ವೈಯಕ್ತಿಕ ಅಂತರ ಹಾಗೂ ಮಾಸ್ಕ್ ಮರೆತು ಕಿಟ್ ವಿತರಣೆ

ಮೂಡಬಿದರೆ ತಾಲೂಕು ವಾಲ್ಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಒಂದನೇ ವಾರ್ಡಿನಲ್ಲಿ ಎಪ್ರಿಲ್ 20ರಂದು ವಾಲ್ಪಾಡಿ ಗ್ರಾಮ ಪಂಚಾಯಿತಿನ ಉಪಾಧ್ಯಕ್ಷರಾದ ಅರುಣ್ ಕುಮಾರ್ ಶೆಟ್ಟಿ ಇವರ ನೇತೃತ್ವದಲ್ಲಿ ವಾಲ್ಪಾಡಿ ಯೂತ್ ಕಾಂಗ್ರೆಸ್ ಮತ್ತು ಮೂಡಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುಮಾರು 220 ಮನೆಗಳಿಗೆ ಹೋಗಿ ಕಿಟ್ ಗಳನ್ನು ವಿತರಿಸಲಾಯಿತು…… ಮಾಜಿ ಸಚಿವರಾದ ಅಭಯಚಂದ್ರ ಜೈನ್, ಮೂಡಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಲೇರಿಯನ್ ಸಿಕ್ವೇರಾ, ಮಂಗಳೂರು ಎಪಿಎಂಸಿ ಅಧ್ಯಕ್ಷರಾದ ಪ್ರವೀಣ್ ಕುಮಾರ್ ,ಶಿವಾನಂದ ಪಾಂಡ್ರು, ಸುಕುಮಾರ್ ಕಡಂಬ ,ಮತ್ತು ಯುತ್ ಕಾಂಗ್ರೆಸ್ […]
ಕೋವಿಡ್-19 ಹೋರಾಟದಲ್ಲಿ ವಿಮುಕ್ತಿ ವೈಯಕ್ತಿಕ ಅಂತರ ಕಾಪಾಡಲು ಮರೆತರಿವರು

ಲಾಯಿಲ: ಕೋವಿಡ್-19 ರೋಗವನ್ನು ತಡೆಗಟ್ಟುವಲ್ಲಿ ಭಾರತ ಸರಕಾರ ಕೈಗೊಂಡ ಲಾಕ್‌ಡೌನ್ ನಿಂದ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ನಿಟ್ಟಿನಲ್ಲಿ ಕಪುಚಿನ್ ಕೃಷಿಕ ಸೇವಾ ಕೇಂದ್ರ ವಿಮುಕ್ತಿ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಚೈಲ್ಡ್ ಪಂಡ್ ಇಂಡಿಯಾ ಸಹಭಾಗಿತ್ವದೊಂದಿಗೆ ತಾಲೂಕಿನ ಅರ್ಹ 600 ಕುಟುಂಬಗಳಿಗೆ ಆಹಾರ ಕಿಟ್, 200 ಆರೋಗ್ಯ/ಸ್ವಚ್ಚತೆ ಕಿಟ್ ಹಾಗೂ 200 ಶಿಕ್ಷಣ ಕಿಟ್ ಹೀಗೆ ಒಟ್ಟು ಹೀಗೆ 5 ಲಕ್ಷ ರೂ. ಮೌಲ್ಯದ ಸಾಮಾಗ್ರಿಗಳನ್ನು ವಿತರಿಸುವ ಕಾರ್ಯಕ್ಕೆ ಏ.20 ರಂದು ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ […]
ರೈತರ ಪ್ರತಿಭಟನೆಯಲ್ಲೂ ವೈಯಕ್ತಿಕ ಅಂತರ

ಮೂಡುಬಿದಿರೆ : ಕೊರೋನಾವೈರಸ್ ಮಹಾಮಾರಿಯ ಅಬ್ಬರ ಮತ್ತು ಈ ಸಂದರ್ಭದಲ್ಲಿ ರೈತರು ಅನುಭವಿಸುತ್ತಿರುವ ಬವಣೆಗೆ ಸರಕಾರದಿಂದ ಸೂಕ್ತ ರೀತಿಯ ಸ್ಪಂದನ ಸಿಗದ ಹಿನ್ನೆಲೆಯಲ್ಲಿ ರೈತರು ತಮ್ಮ ತಮ್ಮ ಮನೆಯಲ್ಲಿದ್ದುಕೊಂಡೇ ಪ್ರತಿಭಟನೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ತೀರ್ಮಾನ ಕೈಗೊಂಡಿತ್ತು.ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿ ಮತ್ತು ಮೂಡುಬಿದಿರೆ ಕ್ಷೇತ್ರ ಕಾಂಗ್ರೆಸ್ ಕಿಸಾನ್ ಘಟಕದ ನೂತನ ಅಧ್ಯಕ್ಷರೂ ಆಗಿರುವ ಆಲ್ವಿನ್ ಎಸ್. ಮಿನೇಜಸ್ ಅವರು ಗಂಟಾಲ್ಕಟ್ಟೆಯ ತಮ್ಮ ಮನೆಯ ತೋಟದಲ್ಲಿ ಮೂಡುಬಿದಿರೆ ಕೃಷಿಕರ […]
ಆಹಾರ ಪದಾರ್ಥಗಳ ಕಿಟ್ ವಿತರಣೆ ಗಮನ ಸೆಳೆದ ವೈಯಕ್ತಿಕ ಅಂತರ ಜಾಗೃತಿ

ಮೇಲಂತಬೆಟ್ಟು ಗ್ರಾಮದ ಕೆಲ್ಲಕೆರೆಯ ಕೊರಗ ಸಮುದಾಯದ ಕಾಲೋನಿ ಮತ್ತು ಪ.ಜಾತಿ ಕಾಲೋನಿಯ ಜನರಿಗೆ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೇಸ್ ನ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ನ ಸದಸ್ಯರಾದ ಹರೀಶ್ ಕುಮಾರ್ ರವರು ನೀಡಿರುವ ದೈನಂದಿನ ದಿನಸಿ ಸಾಮಾಗ್ರಿಗಳ ಆಹಾರದ ಕಿಟ್ ಗಳನ್ನು ಎಪ್ರಿಲಾ 20_ ರಂದು ಬ್ಲಾಕ್ ಕಾಂಗ್ರೇಸ್ ನಗರ ಸಮಿತಿಯ ಅಧ್ಯಕ್ಷರಾದ ಶೈಲೇಶ್ ಕುಮಾರ್ ಕುರ್ತೋಡಿಯವರು ವಿತರಿಸಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ತಾಲೂಕು ಎಸ್ಸಿ ಘಟಕದ ಅಧ್ಯಕ್ಷರಾದ ಬಿ.ಕೆ. ವಸಂತ್ ಬೆಳ್ತಂಗಡಿ, […]
ಉಚಿತ ಅಡುಗೆ ಅನಿಲ ವಿತರಣೆಗೆ ಒತ್ತಾಯಿಸಿ ಮನವಿ

ವೇಣೂರು ಗ್ರಾಮ ಪ೦ಚಾಯತ್ ವ್ಯಾಪ್ತಿಯ ಪ.ಜಾತಿ ಹಾಗೂ ಪ.ಪ೦ಗಡ ಸೇರಿದಂತೆ ಅರ್ಹ ಬಡ ಕುಟುಂಬಗಳಿಗೆ ವೇಣೂರು ಅರಣ್ಯ ಇಲಾಖೆಯ ವತಿಯಿಂದ ಭಾರತ್ ಗ್ಯಾಸ್ ಕ೦ಪೆನಿ ಮೂಲಕ ಉಚಿತ ಅಡುಗೆ ಅನಿಲ ಸಂಪರ್ಕ ಒದಗಿಸಿದ್ದು, ಈಗ ಈ ಫಲಾನುಭವಿಗಳು ಅಡುಗೆ ಅನಿಲ ಸಿಲಿಂಡರ್ ಪಡೆಯಲು ಹಣ ಪಾವತಿಸ ಬೇಕಾಗಿದೆ.ಆದರೆ ಕೊರೊನಾ ಹಾವಳಿಯಿ೦ದ ಜನ ಆಥಿ೯ಕ ಸ೦ಕಷ್ಟದಲ್ಲಿದ್ದು ಲಾಕ್ ಡೌನ್ ವೇಳೆ ಉಚಿತವಾಗಿ ಗ್ಯಾಸ್ ಸೇವೆ ಒದಗಿಸಬೇಕೆ೦ದು ವೇಣೂರು ಪ೦ಚಾಯತ್ ನೀರು ಮತ್ತು ನೈಮ೯ಲ್ಯ ಸಮಿತಿಯ ಸದಸ್ಯ ಅನೂಪ್ ಜೆ […]
ವಾಹನವಿಲ್ಲದೇ ಸರಕಾರಿ ನೌಕರರ ಪರದಾಟ

ಕೊರೋನಾ ಸೋಂಕಿನ ಭಯದ ನಡುವೆಯೂ ಸರಕಾರವೇನೋ ಒಂದಷ್ಟು ಇಲಾಖಾ ಸಿಬ್ಬಂದಿಗಳಿಗೆ ಎಪ್ರಿಲ್ 20ರಿಂದ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದೆ. ಆದರೆ ಬಹುತೇಕ ಗ್ರಾಮೀಣ ಪ್ರದೇಶದಿಂದ ತಾಲೂಕು ಕೇಂದ್ರದಲ್ಲಿರುವ ಇಲಾಖಾ ಕಛೇರಿಗೆ ಬರಲು ವಿವಿಧ ಇಲಾಖಾ ಸಿಬ್ಬಂದಿಗಳಿಗೆ ವಾಹನದ ವ್ಯವಸ್ಥೆ ಇಲ್ಲದೇ ಸರಕಾರಿ ನೌಕರರು ಪರದಾಡುವಂತಾಗಿದೆ. ಅದರಲ್ಲೂ ಮಹಿಳಾ ಸಿಬ್ಬಂದಿಗಳ ಪಾಡಂತೂ ಇನ್ನೂ ಕಷ್ಟಕರ.ಈ ಸರಕಾರಿ ಸಿಬ್ಬಂದಿಗಳು ತಮ್ಮ ಮನೆಯಿಂದ ತಾಲೂಕು ಕೇಂದ್ರದಲ್ಲಿರುವ ಕಛೇರಿಗೆ ಬರೋದು ಹ್ಯಾಗೆ, ಸಂಜೆ ಮನೆಗೆ ಹಿಂತಿರುಗುವುದು ಹ್ಯಾಗೆ ಎಂಬ ಪ್ರಶ್ನೆಗೆ ತಾಲೂಕು ಆಡಳಿತ ಉತ್ತರ […]
ಬೆಳ್ತಂಗಡಿ ವಾರದ ಸಂತೆ ಎ.ಪಿ.ಎಂ.ಸಿ.ಪ್ರಾಂಗಣಕ್ಕೆ

ಪ್ರತೀ ಸೋಮವಾರ ನಡೆಯುವ ಬೆಳ್ತಂಗಡಿಯ ವಾರದ ಸಂತೆ ಮಾರುಕಟ್ಟೆಯನ್ನು ಎ.ಪಿ.ಎಂ.ಸಿ. ಪ್ರಾಂಗಣಕ್ಕೆ ಸ್ಥಳಾಂತರಿಸಲು ಎಪ್ರಿಲ್ 19ರಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜರ ನೇತೃತ್ವದಲ್ಲಿ ಕ್ರಮಕೈಗೊಳ್ಳಲಾಗಿತ್ತು. ಎಪ್ರಿಲ್ 20ರ ಸೋಮವಾರ ಎ.ಪಿ.ಎಂ.ಸಿ. ಪ್ರಾಂಗಣಕ್ಕೆ ಭೇಟಿನೀಡಿದ ಎ.ಪಿ.ಎಂ.ಸಿ. ಅಧ್ಯಕ್ಷ ಕೇಶವ ಪಿ. ಬೆಳಾಲು ಸ್ಧಳ ಪರಿಶೀಲನೆ ಮಾಡಿ ಬೇಕಾದ ಮೂಲಭೂತ ವ್ಯವಸ್ಥೆಗಳನ್ನು ಒದಗಿಸಲು ಕಾರ್ಯದರ್ಶಿ ರವೀಂದ್ರರಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ. ಅಧ್ಯಕ್ಷ ನ್ಯಾಯವಾದಿ ಪಿ.ಕೇಶವ ಬೆಳಾಲುರವರು ವ್ಯಾಪಾರಿಗಳಿಗೆ ವೈಯಕ್ತಿಕ ಅಂತರ ಹಾಗೂ ಶುಚಿತ್ವದ ಬಗ್ಗೆ ಮಾರ್ಗದರ್ಶನ ನೀಡಿದರು. ಎಲ್ಲಾ ರೀತಿಯ […]
ವೈಯಕ್ತಿಕ ಅಂತರ ಕಾಪಾಡದ ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದ ಕಾರ್ಯಕ್ರಮ

ಕರಾವಳಿ ಕೇಸರಿ ಯೂತ್ ಕ್ಲಬ್ ಬೆದ್ರ ಮತ್ತು ಕರಾವಳಿ ಕೇಸರಿ ಮಹಿಳಾ ಘಟಕ ಧರೆಗುಡ್ಡೆ ವತಿಯಿಂದದರೆಗುಡ್ಡೆಯ ಕರಾವಳಿ ಕೇಸರಿ ಆಫೀಸ್ ನಲ್ಲಿ ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಅವರ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರಾದ ಸುಜಾತಾ ಮತ್ತು ಬೇಬಿ ಅವರನ್ನು ಸನ್ಮಾನಿಸಲಾಯಿತು. ಶಾಸಕ ಉಮಾನಾಥ ಕೋಟ್ಯಾನರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವೈಯಕ್ತಿಕ ಅಂತರ ಕಾಪಾಡದೇ ಸಮಾಜಕ್ಕೆ ತಪ್ಪು ಸಂದೇಶ ನೀಡಿದ್ದು ಯಾಕೆ ಎಂಬುದಕ್ಕೆ ಶಾಸಕ ಉಮಾನಾಥ ಕೋಟ್ಯಾನರೇ ಉತ್ತರಿಸಬೇಕು. ಆಶಾ ಕಾರ್ಯಕರ್ತೆಯರಿಗೆ ದಿನ ಬಳಕೆ ಸಾಮಗ್ರಿಯ […]
ಬ್ರೇಕಿಂಗ್ ನ್ಯೂಸ್ ಬೆಳ್ತಂಗಡಿ ವಾರದ ಸಂತೆ ಎ.ಪಿ.ಎಂ.ಸಿ. ಯಾರ್ಡಿಗೆ ಶಿಫ್ಟ್

ಬೆಳ್ತಂಗಡಿ ಪಟ್ಟಣದಲ್ಲಿ ಪ್ರತೀ ಸಮವಾರ ಸೋಮವಾರ ನಡೆಯುವ ವಾರದ ಸಂತೆಯನ್ನು ಹಳೆಕೋಟೆಯಲ್ಲಿರುವ ಎ.ಪ.ಎಂ.ಸಿ. ಯಾರ್ಡಿಗೆ ಶಿಫ್ಟ್ ಮಾಡಲಾಗಿದೆ.ಪ್ರತೀ ವಾರದ ಸಂತೆಯ ಸಂದರ್ಭ ಮಾರಾಟಗಾರರು ಮತ್ತು ಗ್ರಾಹಕರು ವೈಯಕ್ತಿಕ ಅಂತರವನ್ನೂ ಕಾಯ್ದುಕೊಳ್ಳದೇ ತಮಗೆ ಅಪಾಯವನ್ನು ಆಹ್ವಾನಿಸುವ ಜೊತೆಗೆ, ಸಮಾಜವನ್ನೂ ಕೊರೋನಾ ಭೀತಿಯೆಡೆಗೆ ತಳ್ಳುತ್ತಿದ್ದುದನ್ನು ಗಮನಿಸಿದ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ; ಎಪ್ರಿಲ್ 19ರಂದು ಬೆಳ್ತಂಗಡಿ ಮಿನಿ ವಿಧಾನಸೌಧದಲ್ಲಿ ತಾಲೂಕಿನ ಸಂಬಂಧಿತ ಇಲಾಖಾಧಿಕಾರಿಗಳ ಸಭೆ ಕರೆದು, ಎಪ್ರಿಲ್ 20ರ ಸೋಮವಾರದಿಂದ ಸಂತೆಯನ್ನು ಎ.ಪಿ.ಎಂ.ಸಿ. ಯಾರ್ಡಿಗೆ ತಾತ್ಕಾಲಿಕವಾಗಿ ಸ್ಥಳಾಂತರಿಸುವ ತೀರ್ಮಾನ ಕೈಗೊಂಡರು.ನಂತರ […]
ಬಂಟರ ಯಾನೆ ನಾಡವರ ಸಂಘದಿಂದ ಕಿಟ್ ವಿತರಣೆ

ಕೊರೋನಾ ಸೋಂಕಿನ ವಿರುದ್ಧದ ಹೋರಾಟದ ಭಾಗವಾಗಿ ಇಡೀ ಊರಿಗೆ ಊರೇ ಲಾಕ್ ಡೌನ್ ಆಗಿ ಜನಸಾಮಾನ್ಯರು ದಿನಬಳಕೆಯ ವಸ್ತುಗಳ ಖರೀದಿಗೂ ಸಂಕಷ್ಟವೆದುರಿಸುತ್ತಿರುವುದನ್ನು ಮನಗಂಡ ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ ಸಂಘದವರು ಬರೋಡದ ಉಧ್ಯಮಿ- ಗುರುವಾಯನಕೆರೆ ನವಶಕ್ತಿ ನಿವಾಸಿ ಶಶಿಧರ ಶೆಟ್ಟರ ಸಹಕಾರದಲ್ಲಿ ತಾಲೂಕಿನ ಬಂಟ ಸಮಾಜದ ಆಯ್ದ ಅರ್ಹ 600 ಬಡ ಕುಟುಂಬಿಕರಿಗೆ ಆಹಾರ ವಸ್ತುಗಳ ಕಿಟ್ ನೀಡಲು ಸಂಕಲ್ಪಿಸಿದ್ದು, ಈ ಕಾರ್ಯಕ್ರಮಕ್ಕೆ ಎಪ್ರಿಲ್ 19ರಂದು ಗುರುವಾಯನಕೆರೆಯಲ್ಲಿರುವ ಬಂಟರ ಯಾನೆ ನಾಡವರ ಸಂಘದ ಸಭಾಂಗಣದಲ್ಲಿ ಬೆಳ್ತಂಗಡಿಯ […]