ಕೊರೋನಾ ಸೋಂಕಿನ ವಿರುದ್ಧ ಮುಂಜಾಗ್ರತೆ ಸೇವಾಕಾರ್ಯದಲ್ಲೂ ಮಾಸ್ಕ್ ಧರಿಸಿ ವೈಯಕ್ತಿಕ ಅಂತರ ಕಾಯ್ದ ಲಯನ್ಸ್ ಅಧ್ಯಕ್ಷ ಹಾಗೂ ಕಾರ್ಯದರ್ಶಿ

ಮೇ 2 ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ವಸಂತ ಶೆಟ್ಟರಿಗೆ ವಿವಾಹ ದಿನದ ಸಂಭ್ರಮ. ಈ ಸಂಭ್ರಮವನ್ನು ಲಯನ್ಸ್ ಕ್ಲಬ್ಬಿನ ಸೇವಾಪಥದಲ್ಲಿಯೇ ಆಚರಿಸಿಕೊಂಡ ವಸಂತ ಶೆಟ್ಟಿ, ಬೆಳಿಗ್ಗೆ ಕ್ಲಬ್ಬಿನ ಕಾರ್ಯದರ್ಶಿ ಲಾಯ್ಲ ಸುರೇಶ್ ಶೆಟ್ಟರೊಂದಿಗೆ 12ಅರ್ಹ ಫಲಾನುಭವಿಗಳಿಗೆ ಆಹಾರದ ಕಿಟ್ ನೀಡುವ ಮೂಲಕ ಹಸಿದವರ ಹೊಟ್ಟೆಗೆ ಹಿಟ್ಟು ನೀಡಿ ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಸೇವಾಪಥದ ಮುಂದುವರಿದ ಭಾಗವಾಗಿ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಗೆ ಮತ್ತೆ ಕ್ಲಬ್ಬಿನ ಕಾರ್ಯದರ್ಶಿ ಲಾಯ್ಲ ಸುರೇಶ್ ಶೆಟ್ಟರೊಂದಿಗೆ ಭೇಟಿ ನೀಡಿದ ಅಧ್ಯಕ್ಷ ವಸಂತ ಶೆಟ್ಟಿ, […]
ಕೊಕ್ರಾಡಿ ಸ್ನೇಹಿತರಿಂದ ವಿನೂತನ ಕಾರ್ಯಕ್ರಮ ಕಾರ್ಯಕ್ರಮದುದ್ದಕ್ಕೂ ಮಾಸ್ಕ್ ಧರಿಸಿ ವೈಯಕ್ತಿಕ ಅಂತರ ಕಾಪಾಡಿದ ಸ್ನೇಹಿತರು

ಕೋವಿಡ್-19 ವೈರಸ್ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರಕಾರದ ಆದೇಶದ ಪ್ರಕಾರ ಲಾಕ್ ಡೌನ್ ಕಾನೂನು ಇರುವುದರಿಂದ ಜನಸಾಮಾನ್ಯರಿಗೆ ಕೂಲಿ ಕೆಲಸವಿಲ್ಲದೆ ತಮ್ಮ ಹಸಿವು ನೀಗಿಸುವಲ್ಲಿ ತೊಡಕುಂಟಾದ ಕಾರಣ ಅಂತಹ ಕುಟುಂಬಗಳಿಗೆ ನೆರವಾಗಲು; ಬೆಳ್ತಂಗಡಿ ತಾಲೂಕು ಕೊಕ್ರಾಡಿ ಗ್ರಾಮದ ಸೂರ್ಯನಾರಾಯಣ ಡಿ.ಕೆ., ಸಂತೋಷ್ ಹೆಗ್ಡೆ, ದೀಪಕ್ ಶೆಟ್ಟಿ, ಹರೀಶ್ ಕುಮಾರ್ ಹಾಗೂ ಶಿವಪ್ರಕಾಶ್ ರವರು ಸ್ನೇಹಿತರ ತಂಡ ರಚಿಸಿ, ಮೊದಲಿಗೆ ತಾವೊಂದಷ್ಟು ಹಣ ಹಾಕಿ, ನಂತರ ಕೊಕ್ರಾಡಿ ಗ್ರಾಮದ ಹಾಗೂ ಪರ ಊರಿನ ಸಹೃದಯಿ ದಾನಿಗಳಿಂದ ಧನ […]
ಬಿಗ್ ಬ್ರೇಕಿಂಗ್ ನ್ಯೂಸ್ ಗುರುವಾಯನಕೆರೆಯಲ್ಲಿ ಭೀಕರ ರಸ್ತೆ ಅಪಘಾತ

ಗುರುವಾಯನಕೆರೆಯ ಮುಖ್ಯರಸ್ತೆಯಲ್ಲಿರುವ ಅರಫಾ ಮಾರ್ಬಲ್ಸ್ ಬಳಿಮೇ 2ರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳೀಯ ಎಟಿಎಂ ಕಾವಲುಗಾರ ಲಿಂಗಪ್ಪ ಮೂಲ್ಯ (62) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ವಿವಿರಗಳು ಇನ್ನಷ್ಟೇ ಲಭ್ಯವಾಗಬೇಕಾಗಿದೆ.
ಪಲ್ಗುಣಿ ನದಿಗೆ ವಿಷ ಹಾಕಿದ ದುಷ್ಕರ್ಮಿಗಳು ಸಹಸ್ರಾರು ಮೀನುಗಳ ಮಾರಣ ಹೋಮ-ಪರಿಸರದಲ್ಲಿ ದುರ್ನಾತ

ಬೆಳ್ತಂಗಡಿ: ತಾಲೂಕಿನ ವೇಣೂರು ಸಮೀಪದ ಮೂಡುಕೋಡಿ ಗ್ರಾಮ ನಡ್ತಿಕಲ್ಲಿನ ದಾಡೇಲು ಎಂಬಲ್ಲಿ ಪಲ್ಗುಣಿ ನದಿಗೆ ದುಷ್ಕರ್ಮಿಗಳು ವಿಷ ಹಾಕಿದ ಪರಿಣಾಮ ಸಾವಿರಾರು ಮೀನುಗಳ ಮಾರಣ ಹೋಮ ನಡೆದಿದೆ. ನದಿಯ ದಡದಲ್ಲಿ ರಾಶಿ ರಾಶಿ ಮೀನುಗಳು ಸತ್ತು ಬಿದ್ದಿದೆ.ದುರ್ನಾತದಿಂದ ಆ ಪರಿಸರಕ್ಕೆ ಹೋಗದಂತಹ ಸ್ಥಿತಿ ನಿರ್ಮಾಣ ವಾಗಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿಯ ಎದುರಾಗಿದ್ದು, ಸುತ್ತಮುತ್ತಲಿನ ಜನ ಭಯಬೀತರಾಗಿದ್ದಾರೆ. ಪ್ರಾಣಿ ಪಕ್ಷಿಗಳು ಈ ವಿಷಯುಕ್ತ ನೀರನ್ನೆ ಕುಡಿಯುತ್ತಿದ್ದು ಅವುಗಳ ಪ್ರಾಣಕ್ಕೂ ಸಂಚಕಾರ ಬಂದೊದಗಿದೆ. ಅದೇ ರೀತಿ ಕೆಲವು ಹಕ್ಕಿಗಳು […]
ರೋಟರಿ ಕ್ಲಬ್ಬಿನಿಂದ ಕಾರ್ಮಿಕ ದಿನಾಚರಣೆ ಮಾಸ್ಕ್ ಧರಿಸಿ ವೈಯಕ್ತಿಕ ಅಂತರ ಕಾಪಾಡಿದ ಕಾರ್ಯಕ್ರಮ

ಮೇ 1ರಂದು ಕಾರ್ಮಿಕ ದಿನದ ಅಂಗವಾಗಿ ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ಬೆಳ್ತಂಗಡಿಯ ವಿನಾಯಕ ರೈಸ್ ಮಿಲ್ ನಲ್ಲಿ ಕಾರ್ಮಿಕರಿಗಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಯಿತು. ವಿನಾಯಕ ರೈಸ್ ನಲ್ಲಿನ ಸುಮಾರು ಐವತ್ತೈದು ಕಾರ್ಮಿಕರಿಗೆ ರೋಟರಿ ಕ್ಲಬ್ ಬೆಳ್ತಂಗಡಿಯ ಸದಸ್ಯರಾದ ರೋ.ಡಾ. ಶ್ರೀಹರಿ ,ಹಾಗೂ ಆನ್ ಸ್ವಾಗತ ಭಿಡೆಯವರು covid-19ರ ಬಗ್ಗೆ ವಿಸ್ತೃತವಾದ ಮಾಹಿತಿಯನ್ನು ನೀಡಿದರು. ರೋಟರಿ ಕ್ಲಬ್ ಪರವಾಗಿ ಎಲ್ಲ ಕಾರ್ಮಿಕರಿಗೆ ಮಾಸ್ಕ್ ಗಳನ್ನು ಮತ್ತು ಹ್ಯಾಂಡ್ ವಾಶನ್ನು ವಿತರಿಸಲಾಯಿತು. ಅಲ್ಲದೇ, ಎಲ್ಲ ಕಾರ್ಮಿಕರಿಗೆ ಹೊಸ ಬಟ್ಟೆಗಳನ್ನು […]
ಅಂತರಾಷ್ಡ್ರೀಯ ನೃತ್ಯದಿನವನ್ನು ಅರ್ಥಪೂರ್ಣವಾಗಿಸಿದ ಬೆಳ್ತಂಗಡಿ ರೋಟರಿ ಕ್ಲಬ್

ಎಪ್ರಿಲ್ 29, ಅಂತರರಾಷ್ಟ್ರೀಯ ನೃತ್ಯದಿನ. ಈ ದಿನದಂದು ಬೆಳ್ತಂಗಡಿ ರೋಟರಿ ಕ್ಲಬ್ ಬೆಳ್ತಂಗಡಿಯ ಹತ್ತು ಧೀಮಂತ ಯಕ್ಷಗಾನ ಕಲಾವಿದರಿಗೆ ಗೌರವವನ್ನು ಸೂಚಿಸಿತು .ಈ ಹತ್ತು ಜನ ಕಲಾವಿದರುಗಳಿಗೆ ಗೌರವಗಳೊಂದಿಗೆ ಲಾಕ್ ಡೌನಿನ ಈ ಸಂಕಷ್ಟದ ದಿನಗಳಲ್ಲಿ ಅಗತ್ಯ ದಿನನಿತ್ಯ ಬಳಕೆಯ ರೂ ಹತ್ತು ಸಾವಿರ ಮೌಲ್ಯದ ವಸ್ತುಗಳನ್ನು ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಉಜಿರೆ ಅಶೋಕ್ ಭಟ್, ರೋಟರಿ ಸದಸ್ಯರಾದ ಕೆ. ಪಿ. ಪ್ರಸಾದ್, ಪ್ರಕಾಶ್ ಪ್ರಭು, ಶ್ರೀಧರ್ ಕೆ.ವಿ, ಶಶಿಕಾಂತ್ ಡೋಂಗ್ರೆ, ಬಿ. […]
ಮೂಡುಬಿದಿರೆ ಯುವ ಬಂಟರ ಸಂಘದಿಂದ ಆಹಾರ ಕಿಟ್ ವಿತರಣೆ ವೈಯಕ್ತಿಕ ಅಂತರಕ್ಕೆ ಕೊಟ್ಟ ಮಹತ್ವ ಮಾಸ್ಕ್ ತೊಡುವಲ್ಲಿ ಇಲ್ಲ

ಮೂಡುಬಿದಿರೆ : ಯುವ ಬಂಟರ ಸಂಘ ಮೂಡುಬಿದಿರೆ ಇದರ ವತಿಯಿಂದ ಲಾಕ್ ಡೌನಿನಿಂದ ಸಂಕಷ್ಟದಲ್ಲಿರುವ ಬಂಟ ಸಮಾಜದ ಕುಟುಂಬಗಳಿಗೆ ತಲಾ 10 ಕೆ.ಜಿ.ಅಕ್ಕಿ ಮತ್ತು ದಿನಸಿ ಸಾಮಗ್ರಿಗಳನ್ನು ಒಳಗೊಂಡ ಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮವು ಇಲ್ಲಿನ ಸಮಾಜಮಂದಿರ ಸಭಾಭವನದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂಡುಬಿದಿರೆ ಬಂಟರ ಸಂಘದ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ ಅವರು ಸಮಾಜದ ಬಾಂಧವರು ಸಂಕಷ್ಟದಲ್ಲಿರುವ ಈ ಕಾಲದಲ್ಲಿ ಯುವ ಬಂಟರ ಸಂಘ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಸ್ತುತ್ಯರ್ಹವಾಗಿದೆ ಎಂದರಲ್ಲದೆ ಸಂಬಂಧಗಳನ್ನು ಹೇಳಿಕೊಂಡು ಸಮಾಜ ಬಾಂಧವರು […]
ಮಳೆಗಾಲಕ್ಕೂ ಮುನ್ನ ಪ್ರಕೃತಿಮಾತೆಯ ಟೆಸ್ಟ್ ಡೋಸ್ ಬೆಳ್ರಂಗಡಿ ತಾಲೂಕಿನ ವಿವಿಧೆಡೆ ಗಾಳಿ ಮಳೆ ಅಪಾರ ಹಾನಿ

ಬೆಳ್ತಂಗಡಿ ತಾಲೂಕಿನ ನಾಗರಿಕರಿಗೆ ಅದರಲ್ಲೂ ರೈತಾಪಿ ಕೃಷಿಕ ವರ್ಗಕ್ಕೆ ಕಳೆದ ವರ್ಷದ ಮಳೆಗಾಲದ ಪ್ರವಾಹದ ಕಹಿನೆನಪು ಮಾಸದಿರುವಾಗಲೇ ಮತ್ತೊಂದು ಮಳೆಗಾಲ ಅದೇನು ಅನಾಹುತ ಸೃಷ್ಟಿಸೀತು ಎಂಬ ಆತಂಕ ಮನೆ ಮಾಡುತ್ತಿದೆ. ಎಪ್ರಿಲ್ 30ರ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ತಾಲೂಕಿನ ವಿವಿಧೆಡೆ ಅಡಿಕೆ ಮರ ಸಹಿತ ವಿದ್ಯುತ್ ಕಂಬಗಳು ಧರೆಗುರುಳಿ ಅಪಾರ ಹಾನಿ ಸಂಭವಿಸಿದೆ. ಇದು ಮುಂದೆ ಆಗಬಹುದಾದ ಪ್ರಾಕೃತಿಕ ವಿಕೋಪದ ಟೆಸ್ಟ್ ಡೋಸ್ ಆಗಿರಬಹುದು ಎಂದು ಬೆದರಿರುವ ಅನೇಕ ಕೃಷಿಕರು, ಮಳೆಯಿಂದಾಗಬಹುದಾದ ಸಂಭಾವ್ಯ ಅನಾಹುತದಿಂದ […]
ಕಲ್ಲಮುಂಡ್ಕೂರಿನಲ್ಲೊಬ್ಬ ದಾರಿ ತಪ್ಪಿದ ಮಾಲಕ ಹೊಟ್ಟೆಗೆ ಹಿಟ್ಡಿಲ್ಲದೇ ಊರೂರು ಸುತ್ತಿ ಕ್ವಾರಂಟೈನ್ ಸೇರಿದ ಕಾರ್ಮಿಕ
ಮೂಡುಬಿದಿರೆ: ತನ್ನದೇ ತೋಟದಲ್ಲಿ ಕೃಷಿ ಕೂಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕನೊಬ್ಬನನ್ನು, ಲಾಕ್ ಡೌನ್ ಆದೊಡನೆ ಬೀದಿ ಪಾಲು ಮಾಡುವ ಮಾಲಕನ ನಿರ್ಧಾರದಿಂದಾಗಿ ಇದೀಗ ಕೂಲಿ ಕಾರ್ಮಿಕ ಕ್ವಾರಂಟೈನ್ ಸೇರುವಂತಾದ ಘಟನೆ ಕಲ್ಲಮುಂಡ್ಕೂರಿನಿಂದ ವರದಿಯಾಗಿದೆ.ಬಿಹಾರಿ ಮೂಲದ ಕೂಲಿ ಕಾರ್ಮಿಕನೊಬ್ಬ ಕಳೆದ ಕೆಲವು ತಿಂಗಳುಗಳಿಂದ ಕಲ್ಲಮುಂಡ್ಕೂರು ಗ್ರಾಮದ ನಿವಾಸಿ ಕೃಷಿಕರೊಬ್ಬರ ಬಳಿ ತೋಟದ ಕೆಲಸ ಮಾಡಿಕೊಂಡಿದ್ದ. ದೇಶದಲ್ಲಿ ಲಾಕ್ ಡೌನ್ ಘೋಷಣೆಯಾದಾಗಿನಿಂದ ತೋಟದ ಮಾಲಕ ಈ ಕೂಲಿಕಾರ್ಮಿಕನಿಗೆ ಮೂಲಸೌಲಭ್ಯ ಒದಗಿಸಲು ಹಿಂದೇಟು ಹಾಕಿದ್ದರೆಂದು ಸ್ವತಹ ಕೂಲಿ ಕಾರ್ಮಿಕ ದೂರಿದ್ದಾನೆಇದೇ […]
ಸಮಾಜ ಬಾಂಧವರ ನೆರವಿಗೆ ಧಾವಿಸಿದ ಭಂಡಾರಿ ಸಮಾಜ ಸೇವಾ ಸಂಘ ವೈಯಕ್ತಿಕ ಅಂತರಕ್ಕೆ ಮಾದರಿ ಆದರೆ ಕೆಲವರಲ್ಲಿ ಮಾಸ್ಕ್ ಮಾತ್ರ ಇಲ್ಲ

ಮೂಡುಬಿದಿರೆ: ದೇಶದಲ್ಲಿ ಪ್ರಥಮವಾಗಿ ಮಾರ್ಚ್ 22ರಂದು ಲಾಕ್ ಡೌನ್ ಘೋಷಣೆಯಾಗುವುದಕ್ಕೂ ಮೊದಲೇ ಸೆಲೂನುಗಳ ಬಾಗಿಲು ಮುಚ್ಚಿಸುವ ಆದೇಶವನ್ನು ಸರಕಾರ ಹೊರಡಿಸಿತ್ತು. ಬಹುತೇಕ ಕ್ಷೌರಿಕ ವೃತ್ತಿಯನ್ನೇ ಅವಲಂಬಿಸಿರುವ ಭಂಡಾರಿ ಸಮಾಜದ ಹಲವು ಕುಟುಂಬಗಳು ಇದರಿಂದಾಗಿ ಉಪವಾಸ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮೂಡುಬಿದಿರೆ ಫಿರ್ಕಾದಲ್ಲಿ ಭಂಡಾರಿ ಸಮಾಜಕ್ಕೆ ಸೇರಿದ 200ಕ್ಕೂ ಹೆಚ್ಚು ಕುಟುಂಬಗಳಿದ್ದು ನಿತ್ಯ ದುಡಿದು ತಿನ್ನುವ ಕೈಗಳಿವು. ತನ್ನದೇ ಸಮಾಜಬಾಂಧವರು ಸರಕಾರದ ಲಾಕ್ ಡೌನ್ ಅದೇಶದಿಂದ ಸಂಕಷ್ಟಕ್ಕೊಳಗಾದಾಗ ನೆರವಿಗೆ ಧಾವಿಸಿರುವ ಇಲ್ಲಿನ ಭಂಡಾರಿ ಸಮಾಜ ಸೇವಾ ಸಂಘದ ಪದಾಧಿಕಾರಿಗಳು […]