ಖಾಸಗಿ ಬಸ್ ಸಿಬ್ಬಂದಿಗಳಿಗೆ ಎಂ.ಎಲ್.ಸಿ‌. ಹರೀಶ್ ಕುಮಾರರಿಂದ ಆಹಾರ ಕಿಟ್ ವಿತರಣೆ ,ಮಾಸ್ಕ್ ಧರಿಸಿ ವೈಯಕ್ತಿಕ ಅಂತರ ಕಾಪಾಡಿದ ಶಿಸ್ತುಬದ್ಧ ಕಾರ್ಯಕ್ರಮ.

ಬೆಳ್ತಂಗಡಿ: ಕೊರೋನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಗೊಳಗಾಗಿದ್ದ ಬೆಳ್ತಂಗಡಿ ತಾಲೂಕಿನ ಖಾಸಗಿ ಬಸ್ ಸಿಬ್ಬಂದಿಗಳಿಗೆ ವಿಧಾನ ಪರಿಷತ್ ಶಾಸಕ , ದ.ಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್ ಆಹಾರ ಕಿಟ್ ಗಳನ್ನು ಬುಧವಾರ ಬೆಳ್ತಂಗಡಿಯಲ್ಲಿ ವಿತರಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಫಲಾನುಭವಿಗಳಾದ ಖಾಸಗಿ ಬಸ್ ಸಿಬ್ಬಂದಿಗಳು ಮಾತ್ರವಲ್ಲದೇ ಎಂ.ಎಲ್.ಸಿ. ಹರೀಶ್ ಕುಮಾರ್ ಜೊತೆಗಿದ್ದವರೂ ಮಾಸ್ಕ್ ಧರಿಸಿ, ವೈಯಕ್ತಿಕ ಅಂತರ ಕಾಪಾಡಿ ಭಾಗವಹಿಸುವ ಮೂಲಕ ಇತರರಿಗೆ ಮಾದರಿಯಾದರು. ಕಳೆದ ಮಾರ್ಚ್ 22 ರಿಂದ ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದ ಖಾಸಗಿ […]

ಕನಿಷ್ಠ ಗೌರವಧನ ಪಡೆದು ನಮ್ಮೆಲ್ಲರ ಸೇವೆ ಮಾಡುವ ಆಶಾ ಕಾರ್ಯಕರ್ತೆ ಯರು ನಮ್ಮೆಲ್ಲರಿಂದ ಮುಂದಿದ್ದಾರೆ- ಡಾ. ಎಂ.ಎನ್.ಆರ್.

ಮೂಡುಬಿದಿರೆ : ಸಂಪೂರ್ಣ ಜಗತ್ತನ್ನು ಆವರಿಸಿರುವ ಕೊರೋನಾ ವೈರಸ್‌ ನಿಂದ ಜನ ಭೀತಿಯಿಂದಿದ್ದಾರೆ. ಆದರೆ ಕನಿಷ್ಠ ಗೌರವಧನ ಪಡೆಯುವ ಆಶಾ ಕಾರ್ಯಕರ್ತೆಯರು ಊರೆಲ್ಲಾ ಸುತ್ತಾಡಿ ಎಲ್ಲರ ಸೇವೆ ಮಾಡುತ್ತಿರುವುದರಿಂದ ನಮ್ಮೆಲ್ಲರಿಗಿಂತ ಮುಂದಿದ್ದಾರೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ನುಡಿದರು.ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಇದರ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆ ಸಮಾಜಮಂದಿರದಲ್ಲಿ ನಡೆದ ಮೂಡುಬಿದಿರೆ ತಾಲೂಕಿನ ಆಶಾ […]

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಮಾಸ್ಕ್ ಧರಿಸಿ, ವೈಯಕ್ತಿಕ ಅಂತರ ಕಾಯ್ದು ಸಂಘ ಸಂಸ್ಥೆಗಳಿಗೆ ಮಾಸ್ಕ್ ವಿತರಣೆ

ಬಳಂಜ:ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಬಳಂಜ,ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ-ನಾಲ್ಕೂರು-ತೆಂಕಕಾರಂದೂರು ವತಿಯಿಂದ ಸಂಘ ಸಂಸ್ಥೆಗಳಿಗೆ ಮಾಸ್ಕ್ ವಿತರಣೆಯು ಎಪ್ರಿಲ್ 29 ರಂದು ಬಳಂಜದಲ್ಲಿ ನಡೆಯಿತು..ಕೊರೊನಾ ಹಿನ್ನೆಲೆಯಲ್ಲಿ ದೇಶ ಲಾಕ್ ಡೌನ್ ಆಗಿರುವುದರಿಂದ ಸರಕಾರದ ಆದೇಶದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯೊಂದಿಗೆ,ಮಾಸ್ಕ್ ಧರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು ಬಳಂಜ ಗ್ರಾಮ ಪಂಚಾಯತ್, ನಾಲ್ಕೂರು ಹಾಲು ಉತ್ಪಾದಕರ ಸಹಕಾರ ಸಂಘ, ರಾಮನಗರ, ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಬಳಂಜ ಸಂಘಗಳಿಗೆ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು […]

ಬೆಳ್ತಂಗಡಿ ನಗರ ಪಂಚಾಯಿತಿ 5ನೇ ವಾರ್ಡ್ ನಲ್ಲಿ ಆಹಾರ ಕಿಟ್ ವಿತರಣೆ

ಬೆಳ್ತಂಗಡಿ : ಮಹಾಮಾರಿ ಕೊರಾನಾ ವೈರಸ್‌ನಿಂದ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಬೆಳ್ತಂಗಡಿ ನಗರ ಪಂಚಾಯತಿಯ 5ನೇ ವಾರ್ಡ್ ನಲ್ಲಿ ತೀರಾ ಸಂಕಷ್ಟಕ್ಕೆ ಒಳಗಾಗಿರುವ ಸುಮಾರು 21 ಅರ್ಹ ಬಡ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಂಗಳವಾರ ನಡೆಯಿತು.ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಪೀತಾಂಬರ ಹೇರಾಜೆಯವರ ಸಹಕಾರದೊಂದಿಗೆ 5ನೇ ವಾರ್ಡ್ ನ ನಗರ ಪಂಚಾಯಿತಿ ಸದಸ್ಯ ಜನಾರ್ದನ ಕುಂಬಾರ ವೈಯಕ್ತಿಕ ಅಂತರ ಕಾಯ್ದುಕೊಂಡು ಕಿಟ್ ವಿತರಿಸಿದರು.

ಕೊರೋನಾ ವಾರಿಯರ್ಸ್ ಗಳಿಗೆ ಅವಮಾನ ಮಾಸ್ಕ್ ನ್ನು ಕೊರಳಿಗೆ ನೆಕ್ಲೆಸ್ ಆಗಿಸಿದ ತಾಲೂಕು ವೈದ್ಯಾಧಿಕಾರಿ ಹಾಗೂ ಎಂ.ಎಲ್.ಸಿ.

ಇವರು ತಾಲೂಕಿನ ವೈದ್ಯಾಧಿಕಾರಿಗಳು; ಡಾl ಕಲಾಮಧು ಶೆಟ್ಟಿ. ಎಪ್ರಿಲ್ 27ರಂದು ಬೆಳ್ತಂಗಡಿಯ ಸಮುದಾಯ ಆಸ್ಪತ್ರೆಯಲ್ಲಿ ನಡೆದ ಸರಳ‌ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಕೊಡಮಾಡಿದ ಪ್ರಯಾಣಭತ್ತೆಯ ಮೊತ್ತವನ್ನು ಸ್ವೀಕರಿಸಿದರು. ಓರ್ವ ವೈದ್ಯನಾಗಿ, ಅದರಲ್ಲೂ ಸರಕಾರಿ ಆಸ್ಪತ್ರೆಯೊಂದರ ವೈದ್ಯ ಹುದ್ದೆಯ ಜೊತೆಗೆ ತಾಲೂಕು ವೈದ್ಯಾಧಿಕಾರಿಯಾಗಿ ರುವ ಈ ಕಲಾಮಧು ಶೆಟ್ಟರಿಗೆ ಮಾಸ್ಕ್ ಇರೋದು ಕುತ್ತಿಗೆಗೆ ನೆಕ್ಲೆಸ್ ನಂತೆ ಅಲಂಕಾರಕ್ಕೆ ಅಲ್ಲ; ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತೆಗಾಗಿ ಬಾಯಿ ಮತ್ತು‌ ಮೂಗು ಮುಚ್ವಿಕೊಳ್ಳಲು […]

ಬಿಗ್ ಬ್ರೇಕಿಂಗ್ ನ್ಯೂಸ್ ಶಿರಾಡಿ ಕೊಡ್ಯಕಲ್ ತಿರುವಿನಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ

ಕೊಕ್ಕಡ : ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಕೊಡ್ಯಕಲ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಗ್ಯಾಸ್ ಟ್ಯಾಂಕರ್ ಒಂದು ಪಲ್ಟಿ ಆದ ಘಟನೆ ಇಂದು (28) ಬೆಳಿಗ್ಗೆ ನಡೆದಿದೆ.ಈ ಘಟನೆಯಲ್ಲಿ ಅದೃಷ್ಟವಶಾತ್ ಗ್ಯಾಸ್ ಸೋರಿಕೆಯಾಗದಿರುವುದರಿಂದ ಹೆಚ್ಚಿನ ಅಪಾಯ ತಪ್ಪಿದಂತಾಗಿದೆ. ಇದೇ ಕೊಡ್ಯಕಲ್ ತಿರುವಿನಲ್ಲಿ ನಿರಂತರ ಗ್ಯಾಸ್ ಟ್ಯಾಂಕರ್ ಗಳು ಪಲ್ಟಿಯಾಗುತ್ತಿದ್ದು ಈ ಬಗ್ಗೆ ಚಾಲಕರಿಗೆ ಮಾಹಿತಿ ಕೊಡುವ ಕೆಲಸವು ಎಂ.ಆರ್.ಪಿ.ಎಲ್. ನಿಂದ ಆಗುತ್ತಿಲ್ಲ ಎನ್ನುವ ಆಕ್ರೋಶವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.ಕ್ವಿಕ್ ರೆಸ್ಪಾನ್ಸ್ ವೆಹಿಕಲ್ ಅಸಮರ್ಪಕ […]

ಕೊರೋನಾ ವಿರುದ್ಧ ಹೋರಾಟದ ವಾರಿಯರ್ಸ್ ಬೆಳ್ತಂಗಡಿ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಎಂ.ಎಲ್.ಸಿ‌. ಹರೀಶ್ ಕುಮಾರರಿಂದ ಪ್ರಯಾಣ ಭತ್ತೆ ಕೊಡುಗೆ

ತಾಲೂಕಿನಲ್ಲಿರುವ 250 ಆಶಾ ಕಾರ್ಯಕರ್ತೆಯರು ಪ್ರತಿನಿತ್ಯ ತಮ್ಮ ಸ್ವಂತ ಹಣವನ್ನು ಪ್ರಯಾಣಕ್ಕಾಗಿ ಬಳಸುತ್ತಿದ್ದಾರೆ. ಸರ್ಕಾರದಿಂದ ಅಲ್ಪ ವೇತನವನ್ನು ಪಡೆದು ತಮ್ಮ ಜೀವದ ಹಂಗು ತೊರೆದು ಕೊರೋನಾ ವೈರಸ್ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿರುವ ತಾಲೂಕಿನ ಕೊರೋನಾ ವಿರುದ್ಧದ ಹೋರಾಟದ ವಾರಿಯರ್ಸ್ ಗಳಾದ ಪ್ರತೀ ಆಶಾ ಕಾರ್ಯಕರ್ತೆಯರಿಗೆ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಪ್ರಯಾಣ ಭತ್ಯೆಗಾಗಿ ಪ್ರತಿ ಆಶಾ ಕಾರ್ಯಕರ್ತೆಯರಿಗೆ ರೂ 500 ರಂತೆ ರೂಪಾಯಿ 1.25 ಲಕ್ಷ ಗಳನ್ನು ನೀಡಿದರು.ವಾರದ ಹಿಂದೆಯಷ್ಟೇ ತಾಲೂಕಿನ ಎಲ್ಲ ಆಶಾ […]

ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ಚೆಕ್ ಹಸ್ತಾಂತರ ಯಾರಲ್ಲೂ ಮಾಸ್ಕ್ ಇಲ್ಲ-ವೈಯಕ್ತಿಕ ಅಂತರ ಗೊತ್ತೇ ಇಲ್ಲ

ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ಮೋದಿ ನೀಡಿದ ಕರೆಗೆ ಇವರಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲವೋ ಎಂಬ ಸಂದೇಹ ನಿಮ್ಮ ಮನದಲ್ಲಿ‌ ಮೂಡಿದರೂ ಅಚ್ಚರಿಯಿಲ್ಲ.ನಮ್ಮ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾರವರಿಗೆ ಕೆಲದಿನಗಳ ಹಿಂದೆ ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಮಿತಿ, ಯುವ ಬಿಲ್ಲವ ವೇದಿಕೆ ಹಾಗೂ ಮಹಿಳಾ ಬಿಲ್ಲವ ವೇದಿಕೆ ಬಳಂಜ-ನಾಲ್ಕೂರು-ತೆಂಕಕಾರಂದೂರು ಇವರುಗಳು ಕೊರೋನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಐದು ಸಾವಿರ ರೂಪಾಯಿಗಳ ಚೆಕ್ಕನ್ನು ಹಸ್ತಾಂತರಿಸಿದರು.ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ […]

ಆಶಾ ಕಾರ್ಯಕರ್ತೆಗೆ ಆರ್ಥಿಕ ನೆರವು ನೀಡಿ ಸ್ಥೈರ್ಯ ತುಂಬಿದ ಎಂ.ಎಲ್.ಸಿ‌. ಹರೀಶ್ ಕುಮಾರ್

ಕೆಲ ದಿನಗಳ ಹಿಂದೆ ಉಜಿರೆಯ ದ್ವಿಚಕ್ರ ವಾಹನ ವಿತರಕರೊಬ್ಬರು ಸ್ಕೂಟಿಯ ಸಾಲದ ಕಂತಿನ ಮೊತ್ತದ ಚೆಕ್ ಬೌನ್ಸ್ ಆಗಿರೋದಕ್ಕೆ ಬೆಳ್ತಂಗಡಿ ತಾಲೂಕಿನ ಆಶಾ ಕಾರ್ಯಕರ್ತೆಯೋರ್ವಳಿಗೆ ದಮ್ಕಿ ಹಾಕಿದ ಬಗ್ಗೆ ನಮ್ಮ ಇ-ಪತ್ರಿಕೆಯಲ್ಲಿ ವರದಿ ಮಾಡಿದ್ದೆವು.ಕೊರೋನಾ ಸೋಂಕು ಹರಡುವಿಕೆಯ ವಿರುದ್ಧ ಬಿಸಿಲು-ನೆರಳೆನ್ನದೆ ದುಡಿಯುತ್ತಿರುವ ಕೊರೋನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯ ಸಂಕಷ್ಟವನ್ನು ತಿಳಿದ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಈ ವಿಚಾರವಾಗಿ ಸಮಗ್ರ ಮಾಹಿತಿ ಪಡೆದು; ಎಪ್ರಿಲ್ 27ರಂದು ಸ್ಥಳೀಯ ತಾಲೂಕು ಪಂಚಾಯತ್ ಸದಸ್ಯ ಪ್ರವೀಣ್ ಗೌಡರ ಮೂಲಕ […]

ಮಾಜಿ ಶಾಸಕ ವಸಂತ ಬಂಗೇರರ ಆರೋಗ್ಯದ ಬಗ್ಗೆ ಕಾಳಜಿ ಮರೆತ ಅಭಿಮಾನಿಗಳು ವೈಯಕ್ತಿಕ ಅಂತರ ಹಾಗೂ ಮಾಸ್ಕ್ ಧರಿಸಲು ಮರೆತ ಅಭಿಮಾನಿಗಳು

ಎಲ್ಲರೂ ತಿಳಿದಿರುವಂತೆ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರರು ಇಂದಿನ ಸಂದಿಗ್ಧ ಸ್ಥಿತಿಯಲ್ಲಿಯೂ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಸಂಚರಿಸಿ, ಬಡವರಿಗೆ ಹಾಗೂ ಅಶಕ್ತರಿಗೆ ಸಾಂತ್ವನ-ಸಹಾಯ ನೀಡುತ್ತಿದ್ದಾರೆ. ತನಗಾದ ವಯಸ್ಸನ್ನೂ ಲೆಕ್ಕಿಸದೇ, ಕೊರೋನಾ ಸೋಂಕು ಹರಡದಂತೆ ಸಾಕಷ್ಟು ಮುಂಜಾಗ್ರತೆ ವಹಿಸಿ, ಮಾಸ್ಕ್ ಧರಿಸಿ ವೈಯಕ್ತಿಕ ಅಂತರದ ಬಗ್ಗೆಯೂ ಎಚ್ಚರಿಕೆ ವಹಿಸಿ, ತಾಲೂಕಿನ ವಿವಿದೆಡೆ ಸಂಚರಿಸಿ, ಬಡವರ-ಅಶಕ್ತರ ಯೋಗ‌ಕ್ಷೇಮ ವಿಚಾರಿಸುತ್ತಿರುವ ಮಾಜಿ ಶಾಸಕ ವಸಂತ ಬಂಗೇರ ಎಪ್ರಿಲ್ 26ರಂದು ಗರ್ಡಾಡಿಯ ಅಶಕ್ತ ಕುಟುಂಬದ ಮನೆಯೊಂದಕ್ಕೆ ಭೇಟಿ ನೀಡಿ ಮನೆಯೊಡೆಯನ ಆರೋಗ್ಯ […]