ಮಡಂತ್ಯಾರು ಕಾಲೇಜಿನ ಒಳ ಕ್ರೀಡಾಂಗಣ ಈಗ ಕ್ವಾರಂಟೈನ್ ಸೆಂಟರ್
ಮಡಂತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕಳ ಮತ್ತು ಪಾರೆಂಕಿ ಗ್ರಾಮಗಳಿಗೆ ಹೊರ ರಾಜ್ಯಗಳಿಂದ ಬರುವ ಊರ ಬಂಧುಗಳನ್ನು 14ದಿನಗಳ ಕಾಲ ಕ್ವಾರಂಟೈನಿಗೆ ಒಳಪಡಿಸಲು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಒಳ ಕ್ರೀಡಾಂಗಣವನ್ನು ಸಜ್ಜುಗೊಳಿಸಲಾಗಿದೆ. ಈ ಒಳ ಕ್ರೀಡಾಂಗಣದಲ್ಲಿ ಎರಡು ಹಾಲ್, ಸುಸಜ್ಜಿತ ಆರು ಕೊಠಡಿ, 22 ಶೌಚಾಲಯವಿರುವ ಸ್ನಾನಗೃಹದ ವ್ಯವಸ್ಥೆ ಕಲ್ಪಿಸಲಾಗಿದೆ. ಕುಡಿಯುವ ನೀರಿಗೆ ಫಿಲ್ಟರ್ ವ್ಯವಸ್ಥೆ ಇದ್ದು, ಇಡೀ ಒಳ ಕ್ರೀಡಾಂಗಣವನ್ನು ಸಿ.ಸಿ. ಕ್ಯಾಮರಾದ ಕಣ್ಗಾವಲಿನಲ್ಲಿ ಇರಿಸಲಾಗಿದೆ. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಆಡಳಿತ ಮಂಡಳಿಯ […]
ಪರವೂರಿನಿಂದ ಬಂದವರಿಗೆ ಕ್ವಾರಂಟೈನ್ ಅನಿವಾರ್ಯ
ಸ್ಥಳೀಯರ ಭೀತಿ ನಿವಾರಿಸಬೇಕಾದ್ದು ಆಡಳಿತದ ಜವಾಬ್ದಾರಿ ಕೊರೋನಾ ಸೋಂಕು ತಡೆಗೆ ಮುಂಜಾಗ್ರತಾ ಕ್ರಮವಾಗಿ ಪರವೂರಿನಿಂದ ಬಂದವರನ್ನು ಕ್ವಾರಂಟೈನಿಗೆ ಒಳಪಡಿಸಿ, ಅವರನ್ನು ನಿಗಾದಲ್ಲಿರಿಸಬೇಕಾದ್ದು ಅತೀ ಅಗತ್ಯ. ಇದೀಗ ಬೆಳ್ತಂಗಡಿ ತಾಲೂಕಿಗೂ ಹೊರ ರಾಜ್ಯಗಳಿಂದ ಬರುವ ಆಯಾ ಊರುಗಳ ಜನರನ್ನು ಅವರವರ ಊರುಗಳಲ್ಲೇ ಕ್ವಾರಂಟೈನಿಗೆ ಒಳಪಡಿಸಲು ತಾಲೂಕು ಆಡಳಿತ ಕ್ರಮ ಕೈಗೊಂಡಿದೆ. ನಮ್ಮನಿಮ್ಮ ಊರುಗಳಲ್ಲಿ ವಾಸ್ತವ್ಯವಿರುವ ಎಲ್ಲರನ್ನೂ ಕೊರೋನಾ ಸೋಂಕಿನಿಂದ ರಕ್ಷಿಸಲು ಮುಂಜಾಗ್ರತಾ ಕ್ರಮವಾಗಿ ಪರವೂರಿನಿಂದ ಬಂದವರನ್ನು 14ದಿನಗಳ ಕಾಲ ಕ್ವಾರಂಟೈನಿನಲ್ಲಿರಿಸಿ, ಅವರ ಆರೋಗ್ಯದ ಮೇಲೆ ನಿಗಾ ಇರಿಸುವುದು ಅತೀ […]
ಪ್ರಭಾವಿಗಳ ಕೃಪಾಶ್ರಯದಲ್ಲಿ ಅಕ್ರಮ ಮರಳುಗಾರಿಕೆ
ಕಾನೂನು ಕ್ರಮ ಜರಗಿಸದಿದ್ದರೆ ಹೋರಾಟದ ಎಚ್ಚರಿಕೆ. ಮುಂಡಾಜೆ ಪಂಚಾಯತ್ ವ್ಯಾಪ್ತಿಯ ಮೃತ್ಯುಂಜಯ ನದಿ ಹಳ್ಳದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಗಣಿ ಇಲಾಖೆಗೆ ಈ ಬಗ್ಗೆ ಮಾಹಿತಿ ಇದ್ದರೂ ಅಕ್ರಮಿಗಳ ವಿರುದ್ಧ ಕಾನೂನು ಕ್ರಮ ಜರಗಿಸದೇ ಅವರ ರಕ್ಷಣೆಗೆ ನಿಂತಿದೆ. 15 ದಿನಗಳೊಳಗೆ ಈ ಅಕ್ರಮ ಮರಳುಗಾರಿಕೆ ತಡೆಯದೇ ಇದ್ದಲ್ಲಿ ಗ್ರಾಮಸ್ಥರೊಂದಿಗೆ ಸೇರಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.ಅವರು ಮೇ 8ರಂದು ಬೆಳ್ತಂಗಡಿಯ ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರಿಗೆ […]
ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಅಕ್ಷರಸ್ಥರ ಅನಾಗರಿಕ ವರ್ತನೆ
ಮಾಸ್ಕ್ ಬಗ್ಗೆ ಪರಿಜ್ಞಾನವಿಲ್ಲದೇ-ವೈಯಕ್ತಿಕ ಅಂತರದ ಪರಿವೇ ಇಲ್ಲದೇ ಕಾನೂನಿಗೇ ಸವಾಲಾದರು ಮೇ 9ರ ರಾತ್ರಿ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಜಿಲ್ಲೆಯಲ್ಲಿ ಹೇರಲಾಗಿರುವ 144ಸೆಕ್ಷನ್ನಿಗೇ ಸವಾಲು ಹಾಕುವಂತೆ ಜಮಾಯಿಸಿದ ಅಕ್ಷರಸ್ಥ ಅನಾಗರಿಕರ ಸಮೂಹ. ಕೊರೋನಾ ಸೋಂಕು ಹರಡದಂತೆ ಸರಕಾರ ಸೂಚಿಸಿದ ಮುಂಜಾಗ್ರತಾ ಕ್ರಮಗಳಿಗೆ ಸವಾಲಾಗುವಂತಿದ್ದ ಇವರ ನಡವಳಿಕೆ ಸಭ್ಯ ನಾಗರಿಕರಲ್ಲಿ ಭಯ ಹಾಗೂ ಆತಂಕ ಮೂಡಿಸಿತ್ತು. ಬಹುತೇಕರು ಮಾಸ್ಕ್ ಧರಿಸಿದ್ದರಾದರೂ ಮಾಸ್ಕ್ ಮಾತ್ರ ಮುಖ ಮುಚ್ಚಿಕೊಳ್ಳದೇ ಕುತ್ತಿಗೆಯಲ್ಲಿ ಮಾಲಾಕಾರವಾಗಿತ್ತು. ಇನ್ನು ವೈಯಕ್ತಿಕ ಅಂತರದ ಪರಿವೇ ಇಲ್ಲದೇ; ಪರಸ್ಪರ ಅಪ್ಪಿಕೊಳ್ಳುವ, […]
ಬೆಳ್ತಂಗಡಿ ಪೊಲೀಸ್ ಠಾಣೆಗೆ ಸ್ಯಾನಿಟೈಸರ್ ಸ್ಟ್ಯಾಂಡ್ ಕೊಡುಗೆ
ಮಾಸ್ಕ್ ಧರಿಸಿ ವೈಯಕ್ತಿಕ ಅಂತರ ಕಾಪಾಡಿಕೊಂಡು ಕೊರೋನಾ ಸೋಂಕು ಹರಡುವಿಕೆಯ ಬಗ್ಗೆ ಜಾಗೃತಿ ಮೂಡಿಸುತ್ತಾ ನಡೆದ ಸರಳ ಮಾದರಿ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ಬಿನವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಸ್ಯಾನಿಟೈಸರ್ ಸ್ಟ್ಯಾಂಡನ್ನು ಹಸ್ತಾಂತರಿಸಿದರು. ಬೆಳ್ತಂಗಡಿ ರೋಟರಿ ಕ್ಲಬ್ಬಿನ ಅಧ್ಯಕ್ಷ ಜಯರಾಮ್, ಸದಸ್ಯರಾದ ಬಿ. ಕೆ. ಧನಂಜಯ ರಾವ್, ಕೆ. ವಿ. ಶ್ರೀಧರ್, ಯಶವಂತ ಪಟವರ್ದನ್, ಬೆಳ್ತಂಗಡಿ ಪೊಲೀಸ್ ಇನ್ಸ್ ಪೆಕ್ಟರ್ ಪಿ. ಜಿ. ಸಂದೇಶ್ ಮತ್ತಿತರರು ಹಾಜರಿದ್ದರು. ಬೆಳ್ತಂಗಡಿ ತಾಲೂಕಿನಲ್ಲಿ ರೋಟರಿ ಕ್ಲಬ್ಬಿನವರು ಕೊರೋನಾ ಸೋಂಕು ಹರಡುವಿಕೆಯ […]
ರೋಟರಿ ಸಮುದಾಯ ದಳದಿಂದ ಚಿಕಿತ್ಸೆಗೆ ಆರ್ಥಿಕ ನೆರವು.
ಮಾಸ್ಕ್ ನಿಂದ ಮುಖ ಮುಚ್ಚದ ರೋಟರಿ ಸದಸ್ಯರು. ಬೆಳ್ತಂಗಡಿ ರೋಟರಿ ಕ್ಲಬ್ಬಿನವರು ಲಾಕ್ ಡೌನಿನ ಬಳಿಕ ತಮ್ಮ ಎಲ್ಲ ಸೇವಾಕಾರ್ಯಗಳಲ್ಲಿ ಕೊರೋನಾ ಸೋಂಕು ತಡೆಯಲು ವಹಿಸಬೇಕಾದ ಮುಂಜಾಗ್ರತೆಯ ಬಗ್ಗೆ ಸಂದೇಶ ನೀಡುತ್ತಿದ್ದು, ತಾಲೂಕಿನ ಇತರ ಸೇವಾಸಂಸ್ಥೆಗಳಿಗೆ ಮಾದರಿಯಾಗಿದ್ದಾರೆ. ಆದರೆ ಮೇ 9ರಂದು ಚಾರ್ಮಾಡಿ ಗ್ರಾಮದ ಕಕ್ಕಿಂಜೆಯಲ್ಲಿ ರೋಟರಿ ಸಮುದಾಯ ದಳದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬೆಳ್ತಂಗಡಿ ರೋಟರಿ ಕ್ಲಬ್ಬಿನ ಕಾರ್ಯದರ್ಶಿ ಪ್ರಕಾಶ್ ನಾರಾಯಣ್ ಹಾಗೂ ಸದಸ್ಯ ಕಜೆ ವೆಂಕಟೇಶ್ವರ ಭಟ್ ಮಾಸ್ಕನ್ನು ಕತ್ತಿಗೆ ಮಾಲಾಕಾರವಾಗಿ ಹಾಕಿಕೊಳ್ಳುವ ಮೂಲಕ ಫೊಟೋಗೆ […]
ಉತ್ತರಭಾರತ ನಿವಾಸಿಗಳಿದ್ದ ಎರಡು ಲಾರಿಗಳಿಗೆ ಗುಂಡ್ಯ ಚೆಕ್‍ಪೋಸ್ಟ್ ನಲ್ಲಿ ಪೊಲೀಸರ ತಡೆ, ಊರಿಗೆ ಕಳುಹಿಸಿಕೊಡುವಂತೆ ಪಟ್ಟು; ಎ.ಸಿ.ಯವರ ಮಾತುಕತೆ -ಮಂಗಳೂರಿಗೆ ಶಿಫ್ಟ್
ಮಂಗಳೂರಿನಿಂದ ಉತ್ತರಭಾರತ ಮೂಲದ 120 ಮಂದಿ ಕಾರ್ಮಿಕರನ್ನು ತುಂಬಿಕೊಂಡು ಬೆಂಗಳೂರು ಮಾರ್ಗವಾಗಿ ಉತ್ತರ ಭಾರತಕ್ಕೆ ಹೊರಟಿದ್ದ ಹರಿಯಾಣ ನೋಂದಾವಣೆಯ ಎರಡು ಲಾರಿಗಳಿಗೆ ಗುಂಡ್ಯ ಚೆಕ್‍ಪೋಸ್ಟ್ ನಲ್ಲಿ ಪೊಲೀಸರು ತಡೆಯೊಡ್ಡಿರುವ ಘಟನೆ ಮೇ 8ರಂದು ಮುಂಜಾನೆ ನಡೆದಿದೆ. ಈ ಮಧ್ಯೆ ಕಾರ್ಮಿಕರು ಊರಿಗೆ ಕಳುಹಿಸಿಕೊಡುವಂತೆ ಪಟ್ಟು ಹಿಡಿದರಾದರೂ ಎ.ಸಿ.ಯವರ ಮನವೊಲಿಕೆ ಬಳಿಕ ಎಲ್ಲರನ್ನೂ ಮೂರು ಕೆಎಸ್‍ಆರ್‍ಟಿಸಿ ಬಸ್ಸಿನ ಮೂಲಕ ಮತ್ತೆ ಮಂಗಳೂರಿಗೆ ಕಳುಹಿಸಿಕೊಡಲಾಗಿದೆ. ಕಾರ್ಮಿಕರಿಗೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಬೆಳಗ್ಗಿನ ಉಪಾಹಾರ, ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಲಾಯಿತು.ಸುಮಾರು 120 ಮಂದಿ […]
ಉಜಿರೆ ನೇಕಾರಪೇಟೆ ಪ್ರದೇಶದ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ.
ಮಾಸ್ಕ್ ಹಾಗೂ ವೈಯಕ್ತಿಕ ಅಂತರದ ಬಗ್ಗೆ ಎಚ್ಚರಿಕೆ ವಹಿಸಿದ ಕಾರ್ಯಕ್ರಮ. ಲಾಕ್ ಡೌನಿನಿಂದಾಗಿ ಸಂಕಷ್ಟಕ್ಕೆ ಒಳಗಾದ ಉಜಿರೆಯ ನೇಕಾರ ಪೇಟೆಯಲ್ಲಿನ ತೀರಾ ಬಡತನದಲ್ಲಿರುವ ಕುಟುಂಬಗಳಿಗೆ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಕೆ. ಹರೀಶ್ ಕುಮಾರ್ ರವರು ನೀಡಿರುವ ಆಹಾರದ ಕಿಟ್ ಗಳನ್ನು ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷ ಶೈಲೇಶ್ ಕುಮಾರ್ ಮತ್ತು ಯೂತ್ ಕಾಂಗ್ರೆಸ್ ನ ಅಧ್ಯಕ್ಷರಾದ ಅಭಿನಂದನ್ ಹರೀಶ್ ಕುಮಾರ್ ವಿತರಣೆ ಮಾಡಿದರು .ಈ ಸಂದರ್ಭದಲ್ಲಿ ಉಜಿರೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಧರ್ […]
ಎಣ್ಣೆ ಮಿಲ್ಲಿನ ರಾಸಾಯನಿಕ ಮಿಶ್ರಿತ ತ್ಯಾಜ್ಯ ಕೆಂಪು ಕಲ್ಲಿನ ಕೋರೆ ಗುಂಡಿಗೆ .
ಮೂಡುಬಿದಿರೆ ಪರಿಸರದ ಸಾವಿರಾರು ಕುಟುಂಬಗಳು ಅಪಾಯದಲ್ಲಿ. ಮೂಡುಬಿದಿರೆ ಪರಿಸರದ ಬೆಳುವಾಯಿ, ಕೆಸರುಗದ್ದೆ, ಪಟ್ಲ, ಕೊಡ್ಯಡ್ಕ,ಗುಂಡ್ಯಡ್ಕ ಭಾಗದ ಕೃಷಿಕರೇ ಎಚ್ಚರಾ ಎಚ್ಚರಾ..!!ನಿಮ್ಮ ಕೃಷಿ ಭೂಮಿ ಬರಡಾಗುವಂತೆ ಮಾಡಿ ತೋಡಿನ ಬದಿಯಲ್ಲಿ ಇರುವ ನಿಮ್ಮ ಬಾವಿಯ ನೀರು ವಿಷವನ್ನಾಗಿಸಲಿದೆ ಈ ಅಪಾಯಕಾರಿ ರಾಸಾಯನಿಕ ತ್ಯಾಜ್ಯಏನಿದು ಅಂತೀರಾ..? ಮುಂದಕ್ಕೆ ಓದಿ.. ಕಾಲ ಮಿಂಚಿ ಹೋಗುವ ಮುನ್ನ ಈಗಲೇ ಜಾಗೃತರಾಗಿ..ಬೆಳುವಾಯಿ ಗ್ರಾಮದ ನಾನಿಲು ಎಂಬಲ್ಲಿ ಕೆಂಪು ಕಲ್ಲಿನ 30 ಅಡಿ ಆಳದ ಕೋರೆಯನ್ನು ಮುಚ್ಚಲು ಮೂಡು ಬಿದಿರೆಯ ಜ್ಯೋತಿನಗರದ ಎಣ್ಣೆ ಮಿಲ್ ನ […]
ಕಳಿಯ ಸೊಸೈಟಿಯಿಂದ ಉಚಿತ ಮೈಲುತುತ್ತು ವಿತರಣೆ
ಮಾಸ್ಕ್ ಧರಿಸಿ-ವೈಯಕ್ತಿಕ ಅಂತರ ಕಾಪಾಡಿದ ಮಾದರಿ ಕಾರ್ಯಕ್ರಮ ಗೇರುಕಟ್ಟೆ: ಇಲ್ಲಿನ ಕಳಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾದ ಸಂಘದ ಸದಸ್ಯರಿಗೆ ಗೇರುಕಟ್ಟೆ ಕಳಿಯ ಸಹಕಾರಿ ಸಭಾ ಭವನದಲ್ಲಿ ಉಚಿತ ಮೈಲುತುತ್ತು ವಿತರಣಾ ಕಾರ್ಯಕ್ರಮ ಮೇ 9ರಂದು ನಡೆಯಿತು.ಕಳಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು ಮಾತನಾಡಿ, ಕೃಷಿಕರು ಪ್ರತಿ ಹಂತದಲ್ಲೂ ಬೆಳೆಗೆ ಸೂಕ್ತ ಬೆಲೆ ಸಿಗದೆ ಸಂಕಷ್ಟ ಅನುಭವಿಸುತ್ತಾರೆ. ಈ ಸಮಯದಲ್ಲಿ ಕೋವಿಡ್ -19 ನಿಂದ ಮತ್ತಷ್ಟು […]