಂದು ‌ ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

The post ಬಡವರ ಮನೆಗಳ ನಳ್ಳಿನೀರಿನ ಸಂಪರ್ಕ ಕಟ್-ಬಡಪಾಯಿಗಳ ಪರದಾಟ first appeared on Jai Kannadamma.

ನಾಟ್ಯಗುರು ಕಮಲಾಕ್ಷ ಆಚಾರ್‌ಗೆ ಅಭಿನಂದನೆ
ಬೆಳ್ತಂಗಡಿ: ದೇಶದಲ್ಲಿ ದಕ್ಷಿಣ ಭಾರತವನ್ನು ಪರಿಗಣಿಸಿದರೆ ಭರತನಾಟ್ಯಕ್ಕೆ ಸುಮಾರು 300 ವರ್ಷಗಳ ಇತಿಹಾಸವಿದೆ. ರಾಜಮಹಾರಾಜರ ಕಾಲದಿಂದಲೂ ನೃತ್ಯವನ್ನು ಸಮರ್ಥವಾಗಿ ಅಧ್ಯಯನಶೀಲತೆಗೆ ಒಳಪಡಿಸಿಕೊಂಡು ಬಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯಲ್ಲಿರುವ ನೂರಕ್ಕೂ ಅಧಿಕ ಭರತನಾಟ್ಯ ಗುರುಗಳಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಥಮ ಗುರುವಾಗಿ ಭರತನಾಟ್ಯವನ್ನು ಸಮರ್ಥವಾಗಿ ಆರಾಧಿಸುತ್ತಿರುವ ಕಮಲಾಕ್ಷ ಆಚಾರ್ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರಾಗಿದ್ದು, ಶೀಘ್ರವೇ ಈ ಪ್ರಶಸ್ತಿಯೂ ಅವರ ಮುಡಿಗೇರಿಲಿ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಆಶಿಸಿದರು.ತಾಲೂಕಿನ ಮೊದಲ ಶಾಸ್ತ್ರೀಯ ನೃತ್ಯ ಗುರು ಕಮಲಾಕ್ಷ ಆಚಾರ್ ಅವರಿಗೆ ಸರಕಾರದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ 2020-21ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತವಾದ ಹಿನ್ನೆಲೆ ಅವರಿಗೆ ಮಾರ್ಚ್ 27ರಂದು ಉಜಿರೆ ಶಾರದಾ ಮಂಟಪದಲ್ಲಿ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಕಳೆದ ಎರಡು ವರ್ಷಗಳ ಸಾಂಕ್ರಾಮಿಕ ರೋಗದ ಕಾಲಘಟ್ಟದಲ್ಲಿ ಎಲ್ಲವೂ ನಿರಾಶವಾಗಿ ಕಾಣುವ ಸಂದರ್ಭದಲ್ಲಿ ರಾಜ್ಯದಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಂದಿ ಮಕ್ಕಳು ನಾನಾ ಪ್ರಕಾರಗಳಲ್ಲಿ ವಿದ್ವತ್ ಪರೀಕ್ಷೆ ಎದುರಿಸಿದ್ದು, ಭರತನಾಟ್ಯದಲ್ಲಿ ರಾಜ್ಯದಲ್ಲಿ ಏಳು ಸಾವಿರ ಮಂದಿ ವಿದ್ವತ್ ಪರೋಕ್ಷೆಗೆ ಹಾಜರಾದರೆ; ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ಎರಡು ಸಾವಿರ ಮಂದಿ ವಿದ್ವತ್ ಪರೀಕ್ಷೆ ಬರೆದಿರುವುದು ಸಂತೋಷದ ಹಾಗೂ ಹೆಮ್ಮೆಯ ವಿಚಾರ ಎಂದು ಡಾl ಆಳ್ವ ಶ್ಲಾಘಿಸಿದರು.ಅಭಿನಂದನಾ ಕಾರ್ಯಕ್ರಮದಲ್ಲಿ ವಿಶ್ರಾಂತ ಉಪನ್ಯಾಸಕ ಮಧುಕರ ಮಲ್ಯ ಅಭಿನಂದನಾ ಭಾಷಣ ಮಾಡಿ, ಗುರು-ಶಿಷ್ಯರ ಸೇವೆಯನ್ನು ಸ್ಮರಿಸುವ ಕಾಲಘಟ್ಟದಲ್ಲಿ ನಾಡಿನುದ್ದಕ್ಕೂ ಸಾವಿರಾರು ಶಿಷ್ಯವರ್ಗವನ್ನು ಗಳಿಸಿರುವ ಕೀರ್ತಿ ಕಮಲಾಕ್ಷ ಆಚಾರ್ಯ ಅವರದು. ಅವರಿಗೆ ಸಂದಿರುವ ಪ್ರಶಸ್ತಿಗಳು ಅವರ ಕರ್ತವ್ಯದ ಕಲಾಸೇವೆಯಲ್ಲಿರುವ ನಿಷ್ಠೆಯನ್ನು ಪ್ರತಿಬಿಂಬಿಸುತ್ತದೆ ಎಂದು ಬಣ್ಣಿಸಿದರು.ಮುಖ್ಯ ಅತಿಥಿ ಶಾಸಕ ಹರೀಶ್ ಪೂಂಜ ಮಾತನಾಡಿ, ಬೆಳ್ತಂಗಡಿ ತಾಲೂಕಿನಂತಹ ಗ್ರಾಮೀಣ ಭಾಗದಲ್ಲಿ ಸುಮಾರು 47ವರ್ಷಗಳ ಕಾಲ ರಾಷ್ಟ್ರೋನ್ನತ ಕಲೆಗೋಸ್ಕರ ಬದುಕಿ ಸಮಾಜಕ್ಕೆ ಸ್ವಾರ್ಥರಹಿತವಾಗಿ ಸೇವೆ ನೀಡಿದವರು ಕಲಾತಪಸ್ವಿ ಕಮಲಾಕ್ಷ ಆಚಾರ್ಯರು ಎಂದು ಬಣ್ಣಿಸಿದರು.ಶಿಷ್ಯೆಯರಾದ ಡಾ| ಕೃಪಾ ಫಡ್ಕೆ, ಡಾ| ರಜತಾ ಪಿ.ಶೆಟ್ಟಿ ಗುರುನಮನ ಸಲ್ಲಿಸಿದರು. ಡಾ| ಎಂ. ಮೋಹನ್ ಆಳ್ವ, ಶಾಸಕ ಹರೀಶ್ ಪೂಂಜ ಸಹಿತ ಗಣ್ಯರು ಶಾಸ್ತ್ರೀಯ ನೃತ್ಯ ಗುರು ಕಮಲಾಕ್ಷ ಆಚಾರ್ ಅವರನ್ನು ಅಭಿನಂದಿಸಿದರು. ವಿಧುಷಿ ಕೃಪಾಫಡ್ಕೆ ನಿರ್ದೇಶನದಲ್ಲಿ ಮೈಸೂರಿನ ನೃತ್ಯಗಿರಿ ತಂಡದವರಿಂದ ಭರತಾಂಜಲಿ ನೃತ್ಯ ಪ್ರದರ್ಶನ ನಡೆಯಿತು.ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ಉಪಾಧ್ಯಕ್ಷ ಚಂದ್ರೇಶೇಖರ ಶೆಟ್ಟಿ, ಲಯನ್ ಹೇಮಂತ ರಾವ್ ಯರ್ಡೂರು,  ರಂಜನ್ ರಾವ್ ಉಪಸ್ಥಿತರಿದ್ದರು.ಅಭಿನಂದನಾ ಸಮಿತಿ ಅಧ್ಯಕ್ಷ ವಿಠಲ ಶೆಟ್ಟಿ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ  ಯದುಪತಿ ಗೌಡ ಗಣ್ಯರ ಸಂದೇಶ ವಾಚಿಸಿದರು. ಅಭಿನಂದನಾ ಸಮಿತಿ ಉಪಾಧ್ಯಕ್ಷ ಗಣಪತಿ ಭಟ್ ಕುಳಮರ್ವ ಕಾರ್ಯಕ್ರಮ ನಿರೂಪಿಸಿದರು. ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ  ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸೋಮಶೇಖರ್ ಶೆಟ್ಟಿ ಕಾರ್ಯಕ್ರಮದ ಕೇಂದ್ರಬಿಂದು ನೃತ್ಯಗುರು ಕಮಲಾಕ್ಷ ಆಚಾರ್ಯ ಅವರನ್ನು ಪರಿಚಯಿಸಿದರು. ಕಾರ್ಯದರ್ಶಿ ಪುರುಷೋತ್ತಮ ಕೆ. ಎ., ವಂದಿಸಿದರು.

The post ನಾಟ್ಯಗುರು ಕಮಲಾಕ್ಷ ಆಚಾರ್‌ಗೆ ಅಭಿನಂದನೆ first appeared on Jai Kannadamma.

ಕನ್ಯಾಡಿಯಲ್ಲಿ 62ನೇ ವರ್ಷದ ಶ್ರೀ ರಾಮನಾಮ ತಾರಕ ಮಂತ್ರ ಸಪ್ತಾಹ ಎಪ್ರಿಲ್ 3ರಿಂದ
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕನ್ಯಾಡಿ ನಿತ್ಯಾನಂದ ನಗರದಲ್ಲಿನ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್‌ನಲ್ಲಿ ಎಪ್ರಿಲ್ 3ರಿಂದ ಎ‌ಪ್ರಿಲ್ 10ರವರೆಗೆ 62ನೇ ವರ್ಷದ ಶ್ರೀ ರಾಮ ತಾರಕ ಮಂತ್ರ ಸಪ್ತಾಹ, ಕ್ಷೇತ್ರದ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾ ಬ್ರಹ್ಮರಥೋತ್ಸವ ನಡೆಯಲಿದೆ ಎಂದು ಕನ್ಯಾಡಿ ದೇವರಗುಡ್ಡೆ ಶ್ರೀಗುರುದೇವ ಮಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ತಿಳಿಸಿದರು.ಅವರು ಮಾರ್ಚ್ 26ರಂದು ಕ್ಷೇತ್ರದಲ್ಲಿ‌ ಪತ್ರಿಕಾಗೋಷ್ಠಿ‌ ಕರೆದು ಏಳು ದಿನಗಳಲ್ಲಿ‌ ನಡೆಯುವ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.ಅಹೋರಾತ್ರಿ ನಡೆಯುವ ರಾಮನಾಮ ತಾರಕ ಮಂತ್ರ ಸಪ್ತಾಹದ ಅಖಂಡ ನಂದಾ ದೀಪವನ್ನು ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಪ್ರಜ್ವಲಿಸಿ, ಜಾತ್ರೋತ್ಸವದ ಉದ್ಘಾಟನೆಯನ್ನು‌ ನೆರವೇರಿಸುವರು. ಶ್ರೀ ರಾಮ ನಾಮ ಮಂತ್ರೋಚ್ಛಾರಣೆಯನ್ನು ಸಂಸದ ನಳೀನ್ ಕುಮಾರ್ ಕಟೀಲು, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್‌ ಹಾಗೂ ಪ್ರತಾಪ್‌ಸಿಂಹ ನಾಯಕ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಾಜಿ ಶಾಸಕ ವಸಂತ ಬಂಗೇರ ಪ್ರಾರಂಭಿಸಲಿದ್ದಾರೆ ಎಂದರು.ಎಪ್ರಿಲ್ 3ರಂದು ಬೆಳಿಗ್ಗೆ ದೇವರ ಬಲಿ ಉತ್ಸವ, ಸಂಜೆ ಕುರೆಪಟ್ ತುಳು ಹಾಸ್ಯ ನಾಟಕ, 4ರಂದು ಬೆಳಿಗ್ಗೆ ಶ್ರೀಗುರುದೇವ ಉತ್ಸವ ಮೂರ್ತಿಗಳ ಬಲಿ‌ಉತ್ಸವ, ಸಂಜೆ ಸಂಗೀತ ಗಾನ ಸಂಭ್ರಮ, 5ರಂದು ಸಂಜೆ ರಜತ ಪಾಲಕಿ ಉತ್ಸವ, ಕೋಟಿ-ಚೆನ್ನಯ ತುಳು‌ ಯಕ್ಷಗಾನ, 6ರಂದು ಸಂಜೆ ಪುಷ್ಪ ರಥೋತ್ಸವ ಬಳಿಕ ಶಿವದೂತೆ ಗುಳಿಗೆ ನಾಟಕ, 7 ರಂದು ಸಂಜೆ ಚಂದ್ರಮಂಡಲ ಉತ್ಸವ, ನೃತ್ಯ ಸಿಂಚನ, 8 ರಂದು ಸಂಜೆ ಬೆಳ್ಳಿ ರಥೋತ್ಸವ, ಗೀತಾ-ಸಾಹಿತ್ಯ-ಸಂಭ್ರಮ, 9 ರಂದು ಸಂಜೆ ಶ್ರೀ ಹನುಮಾನ್ ರಥೋತ್ಸವ, ಕಟ್ಟೆ ಪೂಜೆ, ಕೆರೆ ದೀಪೋತ್ಸವ, ಮಸ್ತ್ ಮ್ಯಾಜಿಕ್, 10ರಂದು ಬೆಳಿಗ್ಗೆ ತಾರಕ ಮಂತ್ರ ಯಜ್ಞ ಮಂಗಳ, ಅಪರಾಹ್ನ ಚಂದ್ರಾವಳಿ ವಿಲಾಸ ಹಾಸ್ಯ ಯಕ್ಷಗಾನ, ಸಂಜೆ ಮಹಾ ಬ್ರಹ್ಮರಥೋತ್ಸವ, ನೇಮೋತ್ಸವ, 12ರಂದು ಶ್ರೀ ದೇವಲಿಂಗೇಶ್ವರ ದೇವಸ್ಥಾನದ ಮಹೋತ್ಸವ, ವಿವಿಧ ದೈವಗಳ‌ ನೇಮೋತ್ಸವ ನಡೆಯಲಿದೆ ಎಂದು ಕಾರ್ಯಕ್ರಮವನ್ನು ವಿವರಿಸಿದರು.ಶಾಸಕ ಹರೀಶ ಪೂಂಜ ಮಾತನಾಡಿ, ಜಾತ್ರೆಗೆ ಈ ಬಾರಿ ಪ್ರಸಿದ್ಧ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಉತ್ಸವದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಏಳು ದಿನಗಳ ಕಾಲ ಜಾತ್ರೆ ವಿಜೃಂಭಣೆಯಿಂದ ನಡೆಯಲಿದ್ದು ಸರ್ವರ ಸಹಕಾರ ಕೋರಿದರು.ಪತ್ರಿಕಾಗೋಷ್ಠಿಯಲ್ಲಿಶ್ರೀ ರಾಮಕ್ಷೇತ್ರ ಸೇವಾ ಸಮಿತಿ ಪ್ರಧಾನ ಸಂಚಾಲಕ ಜಯಂತ್ ಕೋಟ್ಯಾನ್,ಅಧ್ಯಕ್ಷ ಸದಾನಂದ ಉಂಗಿಲಬೈಲು,ಟ್ರಸ್ಟಿಗಳಾದ ತುಕಾರಾಮ, ಕೃಷ್ಣಪ್ಪ ಗುಡಿಗಾರ್, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಉಪಸ್ಥಿತರಿದ್ದರು.

The post ಕನ್ಯಾಡಿಯಲ್ಲಿ 62ನೇ ವರ್ಷದ ಶ್ರೀ ರಾಮನಾಮ ತಾರಕ ಮಂತ್ರ ಸಪ್ತಾಹ ಎಪ್ರಿಲ್ 3ರಿಂದ first appeared on Jai Kannadamma.

ಲಯನ್ಸ್ ಕ್ಲಬ್ ಸುಲ್ಕೇರಿ ಅಸ್ತಿತ್ವಕ್ಕೆ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಸುಲ್ಕೇರಿಯಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯ ನೂತನ ಕ್ಲಬ್ ಆರಂಭಗೊಳ್ಳಲಿದೆ. ಸ್ಥಾಪಕ ಅಧ್ಯಕ್ಷರಾಗಿ ಸುಂದರ ಶೆಟ್ಟಿ, ಕಾರ್ಯದರ್ಶಿಯಾಗಿ ರವಿ ಶೆಟ್ಟಿ, ಕೋಶಾಧಿಕಾರಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಾರಾವಿ ಶಾಖಾ ಪ್ರಬಂಧಕ ಸುಧೀರ್ ಎಸ್. ಪಿ. ಆಯ್ಕೆಗೊಂಡಿದ್ದಾರೆ. ಸ್ಥಾಪಕ ಆಡಳಿತ ಮಂಡಳಿಯಲ್ಲಿ ಉಪಾಧ್ಯಕ್ಷರುಗಳಾಗಿ ಸಂತೋಷ್ ಕುಮಾರ್ ಹೆಗ್ಡೆ, ಸುಲ್ಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷ ನಾರಾಯಣ ಪೂಜಾರಿ, ಸುರೇಶ್ ಭಟ್, ದೀಪಕ್ ಶೆಟ್ಟಿ ಕೊಕ್ರಾಡಿ ಆಯ್ಕೆಯಾಗಿದ್ದಾರೆ. ದಯಾಕರ ರೈ ಜೊತೆ ಕಾರ್ಯದರ್ಶಿಯ ಜವಾಬ್ದಾರಿ ನಿಭಾಯಿಸಲಿದ್ದಾರೆ. ಸ್ಥಾಪಕ ಸದಸ್ಯರುಗಳಾಗಿ ಪ್ರಶಾಂತ್ ಶೆಟ್ಟಿ, ಸಂದೀಪ್ ಶೆಟ್ಟಿ, ದಿನೇಶ್, ಸುರೇಶ್ ಶೆಟ್ಟಿ, ಅಲೋಶಿಯಸ್ ಲೋಬೊ, ಪ್ರಶಾಂತ್ ಪೂಜಾರಿ, ನವೀನ್ ಶೆಟ್ಟಿ, ರವಿ ಪೂಜಾರಿ, ಜಗದೀಶ್ ಹೆಗ್ಡೆ ಕೊಕ್ರಾಡಿ, ವಿಠಲ ಶೆಟ್ಟಿ, ಪ್ರದೀಪ್ ಕುಮಾರ್, ರಾಜೇಶ್ ಶೆಟ್ಟಿ ಇವರು ಸೇರ್ಪಡೆಯಾಗಿದ್ದಾರೆ. ಕ್ಲಬ್ಬಿನ ವಿಸ್ತರಣಾ ಛೇರ್ಮನ್ ಆಗಿ ವಸಂತ್ ಶೆಟ್ಟಿ ಶ್ರದ್ಧಾ, ಗೈಡಿಂಗ್ ಲಯನ್ಸ್ ಆಗಿ ಪ್ರಕಾಶ್ ಶೆಟ್ಟಿ ನೊಚ್ಚ, ನಿತ್ಯಾನಂದ ನಾವರ ಹಾಗೂ ರಾಜು ಶೆಟ್ಟಿ ಬೆಂಗೇತ್ಯಾರು ಸೇವೆಯನ್ನು ನೀಡಲಿದ್ದಾರೆ. ಕ್ಲಬ್ಬಿನ ಉದ್ಘಾಟನೆಯು ಇದೇ ಏಪ್ರಿಲ್ 5ರಂದು ಜರಗಲಿದೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲರ ಪ್ರಕಟಣೆ ತಿಳಿಸಿದೆ.

The post ಲಯನ್ಸ್ ಕ್ಲಬ್ ಸುಲ್ಕೇರಿ ಅಸ್ತಿತ್ವಕ್ಕೆ first appeared on Jai Kannadamma.

ಉಚಿತ ಆರೋಗ್ಯ ತಪಾಸಣಾ ಶಿಬಿರ
ಬೆಳ್ತಂಗಡಿ: ಆರೋಗ್ಯ ಶಿಬಿರಗಳ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಮೊದಲ ಹಂತದಲ್ಲಿ ರೋಗ ಪತ್ತೆ ಮಾಡಲು ಅನುಕೂಲವಾಗುತ್ತದೆ ಎಂದು ನೆರಿಯ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕುಶಲ ಕೆ. ಅಭಿಪ್ರಾಯಪಟ್ಟರು. ಅವರು ಮಾರ್ಚ್ 20ರಂದು ಗಂಡಿಬಾಗಿಲಿನ ಸೈಂಟ್ ಥೋಮಸ್ ಚರ್ಚ್  ಸಭಾಂಗಣದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ಗಂಡಿಬಾಗಿಲು ಸೈಂಟ್ ತೋಮಸ್ ಚರ್ಚಿನ ಧರ್ಮಗುರು ವಂದನೀಯ  ಮ್ಯಾಥ್ಯೂ ವೆಟ್ಟಂತ್ತಡತ್ತಿಲ್ ಶಿಬಿರದ ಉದ್ಘಾಟನೆಯ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಮಂಗಳೂರು ಪ್ರಸಾದ್ ನೇತ್ರಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ನಿಶ್ಚಿತ್ ಶೆಟ್ಟಿ ಹಾಗೂ ಬೆಳ್ತಂಗಡಿ ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟದ ಅಧ್ಯಕ್ಷೆ ಏಲಿಯಮ್ಮ ಥೋಮಸ್ ಶಿಬಿರಕ್ಕೆ ಶುಭ ಹಾರೈಸಿದರು. ಲಾಯ್ಲ ಎಸ್. ಡಿ. ಕಾನ್ವೆಂಟಿನ ಸುಪೀರಿಯರ್ ಭಗಿನಿ ಆನ್ಸ್ ಲೆಟ್, ಮಂಗಳೂರು ಪ್ರಸಾದ್ ನೇತ್ರಾಲಯದ ನೇತ್ರ ತಜ್ಞರಾದ ಡಾ| ಅವಿನಾಶ್, ಗಂಡಿಬಾಗಿಲು ಚರ್ಚಿನ ವಿವಿಧ ಸಂಘಟನೆಗಳ ಪ್ರತಿನಿಧಿಯಾಗಿ  ಚಾಂಡಿ ಚೆರಂಗರಪುತ್ತನ್ಪುರ, ಗಂಡಿಬಾಗಿಲು ಸೈಂಟ್ ಥೋಮಸ್ ಚರ್ಚಿನ ಟ್ರಸ್ಟಿ  ಟೈಟಸ್ ಮಾಧವತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚರ್ಚಿನ ವಿವಿಧ ಸಂಘಟನೆಗಳ ಮುಖಂಡರು, ಪಂಚಾಯತ್ ಸದಸ್ಯರು ಹಾಗೂ ಚರ್ಚಿನ ಟ್ರಸ್ಟಿಗಳು ಶಿಬಿರದ ಯಶಸ್ಸಿಗೆ ಸಹಕರಿಸಿದರು. ಡಿ.ಕೆ.ಆರ್.ಡಿ.ಎಸ್. ಸಂಸ್ಥೆಯ ನಿರ್ದೇಶಕರಾದ ವಂದನೀಯ  ಬಿನೋಯಿ. ಎ. ಜೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಡಿಬಾಗಿಲು ಸೈಂಟ್ ಥೋಮಸ್ ಚರ್ಚಿನ ಸಂಡೇ ಸ್ಕೂಲ್ ಶಿಕ್ಷಕರಿದ ಸಿಜು ಚೇಟುತ್ತಡತ್ತಿಲ್ ಎಲ್ಲರನ್ನು ಸ್ವಾಗತಿಸಿದರು. ಡಿ.ಕೆ.ಆರ್.ಡಿ.ಎಸ್. ಸಂಸ್ಥೆಯ ಸಂಯೋಜಕ ಸುನಿಲ್ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿ, ಸಂಸ್ಥೆಯ ಕಾರ್ಯಕರ್ತರಾದ ಜೋನ್ಸನ್  ವಂದನಾರ್ಪಣೆಗೈದರು.  ಸಂಡೇ ಸ್ಕೂಲ್ ಮಕ್ಕಳು ಪ್ರಾರ್ಥನೆ ಹಾಡಿದರು. ಈ ಶಿಬಿರದಲ್ಲಿ ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ, ನೇತ್ರ ಪರೀಕ್ಷೆ, ಎಲುಬು ರೋಗ ವಿಭಾಗ, ಸಾಮಾನ್ಯ ವೈದ್ಯಕೀಯ ತಪಾಸಣೆ, ವೆರಿಕೋಸ್ ವೇನ್ ಮುಂತಾದ ತಪಾಸಣೆಗಳು ನಡೆದವು. ಸುಮಾರು 100 ಮಂದಿ ಈ ಶಿಬಿರದ ಪ್ರಯೋಜನ ಪಡೆದರು. ಜ್ಯೋತಿ ಆಸ್ಪತ್ರೆ ಲಾಯಿಲ, ಪ್ರಸಾದ್ ನೇತ್ರಾಲಯ ಮಂಗಳೂರು,  ಸೈಂಟ್ ಥೋಮಸ್ ಚರ್ಚ್ ಗಂಡಿಬಾಗಿಲು, ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟ ಬೆಳ್ತಂಗಡಿ, ಸ್ನೇಹಕಿರಣ್ ಜಿಲ್ಲಾ ಒಕ್ಕೂಟ ಬೆಳ್ತಂಗಡಿ,       ಮಹಾಸಂಘ ಗಂಡಿಬಾಗಿಲು, ಗಂಡಿಬಾಗಿಲು ಚರ್ಚಿನ ವಿವಿಧ ಸಂಘಟನೆಗಳಾದ ಕ್ರೆಡಿಟ್ ಯೂನಿಯನ್,  ಸೈಂಟ್ ವಿನ್ಸೆಂಟ್ ಡಿ’ ಪೌಲ್ ಸೊಸೈಟಿ, ಸಂಡೇ ಸ್ಕೂಲ್, ಮಿಷನ್ ಲೀಗ್, ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಎಸೋಸಿಯೇಶನ್ ಹಾಗೂ ಸೀರೋ ಮಲಬಾರ್ ಯೂತ್ ಮೂವ್ ಮೆಂಟ್ ಇವುಗಳ ಸಹಯೋಗದೊಂದಿಗೆ ಆರೋಗ್ಯ ಶಿಬಿರವು ನಡೆಯಿತು.

The post ಉಚಿತ ಆರೋಗ್ಯ ತಪಾಸಣಾ ಶಿಬಿರ first appeared on Jai Kannadamma.

ಚಂದ್ರಮೋಹನ್ ರೈ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟ
ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ತಾಲೂಕು, ಯುವ ಬಂಟರ ವಿಭಾಗ, ಬಂಟರ ಸಂಘ ಉಜಿರೆ ಗ್ರಾಮ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ನಿವೃತ್ತ ಗ್ರಾಮಲೆಕ್ಕಿಗ  ಚಂದ್ರಮೋಹನ್ ರೈ ಸ್ಮರಣಾರ್ಥ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಉಜಿರೆ ಬೆಳಾಲು ರಸ್ತೆಯ ಅಜ್ಜರಕಲ್ಲು ಕ್ರೀಡಾಂಗಣದಲ್ಲಿ ಮಾರ್ಚ್ 20ರಂದು ನಡೆಯಿತು. ಬರೋಡಾ ತುಳು ಕೂಟದ ಅಧ್ಯಕ್ಷ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ದೀಪ ಬೆಳಗಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಾ, ಯುವಕರು ಒಟ್ಟಾಗಿ ಸೇರಿಕೊಂಡು ನಡೆಸುತ್ತಿರುವ   ಈ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ವಿಭಾಗದ ಅಧ್ಯಕ್ಷ  ಕಿರಣ್ ಕುಮಾರ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯರಾಮ ಶೆಟ್ಟಿ ಪಡಂಗಡಿ, ಉಜಿರೆ ರಬ್ಬರ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ ಬೇಂಗೆತ್ಯಾರು, ಜಯರಾಮ ಶೆಟ್ಟಿ ಮುಂಡಾಡಿಗುತ್ತು, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಶೆಟ್ಟಿ, ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ, ರಾಧಾಕೃಷ್ಣ ಶೆಟ್ಟಿ ಅಂಬೆಟ್ಟು, ಸತೀಶ್ ರೈ ಪುಂಡಿಕ್ಕು, ಸಾರಿಕಾ ಡಿ. ಶೆಟ್ಟಿ, ವೆಂಕಟರಮಣ ಶೆಟ್ಟಿ ಉಪಸ್ಥಿತರಿದ್ದರು. ಪ್ರಶಾಂತ್ ಶೆಟ್ಟಿ ಸ್ಬಾಗತಿಸಿ, ಸುಜಯ್ ಶೆಟ್ಟಿ ವಂದಿಸಿದರು. ವಸಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

The post ಚಂದ್ರಮೋಹನ್ ರೈ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟ first appeared on Jai Kannadamma.